ರೂಪಾಯಿ (ಚಿಹ್ನೆ: ₹; ಸಂಕೇತ: INR) ಭಾರತದ ಅಧಿಕೃತ ನಗದು ವ್ಯವಸ್ಥೆ. ಇದರ ಪ್ರಕಟಣೆ ಮತ್ತು ವಿತರಣೆಯನ್ನು ಭಾರತೀಯ ರಿಜರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ಭಾರತ ಸರ್ಕಾರವು ತನ್ನ ಮೊದಲ ಕಾಗದದ ಹಣವನ್ನು 1861ರಲ್ಲಿ ಪರಿಚಯಿಸಿತು. 1864 ರಲ್ಲಿ 10 ರೂಪಾಯಿ ನೋಟುಗಳು, 1872 ರಲ್ಲಿ 5 ರೂಪಾಯಿ ನೋಟುಗಳು, 1899 ರಲ್ಲಿ 10,000 ರೂಪಾಯಿ ನೋಟುಗಳು, 1900 ರಲ್ಲಿ 100 ರೂಪಾಯಿ ನೋಟುಗಳು, 1905 ರಲ್ಲಿ 50 ರೂಪಾಯಿ ನೋಟುಗಳು, 1907 ರಲ್ಲಿ 500 ರೂಪಾಯಿ ನೋಟುಗಳು, ಮತ್ತು 1909 ರಲ್ಲಿ 1000 ರೂಪಾಯಿ ನೋಟುಗಳು, 1917 ರಲ್ಲಿ 1 ಮತ್ತು 2 1/2 ರೂಪಾಯಿ ನೋಟುಗಳನ್ನು ಪರಿಚಯಿಸಲಾಯಿತು. 1938 ರಲ್ಲಿ (RBI) ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಉತ್ಪಾದನೆ ಆರಂಭಿಸಿತ್ತು. ಅದು 2, 5, 10, 50, 100, 1,000 ಮತ್ತು 10,000 ರೂಪಾಯಿ ನೋಟುಗಳನ್ನು ನೀಡುವ ಹೊಣೆ ಹೊಂದಿತ್ತು. ಈ ರೀತಿಯಾಗಿ ಕಾಗದದ ಹಣದ ಇತಿಹಾಸ ಇರುವ ನಮ್ಮ ದೇಶದ ಒಂದು ನಿರ್ಧಿಷ್ಟ ಮುಖ ಬೆಲೆಯ ಹಣಕ್ಕೆ ಈಗ ಭಾರಿ ಬೇಡಿಕೆ ಬಂದಿದೆ. ಒಂದುವೇಳೆ ನಿಮ್ಮ ಬಳಿ ಏನಾದರೂ 5 ರೂಪಾಗಿಯ ಹಳೇ ನೋಟು ಇದ್ದರೆ ಆ ನೋಟಿನಿಂದ ಮನೆಯಲ್ಲೇ ಕುಳಿತು 30 ಸಾವಿರ ರೂಪಾಯಿಯ ವರೆಗೂ ನೀವು ಹಣವನ್ನು ಗಳಿಸಬಹುದು. ಇದು ಹೇಗೆ? ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಮ್ಮ ಬಳಿ ಸಾಮಾನ್ಯವಾಗಿ ಮನೆಯ ಯಾವುದೋ ಒಂದು ಮೂಲೆಯಲ್ಲಿ ಇಲ್ಲವೇ ಹಳೆಯ ಬ್ಯಾಗ್ ಯಾವುದೋ ಬಾಕ್ಸ್​​ನಲ್ಲಿ, ಹಳೇ ಪರ್ಸ್​​ನಲ್ಲಿ, ಪಿಗ್ಗಿ ಬ್ಯಾಂಕ್​ನಲ್ಲಿ ಹಳೆಯ ಕಾಲದ ನಾಣ್ಯಗಳು, ಈಗೊಂದಿಷ್ಟು ವರ್ಷಗಳ ಹಿಂದಿನ ಕಾಲದ ಕಾಗದದ ನೋಟುಗಳು