ಕೊರೊನಾ ಎರಡನೇ ಅಲೆಯು ಇಂದಿನ ಪರಿಸ್ಥಿತಿಯನ್ನು ಯಮಭೀಕರವನ್ನಾಗಿಸಿದೆ. ಇದಕ್ಕೆ ಸಿಲುಕಿದ ಜನರ ಜೀವನ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಗಿದೆ. ಉಸಿರಾಟದ ಏರುಪೇರು ಉಸಿರಾಡಲು ಪರದಾಡುವುದು ಈ ಸೋಂಕಿನ ಬಹುಮುಖ್ಯ ಲಕ್ಷಣವಾಗಿದೆ. ಆಕ್ಸಿಜನ್ ಅಭಾವ ತಲೆದೂರಿದೆ. ಈ ಆಕ್ಸಿಜನ್ ಕುರಿತು ಲೇಖನದಲ್ಲಿ ತಿಳಿಯೋಣ.
ಒಂದು ದಿನಕ್ಕೆ ಲಕ್ಷಾಂತರ ಜನರು ಸೋಂಕಿಗೆ ಗುರಿಯಾಗುತ್ತಿದ್ದು ಸಾವಿರಾರು ಜನ ನಿತ್ಯ ಸಾಯುತ್ತಿದ್ದಾರೆ. ಸಾವಿರಾರು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಭಾರತದಂತ ದೇಶದಲ್ಲಿ ನಿತ್ಯ ಜನರಿಗೆ ಆಕ್ಸಿಜನ್ ಸರಿಯಾಗಿ ಸಿಗುತ್ತಿಲ್ಲ. ಯಾವುದೇ ಆಸ್ಪತ್ರೆಗೆ ಹೋದರೂ ಆಕ್ಸಿಜನ್ ಹಾಗೂ ವೆಂಟಿಲೇಟರ್ ನ ಸಮಸ್ಯೆ ದಟ್ಟವಾಗಿ ಕಾಡುತ್ತದೆ. ಒಂದು ಕಡೆ ಬೆಡ್ ಸಿಗದೆ ಇನ್ನೊಂದು ಕಡೆ ಆಕ್ಸಿಜನ್ ಸಿಗದೆ ರೋಗಿಗಳು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇಂದು ನಿನ್ನೆಯ ಕಥೆಯಲ್ಲ. ಖಾಲಿಯಾದ ಸಿಲಿಂಡರ್ ಗಳನ್ನ ಮತ್ತೆ ತುಂಬಿಸಿಕೊಳ್ಳಲು ಆಸ್ಪತ್ರೆಯ ಸಿಬ್ಬಂಧಿಗಳು ಹಾಗೂ ರೋಗಿಯ ಕಡೆಯವರು ಸಾಲುಗಟ್ಟಿ ನಿಲ್ಲುವ ದೃಶ್ಯ ಮೊದಲೂ ಕಂಡುಬರುತ್ತಿದ್ದವು. ನಮ್ಮ ದೇಶದಲ್ಲಿ ಅಲ್ಲದೆ ಬೇರೆ ದೇಶಗಳು ಕೂಡ ಆಕ್ಸಿಜನ್ ಕೊರತೆ ಎದುರಿಸುತ್ತಿದ್ದಾರೆ. ವರದಿಯ ಪ್ರಕಾರ ಜಗತ್ತಿನಲ್ಲಿ 25ಕ್ಕೂ ಹೆಚ್ಚು ದೇಶಗಳಲ್ಲಿ ಆಕ್ಸಿಜನ್ ಕೊರತೆ ಇದೆ. ಭಾರತಕ್ಕಿಂತಲೂ ಮುಂದುವರೆದ ದೇಶಗಳಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಿದೆ.
