ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನ ಮಲಗಿದರೆ ಏನಾಗುವುದು ಓದಿ

0 2

ನಿದ್ರೆ ಮಾಡುವುದು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ನಿದ್ರೆ ಮಾಡುವುದನ್ನು ಎಲ್ಲರೂ ಇಷ್ಟಪಡುತ್ತಾರೆ, ಯಾಕಂದ್ರೆ ನಿದ್ರೆ ಮಾಡುವ ಸಮಯದಲ್ಲಿ ಲೋಕದ ಪರಿಜ್ಞಾನವೇ ಇಲ್ಲದಂತೆ ನಾವು ಮಲಗಿಬಿಡುತ್ತೇವೆ ನಮ್ಮ ವಾಸ್ತವಿಕ ಜೀವನದಲ್ಲಿ ನಡೆಯುವ ಯಾವ ಘಟನೆಯೂ ನಮ್ಮನ್ನು ನಿದ್ರೆಯಲ್ಲಿ ಬಾದಿಸುವುದಿಲ್ಲ ಜನರು ಜೀವನದಲ್ಲಿ ಅನುಭವಿಸುತ್ತಿರುವ ನೋವು ನಲಿವು ಚಿಂತೆ ಎಲ್ಲವನ್ನೂ ದೂರಮಾಡುವ ಎಲ್ಲವನ್ನೂ ಮರೆಸುವ ಸಮಯವೆಂದರೆ ಅದು ನಾವು ನಿದ್ರೆ ಮಾಡುವ ಸಮಯ ಮಾತ್ರ ಪ್ರಕೃತಿಯು ನಮಗಾಗಿ ರಾತ್ರಿ ವೇಳೆಯನ್ನು ಮಲಗಲೆಂದೇ ಮೀಸಲಾಗಿ ಕೊಟ್ಟಿದೆ ರಾತ್ರಿ ವೇಳೆಯಲ್ಲಿ ಸುಮಾರು ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸುವುದು ಪ್ರಕೃತಿಯ ನಿಯಮ ಆದರೆ ಅವರ ನೌಕರಿಯ ಕಾರಣದಿಂದಲೋ ಅಥವಾ ಮಾತ್ಯಾವುದೋ ಕಾರಣದಿಂದಾಗಿ ಕೆಲ ಜನರು ಹಗಲಿನಲ್ಲಿ ನಿದ್ರೆ ಮಾಡಿ ರಾತ್ರಿ ವೇಳೆ ತಮ್ಮ ಕೆಲಸಗಳಲ್ಲಿ ತೊಡಗುತ್ತಾರೆ. ಇನ್ನೂ ಕೆಲವರು ಮಧ್ಯಾಹ್ನದ ವೇಳೆಯೂ ಕೂಡ ಸ್ವಲ್ಪ ಕಾಲ ಮಲಗಿ ವಿಶ್ರಮಿಸುತ್ತಾರೆ, ಆದರೆ ನಾವು ಅಂತಹವರನ್ನು ಸೋಮಾರಿಗಳೆಂದು ಬಿಂಬಿಸುತ್ತೇವೆ ಮಧ್ಯಾಹ್ನ ಊಟದ ನಂತರ ನಿದ್ರೆ ಬರುವುದು ಸಹಜ ಹೀಗೆ ಮಧ್ಯಾಹ್ನ ನಿದ್ರೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಒಮ್ಮೆ ಕಣ್ಣಾಯಿಸೋಣ ಬನ್ನಿ.

