ಇತ್ತೀಚಿನ ದಿನಗಳಲ್ಲಿ ಜನರಿಗೆ ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುವುದು ಸರ್ವೇಸಾಮಾನ್ಯವಾಗಿದೆ. ಪ್ರತೀ ದಿನದ ನೀವು ಬಯಸಿದ ಊಟ ತಿಂಡಿಗಳಿಂದ ಹಿಡಿದು ಚಿಕ್ಕ ಚಿಕ್ಕ ಗೃಹೋಪಯೋಗಿ ವಸ್ತುಗಳಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಮೊಬೈಲ್ , ಟಿವಿ , ಫ್ರಿಡ್ಜ್ ಮುಂತಾದವುಗಳನ್ನು ಸಹ ಮನೆಯಲ್ಲಿಯೇ ಕುಳಿತು ಆರ್ಡರ್ ಮಾಡುವ ಮೂಲಕ ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕೂಡಾ ಇದೆ. ಜಾಗತಿಕ ಪ್ರವೇಶ ದಿನದ 24 ಗಂಟೆಗಳು ವಾರದಲ್ಲಿ 7 ದಿನಗಳು ಕೂಡಾ ಈ ಆನ್ಲೈನ್ ಸೇವೆ ಲಭ್ಯವಿರುತ್ತದೆ.
ಇದು ಬರೀ ಮೊಬೈಲ್ ನಿಂದ ನಡೆಯುವ ಕೆಲಸವಾಗಿದ್ದು ಆಧುನಿಕ ಜಗತ್ತಿನ ಸದಾ ಕೆಲಸ ಕೆಲಸ ಎಂದು ಬಿಡುವಿಲ್ಲದ ಯುವಪೀಳಿಗೆಗೆ ಈ ಆನ್ಲೈನ್ ವ್ಯವಹಾರ ಅತ್ಯಂತ ಸಹಾಯಕಾರಿ ಆಗಿದೆ ಎಂದೇ ಹೇಳಬಹುದು. ಕೆಲವೊಮ್ಮೆ ಇದರಿಂದ ಗ್ರಾಹಕರಿಗೆ ಮೊಸವಾಗುವುದು ಇದ್ದರೂ ಇರಬಹುದು.
ಆದರೆ ಇಲ್ಲೊಬ್ಬ ಗ್ರಾಹಕ ಆನ್‌ಲೈನ್ ಫ್ರಿಡ್ಜ್ ಆರ್ಡರ್ ಮಾಡಿ ಲಕ್ಷಾಧಿಪತಿಯಾಗಿದ್ದಾನೆ. ಏನಿದು! ಆನ್ಲೈನ್ ನಲ್ಲಿ ಆರ್ಡರ್ ಮಾಡಿ ಹಣ ಸಂಪಾದನೆ ಕೂಡಾ ಮಾಡಲು ಸಾಧ್ಯವಾ? ಎನ್ನುವ ಪ್ರಶ್ನೆ ಕಾಡಬಹುದು ಆಶ್ಚರ್ಯ ಕೂಡಾ ಆಗಬಹುದು. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ದಕ್ಷಿಣ ಕೊರಿಯಾದಲ್ಲೊಬ್ಬ ಆನ್‌ಲೈನ್ ಮೂಲಕ ಫ್ರಿಡ್ಜ್ ಖರೀದಿ ಮಾಡಿದ ಈ ವ್ಯಕ್ತಿಯೊಬ್ಬನ ಅದೃಷ್ಟ ಖುಲಾಯಿಸಿದ್ದು ಆತನಿಗೆ ಬರೋಬ್ಬರಿ 96 ಲಕ್ಷ ರೂಪಯಿ ನಗದು ಹಣ ದೊರಕಿದೆ. ವರದಿಗಳ ಪ್ರಕಾರ ಆ ವ್ಯಕ್ತಿ ದಕ್ಷಿಣ ಕೊರಿಯಾದ ಜೆಜು ಎಂಬ ದ್ವೀಪದ ನಿವಾಸಿಯಾಗಿದ್ದಾನೆ. ಈ ಹಣದ ಬಗ್ಗೆ ಆತನಿಗೆ ಮೊದಲು ಯಾವುದೇ ವಿಷಯ ತಿಳಿದಿರಲಿಲ್ಲ. ಆ ವ್ಯಕ್ತಿ ಆಗಸ್ಟ್ 6 ರಂದು ನಗದು ರಸೀದಿ ವರದಿ ಸಲ್ಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ ಫ್ರಿಜ್ ಸ್ವಚ್ಛಗೊಳಿಸುವಾಗ ಇದರಲ್ಲಿ 96 ಲಕ್ಷ ರೂಪಾಯಿ ಪತ್ತೆಯಾಗಿದೆ ಎಂದು ತಿಳಿಸಿದ್ದಾನೆ. ತಾನು ಸ್ವಚ್ಛಗೊಳಿಸಿದ್ದ ಫ್ರಿಡ್ಜ್ ಇತ್ತೀಚೆಗಷ್ಟೇ ಆನ್‌ಲೈನ್ ಮೂಲಕ ಖರೀದಿ ಮಾಡಿದ್ದನೆಂದು ಆ ವ್ಯಕ್ತಿ ತಿಳಿಸಿದ್ದಾನೆ. ಎಂಬಿಸಿ ನ್ಯೂಸ್ ನಲ್ಲಿ ಬಂದ ವರದಿಯ ಪ್ರಕಾರ ಹಣವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಪ್ಯಾಕ್ ಮಾಡಿ ಫ್ರಿಜ್ ನ ಕೆಳಭಾಗದಲ್ಲಿ ಅಂಟಿಸಲಾಗಿತ್ತು.
ತನಗೆ ತಾನು ಖರೀದಿ ಮಾಡಿದ ಆ ಫ್ರಿಡ್ಜ್ ನಲ್ಲಿ ದೊರೆತ ಆ ಅಷ್ಟೂ ಹಣಗಳನ್ನು ಆ ವ್ಯಕ್ತಿ ಪೊಲೀಸರಿಗೆ ನೀಡಿದ್ದಾನೆ. ಬಳಿಕ ಪೊಲೀಸರು ರೆಫ್ರಿಜರೇಟರ್ ಡೆಲಿವರಿ ಮಾಡಿದ ಆನ್‌ಲೈನ್ ಮಾರಾಟಗಾರರನ್ನು ಗುರುತಿಸಿ ವಿಚಾರಣೆಗೆ ಆದೇಶಿಸಿದರು. ಪ್ರಕರಣದ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು ಇದು ಬಹಳ ದೊಡ್ಡ ಮೊತ್ತವಾಗಿದ್ದು ಅಪರೂಪದ ಪ್ರಕರಣವಾಗಿದೆ. ಫ್ರಿಡ್ಜ್‌ನ ಮಾಲೀಕರು ಪೊಲೀಸರಿಗೆ ಹಣವನ್ನು ಹಿಂದಿರುಗಿಸಿದರೂ ಗ್ರಾಹಕ ಮತ್ತೆ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ.
ಏಕೆಂದರೆ ದಕ್ಷಿಣ ಕೊರಿಯಾದ ಲಾಸ್ಟ್ ಅಂಡ್ ಫೌಂಡ್ ಆಕ್ಟ್ ಇದರ ಅಡಿಯಲ್ಲಿ, ಮಾಲೀಕರನ್ನು ಪತ್ತೆ ಮಾಡಲು ಆಗದೇ ಇದ್ದರೆ ಹಣವನ್ನು ಪಡೆದವರಿಗೆ ಆ ಹಣ ಉಳಿಸಿಕೊಳ್ಳುವ ಹಕ್ಕು ಇರುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಒಂದುವೇಳೆ ಈ ಹಣದ ಮಾಲೀಕ ಪತ್ತೆಯಾದರೂ ಸಹ ಒಟ್ಟು ಮೊತ್ತದ ಶೇಕಡಾ೨೨ರಷ್ಟು ಹಣವನ್ನು ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಬಳಿಕ ಬಾಕಿ ಮೊತ್ತವನ್ನು ನೀಡಲಾಗುತ್ತದೆ. ಇನ್ನು ಈ ಹಣದ ಹಿಂದೆ ಕ್ರಿಮಿನಲ್ ಸಂಪರ್ಕವಿದ್ದರೆ ಅದನ್ನು ಯಾರಿಗೂ ನಿಡಲಾಗುವುದಿಲ್ಲ.