ನಾವು ಪ್ರತಿನಿತ್ಯ ಅಡುಗೆಯಲ್ಲಿ ಬಳಸುವ ಹಲವು ವಸ್ತುಗಳು ನಮ್ಮ ಆರೋಗ್ಯಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ. ಆದರೆ ನಮಗೆ ಅವುಗಳ ಉಪಯೋಗದ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ ಈರುಳ್ಳಿ ಬೆಳ್ಳುಳ್ಳಿ ಬಳಸದೆ ಅಡುಗೆಗೆ ಅಷ್ಟೊಂದು ರುಚಿ ಬರುವುದಿಲ್ಲ ನಾವಿಂದು ನಿಮಗೆ ಎಲ್ಲರೂ ಪ್ರತಿದಿನ ಬಳಸುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿ ಯಾವ ರೀತಿಯಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಒಳ್ಳೆಯದು ಎಂಬುದರ ಬಗ್ಗೆ ತಿಳಿಸಿ ಕೊಳ್ಳುತ್ತೇವೆ.
ಹಲವು ಜನರು ರಕ್ತವನ್ನು ತೆಳ್ಳಗೆ ಮಾಡುವುದಕ್ಕೋಸ್ಕರ ಪಾಶ್ಚಾತ್ಯ ಔಷಧಿಗಳನ್ನು ಹೆಚ್ಚಾಗಿ ಸೇವಿಸುತ್ತಾರೆ ಆದರೆ ಅದು ಕೆಲವೊಬ್ಬರ ದೇಹ ಸ್ಥಿತಿಗೆ ಹೊಂದುವುದಿಲ್ಲ ಅಂತವರು ಯೋಗ ಮಾಡುವುದನ್ನು ರೂಢಿ ಮಾಡಿಕೊಂಡರೆ ಅದು ಉತ್ತಮ ಅದರ ಜೊತೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ರಕ್ತ ತೆಳ್ಳಗಾಗುತ್ತದೆ. ನಾವು ಪ್ರತಿದಿನ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರಕ್ತ ಹೆಪ್ಪುಗಟ್ಟುವಂತಹ ಕಾಯಿಲೆಗಳು ಯಾವುದಾದರೂ ಇದ್ದರೆ ಅದು ಕಡಿಮೆಯಾಗುತ್ತದೆ. ದೇಹದಲ್ಲಿನ ರಕ್ತವನ್ನು ತೆಳ್ಳಗಾಗಿಸುವುದಕ್ಕೆ ಪಾಶ್ಚಾತ್ಯ ಔಷಧಿಗಳನ್ನು ಸೇವಿಸುವುದಕ್ಕಿಂತ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದು ಬಹಳ ಒಳ್ಳೆಯದು.
ಬೆಳ್ಳುಳ್ಳಿಯನ್ನು ಮತ್ತು ಈರುಳ್ಳಿಯನ್ನು ಒಂದು ಆಹಾರದ ಹಾಗೆ ಸೇವಿಸಿದರೆ ಅದು ಆರೋಗ್ಯವರ್ಧಕ ಪ್ರಕ್ರಿಯೆ ಎಂದು ಹೇಳಬಹುದು. ಇನ್ನೂ ಕೆಲವರು ಹೇಳುತ್ತಾರೆ ಅದು ಸ್ವಲ್ಪ ಅಫ್ರೋಡಿಸಿಯಾಕ್. ಸೆಕ್ಸವಲ್ ಸ್ಟಿಮಿಲೈಜೇಷನ್ ಮಾಡುತ್ತದೆಂದು ಹೇಳುತ್ತಾರೆ. ಆದರೆ ಈರುಳ್ಳಿ ಬೆಳ್ಳುಳ್ಳಿಗಳನ್ನು ಸೇವಿಸುವುದರಿಂದ ಯಾವುದೇ ರೀತಿಯ ತೊಂದರೆ ಇಲ್ಲ. ಪ್ರತಿದಿನ ಈರುಳ್ಳಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನ ಉಂಟಾಗುತ್ತದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಕೆಂಪುರಕ್ತಕಣಗಳು ಉತ್ಪಾದನೆಯಾಗುತ್ತದೆ ಕಿಡ್ನಿ ಹಾಗೂ ನರಗಳ ಕಾರ್ಯನಿರ್ವಹಣೆಗೆ ನೆರವು ನೀಡುತ್ತದೆ. ಹೃದಯದ ಆರೋಗ್ಯಕ್ಕೂ ಕೂಡ ಈರುಳ್ಳಿ ಮತ್ತು ಬೆಳ್ಳುಳ್ಳಿ ತುಂಬಾ ಒಳ್ಳೆಯದು ಇವುಗಳಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶಗಳು ಇವುಗಳಲ್ಲಿ ಇದೆ. ಇವು ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುವ ಗುಣವನ್ನು ಹೊಂದಿವೆ.
ಈರುಳ್ಳಿ ಹಾಗೂ ಬೆಳ್ಳುಳ್ಳಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದಕ್ಕೆ ನೆರವು ನೀಡುತ್ತವೆ. ಆಯುರ್ವೇದದ ಪ್ರಕಾರ ಹೇಳುವುದಾದರೆ ರಕ್ತವನ್ನು ಶುದ್ಧೀಕರಿಸುವದಕ್ಕೆ ಈರುಳ್ಳಿಯಷ್ಟು ಉತ್ತಮವಾದ ಔಷದ ಮತ್ತೊಂದಿಲ್ಲ ಎಂದು ಹೇಳುತ್ತಾರೆ. ಈ ರೀತಿಯಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ಹಲವಾರು ವಿಧದಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತವೆ ನೀವು ಕೂಡ ಪ್ರತಿನಿತ್ಯ ಈರುಳ್ಳಿ-ಬೆಳ್ಳುಳ್ಳಿಯನ್ನು ನಿಮ್ಮ ಆಹಾರದ ಜೊತೆಗೆ ಸೇವಿಸಿ ಇದರಿಂದ ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಕಾಯಿಲೆಗಳು ದೂರವಾಗುತ್ತವೆ.