ಭೂಮಿಯ ಮೇಲೆ ಹಾಗೂ ಅದರ ವಾತಾವರಣದ ಮೇಲ್ಮೈಯ ಸುತ್ತಲೂ ಅನೇಕ ಅನಿಲಗಳಿವೆ . ವೈಜ್ಞಾನಿಕವಾಗಿ ಇದರಲ್ಲಿ 78 ಶೇಕಡಾದಷ್ಟು ನೈಟ್ರೋಜನ್ ಹಾಗೂ 21 ಶೇಕಡಾದಷ್ಟು ಆಕ್ಸಿಜನ್ ಇರುತ್ತದೆ. ಉಳಿದ ಒಂದು ಶೇಕಡಾದಲ್ಲಿ ಕಾರ್ಬನ್ ಡೈಯಾಕ್ಸೈಡ್ ಹಾಗೂ ಹೈಡ್ರೋಜನ್ ಅನಿಲಗಳು ಇರುತ್ತದೆ. ಸಾಮಾನ್ಯವಾಗಿ ನಾವು ಉಸಿರಾಡುವುದು ಇದನ್ನೇ ಆಗಿದೆ. ನಾವು ಉಸಿರಾಡುವುದು ಶುದ್ಧ ಆಕ್ಸಿಜನ್ ಅಲ್ಲ. ಕೇವಲ 21 ರಷ್ಟು ಮಾತ್ರ ಆಕ್ಸಿಜನ್ ಇರುವ ಗಾಳಿಯನ್ನು ಉಸಿರಾಡುತ್ತವೆ. ಆರೋಗ್ಯವಂತ ವ್ಯಕ್ತಿಗೆ ಇದು ನಿರಾಯಾಸವಾಗಿ ಉಸಿರಾಡುವುದಕ್ಕೆ ಸಾಕಾಗುತ್ತದೆ. ಉಸಿರಾಟದ ತೊಂದರೆಯಿರುವ, ಅಸ್ತಮಾ, ಕೋವಿಡ್ ಕಾಯಿಲೆಯಿರುವ ಯಾವ ವ್ಯಕ್ತಿಗೂ ಸಾಕಾಗುವುದಿಲ್ಲ. ಶುದ್ಧ ಆಕ್ಸಿಜನ್ ನ್ನು ಮೆಡಿಕಲ್ ನಲ್ಲಿ ಕಂಪ್ರೆಸರ್ ಆಕ್ಸಿಜನ್ ಎಂದು ಕರೆಯುತ್ತಾರೆ.
ವಾತಾವರಣದ ಗಾಳಿಯನ್ನು ಏರ್ ಫಿಲ್ಟರ್ ಕಂಟೇನರ್ ಗಳಲ್ಲಿ ಸೋಸಲಾಗುತ್ತದೆ. ವೇಸ್ಟ್ ಪಾರ್ಟಿಕಲ್ಸ್ ಗಳನ್ನು ಹಾಗೂ ತ್ಯಾಜ್ಯಗಳನ್ನು ಬೇರ್ಪಡಿಸಿ ಸ್ವಚ್ಛ ಗಾಳಿಯನ್ನು ಮುಂದಿನ ಕಂಪ್ರೆಸರ್ ನಲ್ಲಿ ಸಂಗ್ರಹವಾಗುತ್ತದೆ. ಈ ಕಂಪ್ರೆಸರ್ ನಲ್ಲಿ ಇನ್ಲೆಟ್ ವಾಲ್ವ್ ಮತ್ತು ಡಿಸ್ಚಾರ್ಜ್ ವಾಲ್ವ್ ಇರುತ್ತವೆ. ಮೊದಲು ಸೋಸಿದ ಗಾಳಿಯನ್ನು ಇನ್ವಾಲ್ ಓಪನಿಂದ ಒಳಗೆ ಎಳೆದುಕೊಳ್ಳುತ್ತದೆ. ಇದರಲ್ಲಿನ ಪಿಸ್ಟನ್ ಹೆಚ್ಚು ಒತ್ತಡದ ಮೂಲಕ ಸಂಗ್ರಹವಾದ ಗಾಳಿಯನ್ನು ಕಂಪ್ರೆಸ್ ಮಾಡಿ ಅಲ್ಲಿ ಶಾಖ ಏರ್ಪಟ್ಟು ಬಿಸಿಯಾದ ಗಾಳಿ ಅದರ ಡಿಸ್ಚಾರ್ಜ್ ವಾಲ್ವ್ ಮೂಲಕ ರಿಲೀಸ್ ಆಗುತ್ತದೆ. ಈಗ ಬಿಸಿಯಾದ ಗಾಳಿಯನ್ನು ತಂಪು ಮಾಡಲು ಮುಂದಿನ ಫ್ರೀಜಿಂಗ್ ಯುನಿಟ್ ಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಸಿ 196 ಡಿಗ್ರಿ ಸೆಲ್ಸಿಯಸ್ ತಂಪಾದ ಬಿಂದುವಿನಲ್ಲಿ ಆ ಗಾಳಿಯನ್ನು ತಂಪಾಗಿಸುತ್ತದೆ. ಲಿಕ್ವಿಡ್ ನೈಟ್ರೋಜನ್ ಗಾಳಿಯ ಜೊತೆ ಬೆರೆಸಲಾಗುವುದಿಲ್ಲ. ಈ ಬಿಸಿಗಾಳಿ ಹೊರಹೋಗಲು ಇರುವ ಕಾಯ್ಲ್ ಟ್ಯೂಬ್ ಗೆ ಹೈಡ್ರೋಜನ್ ಲಿಕ್ವಿಡ್ ಅನ್ನು ತಗುಲಿಸಲಾಗುತ್ತದೆ. ಇದು ಒಳಗಿನ ಗಾಳಿಯ ಮೇಲೆ ಬಾಹ್ಯವಾಗಿ ವರ್ತಿಸಿ -200 ಡಿಗ್ರಿ ಸೆಲ್ಸಿಯಸ್ ವರೆಗೂ ತಂಪಾಗಿಸುತ್ತದೆ. ಹೀಗೆ ಮುಂದಿನ ಹಂತವಾದ ಸಪರೇಟರ್ ಗೆ ರವಾನಿಸಲಾಗುತ್ತದೆ .ಈ ಹಂತದಲ್ಲಿ ಕಾರ್ಬನ್ ಡೈ ಆಕ್ಸೈಡ್ ಅನ್ನು ಡ್ರೈ ಐಸ್ ರೀತಿಯಲ್ಲಿ ಬೇರ್ಪಡಿಸಲಾಗುತ್ತದೆ. ಕಾರ್ಬನ್ ಡೈಯಾಕ್ಸೈಡ್ ನಿಂದ ಬೇರ್ಪಟ್ಟ ಗಾಳಿಯನ್ನು ಎಕ್ಸ್ ಪಾನಷನ್ ಟರ್ಬೈನ್ ಗೆ ರವಾನಿಸಲಾಗುತ್ತದೆ. ಇಲ್ಲಿ ಗಾಳಿಯನ್ನು ಹಿಗ್ಗಿಸಲಾಗುತ್ತದೆ. ಹೀಗೆ ಮಾಡಿದಾಗ ಅಲ್ಲಿ ಅನಿಲ ದ್ರವರೂಪವನ್ನು ಪಡೆದು ಗಾಳಿಯಾಗಿ ಬದಲಾಗುತ್ತದೆ. ಈ ತಣ್ಣನೆಯ ಗಾಳಿಯನ್ನು ಮುಂದೆ ಬೃಹತ್ ಏರ್ ಡಿಸ್ಟಿಲೆಷನ್ ಕೊಲಮ್ ಗೆ ಸಾಗಿಸಲಾಗುತ್ತದೆ. ಇಲ್ಲಿ ತಣ್ಣಗಾದ ಗಾಳಿಯನ್ನು ಕೊಂಚ ಬಿಸಿಮಾಡಲಾಗುತ್ತದೆ. ಈ ಮೂಲಕ ಅದರಲ್ಲಿರುವ ನೈಟ್ರೋಜನ್, ಆರ್ಗನ್, ಕಲುಷಿತ ಅಂಶಗಳು ಬೇರ್ಪಡುತ್ತದೆ. ಇಲ್ಲಿ 196° ಡಿಗ್ರಿಯಲ್ಲಿ ಬಿಸಿ ಮಾಡಿದಾಗ ನೈಟ್ರೋಜನ್ ಬೇರ್ಪಡುತ್ತದೆ. ನಂತರ 186 ಡಿಗ್ರಿ ಸೆಲ್ಸಿಯಸ್ ನಲ್ಲಿ ಕುದಿಸಿದಾಗ ಆರ್ಗನ್ ಬೇರ್ಪಡುತ್ತದೆ. 185 ಡಿಗ್ರಿ ಸೆಲ್ಸಿಯಸ್ ನಲ್ಲಿ ಶುದ್ಧ ಆಕ್ಸಿಜನ್ ದೊರಕುತ್ತದೆ. ಇಲ್ಲಿ ಬೇರ್ಪಟ್ಟ ನೈಟ್ರೋಜನ್ ನನ್ನು ಕಬ್ಬಿಣ ಹಾಗೂ ಕೈಗಾರಿಕೆಗಳಿಗೆ ಮಾರಲಾಗುತ್ತದೆ ಮತ್ತು ಆರ್ಗನನ್ನು ಗೊಬ್ಬರ ತಯಾರಿಕೆ ಕಾರ್ಖಾನೆಗಳಿಗೆ ಕಳಿಸಲಾಗುತ್ತದೆ. ಡಿಸ್ಟಿಲೇಷನ್ ಕೆಳಬಾಗದಲ್ಲಿ ಉಳಿಯುವ ಶುದ್ಧ ಆಮ್ಲಜನಕ ವನ್ನು ಸಂಗ್ರಹಿಸಿ ಅಲ್ಯುಮಿನಿಯಂ ಸಿಲೆಂಡರ್ ಗಳಲ್ಲಿ ಕ್ಯಾನ್ ಗಳಲ್ಲಿ ಸಂಗ್ರಹಿಸಲಾಗುತ್ತದೆ.
