ಗೃಹಿಣಿಯಾಗಿ ಅವರದ್ದೇ ಸ್ವಂತ ಉದ್ದಿಮೆ ಸ್ಥಾಪಿಸಲು ಹೆಚ್ಚಿನ ಸಹಕಾರ ಸಿಗಬೇಕು. ಮೊದಲು ಅವರ ಪರಿವಾರದ ಬೆಂಬಲ ಸಿಗಬೇಕು, ಹಣಕಾಸಿನ ಬೆಂಬಲ ಮತ್ತು ಮಾನಸಿಕ ಧೈರ್ಯ ಎರಡು ಸಿಕ್ಕರೆ ಸಾಕು ಹೆಣ್ಣು ಯಾವುದರಲ್ಲಿ ಕೂಡ ಹಿಂದೆ ಉಳಿದಿಲ್ಲ ಎನ್ನುವುದನ್ನು ಸಾಭೀತು ಮಾಡಬಹುದು.
ಇವತ್ತು ನಾವು ಮನೆಯಲ್ಲಿ ಪೇಪರ್ ಪ್ಲೇಟ್ ತಯಾರಿ ಮಾಡಿ ಯಾವ ರೀತಿ ದುಡಿಮೆ ಮಾಡಬಹುದು ಎಂಬುದನ್ನು ತಿಳಿಯೋಣ. ಈ ಪೇಪರ್ ಪ್ಲೇಟ್ಸ್ ಮಾಡುವ ಮಶೀನ್ ಮನೆಯಲ್ಲಿ ಇರುವ ವಿದ್ಯುತ್’ನಲ್ಲೇ ಚಲಾಹಿಸಬಹುದು. ಮೊದಲಿಗೆ ಜನರಿಗೆ ಈ ಬಿಝಿ ಜೀವನದಲ್ಲಿ ಹೆಚ್ಚು ಕೆಲಸ ಇರುವ ಕಾರಣ ಕೆಲವರು ದಿನನಿತ್ಯದ ಊಟಕ್ಕೆ ಕೂಡ ಪೇಪರ್ ಪ್ಲೇಟ್ ಬಳಕೆ ಮಾಡುವರು ಅವರೇ ನಮ್ಮ ಗ್ರಾಹಕರು.
ಇನ್ನು ಯಾವ ರೀತಿಯ ಸಮಾರಂಭ ನಡೆದರು ಅದಕ್ಕೆ ಹೆಚ್ಚುವರಿ ಪೇಪರ್ ಪ್ಲೇಟ್ ಅಗತ್ಯ ಇರುತ್ತದೆ. ಡಿಮ್ಯಾಂಡ್ ನೋಡಿ ಪೇಪರ್ ಪ್ಲೇಟ್ ಆರ್ಡರ್ ತೆಗೆದುಕೊಳ್ಳಬೇಕು. ನಂತರ ಮಾರ್ಕೆಟ್ ವ್ಯಾಲ್ಯೂಗಿಂತ ಕಡಿಮೆಗೆ ನೀಡುವುದು ಒಂದು ರೀತಿಯ ತಂತ್ರಗಾರಿಕೆ.
ಅದು ಹೆಚ್ಚು ಜನ ಗ್ರಾಹಕರನ್ನು ಪಡೆಯಲು ಸಹಾಯ ಮಾಡುತ್ತದೆ. ಒಳ್ಳೆ ಗುಣಮಟ್ಟದ ಉತ್ಪನ್ನಗಳನ್ನು ನೀಡಿದರೆ ಅವರೇ ಖಾಯಂ ಗ್ರಾಹಕರಾಗಿ ಉಳಿಯುತ್ತಾರೆ. ಇನ್ನು ಪೇಪರ್ ಪ್ಲೇಟ್ ತಾಯಾರಿ ಮಾಡುವ ಯಂತ್ರದ ಸರ್ವೀಸ್ ಸಣ್ಣ ಪುಟ್ಟದ್ದು ಇದ್ದರೆ ವಿತರಕರು ವೀಡಿಯೋ ಕಾಲ್ ಮೂಲಕ ನೀಡಿ ಹೇಳುವರು ಇಲ್ಲದೆ ಹೋದಲ್ಲಿ ಅವ್ರೆ ಬಂದು ಪರೀಕ್ಷೆ ಮಾಡುವರು.
7-10 ನಂಬರ್ ಇರುವ ಊಟದ ತಟ್ಟೆ ತಯಾರಿ ಮಾಡಿಕೊಳ್ಳುವ ಸಾಧನ ಅದರ ಪ್ರಿಂಟ್ ಮಾಡುವ ಡೈ ಕೂಡ ಬದಲು ಮಾಡುವುದು ಸುಲಭ. ಸಣ್ಣ ಪ್ಲೇಟ್, ದೊಡ್ಡ ಊಟದ ತಟ್ಟೆ ಅಗತ್ಯ ಇರುವ ಪ್ಲೇಟ್’ಗಳನ್ನು ಸಿದ್ದ ಮಾಡಬಹುದು. ಆಕಾರ ನೋಡಿಕೊಂಡು 10 ಇಲ್ಲ 7 ಪ್ಲೇಟ್’ಗಳನ್ನು ಒಂದೇ ಬಾರಿ ಪ್ರಿಂಟ್’ಬಹುದು. ಎಲ್ಲಿ ಕಚ್ಚಾ ವಸ್ತು ಮತ್ತು ತಯಾರಿಕೆ ಯಂತ್ರ ಒಂದೇ ಕಡೆ ಸಿಗುತ್ತದೆ ನೋಡಿ ಖರೀದಿ ಮಾಡುವುದು ಉತ್ತಮ.
ಸಮಯಕ್ಕೆ ಸರಿಯಾಗಿ ಕಚ್ಚಾ ವಸ್ತುಗಳ ಬೇಡಿಕೆಯನ್ನು ಪೂರೈಕೆ ಮಾಡುವರು. ಎಲ್ಲಾ ರೀತಿಯ ಡೆಮೋ ಕ್ಲಾಸ್ ನೀಡಿ ನಂತರ ಅಗತ್ಯದ ಯಂತ್ರವನ್ನು ನೀಡುವರು. ಯಂತ್ರದ ಹಣ ಕೂಡ ಕಡಿಮೆ ದರದಲ್ಲಿ ಲಭ್ಯವಿದೆ. ಹೆಣ್ಣಿನ ದುಡಿಮೆ ಕೂಡ ಮನೆಗೆ ಒಳ್ಳೆಯ ಸಹಾಯ ನೀಡುತ್ತದೆ. ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ಅದು ಕೂಡ ಸಹಾಯ ಮಾಡುತ್ತದೆ.