ಹಣ್ಣುಗಳ ಗುಂಪಿನಲ್ಲಿ ಕಿತ್ತಳೆ ಹಣ್ಣು ಕೂಡ ಒಂದು. ಇದು ಕೇಸರಿ ಬಣ್ಣವನ್ನು ಹೊಂದಿದ್ದು ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಇದನ್ನು ಸಿಪ್ಪೆ ಬಿಡಿಸುವುದು ಬಹಳ ಸುಲಭ. ಹಾಗೆಯೇ ಇದರಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಇರುತ್ತವೆ. ಇದು ಹೆಚ್ಚಾಗಿ ಹುಳಿಯು ಅಲ್ಲದೆ ಸಿಹಿಯು ಅಲ್ಲದೆ ಒಳ್ಳೆಯ ರುಚಿಯನ್ನು ಹೊಂದಿರುತ್ತದೆ. ಆದ್ದರಿಂದ ನಾವು ಇಲ್ಲಿ ಕಿತ್ತಳೆಹಣ್ಣಿನ ಮತ್ತು ಅದರ ಸಿಪ್ಪೆಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪ್ರತಿಯೊಂದು ಹಣ್ಣಿನಲ್ಲಿ ಒಂದೊಂದು ವಿಟಮಿನ್ ಗಳು ಇರುತ್ತವೆ. ಹಾಗೆಯೇ ಕಿತ್ತಳೆಹಣ್ಣು ಹೆಚ್ಚಾಗಿ ವಿಟಮಿನ್ ಸಿ ಯನ್ನು ಹೊಂದಿದೆ. ಇದರಲ್ಲಿ ಫ್ಲೇವನೈಡ್ಸ್ ಮತ್ತು ಫೈಟೋಕೆಮಿಕಲ್ ಗಳು ಇವೆ. ಒಂದು ಕಿತ್ತಳೆಹಣ್ಣು 100ಗ್ರಾಮ್ ಗಳನ್ನು ಹೊಂದಿದ್ದರೆ 71ಮಿಲಿಗ್ರಾಮ್ ವಿಟಮಿನ್ ಸಿ ಯನ್ನು ಹೊಂದಿದೆ. ಹಾಗೆಯೇ ಅದರ ಸಿಪ್ಪೆ ಕೂಡ ಅನೇಕ ಪ್ರಯೋಜನಕಾರಿ ಆಗಿದೆ. ಅದೇ 100ಗ್ರಾಮ್ ಕಿತ್ತಳೆಹಣ್ಣಿನ ಸಿಪ್ಪೆಯು 136ಮಿಲಿಗ್ರಾಮ್ ವಿಟಮಿನ್ ಸಿ ಯನ್ನು ಹೊಂದಿರುತ್ತದೆ.

ಆದ್ದರಿಂದ ಇದರ ಸಿಪ್ಪೆಯನ್ನು ತೆಗೆದು ಒಗೆಯಬಾರದು. ಇದನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಆಹಾರ ಪದಾರ್ಥಗಳಿಗೆ ಬಳಸಬಹುದು. ಸಿಪ್ಪೆಯಲ್ಲಿ ಹೆಸ್ಪೆರಿಡಿನ್ ಎಂಬ ಫ್ಲೇವನೈಡ್ ರಕ್ತದಲ್ಲಿ ಇರುವ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ಹತೋಟಿಗೆ ತರುತ್ತದೆ. ಆದ್ದರಿಂದ ಕಿತ್ತಳೆ ಹಣ್ಣಿನ ಸಿಪ್ಪೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಬಹುದು. ಹಾಗೆಯೇ ಇದರ ಪುಡಿಯನ್ನು ಮುಖಕ್ಕೆ ಹಚ್ಚಬೇಕು. ಇಲ್ಲವಾದಲ್ಲಿ ಕಿತ್ತಳೆ ಸಿಪ್ಪೆಯನ್ನು ರುಬ್ಬಿ ಅದಕ್ಕೆ ಹಾಲು ಅಥವಾ ಮೊಸರನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು.

ಒಣಗಿದ ನಂತರ ಇದನ್ನು ತೆಗೆಯಬೇಕು. ಇದರಿಂದ ಮುಖದ ಚರ್ಮದ ಸಮಸ್ಯೆ ಕಡಿಮೆ ಆಗುತ್ತದೆ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇದು ಹಲ್ಲು ಮತ್ತು ವಸಡಿನ ಆರೋಗ್ಯವನ್ನು ಸಹ ಕಾಪಾಡುತ್ತದೆ. ಹಾಗೆಯೇ ಈ ಹಣ್ಣನ್ನು ದಿನನಿತ್ಯ ತಿನ್ನುವುದರಿಂದ ಕ್ಯಾನ್ಸರ್ ನಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು. ಇದರಲ್ಲಿ ಇರುವ ಲಿಮೋನಿನ್ ಎನ್ನುವ ಅಂಶ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಈಗ ಕಿತ್ತಳೆ ಹಣ್ಣಿನ ಸೀಸನ್ ಶುರುವಾಗಿದೆ. ಹಾಗಾಗಿ ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂದು ಹೇಳಬಹುದು. ಇದನ್ನು ತಂದು ತಿಂದು ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!