Ultimate magazine theme for WordPress.

ಪಪ್ಪಾಯ ಬೆಳೆದು ಅಧಿಕ ಲಾಭಗಳಿಸಬಹುದೇ? ರೈತರಿಗಾಗಿ ಈ ಮಾಹಿತಿ

0 0

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಪಪ್ಪಾಯ ಹಣ್ಣು ಇದು ಹಲವು ಪೋಷಕಾಂಶಗಳನ್ನು ಹೊಂದಿರುವುದರಿಂದ ಪಪ್ಪಾಯಕ್ಕೆ ಆಯುರ್ವೇದ ದಲ್ಲಿ ತನ್ನದೇ ಆದ ಮಹತ್ವವಿದೆ. ವಿಶೇಷ ಔಷಧ ಗುಣಧರ್ಮಗಳಿರುವು ದರಿಂದ ಕಣ್ಣು ಉರಿ, ಡೆಂಗೆ ಮುಂತಾದ ಕಾಯಿಲೆಗಳಿಗೆ ರಾಮಬಾಣ ಎನ್ನುತ್ತಾರೆ ತಜ್ಞರು. ಇನ್ನು ಇದರ ತಿರುಳಿನ ಜ್ಯೂಸ್ ಸೇವಿಸಲು ರುಚಿಕರವಾಗಿರುತ್ತದೆ. ಸೌಂದರ್ಯವರ್ಧಕಗಳ ತಯಾರಿಕೆಗೂ ಇದನ್ನು ಬಳಸುತ್ತಾರೆ. ಈ ಪಪಾಯ ಬೆಳೆಯ ಬಗ್ಗೆ ಇದನ್ನು ಬೆಳೆಯುವ ವಿಧಾನದ ಬಗ್ಗೆ ಈ ಲೇಖನದ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕೃಷಿಯಲ್ಲಿ ಸದಾಕಾಲ ವಿನೂತನ ಪ್ರಯೋಗಗಳು ನಡೆಯುವುದು ನಿರಂತರ. ಆ ಬಗ್ಗೆ ಜಾಣ ಕೃಷಿಕ ಕಣ್ಣಿಟ್ಟಿರುತ್ತಾನೆ. ನಾನಾ ಕ್ಷೇತ್ರಗಳಿಗೆ ಭೇಟಿ ನೀಡಿ, ತಾವು ಪಡೆದ ಜ್ಞಾನವನ್ನು ಯಶಸ್ವಿಯಾಗಿ ತಮ್ಮ ಭೂಮಿಯಲ್ಲಿ ಅಳವಡಿಸಿ ಗೆಲುವಿನ ದಾರಿ ಹಿಡಿಯುತ್ತಾರೆ. ಇದೇ ರೀತಿ ಮಂಡ್ಯ ಜಿಲ್ಲೆಯ ಯೋಗೇಶ್ ಎಂಬ ರೈತ ಕೂಡಾ ತನ್ನ ಜಮೀನಿನಲ್ಲಿ ಪಪ್ಪಾಯ ಬೆಳೆಯನ್ನು ಬೆಳೆದು ಅದರಲ್ಲಿ ಉನ್ನತಿ ಸಾಧಿಸಿದ್ದಾರೆ. ಈ ರೈತ ಬೆಳೆದ ಪಪ್ಪಾಯ ತಳಿಯ ಹೆಸರು ರೆಡ್ ಲೇಡಿ ಎಂದು. ನಮಗೆಲ್ಲ ತಿಳಿದೇ ಇದೆ ಸಾಮಾನ್ಯವಾಗಿ ಪಪ್ಪಾಯಿ ಔಷದಿ ಗುಣಗಳನ್ನು ಹೊಂದಿದೆ ಎಂದು. ರೈತರು ನೀರಾವರಿ ಅಲ್ಲದ ಒಣ ಭೂಮಿಯಲ್ಲಿ ಹೆಚ್ಚಿನ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಇದು ಒಂದು ಮಹತ್ವದ ಶೀಘ್ರ ಫಲಗಳನ್ನು ಕೊಡುವ ಹಣ್ಣಿನ ಬೆಳೆಯಾಗಿದೆ. ಈ ಹಣ್ಣು ಮನುಷ್ಯನ ದೇಹದ ಪೋಷಣೆಗೆ ಬೇಕಾದ ಪೋಷಕಾಂಶವನ್ನು ಹೊಂದಿದೆ.