ದ್ರವರೂಪದ ಆಮ್ಲಜನಕದ ಶುದ್ಧತೆಯು 93 ರಿಂದ 94 ಶೇಕಡಾದಷ್ಟು ಇರುತ್ತದೆ. ಪ್ರತಿಯೊಂದು ಲೀಟರ್ ಗಾಳಿಯಿಂದ 200 ಮಿಲಿ ಲೀಟರ್ ಆಕ್ಸಿಜನ್ ತಯಾರಿಸಬಹುದು. ಒಂದು ಲೀಟರ್ ತೂಗುವ ಗಾಳಿಯಿಂದ ಕಾಲು ಕೆಜಿಗಿಂತ ಕಡಿಮೆ ಆಕ್ಸಿಜನ್ ಲಭ್ಯವಾಗುತ್ತದೆ. ಈ ರೀತಿ ಸಂಗ್ರಹವಾಗುವ ಕ್ಯಾನುಗಳನ್ನು, ಸಿಲಿಂಡರ್ಗಳನ್ನು ರೋಗಿಗಳಿಗೆ ನೀಡಲಾಗುತ್ತದೆ. ಅತಿ ಹೆಚ್ಚು ತೂಗುವ ಆಕ್ಸಿಜನ್ ಸಿಲೆಂಡರ್ 1.5 ಮೀಟರ್ ಉದ್ದ ಹಾಗೂ ಇದರಲ್ಲಿ 60 ಕೆಜಿ ಆಕ್ಸಿಜನ್ ಇರುತ್ತದೆ ಅಂದರೆ ಇದರಲ್ಲಿ ಒಟ್ಟು 7800 ಲೀಟರ್ ದ್ರವ ರೂಪದ ಆಕ್ಸಿಜನ್ ಇರುತ್ತದೆ. ಪ್ರತಿ ಕೊರೊನಾ ರೋಗಿಗೆ ಪ್ರತಿ ನಿಮಿಷಕ್ಕೆ 130 ಲೀಟರ್ ಆಕ್ಸಿಜನ್ ಉಸಿರಾಡುವುದಕ್ಕೆ ಬೇಕಾಗುತ್ತದೆ. ಒಂದು ಗಂಟೆಗೆ ಒಂದು ದೊಡ್ಡ ಸಿಲೆಂಡರ್ ಬೇಕಾಗುತ್ತದೆ. ದಿನಕ್ಕೆ 24 ಸಿಲಿಂಡರ್ಗಳು ಒಬ್ಬ ವ್ಯಕ್ತಿಗೆ ಬೇಕಾಗುತ್ತದೆ. ಜಗತ್ತಿನಾದ್ಯಂತ ಶುದ್ಧ ಆಕ್ಸಿಜನ್ ಗೋಸ್ಕರ ಆಹಾಕಾರ ಎದ್ದಿದೆ. ಎಲ್ಲ ರಾಷ್ಟ್ರಗಳು ಈ ನಿಟ್ಟಿನಲ್ಲಿ ಆಕ್ಸಿಜನ್ ಪೂರೈಸುವುದರ ಮೂಲಕ ಪರಸ್ಪರ ಸಹಾಯ ಸಹಕಾರ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಆಕ್ಸಿಜನ್ ತಯಾರಿಕೆ ಸುಲಭದ ಸಂಗತಿಯಲ್ಲ ಅದಕ್ಕೆ ಬೇಕಾದಷ್ಟು ಸಮಯ ಹಿಡಿಯುತ್ತದೆ. ನಿಂತ ನಿಲುವಿನಲ್ಲೇ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಆಕ್ಸಿಜನ್ ಪೂರೈಸುವಷ್ಟು ಜಗತ್ತಿನ ಯಾವ ರಾಷ್ಟ್ರವು ಮುಂದುವರೆದಿಲ್ಲ. ಚೀನಾ ಬಿಟ್ಟರೆ ಜರ್ಮನಿ ಫ್ರಾನ್ಸ್ ಅತಿ ಹೆಚ್ಚು ಆಕ್ಸಿಜನ್ ತಯಾರಿಸುವ ರಾಷ್ಟ್ರವಾಗಿದೆ. ಈ ಎಲ್ಲಾ ಕಾರಣಗಳಿಂದ ಭಾರತದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ.