ಈರುಳ್ಳಿಯಲ್ಲಿ ಕೆಲವಾರು ಔಷಧೀಯ ಗುಣಗಳಿವೆ ಹಾಗೂ ಹಲವು ಬಗೆಯಲ್ಲಿ ನಮ್ಮ ಆರೋಗ್ಯವನ್ನು ವೃದ್ದಿಸುತ್ತದೆ. ಈರುಳ್ಳಿಯಲ್ಲಿ ಹಲವಾರು ಅವಶ್ಯಕ ವಿಟಮಿನ್ನುಗಳು ಹಾಗೂ ಖನಿಜಗಳೂ ಇವೆ. ನಮ್ಮ ಹಲವಾರು ಅಡುಗೆಗಳಲ್ಲಿ ಈರುಳ್ಳಿ ಪ್ರಮುಖ ಆಹಾರ ಸಾಮಗ್ರಿಯೂ ಆಗಿದೆ. ಏನೂ ಇಲ್ಲದಿದ್ದರೆ ರೊಟ್ಟಿಯನ್ನು ಈರುಳ್ಳಿಯೊಂದಿಗೆ ತಿನ್ನುವ ಮೂಲಕ ಪರಿಪೂರ್ಣ ಊಟದಷ್ಟೇ ಪೋಷಕಾಂಶಗಳು ಲಭಿಸುತ್ತವೆ. ಖಾದ್ಯಗಳ ಹೊರತಾಗಿ ಈರುಳ್ಳಿಯನ್ನು ಹಸಿಯಾಗಿಯೂ ಸೇವಿಸಬಹುದು. ಆದ್ದರಿಂದ ನಾವು ಇಲ್ಲಿ ಈರುಳ್ಳಿಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸರಳ ಸಲಾಡ್ ಹಾಗೂ ಲಿಂಬೆರಸ ಅಥವಾ ಶಿರ್ಕಾ ಬೆರೆಸಿ ಹಸಿಮೆಣಸು ಹೆಚ್ಚಿ ಕೊಂಚ ಮೊಸರಿನೊಂದಿಗೆ ಮಿಶ್ರಣ ಮಾಡಿದ ಕೊಚ್ಚಿದ ಈರುಳ್ಳಿಯ ಕೋಸಂಬರಿ ಯಾವುದೇ ಊಟದ ಸವಿಯನ್ನು ಹೆಚ್ಚಿಸುತ್ತದೆ. ನಮ್ಮ ಭಾರತೀಯ ಅಡುಗೆಗಳಲ್ಲಂತೂ ಅತಿ ಹೆಚ್ಚಿನ ಖಾದ್ಯಗಳಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆಗಳನ್ನು ಬಳಸಲಾಗುತ್ತದೆ. ಈರುಳ್ಳಿ ಕೇವಲ ಆರೋಗ್ಯ ಮತ್ತು ರುಚಿಯನ್ನು ಮಾತ್ರವಲ್ಲ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ವಿಶೇಷವಾಗಿ ಈರುಳ್ಳಿಯ ರಸ ತ್ವಚೆ ಮತ್ತು ಕೂದಲ ತೊಂದರೆಗಳನ್ನು ನಿವಾರಿಸಲು ಉತ್ತಮ ಪರಿಹಾರವಾಗಿದೆ.
ಹಾಗೆಯೇ ಈರುಳ್ಳಿಯ ಸೇವನೆ ಮಾಡುವುದರಿಂದ ಶುಗರ್ ಲೆವೆಲ್ ನ್ನು ಸಮ ಪ್ರಮಾಣದಲ್ಲಿ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಶುಗರ್ ಇರುವವರಿಗೆ ಸಕ್ಕರೆಯ ಪ್ರಮಾಣ140 ರಿಂದ 200ರವರೆಗೆ ಇರುತ್ತದೆ. ಸುಮಾರು ಎರಡು ತಿಂಗಳುಗಳ ಕಾಲ ಹಾಗಲಕಾಯಿ ರಸವನ್ನು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬೇಕು. ಹಾಗೆಯೇ ಮಾವಿನ ಎಲೆಯನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಕುಡಿಯಬೇಕು. ಹಾಗೆಯೇ ಈರುಳ್ಳಿಯ ಸೇವನೆ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಶುಗರ್ ಲೆವೆಲ್200ರ ಒಳಗೆ ಇರಬೇಕು. ಹೀಗಿದ್ದರೆ ನಾರ್ಮಲ್ ಎಂದು ಅರ್ಥ.
ಮಾರುಕಟ್ಟೆಯಲ್ಲಿ 800ರೂಪಾಯಿಗಳಿಗೆ ಗ್ಲುಕೋಮೀಟರ್ ಸಿಗುತ್ತದೆ. ಅದನ್ನು ಖರೀದಿ ಮಾಡಿಟ್ಟುಕೊಂಡರೆ ಪ್ರತಿ ತಿಂಗಳು ಶುಗರ್ ಲೆವೆಲ್ ನ್ನು ಪರೀಕ್ಷೆ ಮಾಡಿಕೊಳ್ಳಬಹುದು. ಹೀಗೆ ಪ್ರತಿ ಬಾರಿ ಪರೀಕ್ಷೆ ಮಾಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಪದೇ ಪದೇ ವೈದ್ಯರ ಹತ್ತಿರ ಹೋಗುವ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಸಕ್ಕರೆ ಖಾಯಿಲೆಯಿಂದ ಬಳಲುವವರು ಇದನ್ನು ಖರೀದಿ ಮಾಡಿಕೊಂಡು ಪರೀಕ್ಷೆ ಮಾಡಿಕೊಂಡು ಫಲಿತಾಂಶವನ್ನು ತಿಳಿಯಬಹುದು.