ಈರುಳ್ಳಿಯು ತರಕಾರಿಗಳಲ್ಲಿ ಒಂದು.ಇದು ಇಲ್ಲದೆ ಕೆಲವರಿಗೆ ದಿನ ಕಳೆಯುವುದೇ ಕಷ್ಟ. ಬಯಲು ಸೀಮೆಯಲ್ಲಿ ಈರುಳ್ಳಿ ಇಲ್ಲದೆ ದಿನವೇ ನಡೆಯುವುದಿಲ್ಲ.ನಾವು ಇಲ್ಲಿ ಈರುಳ್ಳಿ ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈರುಳ್ಳಿ ಒಂದು ವಾಣಿಜ್ಯ ಬೆಳೆಯಾಗಿದೆ.ಇದನ್ನು ಮುಂಗಾರು ಹಂಗಾಮಿನಲ್ಲಿ ಬೆಳೆಯುವುದರಿಂದ ಅತೀ ಹೆಚ್ಚು ಲಾಭ ಪಡೆಯಬಹುದು.ಇದನ್ನು ವರ್ಷದ ಎಲ್ಲಾ ಕಾಲದಲ್ಲೂ ಬೆಳೆಸಬಹುದಾಗಿದೆ.ಉತ್ತಮ ಇಳುವರಿಗಾಗಿ ಒಳ್ಳೆಯ ತಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು 110 ರಿಂದ 140ದಿನಗಳಿಗೆ ಕಟಾವಿಗೆ ಸಿದ್ಧವಾಗುತ್ತದೆ.ಈ ಬೆಳೆಯನ್ನು ಮೂರು ಹಂತದಲ್ಲಿ ಮಾಡಲಾಗುತ್ತದೆ. ಮೊದಲಹಂತ ಕೆಲವರು ಬೀಜ ಚೆಲ್ಲಿ ಬೆಲೆ ಬೆಳೆಯುತ್ತಾರೆ. ಇದರಿಂದ 4 ರಿಂದ 5kg ಬೀಜ ಬೇಕಾಗುತ್ತದೆ.ಬೀಜಗಳನ್ನು ಮರಳಿನಲ್ಲಿ ಸೇರಿಸಿ ಕೈಯಲ್ಲಿ ಬಿತ್ತನೆ ಮಾಡುವುದರಿಂದ ಸಮಾನಾಂತರ ಆಗಿ ಹರಡುತ್ತದೆ.ನಂತರ ಅದರ ಮೇಲೆ ದಿಂಡು ಹೊಡೆದು ತೆಳ್ಳಗೆ ನೀರು ಕೊಡಬೇಕು.ನಂತರ ಒಂದು ವಾರಕ್ಕೆ ಮೊಳಕೆಯೊಡೆದು ಬರುತ್ತದೆ.
ಎರಡನೆಯದು ಕುರಿಗೆ ಬಿತ್ತನೆ.ಇಲ್ಲಿ ಮರಳಲ್ಲಿ ಬೀಜವನ್ನು ಸೇರಿಸಿ ಬಿತ್ತನೆ ಮಾಡುವುದರಿಂದ ಒಳ್ಳೆಯ ರೀತಿಯ ಫಲಿತಾಂಶ ದೊರೆಯುತ್ತದೆ.ಮೂರನೆಯದಾಗಿ ಸಸಿನಾಟಿ ಮಾಡಬೇಕು.ಒಂದು ಎಕರೆಗೆ 10 ರಿಂದ 12 ಏರುಮಡಿಗಳನ್ನು ಮಾಡಬೇಕಾಗುತ್ತದೆ.ಅದಕ್ಕೆ ಗೊಬ್ಬರವನ್ನು ಹಾಕಿ 3 ರಿಂದ 4cm ಅಳತೆಯಲ್ಲಿ ಬೆರಳಿನಿಂದ ಕುಳಿ ಹೊಡೆದು ತೆಳ್ಳಗೆ ಬಿತ್ತನೆ ಮಾಡಬೇಕು.ಬಿತ್ತನೆ ಮಾಡಿದ ನಂತರ ಭತ್ತದ ಹುಲ್ಲನ್ನು ಹಾಕಬೇಕು.ಒಂದು ವಾರಕ್ಕೆ ಮೊಳಕೆ ಬರುತ್ತದೆ. 6 ರಿಂದ 8ವಾರಗಳಲ್ಲಿ ಸಸಿ ರೆಡಿಯಾಗುತ್ತದೆ.
ಸಸಿನಾಟಿಯ ನಂತರ ‘ಪೆಂಡಾಮಿಥಿಲ್’ ಎಂಬ ಕಳೆನಾಶಕ ಬರುತ್ತದೆ.ಪ್ರತಿ ಲೀಟರ್ ಗೆ 4ml ಹಾಕಿ ಮಣ್ಣಿನಲ್ಲಿ ತೇವಾಂಶ ಇದ್ದಾಗ ಬಳಸಿದರೆ ಕೆಲವು ಕಳೆಗಳು ಬೆಳೆಯುವುದಿಲ್ಲ.ನೆಟ್ಟ ಎರಡು ತಿಂಗಳ ನಂತರ ಗಡ್ಡೆ ಆಗಲು ಶುರುವಾಗುತ್ತದೆ.ಅಂತಹ ಸಂದರ್ಭದಲ್ಲಿ ‘ಪೆಂಟೋನೈಟ್ ಸರ್ಫೆಸ್’ ಎನ್ನುವುದನ್ನು ಎಕರೆಗೆ 2kgಯಷ್ಟು ಹಾಕಬೇಕು. ಇದರಿಂದ ಈರುಳ್ಳಿ
ಗಡ್ಡೆಯ ಗಾತ್ರ ದೊಡ್ಡದಾಗುತ್ತದೆ.ವಿಜ್ಞಾನಿಗಳು ಶಿಫಾರಸ್ಸು ಮಾಡಿದ ರಾಸಾಯನಿಕಗಳನ್ನು ಬಳಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.
ಈರುಳ್ಳಿ ಬೆಳೆಗೆ ಹೈದರಾಬಾದ್ ಕರ್ನಾಟಕದ ಎಲ್ಲಾ ಮಣ್ಣು ಹೊಂದಿಕೆಯಾಗುತ್ತದೆ.ಅದರಲ್ಲಿ ಸವಳು ಮತ್ತು ಜವಳು ಭೂಮಿ ಬಿಟ್ಟು. ಮೊದಲು ಮಣ್ಣಿನ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು.ಕೃಷಿಇಲಾಖೆಗೆ ಮಣ್ಣನ್ನು ತೆಗೆದುಕೊಂಡು ಹೋಗಿ ಕೊಟ್ಟರೆ ಅದು ಪರೀಕ್ಷೆ ಮಾಡಿ ಫಲಿತಾಂಶ ನೀಡುತ್ತದೆ. ಈರುಳ್ಳಿ ಬೆಳೆಯುವವರು ಇದ್ದರೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಸಂಶೋಧನಾ ಕೇಂದ್ರ ಕಲಬುರ್ಗಿಯನ್ನು ಸಂಪರ್ಕಿಸಿ.