ಸಾಮಾನ್ಯವಾಗಿ ಎಲ್ಲ ಕಾಲಗಳಲ್ಲಿಯೂ ದೊರೆಯುವ ಹಣ್ಣೆಂದರೆ ಅದು ಪಪ್ಪಾಯ ಹಣ್ಣು ಅಂದರೆ ಪರಂಗಿ ಹಣ್ಣು, ಇಂತಹ ಪರಂಗಿ ಹಣ್ಣು ತನ್ನದೇ ಆದ ಮಹತ್ವವನ್ನು ಮೊದಲಿನಿಂದಲೂ ಉಳಿಸಿಕೊಂಡು ಬಂದಿದೆ ಪರಂಗಿ ಹಣ್ಣನ್ನು ಸಾಮಾನ್ಯವಾಗಿ ಎಲ್ಲಾ ವರ್ಗದ ಜನರೂ ಕೂಡ ತಿನ್ನಲು ಬಯಸುತ್ತಾರೆ. ಆದರೆ ಇದು ಮಾರುಕಟ್ಟೆಯಲ್ಲಿ ಅಂತಹ ದುಬಾರಿಯ ಬೆಲೆಬಾಳುವ ಹಣ್ಣೆನಲ್ಲಾ ಬಿಡಿ ಮತ್ತು ಈ ಹಣ್ಣು ಬಹಳ ರುಚಿಕರವಾಗಿದ್ದು, ದೇಹದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಈ ನಡುವೆಯಂತೂ ಹಲವಾರು ಡಾಕ್ಟರ್ ಗಳು ಅವರ ರೋಗಿಯಗಳಿಗೆ ಪರಂಗಿ ಹಣ್ಣನ್ನು ತಿನ್ನುವಂತೆ ಸಲಹೆ ನೀಡುತ್ತಾರೆ, ಯಾಕಂದ್ರೆ ಪರಂಗಿ ಹಣ್ಣು ಮೇಗ್ನಿಶಿಯಮ್ ಪೋಟಾಸಿಯಮ್ ನಿಯಾಸಿನ್ ಕ್ಯಾರೋಟೀನ್ ಪ್ರೊಟೀನ್ ನಾರಿನಾಂಶ ಗಳಂತಹ ಪೋಷಕಾಂಶಗಳನ್ನು ಒಳಗೊಂಡಿದೆ.
ಪರಂಗಿ ಹಣ್ಣು ದೇಹದ ಉಷ್ಣತೆಯನ್ನು ಹೆಚ್ಚಿಸುವಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತದೆ ಹಾಗೆಯೇ ಇದು ಬರಿಯ ಆರೋಗ್ಯಕ್ಕೆ ಮಾತ್ರವಲ್ಲ ತಮ್ಮ ಸೌಂದರ್ಯವನ್ನು ಸಹ ವೃದ್ಧಿಸುವಲ್ಲಿ ಈ ಹಣ್ಣು ಸಹಾಯ ಮಾಡುತ್ತದೆ ಚಿಕ್ಕ ಚಿಕ್ಕ ಪರಂಗಿ ಹಣ್ಣುಗಳನ್ನು ಮಕ್ಕಳಿಗೆ ನೀಡುವುದರಿಂದ ಅವರಲ್ಲಿನ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಮಕ್ಕಳಿಗಲ್ಲದೇ ಈ ಪರಂಗಿ ಹಣ್ಣು ಸೇವಿಸುವುದರಿಂದ ದೊಡ್ಡವರಲ್ಲಿಯೂ ಸಹ ಜೀರ್ಣಕ್ರಿಯೆಗೆ ಸಂಬಂದಿಸಿದ ಸಮಸ್ಯೆಗಳು ದೂರಾಗುತ್ತವೆ.
ಅರ್ಧ ಹಣ್ಣಾದ ಪರಂಗಿಯನ್ನು ಗಾಯಗಳಿಗೆ ಹಚ್ಚುವುದರಿಂದ ನಿಮ್ಮ ಗಾಯಗಳು ಬೇಗ ಮಾಯವಾಗುತ್ತವೆ.
ಪರಂಗಿ ಹಣ್ಣಿನ ಪೇಸ್ಟ್ ಅನ್ನು ಮುಖಕ್ಕೆ ಲೇಪಿಸಿ ಇಪ್ಪತ್ತು ನಿಮಿಷ ಬಿಟ್ಟು ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ, ಪರಂಗಿ ಹಣ್ಣಿನ ಬೀಜದ ಪುಡಿಯನ್ನು ಎರಡು ಚಮಚ ನಿಂಬೆ ಹಣ್ಣಿನ ರಸದೊಂದಿಗೆ ಸೇವಿಸುವುದರಿಂದ ಆರೋಗ್ಯಕರ ಲಿವರ್ ನಿಮ್ಮದಾಗುತ್ತದೆ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಪರಂಗಿ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅದು ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ. ಪರಂಗಿ ಹಣ್ಣಿನ ಬೀಜದ ಪುಡಿಯನ್ನು ರೋಸ್ ವಾಟರ್ ನೊಂದಿಗೆ ಬೆರೆಸಿ ಪೈಲ್ಸ್ ಇರುವ ಜಾಗಕ್ಕೆ ಹಚ್ಚುವುದರಿಂದ ಪೈಲ್ಸ್ ವಾಸಿಯಾಗುತ್ತದೆ.
ನರದೌರ್ಬಲ್ಯ ಇರುವವರು ಪರಂಗಿ ಹಣ್ಣು ಹಾಲು ಮತ್ತು ಜೇನುತುಪ್ಪ ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಅವರ ನರದೌರ್ಬಲ್ಯ ಗುಣಮುಖವಾಗುತ್ತದೆ ಮತ್ತು ಹೊಟ್ಟೆಯಲ್ಲಿರುವ ಹುಳುಗಳ ವಿರುದ್ದ ಈ ಪರಂಗಿ ಹಣ್ಣು ಹೋರಾಡುತ್ತದೆ, ಪರಂಗಿ ಹಣ್ಣಿನಲ್ಲಿ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವ ಶಕ್ತಿ ಇರುತ್ತದೆ ಪರಂಗಿ ಹಣ್ಣು ಇರುಳು ಕುರುಡುತನವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ ಅಲ್ಲದೆ ಬಾಣಂತಿಯರಲ್ಲಿ ಹೆಚ್ಚು ಹಾಲು ಉತ್ಪತ್ತಿ ಮಾಡುವಲ್ಲಿ ಸಹಕಾರಿಯಾಗುತ್ತದೆ.