ಈ ಪಪ್ಪಾಯ ಕೃಷಿಯನ್ನು ಹೇಗೆ ಮಾಡಿದ್ದಾರೆ? ಎಂದು ನೋಡುವುದಾದರೆ, ಆರಂಭದಲ್ಲಿ ತಮ್ಮ ಜಮೀನಿಗೆ ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರ ಹಾಕಿ ಹೊಲ ಹದ ಮಾಡಿಕೊಂಡಿದ್ದಾರೆ. ಬಳಿಕ ನಾಲ್ಕೂವರೆ ಹಾಗೂ ಐದು ಅಡಿಗಳ ಅಂತರರಲ್ಲಿ ತಲಾ ಒಂದು ಸಸಿಯನ್ನು ನೆಟ್ಟಿದ್ದಾರೆ. ಪಪ್ಪಾಯ ಗಿಡಗಳನ್ನು ನೆಟ್ಟು ಹನಿ ನೀರಾವರಿ ಮೂಲಕ ನೀರುಣಿಸಿದ್ದಾರೆ. ಇದೀಗ ಸಮೃದ್ಧವಾಗಿ ಬೆಳೆ ಬೆಳೆದಿದೆ. ಇವರು ಒಂದು ಎಕರೆ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯವರು ನೀಡಿದ ಆರುನೂರು ಸಸಿಗಳನ್ನು ಹಾಗೂ ಸ್ವಂತವಾಗಿ ಏಳುನೂರು ಸಸಿಗಳನ್ನು ಹೀಗೆ ಒಂದುಸಾವಿರದ ಮುನ್ನೂರು ಸಸಿಗಳನ್ನು ನೆಟ್ಟಿದ್ದಾರೆ. ಪಪ್ಪಾಯ ಸಸಿಗಳನ್ನು ನಾಟಿ ಮಾಡಿದ ಎಂಟರಿಂದ ಒಂಭತ್ತು ತಿಂಗಳಿಗೆ ಕೊಯ್ಲಿಗೆ ಬರುವ ಈ ತಳಿಯ ಪಪ್ಪಾಯ ಸತತವಾಗಿ ಮೂರು ವರ್ಷಗಳ ಕಾಲ ಫಸಲು ನೀಡುತ್ತದೆ. ಸಾಮಾನ್ಯವಾಗಿ ಪಪ್ಪಾಯಕ್ಕೆ ರೋಗಭಾದೆ ಕಡಿಮೆ.

ಮಂಡ್ಯದ ಈ ರೈತ ಹೇಳುವ ಹಾಗೆ ಒಂದು ಎಕರೆಗೆ ಒಂದು ಲಕ್ಷ ಖರ್ಚು ಮಾಡಿದರೆ ಪಪ್ಪಾಯ ಬೆಳೆಯನ್ನು ಬೆಳೆಯಬಹುದು. ಈ ರೆಡ್ ಲೇಡಿ ಪಪ್ಪಾಯ ತಳಿಯು ಸಾಮಾನ್ಯವಾಗಿ ಒಂದು ವರ್ಷದವರೆಗೂ ಫಸಲು ನೀಡುತ್ತದೆ. ಯಾವುದೇ ರೋಗ , ಕೀಟಗಳ ಬಾಧೆ ಇಲ್ಲದೇ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋದರೆ ಒಂದುವರ್ಷದ ವರೆಗೂ ಹಣ್ಣು ನೀಡುತ್ತದೆ ಎನ್ನುತ್ತಾರೆ ರೈತ ಯೋಗೇಶ್ ಅವರು. ಪಪ್ಪಾಯ ಬೆಳೆಯನ್ನು ಬೆಳೆಯಬೇಕು ಎಂದವರಿಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ಕೂಡಾ ದೊರೆಯುತ್ತದೆ. ಯಾರಾದರೂ ಯುವ ಕೃಷಿಕರು ಈ ಪಪ್ಪಾಯ ಬೆಳೆಯನ್ನು ಮಾಡುವ ಹಾಗಿದ್ದರೇ ಅವರಿಗೆ ಶ್ರಮ ಬಹಳ ಮುಖ್ಯ ಎನ್ನುತ್ತಾರೆ.

ಶ್ರಮ ಪಡದೆ ಯಾವುದೇ ಕೆಲಸವೂ ಆಗದು. ಶ್ರಮ ಪಟ್ಟರೆ ಖಂಡಿತ ಇದರಲ್ಲಿ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ. ಹಾಗೆಯೇ ಈ ತಳಿ ಒಮ್ಮೆ ಕಾಯಿ ಬಿಡಲು ಆರಂಭಿಸಿದರೆ ಸರಿಯಾದ ನಿರ್ವಹಣೆ ಇದ್ದರೆ ಒಂದೂವರೆ ವರ್ಷದ ವರೆಗೂ ಕಾಯಿ ಬಿಡುತ್ತದೆ. ಇನ್ನು ಇದರ ಮಾರ್ಕೆಟಿಂಗ್ ಹೇಗೆ ಎಂದು ನೋಡುವುದಾದರೆ , ಇವರೇ ಮಾರ್ಕೆಟ್ ಗೆ ಹೋಗಿ ಮಾರಾಟ ಮಾಡಿ ಬರುತ್ತಾರೆ. ಮಾರ್ಕೆಟ್. ನಲ್ಲಿ ಪ್ರತೀ ಕೇಜಿ ಗೆ ಐದು ರೂಪಾಯಿಯ ಹಾಗೆ ಮಾರಾಟ ಮಾಡಲಾಗುತ್ತದೆ. ಇನ್ನು ಇವರಿಗೆ ಪಪ್ಪಾಯ ಹಣ್ಣು ಕೀಳುವುದು , ಸಾಗಾಣಿಕಾ ವೆಚ್ಚ ಇವೆಲ್ಲವನ್ನೂ ಇದೆ ಹಣದಲ್ಲಿ ಭರಿಸಬೇಕು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.