ನಿದ್ರೆ ನಮ್ಮ ದೇಹದ ಆಯಾಸವನ್ನು ಹೋಗಲಾಡಿಸುತ್ತದೆ ಹಾಗೆಯೇ ದೇಹವು ಚಟುವಟಿಕೆಯಿಂದ ಕೂಡಿರಲು ಸಹಕರಿಸುತ್ತದೆ. ಮಧ್ಯಾಹ್ನದ ವೇಳೆ ಅರ್ಧ ಗಂಟೆ ಮಲಗುವುದರಿಂದ ನಮ್ಮ ಮೆದುಳು ತುಂಬಾ ಚಟುವಟಿಕೆಯಿಂದಾ ಕೂಡಿರುತ್ತದೆ ಮತ್ತು ಹೃದಯಾಘಾತವಾಗುವ ಸಂಭವ ಬಹಳ ಕಡಿಮೆಯಿರುತ್ತದೆ ಅರವತ್ತು ತುಂಬಿದ ಜನರು ಮಧ್ಯಾಹ್ನದ ವೇಳೆ ಸ್ವಲ್ಪ ಹೊತ್ತು ಮಲಗಿ ನಿದ್ರಿಸುವುದರಿಂದ ಬೇರೆಯವರಿಗಿಂತ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತಾರೆ ಜೊತೆಗೆ ಅವರ ಬುದ್ಧಿವಂತಿಕೆ ಕೂಡ ಹೆಚ್ಚಾಗಿರುತ್ತದೆ ಇನ್ನೂ ನೌಕರರು ಮತ್ತು ವ್ಯಾಪಾರಿಗಳು ಹೀಗೆ ಮಧ್ಯಾಹ್ನದ ಸಮಯದಲ್ಲಿ ಅರ್ಧ ಗಂಟೆ ಮಲಗುವುದರಿಂದ ಅವರಲ್ಲಿ ನವಚೈತನ್ಯ ಮೂಡುವುದಲ್ಲದೆ 64% ಹೃದಯಾಘಾತದ ಸಂಭವ ಕಡಿಮೆ ಇರುತ್ತದೆ.

ಹೀಗೆ ಪ್ರತಿದಿನ ಮಧ್ಯಾಹ್ನದ ಸಮಯದಲ್ಲಿ ಮಲಗಲು ಆಗದಿದ್ದವರು ವಾರದಲ್ಲಿ ಮೂರು ಬಾರಿಯಾದರೂ ಮಧ್ಯಾಹ್ನದ ವೇಳೆ ಮಲಗುವುದರಿಂದ ಅವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ತಲೆದೂರುವುದಿಲ್ಲ ಎಡಗಡೆಯ ಕೈ ನ ಮೇಲೆ ತಲೆಯನ್ನಿಟ್ಟು ಮಲಗುವುದರಿಂದ ನಮ್ಮಲ್ಲಿರುವ ಸೂರ್ಯನಾಡಿ ಚಟುವಟಿಕೆಯಿಂದ ಕೂಡಿರುತ್ತದೆ ನಮಗೆ ರೋಗ ಬರದಂತೆ ತಡೆಯಲು ಸಹಾಯ ಮಾಡುತ್ತದೆ ಹೀಗೆ ಮಧ್ಯಾಹ್ನ ವೇಳೆ ಅರ್ಧ ಗಂಟೆ ಮಲಗುವುದು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ ಹಾಗಂತ ದಿನವಿಡೀ ಮಲಗಿದರೆ ನಿಮ್ಮ ಆರೋಗ್ಯವು ಹಾಳಾಗುವುದರಲ್ಲಿ ಎರಡು ಮಾತಿಲ್ಲ ಹಾಗಾಗಿ ನಾವು ಹೇಳಿರುವಂತೆ ಮಧ್ಯಾಹ್ನದ ಸಮಯದಲ್ಲಿ ನಿಯಮಿತವಾದ ಅರ್ಧ ಗಂಟೆ ನಿದ್ರೆ ಮಾಡಿ ನಿಮ್ಮ ಆರೋಗ್ಯದ ಸ್ವಾಸ್ಥ್ಯ ಕಾಯ್ದುಕೊಳ್ಳಿರೆಂಬುದೇ ನಮ್ಮ ಆಶಯ.

Leave A Reply

Your email address will not be published.