Online money transfer: ನಿಮ್ಮ ಹಣ ಮೀಸ್ ಆಗಿ ಬೇರೆಯವರ ಅಕೌಂಟ್ ಗೆ ಹಣ ವರ್ಗಾವಣೆ ಆದರೆ ವಾಪಸ್ ಪಡೆಯಲು ತಕ್ಷಣ ಏನ್ ಮಾಡಬೇಕು ಗೊತ್ತೇ? ನಿಮಗಿದು ಗೊತ್ತಿರಲಿ

0 11

Online money transfer: ನಿಮ್ಮ ಖಾತೆಯಿಂದ ಬೇರೆಯವರ ಖಾತೆಗೆ ಅಪ್ಪಿ ತಪ್ಪಿ ಹಣ ವರ್ಗಾವಣೆ ಆದರೆ ಏನು ಮಾಡಬೇಕು, ಹಣ ವಾಪಸ್ ಪಡೆಯಲು ಸಾಧ್ಯವೇ, ಸಾಧ್ಯವಾದರೆ ಹಣವನ್ನು ಹೇಗೆ ವಾಪಾಸ್ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಮ್ಮ ಅಕೌಂಟ್ ನಿಂದ ಕೆಲವೊಮ್ಮೆ ಬೇರೆಯವರ ಅಕೌಂಟ್ (Account) ಗೆ ಹಣ ವರ್ಗಾವಣೆ ಮಾಡಬೇಕಾಗುತ್ತದೆ. ಹಣ ವರ್ಗಾವಣೆಯ ವೇಳೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕವಾಗಿದೆ. ಒಂದು ವೇಳೆ ಅಪ್ಪಿತಪ್ಪಿ ನಮ್ಮ ಅಕೌಂಟ್ ನಿಂದ ಹಣ ಬೇರೆಯವರ ಖಾತೆಗೆ ವರ್ಗಾವಣೆ ಆದರೆ ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂದು ತೋಚುವುದಿಲ್ಲ ಆದರೆ ಅವರಿಂದ ಹಣ ವಾಪಸ್ ಪಡೆಯಬಹುದು.

ಈ ಕುರಿತು RBI ಮಾರ್ಗಸೂಚಿಗಳನ್ನು ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ ಲಾಭಾರ್ಥಿಯ ಸೂಕ್ತ ಮಾಹಿತಿ ನೀಡುವುದು ಲಿಂಕ್ ಮಾಡುವವರ ಜವಾಬ್ದಾರಿಯಾಗಿರುತ್ತದೆ. ಈ ವೇಳೆ ಲಿಂಕ್ ಮಾಡುವವರು ಯಾವುದೇ ಕಾರಣದಿಂದ ತಪ್ಪಾಗಿರುವ ಮಾಹಿತಿ ನೀಡಿದರೆ ಇದಕ್ಕೆ ಬ್ಯಾಂಕ್ ಹೊಣೆಯಲ್ಲ. ನೀವು ನಿಮ್ಮ ಹಣವನ್ನು ವಾಪಸ್ ಪಡೆಯಬಹುದಾಗಿದೆ.

ಅಪ್ಪಿತಪ್ಪಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆದ ಸಂದರ್ಭದಲ್ಲಿ ನಿಮ್ಮ ಹಣ ಮರಳಿ ಪಡೆಯಲು ಎರಡು ವಿಧಾನಗಳಿವೆ. ಮೊದಲ ವಿಧಾನದಲ್ಲಿ ಈ ಕುರಿತು ನೀವು ನಿಮ್ಮ ಹೋಂ ಬ್ರಾಂಚ್ ಗೆ ಶೀಘ್ರದಲ್ಲಿ ಮಾಹಿತಿ ನೀಡಬೇಕು. ನೀವು ನೀಡಿದ ಸೂಚನೆಯ ಆಧಾರದ ಮೇಲೆ ನಿಮ್ಮ ಹೋಂ ಬ್ರಾಂಚ್ ಅಧಿಕಾರಿಗಳು ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ ವ್ಯಕ್ತಿಯ ಹೋಂ ಬ್ರಾಂಚ್ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಬ್ಯಾಂಕ್ ಅಧಿಕಾರಿಗಳು ಆ ವ್ಯಕ್ತಿಯನ್ನು ಸಂಪರ್ಕಿಸಿ ನಿಮ್ಮ ಹಣ ಮರಳಿ ಹಿಂಪಡೆಯಲು ಅನುಮತಿ ಪಡೆಯುತ್ತಾರೆ. ನೀವು ನಿಮ್ಮ ಹಣವನ್ನು ವಾಪಸ್ ಪಡೆಯಲು ಕಾನೂನಿನ ಸಹಾಯ ಪಡೆಯಬಹುದು.

ಒಂದು ವೇಳೆ ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ ಖಾತೆದಾರನು ನಿಮ್ಮ ಹಣವನ್ನು ಮರಳಿ ನೀಡಲು ನಿರಾಕರಿಸಿದರೆ ಆತನ ವಿರುದ್ಧ ನ್ಯಾಯಾಲಯದಲ್ಲಿ ದೂರು ಕೂಡ ದಾಖಲಿಸಬಹುದು ಆದರೆ ಹಣ ಹಿಂದಿರುಗಿಸದ ಇಂತಹ ಪರಿಸ್ಥಿತಿಯಲ್ಲಿ ಈ ಅಧಿಕಾರ RBI ನಿಯಮಗಳ ಉಲ್ಲಂಘನೆಯಡಿ ಮಾತ್ರ ಅವಕಾಶ ಇರುತ್ತದೆ. ಎರಡನೇ ವಿಧಾನದಲ್ಲಿ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾದ ಬಳಿಕ ಶೀಘ್ರವೇ ನೀವು ನಿಮ್ಮ ಬ್ಯಾಂಕ್ ಗೆ ಈ ಕುರಿತು ಸೂಚನೆ ನೀಡಬೇಕು. ಒಂದು ವೇಳೆ ನಿಮ್ಮ ಹಾಗೂ ಆ ವ್ಯಕ್ತಿಯ ಖಾತೆ ಒಂದೇ ಬ್ಯಾಂಕ್ ನಲ್ಲಿದ್ದರೆ ಈ ಪ್ರಕ್ರಿಯೆ ಇನ್ನಷ್ಟು ಸುಲಭವಾಗುತ್ತದೆ ಆಗ ನಿಮ್ಮ ಹಣ ಒಂದೆರಡು ದಿನಗಳಲ್ಲಿ ನಿಮ್ಮ ಖಾತೆಗೆ ಬರುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದು ತಪ್ಪದೆ ಎಲ್ಲರಿಗೂ ತಿಳಿಸಿ, ಆದಷ್ಟು ಹಣ ವರ್ಗಾವಣೆ ಮಾಡುವಾಗ ಎಚ್ಚರಿಕೆಯಿಂದಿರಿ.

Leave A Reply

Your email address will not be published.