ಹೀಗೇ ಎಲ್ಲೆಲ್ಲೋ ಬಿದ್ದಿರುತ್ತವೆ. ಇದೇ ರೀತಿ ನಿಮ್ಮ ಮನೆಯಲ್ಲಿ ಹಳೆಯ 5 ರೂಪಾಯಿ ನೋಟು ಇದೆಯಾ? ಒಂದುವೇಳೆ ಇದ್ದರೆ ಹುಡುಕಿ ನೋಡಿ ಯಾಕೆಂದ್ರೆ ಕೇವಲ ಒಂದೇ ಒಂದು 5 ರೂಪಾಯಿಯ ನೋಟಿನಿಂದ ನೀವು ಸುಲಭವಾಗಿ ಮನೆಯಲ್ಲಿಯೇ ಕುಳಿತು 30,000 ರೂಪಾಯಿ ಪಡೆಯಬಹುದು. ಹಾಗಾದ್ರೆ ಈ ರೀತಿಯಾಗಿ ಹೀಗೆ 5 ರೂಪಾಯಿ ನೋಟಿನಿಂದ 30 ಸಾವಿರ ರೂಪಾಯಿ ಹಣವನ್ನು ಪಡೆಯಲು ನವೆಲ್ಲಿಗೆ ಹೋಗಿ ಇದನ್ನು ಪಡೆಯಬಹುದು? ಅನ್ನೋ ಪ್ರಶ್ನೆ ನಿಮಗೆ ಹುಟ್ಟೋದು ಸಹಜ ಆದರೆ ಆ ಹಣವನ್ನು ಪಡೆಯಲು ನೀವೆಲ್ಲಿಗೂ ಹೊರಗೆ ಹೋಗಬೇಕಿಲ್ಲ ಮನೆಯಲ್ಲಿಯೇ ಕುಳಿತು ಹಣವನ್ನು ಪಡೆಯಬಹುದು. ಇದಕ್ಕಾಗಿ ನೀವು ಹೆಚ್ಚೇನೂ ಕೆಲಸ ಮಾಡಬೇಕಿಲ್ಲ. ಒಂದು ವೆಬ್​ಸೈಟ್​ಗೆ ಭೇಟಿ ಕೊಡಬೇಕು ಅಷ್ಟೇ ಆ ವೆಬ್ಸೈಟ್ ನಲ್ಲಿ ಕೇವಲ ಎರಡೇ ನಿಮಿಷದಲ್ಲಿ ನಿಮ್ಮ ಕೆಲಸ ಆಗಿಬಿಡುತ್ತದೆ.

ಇದು ವಿಚಿತ್ರ ಎನ್ನಿಸಿದರೂ ಸತ್ಯ ಹಳೇ 5 ರೂಪಾಯಿ ನೋಟುಗಳನ್ನು ನೀವು ಈ ವೆಬ್​​ಸೈಟ್​ವೊಂದರಲ್ಲಿ ಮಾರಾಟ ಮಾಡಿ ಹೆಚ್ಚಿನ ಮೊತ್ತದ ಹಣವನ್ನು ಗಳಿಸಬಹುದು. ಅದರಲ್ಲೂ ಟ್ರ್ಯಾಕ್ಟರ್​ ಚಿತ್ರವಿರುವ 5 ರೂಪಾಯಿ ನೋಟು ಮಾರಾಟ ಮಾಡಿದರೆ 30 ಸಾವಿರ ರೂ. ಗಳಿಸಬಹುದಾಗಿದೆ. ಅದರಲ್ಲೂ 786 ಎಂಬ ಸಂಖ್ಯೆಯಿದ್ದರೆ ಅದನ್ನು ಅತಿ ಅಪರೂಪದ ನೋಟು ಎಂದು ಆರ್​ಬಿಐ ಪರಿಗಣಿಸುತ್ತದೆ. ಇಂಥ ಅಪರೂಪದ 5 ರೂಪಾಯಿ ಹಳೇ ನೋಟನ್ನು ನೀವು coinbazzar.com ಎಂಬ ಈ ವೆಬ್ಸೈಟ್ನಲ್ಲಿ ಮಾರಾಟ ಮಾಡಿದರೆ, ಅದರ ಬದಲು ಹೆಚ್ಚಿನ ಮೊತ್ತದ ಹಣವನ್ನು ನೀವು ಪಡೆಯಬಹುದು. ಹಾಗಿದ್ದರೆ 5ರೂಪಾಯಿಯ ನೋಟನ್ನು ಮಾರಾಟ ಮಾಡುವ ವಿಧಾನ ಹೇಗಿದೆ? ಏನೆನೆಲ್ಲ ಪ್ರಕ್ರಿಯೆಗಳು ಇವೆ? ಇಲ್ಲಿ ನಾವು ಯಾವೆಲ್ಲ ಪ್ರಕ್ರಿಯೆಗಳನ್ನು ಅನುಸರಿಸಬೇಕು? ಅನ್ನೋದನ್ನ ನೋಡುವುದಾದರೆ, ಮೊದಲು coinbazzar.com ಎಂಬ ವೆಬ್​​ಸೈಟ್​ಗೆ ಭೇಟಿ ನೀಡಿ ಅಲ್ಲಿ ನೀವು ಮಾರಾಟಗಾರರು ಎಂದು ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ನಂತರ ನಿಮ್ಮ ಬಳಿ ಇರುವ 5 ರೂಪಾಯಿ ನೋಟಿನ ಫೋಟೋ ತೆಗೆದು ಆ ಒಂದು ನಿರ್ಧಿಷ್ಟ ವೆಬ್​​ಸೈಟ್​ ನಲ್ಲಿ ಅಪ್ಲೋಡ್ ಮಾಡಬೇಕು. ಹೀಗೆ ಮಾಡಿದಾಗ ನಿಮ್ಮ ನೋಟು ಮಾರಾಟಕ್ಕೆ ಇಟ್ಟ ಜಾಹೀರಾತು ಕಾಯಿನ್​ ಬಜಾರ್​ ಪ್ಲಾಟ್​ಫಾರಂನಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ ಆಸಕ್ತಿ ಇರುವಂತಹ ಜನರು ನಿಮ್ಮ ಜಾಹೀರಾತನ್ನು ನೋಡಿ ನಿಮ್ಮನ್ನು ಸಂಪರ್ಕ ಮಾಡುತ್ತಾರೆ. ನಂತರ ಅವರೊಂದಿಗೆ ಮಾತನಾಡಿ ನೀವು ನಿಮ್ಮ ಐದು ರೂಪಾಯಿಯ ಹಳೆಯ ನೋಟಿಗೆ ದರ ನಿಗದಿ ಮಾಡಿಕೊಳ್ಳಬಹುದಾಗಿದೆ.

ಬರೀ ಇಷ್ಟೇ ಅಲ್ಲದೇ ಕಾಯಿನ್​ ಬಜಾರ್​ ಪ್ಲಾಟ್​ಫಾರಂನಲ್ಲಿ 1 ರೂಪಾಯಿಯ ಹಳೇ ನೋಟನ್ನೂ ಸಹ ನೀವು ಮಾರಾಟ ಮಾಡಬಹುದಾಗಿದೆ. ಈ 1 ರೂಪಾಯಿಯ ನೋಟಿನಿಂದ 45,000 ರೂಪಾಯಿವರೆಗೂ ಗಳಿಸಬಹುದಾಗಿದೆ. ಆದರೆ ಆ ನೋಟಿನ ಮೇಲೆ ಗವರ್ನರ್​ ಎಚ್​. ಎಂ.ಪಟೇಲ್​​ ಅವರ ಸಹಿ ಇರಬೇಕು. ಅಂದರೆ ಆ ನೋಟುಗಳು 1957ರಲ್ಲಿ ಬಿಡುಗಡೆ ಆದ ನೋಟಾಗಿದ್ದು 123456 ಸೀರಿಯಲ್​ ನಂಬರ್​ ಹೊಂದಿರಬೇಕು. 26ವರ್ಷದ ಹಿಂದೆ ಭಾರತ ಸರ್ಕಾರ 1 ರೂಪಾಯಿ ನೋಟು ಪ್ರಿಂಟ್​ ಮಾಡುವುದನ್ನು ನಿಲ್ಲಿಸಿತ್ತು. ಅದನ್ನು 2015ರ ಜನವರಿ 1 ರಿಂದ ಮತ್ತೆ ಪ್ರಾರಂಭಿಸಿತ್ತು. ಹೀಗಾಗಿ ಅನೇಕ ಜನರ ಬಳಿ 26 ವರ್ಷದ ಹಿಂದಿನ ಹಳೇ ನೋಟುಗಳು ಉಳಿದುಹೋಗಿವೆ. ಅಂಥವರು ಈಗ ವೆಬ್​ಸೈಟ್ ಮೂಲಕ ಅವುಗಳನ್ನು ಮಾರಾಟ ಮಾಡಬಹುದಾಗಿದೆ.

Leave a Reply

Your email address will not be published. Required fields are marked *