ಮಧ್ಯಪಾನ ಮಾಡುವುದರಿಂದ ದುಃಖ ಮರೆತುಹೋಗುತ್ತದೆ ಎನ್ನುತ್ತಾರೆ ಇದು ನಿಜವೇ, ಟ್ಯಾಟೂ ಹೋಗುವುದಿಲ್ಲ ಇದಕ್ಕೆ ಕಾರಣವೇನು, ಪೇನ್ ಕ್ಯೂಲರ್ ಟ್ಯಾಬ್ಲೆಟ್ ತೆಗೆದುಕೊಂಡಾಗ ನಮಗೆ ನೋವಿನ ಅನುಭವವಾಗುವುದಿಲ್ಲ ಹೇಗೆ ಇಂತಹ ಹಲವು ಕುತೂಹಲಕಾರಿ ಮತ್ತು ಆಶ್ಚರ್ಯಕರವಾದ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಜೇನು ನೊಣಗಳೆಂದರೆ ಎಲ್ಲರಿಗೂ ಭಯ ಆದರೆ ಕೇರಳದ ನೇಚರ್ ಎಮ್ ಎಸ್ ಎಂಬ ವ್ಯಕ್ತಿ ತನ್ನ ಮುಖದ ತುಂಬಾ ನಾಲ್ಕು ಗಂಟೆ ಹತ್ತು ನಿಮಿಷಗಳ ಕಾಲ ಜೇನುನೊಣಗಳನ್ನು ಇರಿಸಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದಾನೆ. ಜಮೈಕಾದಲ್ಲಿ ಒಬ್ಬ ವ್ಯಕ್ತಿ ಒಂದು ಲಾಟರಿಯನ್ನು ಖರೀದಿಸುತ್ತಾನೆ. ಅದರ ಬೆಲೆ 158 ಮಿಲಿಯನ್ ಜಮೈಕಾದ ಡಾಲರ್ ಆಗಿರುತ್ತದೆ. ಅವನು ಪ್ರೈಸ ಮನಿಯನ್ನು ಕಲೆಕ್ಟ್ ಮಾಡಲು ವೇಷ ಮರೆಸಿಕೊಂಡು ಬರುತ್ತಾನೆ ಏಕೆಂದರೆ ಅವನು ಕೋಟ್ಯಾಧಿಪತಿ ಆಗಿದ್ದಾನೆ ಎಂದು ಸುದ್ದಿ ತಿಳಿದರೆ ಅವನ ಫ್ರೆಂಡ್ಸ್ ಹಾಗೂ ರಿಲೇಟಿವ್ಸ್ ಅವನ ಬಳಿ ಹಣ ಕೇಳಲು ಬರುತ್ತಾರೆ ಅದಕ್ಕಾಗಿ ಅವನು ವೇಷ ಮರೆಸಿಕೊಂಡು ಬಂದಿರುತ್ತಾನೆ. ಪ್ರಪಂಚದ ಅತ್ಯಂತ ಡೇಂಜರಸ್ ಪಾಯ್ಸನ್ ಸೈನೋಯ್ಡ್. ಇದರ ಟೇಸ್ಟ್ ಹೇಗಿರುತ್ತದೆ ಎಂದು ಇದುವರೆಗೂ ಯಾರಿಗೂ ಗೊತ್ತಿಲ್ಲ ಏಕೆಂದರೆ ಇದನ್ನು ಬಾಯಿಯಲ್ಲಿ ಇಟ್ಟುಕೊಂಡು 3-4 ಸೆಕೆಂಡುಗಳಲ್ಲಿ ಸತ್ತು ಹೋಗುತ್ತಾರೆ. ಒಬ್ಬ ಸ್ವಾಮೀಜಿ ಕುದಿಯುವ ಎಣ್ಣೆಯಲ್ಲಿ ಕುಳಿತುಕೊಂಡು ಪ್ರಾರ್ಥನೆ ಮಾಡುತ್ತಾರೆ ನಂತರ ಆ ಎಣ್ಣೆಯನ್ನು ಮಾರಾಟ ಮಾಡುತ್ತಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ಚೋಲಾ ಯುನಿವರ್ಸಿಟಿ ಸಂಶೋಧನೆ ನಡೆಸಿ ಸನ್ಯಾಸಿ ಎಣ್ಣೆಯಲ್ಲಿ ಕುಳಿತಿರುವುದು ನಿಜ ಆದರೆ ಅದು ಕುದಿಯುತ್ತಿರುವ ಎಣ್ಣೆಯಲ್ಲ ಬೆಂಕಿಯ ಮೇಲೆ ಕೂಲ್ ವಾಟರ್ ಅನ್ನು ಹಾಕಲಾಗಿದೆ ಅದು ಬೆಂಕಿಯ ಶಾಖವನ್ನು ಹೀರಿಕೊಳ್ಳುತ್ತದೆ ಇದರಿಂದ ಸ್ವಾಮೀಜಿಗೆ ಯಾವುದೇ ರೀತಿಯ ಶಾಖ ತಲುಪುವುದಿಲ್ಲ ಎಂಬ ಸತ್ಯವನ್ನು ತಿಳಿಸಿದನು. ನಮ್ಮ ಮುಂದೆ ಯಾವುದೇ ಘಟನೆ ನಡೆದರೂ 80 ಮಿಲಿ ಸೆಕೆಂಡ್ ನಂತರ ನಮಗೆ ಅದರ ಅರಿವಾಗುತ್ತದೆ ಇದಕ್ಕೆ ಕಾರಣವೆಂದರೆ ಯಾವುದೇ ವಿಷಯ ನಮ್ಮ ಬ್ರೇನ್ ಗೆ ತಲುಪಲು 80 ಮಿಲಿ ಸೆಕೆಂಡ್ಸ್ ಬೇಕಾಗುತ್ತದೆ.
ಇಂಡೋನೇಷ್ಯಾದ ಮೊಹಮ್ಮದ್ ದಿದತ್ ಎಂಬ ಯೂಟ್ಯೂಬರ್ ಕಳೆದ ವರ್ಷ ಫೆಬ್ರವರಿಯಲ್ಲಿ ಒಂದು ಯುಟ್ಯೂಬ್ ಚಾನಲ್ ಅನ್ನು ಕ್ರಿಯೇಟ್ ಮಾಡುತ್ತಾನೆ. ಅದೇ ವರ್ಷ ಜೂನ್ ನಲ್ಲಿ ಎರಡು ಗಂಟೆ ಇಪ್ಪತ್ತು ನಿಮಿಷದ ಒಂದು ವಿಡಿಯೋವನ್ನು ಅಪ್ಲೋಡ್ ಮಾಡುತ್ತಾನೆ. ಈ ವಿಡಿಯೋ ವೈರಲ್ ಆಗಿ 3 ಮಿಲಿಯನ್ ನಷ್ಟು ವ್ಯೂವ್ಸ್ ಬಂದಿದೆ. ಈ ವಿಡಿಯೋದಲ್ಲಿ ಅವನು ಏನು ಮಾಡದೇ ಸುಮ್ಮನೆ ಕುಳಿತು ಕೊಂಡಿರುತ್ತಾನೆ. ವ್ಯೂವ್ಸ್ ಬರುತ್ತಿಲ್ಲ ಎಂದು ಏನು ಮಾಡದೇ ಸುಮ್ಮನೆ ಕುಳಿತಿರುತ್ತಾನೆ ಇದರಿಂದ ಅವನಿಗೆ 25,000 ಸಬ್ ಸ್ಕ್ರೈಬರ್ ಸಿಗುತ್ತಾರೆ. ಬಹಳಷ್ಟು ಜನರು ದುಃಖವನ್ನು ಮರೆಯಲು ಆಲ್ಕೋಹಾಲ್ ಕುಡಿಯುತ್ತಾರೆ ಆದರೆ ವಾಸ್ತವವಾಗಿ ಆಲ್ಕೋಹಾಲ್ ಕುಡಿಯುವುದರಿಂದ ದುಃಖ ಮರೆಯುವುದಿಲ್ಲ. ಆಲ್ಕೋಹಾಲ್ ತಾತ್ಕಾಲಿಕವಾಗಿ ನಮ್ಮ ಮೆದುಳಿನಲ್ಲಿ ಮೆಮೊರಿಸ್ ಗಳು ಕ್ರಿಯೇಟ್ ಆಗದಂತೆ ಮಾಡುತ್ತದೆ. ಟ್ಯಾಟೂ ಹಾಕಿಸಿಕೊಂಡರೆ ಅದು ಹೋಗುವುದಿಲ್ಲ ಹೇಗೆಂದರೆ ಟ್ಯಾಟೂವನ್ನು ಬೇರೆಬೇರೆ ಕಲರಿನಲ್ಲಿ ಹಾಕುತ್ತಾರೆ. ಟ್ಯಾಟೂ ನೀಡಲ್ ನಿಂದ ಚರ್ಮದ ಒಳಗೆ ಚುಚ್ಚಿ ಚರ್ಮದ ಒಳಗೆ ಕಲರ್ ಬೀಳುವಂತೆ ಮಾಡುತ್ತಾರೆ ಇದರಿಂದ ಅದು ಹಾಗೆಯೇ ಇರುತ್ತದೆ ಲೇಸರ್ ಟ್ರೀಟ್ ಮೆಂಟ್ ನಿಂದ ಟ್ಯಾಟೂವನ್ನು ಹೋಗಲಾಡಿಸುತ್ತಾರೆ ಆದರೆ ಕೆಲವೊಂದು ಟ್ಯಾಟೂವನ್ನು ಲೇಸರ್ ಟ್ರೀಟ್ ಮೆಂಟ್ ನಿಂದಲೂ ಹೋಗಿಸಲು ಸಾಧ್ಯವಿಲ್ಲ.
ನಮ್ಮ ದೇಹದ ತುಂಬಾ ನರಗಳು, ಜೀವಕೋಶಗಳು ಇವೆ ದೇಹದ ಯಾವುದೇ ಒಂದು ಭಾಗದಲ್ಲಿ ನೋವು ಕಾಣಿಸಿಕೊಂಡಾಗ ಒಂದು ಕೆಮಿಕಲ್ ಉತ್ಪಾದನೆಯಾಗುತ್ತದೆ. ನೋವು ಆಗುತ್ತಿರುವ ಭಾಗದ ನರಗಳು ಕೆಮಿಕಲ್ ಗೆ ರೆಸ್ಪಾಂಡ್ ಮಾಡಿ ನೋವಿನ ಸಿಗ್ನಲ್ಸ್ ಅನ್ನು ಬ್ರೇನಿಗೆ ಕಳುಹಿಸುತ್ತವೆ ಆಗ ನೋವಿನ ಅನುಭವವಾಗುತ್ತದೆ. ಪೇನ್ ಕ್ಯೂಲ್ಲರ್ ತೆಗೆದುಕೊಂಡಾಗ ಕೆಮಿಕಲ್ ಉತ್ಪಾದನೆಯಾಗುವುದಿಲ್ಲ ಇದರಿಂದ ಸಿಗ್ನಲ್ಸ್ ಮೆದುಳಿಗೆ ಹೋಗುವುದಿಲ್ಲ ಆಗ ನಮಗೆ ನೋವಿನ ಅನುಭವವಾಗುವುದಿಲ್ಲ. ದ ಫೇಸಸ್ ಆಫ್ ಫೇಸ್ಬುಕ್ ಎಂಬ ವೆಬ್ ಸೈಟ್ ಗೆ ಹೋದರೆ ಫೇಸ್ಬುಕ್ ನ ಮೊದಲ ಅಕೌಂಟ್ ಮಾಡಿಕೊಂಡ ವ್ಯಕ್ತಿಯಿಂದ ಈಗ ಅಕೌಂಟ್ ಮಾಡಿಕೊಂಡ ವ್ಯಕ್ತಿಯವರೆಗೆ ಪ್ರೊಫೈಲ್ ನೋಡಬಹುದು
.