ನೀರು ನಮ್ಮ ದೇಹದಲ್ಲಿ ಶೇ.70ರಷ್ಟಿದೆ ಎಂದು ವೈಜ್ಞಾನಿಕವಾಗಿಯೂ ಹೇಳಲಾಗಿದೆ. ಹೀಗಾಗಿ ನಾವು ನೀರನ್ನು ಹೆಚ್ಚು ಸೇವನೆ ಮಾಡಬೇಕು. ಹೀಗೆ ಮಾಡಿದರೆ ಅದರಿಂದ ದೇಹದ ಆರೋಗ್ಯವು ಚೆನ್ನಾಗಿರುತ್ತದೆ. ಬಾಯಾರಿಕೆ ಆದ ಕೂಡಲೇ ಹೋಗಿ ನೀರು ಕುಡಿಯುತ್ತೇವೆ. ಯಾಕೆಂದರೆ ದೇಹದಲ್ಲಿ ನೀರಿನಾಂಶವು ಕಡಿಮೆ ಆಗುತ್ತಿದೆ ಎಂದು ಬಾಯಾರಿಕೆಯು ಸೂಚಿಸುತ್ತದೆ.
ಹೀಗಾಗಿ ನೀರು ನಮ್ಮ ದೈನಂದಿನ ಬದುಕಿನಲ್ಲಿ ಬೇಕಾಗುವಂತಹ ಪ್ರಮುಖ ದ್ರವ. ಆದರೂ ನೀರನ್ನು ಯಾವಾಗ ಕುಡಿಯಬೇಕು ಮತ್ತು ಹೇಗೆ ಕುಡಿಯಬೇಕು ಎನ್ನುವ ಬಗ್ಗೆ ಹಲವಾರ ವಾದಗಳು ನಡೆಯುತ್ತಲೇ ಇದೆ. ಆದರೆ ಪ್ರತೀ ದಿನ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಅವುಗಳು ಯಾವುವು ಎನ್ನುವುದನ್ನೂ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮಾನವನ ದೇಹವು ಸುಮಾರು ಶೇಕಡಾ ಎಪ್ಪತ್ತು ಪ್ರತಿಶತದಷ್ಟು ನೀರಿನಿಂದ ಕೂಡಿದ್ದು, ದೇಹವನ್ನು ಆರೋಗ್ಯವಾಗಿಡುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ನೀರು ಕುಡಿಯುವುದು ಮತ್ತು ಆ ಮೂಲಕ ದೇಹದ ತೇವಾಂಶ ಹೆಚ್ಚಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ದೇಹದಿಂದ ವಿಷವನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ. ಇದಲ್ಲದೇ, ಇದು ಕೂದಲು ಮತ್ತು ಚರ್ಮದ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಲಗುವ ಮೊದಲು ದೇಹವನ್ನು ಹೈಡ್ರೇಟ್ ಮಾಡಬೇಕು ಎಂದು ವೈದ್ಯರು ಹೆಳುವರು. ಯಾಕೆಂದರೆ ನಾವು ಆರರಿಂದ ಎಂಟು ಗಂಟೆಗಳ ಕಾಲ ಮಲಗಿರುತ್ತೇವೆ ಮತ್ತು ಇದರ ಮಧ್ಯೆ ಎಚ್ಚರವಾದರೂ ನೀರು ಕುಡಿಯುವವರ ಸಂಖ್ಯೆ ತುಂಬಾ ಕಡಿಮೆ. ಇದರಿಂದ ಮಲಗುವ ಆರರಿಂದ ಎಂಟು ಗಂಟೆಗಳ ಕಾಲ ದೇಹವನ್ನು ಹೈಡ್ರೇಟ್ ಆಗಿಡಲು ನೀರು ಅತೀ ಅನಿವಾರ್ಯ.
ನಿದ್ರೆಗೆ ಮೊದಲು ದೇಹವನ್ನು ಹೈಡ್ರೇಟ್ ಮಾಡುವುದು ಯಾಕೆ ಅಗತ್ಯ. ನಿದ್ರೆಯ ವೇಳೆ ದೇಹವು ದ್ರವಾಂಶವನ್ನು ಕಳೆದು ಕೊಳ್ಳುವುದು. ನಿದ್ರೆಯ ವೇಳೆ ಕ್ಯಾಲರಿ ದಹಿಸಲ್ಪಡುವ ಕಾರಣದಿಂದಾಗಿ ಇದಕ್ಕೆ ನೀರು ಬಳಕೆ ಆಗುವುದು. ನಿದ್ರೆಯಲ್ಲಿ ಉಸಿರಾಡುವಿರಿ ಮತ್ತು ಬೇಸಗೆಯಲ್ಲಿ ಬೆವರು ಕೂಡ ಹೋಗುವುದು. ಇದರಿಂದ ದೇಹದಲ್ಲಿನ ನೀರು ಕಡಿಮೆ ಆಗುವುದು. ನಿಮಗೆ ಜ್ವರ ಅಥವಾ ಮಧುಮೇಹವಿದ್ದರೆ ಆಗ ನೀರಿನ ಪ್ರಮಾಣವು ಹೆಚ್ಚು ನಷ್ಟವಾಗುವುದು. ಇದರಿಂದ ಮಲಗುವ ಮೊದಲು ನೀರು ಕುಡಿಯಬೇಕು. ದೇಹದಲ್ಲಿ ನೀರಿನಾಂಶವಿಡಲು ಸುಲಭವಾದ ಉಪಾಯವೆಂದರೆ ಅದು ಮಲಗುವ ಮೊದಲು ನೀರು ಕುಡಿಯುವುದು.
ಇಲ್ಲಿ ಗಮನಿಸಬೇಕಾದ ಕುತೂಹಲಕಾರಿ ಅಂಶ ಏನೆಂದರೆ, ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿದಾಗ, ಅದರ ಪ್ರಯೋಜನಗಳು ಅನೇಕ ಪಟ್ಟು ಹೆಚ್ಚಾಗುತ್ತದೆ. ಅದೇ ರೀತಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಅವುಗಳು ಯಾವುವು ಎಂದು ನೋಡುವುದಾದರೆ, ವಿಟಮಿನ್ ಸಿ ಯ ಮುಖ್ಯ ಮೂಲ ನಿಂಬೆಹಣ್ಣು ಒಂದು ಸಿಟ್ರಸ್ ಆಹಾರವಾಗಿದ್ದು, ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ನಿಂಬೆ ರಸವನ್ನು ನಿಯಮಿತವಾಗಿ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಇದು ದೇಹದಲ್ಲಿ ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ.ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿ ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ.
ಇದರ ಹೊರತಾಗಿ, ನಿಂಬೆ ರಸ ಚರ್ಮಕ್ಕೆ ಪ್ರಯೋಜನಕಾರಿ. ಈ ನೀರು ಚರ್ಮವನ್ನು ಚೆನ್ನಾಗಿ ತೇವವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಇದ್ದು, ಇದು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಸಕ್ಕರೆ ರಹಿತ ಪಾನೀಯವು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ನೀವು ತೂಕ ಇಳಿಕೆಯ ಗುರಿಯನ್ನು ಹೊಂದಿದ್ದರೆ. ಇದು ಸಹಾಯ ಮಾಡುತ್ತದೆ. ಆದ್ದರಿಂದ, ಮಲಗುವ ಮುನ್ನ ಬಿಸಿ ನೀರಿಗೆ ನಿಂಬೆ ರಸ ಹಾಕಿ ಕುಡಿಯಿರಿ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳು ಕಳಪೆ ಜೀರ್ಣ ಕ್ರಿಯೆಯಿಂದಾಗಿವೆ. ಆದ್ದರಿಂದ, ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಂಡರೆ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಆದ್ದರಿಂದ, ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತೇಜಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸುಲಭವಾಗಿ ತಯಾರಿಸಬಹುದಾದ ಪಾನೀಯವಾಗಿದ್ದು, ನೈಸರ್ಗಿಕ ಬಾಯಿ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.
ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿ ಕುಡಿದರೆ ಬಾಯಿಯ ದುರ್ವಾಸನೆ ತಡೆಯಬಹುದು. ಇದು ಹೈಡ್ರೇಟಿಂಗ್ ಪಾನೀಯವಾಗಿದ್ದು, ಇದು ಬಾಯಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ. ಮೂತ್ರಪಿಂಡವು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಆದ್ದರಿಂದ, ಆರೋಗ್ಯವಾಗಿರಲು ಮೂತ್ರಪಿಂಡದ ಸಮಸ್ಯೆಗಳಿಂದ ದೂರವಿರುವುದು ಬಹಳ ಮುಖ್ಯ. ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಬಹುದು.
ಇದು ಕ್ಯಾಲ್ಸಿಯಂ ಕಲ್ಲುಗಳ ರಚನೆಯನ್ನು ತಡೆಯುವ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಮಲಗುವ ಮೊದಲು ನೀರು ಕುಡಿದರೆ ಅದರಿಂದ ರಕ್ತ ಸಂಚಾರವು ಸರಾಗವಾಗಿ ಆಗುವುದು. ಇದರಿಂದ ದೇಹವು ಚೆನ್ನಾಗಿ ಶುದ್ಧೀಕರಿಸಲ್ಪಡುವುದು. ಇದರಿಂದ ಅಂಗಾಂಶಗಳಿಗೆ ಸರಿಯಾಗಿ ಪೋಷಣೆ ಸಿಗುವುದು ಮತ್ತು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕಿ ಉಲ್ಲಾಸ ನೀಡುವುದು. ಮಲಗುವ ಮೊದಲು ನೀರು ಕುಡಿದರೆ ಅದರಿಂದ ಹೊಟ್ಟೆಯ ಸೆಳೆತ ಮತ್ತು ನೋವು ಕಡಿಮೆ ಆಗಿರುವುದು ಅಧ್ಯಯನಗಳಿಂದ ಕೂಡ ