ಎಲ್ಲರಿಗೂ ತನ್ನದೇ ಆದ ಒಂದು ಸ್ವಂತ ಉದ್ಯೋಗವನ್ನು ಆರಂಭಿಸಬೇಕು ಎಂಬ ಆಸೆ ಇರುತ್ತದೆ ಆದರೆ ಯಾವ ಉದ್ಯಮವನ್ನು ಪ್ರಾರಂಭಿಸಿದರೆ ಹೆಚ್ಚು ಲಾಭವನ್ನು ಗಳಿಸಬಹುದು ಯಾವ ಉದ್ಯಮವನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲ ಇರುತ್ತದೆ. ನಾವಿಂದು ನಿಮಗೆ ವರ್ಷದ ಮುನ್ನೂರ ಅರವತ್ತೈದು ದಿನವೂ ಬೇಡಿಕೆ ಇರುವಂತಹ ಒಂದು ಉದ್ಯಮದ ಬಗ್ಗೆ ತಿಳಿಸಿಕೊಡುತ್ತೇವೆ.
ಈ ಉದ್ಯಮದಿಂದ ನೀವು ಲಕ್ಷಗಟ್ಟಲೆ ಲಾಭವನ್ನು ಗಳಿಸಬಹುದು ಮತ್ತು ಕಡಿಮೆ ಬಂಡವಾಳದಲ್ಲಿ ಈ ಉದ್ಯಮವನ್ನು ಪ್ರಾರಂಭಿಸಬಹುದು. ಹಾಗಾದರೆ ಆ ಉದ್ಯಮ ಯಾವುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ನಾವು ಈಗ ನಿಮಗೆ ಯಾವ ಉದ್ಯಮದ ಬಗ್ಗೆ ತಿಳಿಸುತ್ತಿದ್ದೇವೆ ಎಂದರೆ ಅದು ಡಿಟರ್ಜೆಂಟ್ ಪೌಡರ್ ಪ್ಯಾಕಿಂಗ್ ಉದ್ಯಮದ ಬಗ್ಗೆ. ಡಿಟರ್ಜೆಂಟ್ ಪೌಡರನ್ನು ಹೋಲ್ಸೇಲಾಗಿ ಕೊಂಡುಕೊಂಡು ಒಂದು ಪ್ಯಾಕಿಂಗ್ ಮೆಷಿನ್ ಮೂಲಕ ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು. ಡಿಟರ್ಜೆಂಟ್ ಪೌಡರ್ ಅನ್ನು ಬಟ್ಟೆ ತೊಳೆಯುವುದಕ್ಕೆ ಉಪಯೋಗಿಸುತ್ತಾರೆ.
ಹಳ್ಳಿಯಿಂದ ಹಿಡಿದು ಪಟ್ಟಣದವರೆಗೂ ಇದನ್ನು ಬಳಸುತ್ತಾರೆ ಇದನ್ನು ಎಲ್ಲರೂ ಪ್ರತಿನಿತ್ಯ ಬಳಸುತ್ತಾರೆ. ಎಲ್ಲಾ ಜನರು ಬ್ರಾಂಡ್ ಆಗಿರುವ ವಸ್ತುಗಳನ್ನು ಬಳಸುತ್ತಾರೆ ಎನ್ನುವುದು ತಪ್ಪು ಸಮಾಜದಲ್ಲಿ ಎಲ್ಲಾ ತರಹದ ಜನರು ಕೂಡ ಇರುತ್ತಾರೆ. ಯಾರು ಹೆಚ್ಚಿನ ಬೆಲೆಗೆ ಮಾರುತ್ತಾರೆ ಯಾರು ಕಡಿಮೆ ಬೆಲೆಗೆ ಮಾರುತ್ತಾರೆ ಎಂಬುದನ್ನು ಜನರೇ ನಿರ್ಧರಿಸಿ ಕೊಂಡುಕೊಳ್ಳುತ್ತಾರೆ. ಇನ್ನು ಈ ಉದ್ಯಮವನ್ನು ಪ್ರಾರಂಭಿಸುವುದು ಹೇಗೆ ಎಲ್ಲಿ ಡಿಟರ್ಜೆಂಟ್ ಪೌಡರ್ ಸಿಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.
