ಪಾನಿಪುರಿ (Panipuri) ಎಂದರೆ ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್ ಬಟಾಣಿ ಮುಂತಾದವು ಒಳಗೊಂಡ ವಿವಿಧ ರುಚಿಯ ನೀರಿನೊಂದಿಗೆ ಸಣ್ಣಪುರಿಗಳನ್ನು ತುಂಬಿದ ಅಂಶವಾಗಿದೆ. ಪಾನಿಪುರಿ (Panipuri) ಇಷ್ಟಪಡದೆ ಇರುವ ವ್ಯಕ್ತಿಯನ್ನು ನೀವು ನೋಡುವುದು ತುಂಬಾ ಕಷ್ಟ. ಪಾನಿಪುರಿ ಯನ್ನು ಅಷ್ಟರ ಮಟ್ಟಿಗೆ ಜನರು ಇಷ್ಟಪಡುತ್ತಾರೆ. ಪಾನಿಪುರಿಯೂ ನಮ್ಮ ಭಾರತ ದೇಶದ ಹೊರಾಂಗಣ ಆಹಾರಗಳಲ್ಲಿ ಅರ್ಧ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನು ಜನರು ಹಲವಾರು ಹೆಸರುಗಳಿಂದ ಕರೆಯುತ್ತಾರೆ.ಇಷ್ಟೊಂದು ಮನ ಗೆದ್ದಿರುವ ಪಾನಿಪುರಿ ಯ ಬಗ್ಗೆ ಎಲ್ಲರ ಮನದಲ್ಲೂ ಒಂದು ಪ್ರಶ್ನೆ ಇದ್ದೇ ಇರುತ್ತದೆ ಅಷ್ಟಕ್ಕೂ ಪಾನಿಪುರಿ ಯನ್ನು ಮೊದಲು ಪ್ರಾಯಚರಿಸಿದವರು ಯಾರು? ಪಾನಿಪುರಿ ಮಗಧ ಸಾಮ್ರಾಜ್ಯ ಕಾಲದಲ್ಲಿಯೆ ಪರಿಚಯಿಸಲಾಗಿದೆ ಎಂದು ಹೇಳುತ್ತಾರೆ. ಇದು ಏಷ್ಟು ಸತ್ಯ. ಆದರೆ ಇನ್ನೂ ಕೆಲವೊಬ್ಬರು ಪಾನಿಪುರಿ ದ್ರೌಪದಿಗೆ ಸಂಬಂಧಿಸಿದ್ದು ಎನ್ನುತ್ತಾರೆ. ದ್ರೌಪದಿ ಕಂಡು ಹಿಡಿದಿದ್ದು ಎಂದು ಹೇಳಾಲಾಗುತ್ತದೆ

ಮೊದಲಿಗೆ ಪಾನಿಪುರಿ ಯನ್ನು ಪಾಟಲಿಪುತ್ರದೂಂದಿಗಿನ ಸಂಬಂಧವನ್ನು ನೋಡುವುದಾದರೆ ಮಗಧ ಸಾಮ್ರಾಜ್ಯವು ಪಟಲಿ ಪುತ್ರವನ್ನು ತನ್ನ ರಾಜ್ಯಧಾನಿಯಾಗಿ ಹೊಂದಿದ್ದು ಕೆಲವು ಇತಿಹಾಸಕಾರರ ಪ್ರಕಾರ ಪಾನಿಪುರಿ ಯನ್ನು ಮೊದಲು ತಯಾರಿಸಿದ್ದು ಮೊಗಧ ಸಾಮ್ರಾಜ್ಯದ ಕಾಲದಲ್ಲಿ ಎಂದು ನಂಬುತ್ತಾರೆ. ಚೂಡಾ ಲಾಡು ತಯಾರಿಸುವ ಸಮಯದಲ್ಲಿ ಪಾನಿಪುರಿ ತಯಾರಿಸಲಾಯಿತು ಎನ್ನುವಂತಹ ವಾದವನ್ನು ಇತಿಹಾಸಕಾರರು ಮಣ್ಣಿಸುತ್ತಾರೆ.

ಇದೇ ರೀತಿಯಲ್ಲಿ ಮಹಾಭಾರತದೊಂದಿಗೆ ಪಾನಿಪುರಿ ಸಂಬಂಧವನ್ನು ನೋಡುವುದಾದರೆ ಕೆಲವೊಬ್ಬರು ಆಹಾರ ಇತಿಹಾಸಕಾರರು ಹೇಳುವಂತೆ ಪಾನಿಪುರಿ ಯನ್ನು ಮಹಾಭಾರತ ಕಾಲದಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ ನವ ವಿವಾಹಿತ ದ್ರೌಪದಿಗೆ ತನ್ನ ಅತ್ತೆಯಾದಂತಹ ಕುಂತಿ ಒಂದು ಕೆಲಸವನ್ನು ಹೇಳುತ್ತಾರೆ ಆಗ ಪಾಂಡವರು ವನವಾಸದಲ್ಲಿ ಇರಲಿಲ್ಲ. ಕುಂತಿಯು ತನ್ನ ಸೊಸೆಯನ್ನು ಪರೀಕ್ಷಿಸಲು ಬಯಸುತ್ತಾರೆ ಅವರು ಕಡಿಮೆ ಆಹಾರದ ಸಾಮಾಗ್ರಿಗಳಿಂದ ಮನೆಯನ್ನು ಹೇಗೆ ನಡೆಸುತ್ತಾರೆ. ಎಂದು ತಿಳಿದುಕೊಳ್ಳಲು ಕುಂತಿಯು ಅಡುಗೆ ಮಾಡಲು ಆಲೂಗಡ್ಡೆ ಮತ್ತು ಕೇವಲ ಒಂದು ಸಣ್ಣ ಪ್ರಮಾಣದ ಹಿಟ್ಟನ್ನು ದ್ರೌಪದಿಗೆ ತೆಗೆದುಕೊಂಡು ಇದನ್ನು ಬಳಸಿ ಐದು ಪಾಂಡವರ ಹಸಿವನ್ನು ನೀಗಿಸು ಎಂದು ಕುಂತಿಗೆ ಸೂಚಿಸುತ್ತಾಳೆ .

ಇದಕ್ಕೆ ದ್ರೌಪದಿಯೂ ಕೂಡ ಒಪ್ಪಿಗೆಯನ್ನು ಸೂಚಿಸುತ್ತಾಳೆ. ಆದರೆ ಇದೇ ಸಮಯದಲ್ಲಿ ದ್ರೌಪದಿ ಪಾನಿಪುರಿ ಮಾಡಿ ಗೆಲ್ಲುತ್ತಾಳೆ ಕುಂತಿಯು ಪಾನಿಪುರಿ ರುಚಿಯನ್ನು ತುಂಬಾನೇ ಇಷ್ಟಪಟ್ಟು ಇದು ಅಮೃತಕ್ಕೆ ಸಮ ಎಂದು ವರ್ಣಿಸುತ್ತಾಳೆ. ‌ಇನ್ನು ಭಾರತದಲ್ಲಿ ಪಾನಿಪುರಿ ಸಂಬಂಧ ನೋಡುವುದಾದರೆ ಪ್ರತಿಯೊಂದು ಪಠ್ಯದಲ್ಲಿ ಇತಿಹಾಸಕಾರರ ಪಾನಿಪುರಿಯನ್ನು ವಿಭಿನ್ನವಾಗಿ ಬಿಂಬಿಸಿದ್ದಾರೆ ಒಂದು ಸಂಪೂರ್ಣ ಸತ್ಯವೆಂದರೆ ಈ ಖಾದ್ಯವನ್ನು ಭಾರತದಲ್ಲಿ ಆವಿಷ್ಕರಿಸಲಾಗಿದೆ.

ಮತ್ತು ಇದನ್ನು ಭಾರತದ ಪ್ರತಿಯೊಂದು ಮೂಲೆ ಮೂಲೆಗಳಲ್ಲೂ ಬಳಸುತ್ತಾರೆ ಉತ್ತರ ದಕ್ಷಿಣ ಪಶ್ಚಿಮದಿಂದ ಹಿಡಿದು ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯವರೆಗೂ ಕೂಡ ಪಾನಿಪುರಿ ಎಂದರೆ ತುಂಬಾ ಇಷ್ಟ ಇದನ್ನು ಸಾಯಂಕಾಲ ಸಮಯದಲ್ಲಿ ಚಾಟ್ ಹೆಸರಿನಲ್ಲಿ ಸೇವಿಸುತ್ತಾರೆ ಪಾನಿಪುರಿ ಎಲ್ಲಿ ಮೊದಲು ಬೆಳೆಯಿತು ಎನ್ನುವುದು ಕುತೂಹಲದ ವಿಷಯವಾಗಿದೆ .ಇದು ಮಗಧ ಸಾಮ್ರಾಜ್ಯದ ಎಂದು ತಿಳಿದು ಬಂದಿದೆ ಪಾನಿಪುರಿಯೂ ಮಹಾಭಾರತದ ಕಾಲದಲ್ಲಿ ದ್ರೌಪದಿಗೆ ಸಂಬಂಧಿಸಿದ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!