ಇಂಡಿಯಾಮಾರ್ಟ್ ವೆಬ್ಸೈಟ್ನಲ್ಲಿ ಹಲವಾರು ಜನ ಮಾರಾಟಗಾರರು ಡಿಟರ್ಜೆಂಟ್ ಪೌಡರನ್ನು ಮಾರಾಟ ಮಾಡುತ್ತಾರೆ. ಅವರ ಬಳಿ ನಿಮಗೆ ಹೋಲ್ಸೇಲಾಗಿ ಒಂದು ಕೆಜಿಗೆ ಇಪ್ಪತ್ತು ರೂಪಾಯಿಯಂತೆ ಡಿಟರ್ಜೆಂಟ್ ಪೌಡರ್ ಸಿಗುತ್ತದೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಡಿಟರ್ಜೆಂಟ್ ಪೌಡರ್ ಗೆ ನೂರಾ ಇಪ್ಪತ್ತು ರೂಪಾಯಿ ಯಿಂದ ನೂರಾ ಐವತ್ತು ರೂಪಾಯಿ ಬೆಲೆ ಇದೆ. ಡಿಟರ್ಜಂಟ್ ಪೌಡರ್ ನಿಮಗೆ ಲೆಮೆನ್ ರೋಜ್ ಹೀಗೆ ಹಲವಾರು ಫ್ಲೇವರ್ ಗಳಲ್ಲಿ ಸಿಗುತ್ತದೆ.
ನಿವು ಪೌಡರನ್ನು ಹೋಲ್ಸೇಲಾಗಿ ಖರೀದಿಸಿದ ನಂತರ ನಿಮಗೆ ಪ್ಯಾಕಿಂಗ್ ಮಷೀನ್ ಬೇಕಾಗುತ್ತದೆ. ಅದು ನಿಮಗೆ ಸಾವಿರ ರೂಪಾಯಿಂದ ಒಂದು ಲಕ್ಷದವರೆಗೂ ಸಿಗುತ್ತದೆ. ಸಾವಿರ ರೂಪಾಯಿದು ಸಣ್ಣ ಪ್ಯಾಕಿಂಗ್ ಮಾಡುವುದಕ್ಕೆ ಉಪಯೋಗವಾಗುತ್ತದೆ. ನೀವು ಹೆಚ್ಚಿನ ಬಂಡವಾಳವನ್ನು ಹಾಕಿ ಸ್ವಲ್ಪ ದೊಡ್ಡ ತಂತ್ರವನ್ನು ಖರೀದಿಸುವುದು ಒಳ್ಳೆಯದು. ಮಷೀನ್ ಮಾಡೆಲ್ ಹಾಗೂ ಅಳತೆಯ ಮೇಲೆ ಬೆಲೆ ನಿರ್ಧರಿತವಾಗಿರುತ್ತದೆ. ಪ್ಯಾಕಿಂಗ್ ಮೆಷಿನ್ ಜೊತೆಗೆ ನಿಮಗೆ ಪ್ಯಾಕಿಂಗ್ ಕವರ್ ಗಳು ಕೂಡ ಬೇಕಾಗುತ್ತದೆ.
ನೀವು ಖಾಲಿ ಇರುವ ಕವರ್ ಳನ್ನು ಖರೀದಿಸಬಹುದು ಅಥವಾ ನಿಮ್ಮದೇ ಆದ ಯಾವುದಾದರೂ ಒಂದು ಬ್ರಾಂಡ್ ಹೆಸರಿರುವ ಕವರ್ ಳನ್ನು ಮಾಡಿಸಬಹುದು. ಮಾರುಕಟ್ಟೆಯಲ್ಲಿ ಬ್ರಾಂಡ್ ನೇಮ್ ಇದ್ದರೆ ಕೊಂಡು ಕೊಳ್ಳುವವರಿಗೆ ಸಹಾಯವಾಗುತ್ತದೆ. ಹಾಗೆಯೇ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಕೆಲವೊಂದು ಲೈಸನ್ಸ್ ಗಳು ಕೂಡ ಬೇಕಾಗುತ್ತದೆ.
ಇನ್ನು ಈ ಪ್ಯಾಕ್ ಗಳನ್ನು ನೂರು ಗ್ರಾಂ ಐವತ್ತು ಗ್ರಾಂ ಐದುನೂರು ಗ್ರಾಂ ಒಂದು ಕೆಜಿಯ ಪ್ಯಾಕ್ ಗಳನ್ನು ಮಾಡಿ ಮಾರಾಟ ಮಾಡಬೇಕಾಗುತ್ತದೆ. ಉದ್ಯಮವನ್ನು ಆರಂಭಿಸಿದ ಪ್ರಾರಂಭದಲ್ಲಿ ನೀವು ಚಿಕ್ಕಚಿಕ್ಕ ಪ್ಯಾಕ್ ಗಳನ್ನು ಮಾಡಿ ಮಾರಾಟ ಮಾಡುವುದು ಒಳ್ಳೆಯದು. ಪ್ರಾರಂಭದಲ್ಲಿ ಉಳಿದ ಕಂಪನಿಗಳಿಗಿಂತ ಸ್ವಲ್ಪ ಕಡಿಮೆ ಬೆಲೆ ಇಡುವುದು ಒಳ್ಳೆಯದು. ಇನ್ನು ಈ ಉದ್ಯಮದಿಂದ ಯಾವ ರೀತಿಯಾಗಿ ಲಾಭ ದೊರೆಯುತ್ತದೆ ಎಂಬುದನ್ನು ನೋಡೋಣ.
ನಿಮಗೆ ಒಂದು ಕೆಜಿ ಡಿಟರ್ಜೆಂಟ್ ಇಪ್ಪತ್ತು ರೂಪಾಯಿಗೆ ಸಿಗುತ್ತದೆ ಪ್ಯಾಕಿಂಗ್ ಟ್ರಾನ್ಸ್ಪೋರ್ಟ್ ಚಾರ್ಜ್ ಅಂತ ಐದು ರೂಪಾಯಿ ಖರ್ಚು ಬೀಳುತ್ತದೆ. ಹೀಗೆ ಇಪ್ಪತ್ತೈದು ರೂಪಾಯಿಯಲ್ಲಿ ನಿಮಗೆ ಒಂದು ಕೆಜಿ ಡಿಟರ್ಜಂಟ್ ಪೌಡರ್ ರೆಡಿಯಾಗುತ್ತದೆ. ಅದನ್ನು ನೀವು ಹೋಲ್ಸೇಲ್ ಅಂಗಡಿಗಳಿಗೆ ಎಪ್ಪತ್ತೈದು ರೂಪಾಯಿಯವರೆಗೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ನಿಮಗೆ ಒಂದು ಕೆಜಿಯ ಮೇಲೆ ಐವತ್ತು ರೂಪಾಯಿಯವರೆಗೆ ಲಾಭ ಸಿಗುತ್ತದೆ.
ನೀವು ಮಾರ್ಕೆಟ್ ಏಜೆನ್ಸಿ ಹಾಗೂ ಹೋಲ್ಸೇಲ್ ಡೀಲರ್ ಗಳಿಗೆ ಕಡಿಮೆ ಲಾಭದ ಮಾರ್ಜಿನ್ ಅನ್ನು ಇಟ್ಟುಕೊಂಡು ಮಾರಾಟ ಮಾಡಬೇಕಾಗುತ್ತದೆ. ಅವರೇ ನಿಮ್ಮ ಉತ್ಪನ್ನವನ್ನು ಪ್ರಮೋಟ್ ಮಾಡಿ ಮಾರಾಟ ಮಾಡಿಸುತ್ತಾರೆ. ನೀವು ನಿಮ್ಮ ಸುತ್ತಮುತ್ತಲು ಇರುವ ಅಂಗಡಿಗಳಿಗೆ ಮತ್ತು ಮಾರುಕಟ್ಟೆಯಲ್ಲಿ ಇದನ್ನು ಮಾರಾಟ ಮಾಡುವುದರಿಂದ ಉತ್ತಮ ರೀತಿಯ ಲಾಭವನ್ನು ಪಡೆಯಬಹುದು ನೀವು ಕೂಡ ಡಿಟರ್ಜೆಂಟ್ ಪೌಡರ್ ಉದ್ಯಮವನ್ನು ಪ್ರಾರಂಭಿಸಿ ಉತ್ತಮ ರೀತಿಯ ಲಾಭವನ್ನು ಗಳಿಸಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗು ಮಾಹಿತಿಯನ್ನು ತಿಳಿಸಿರಿ.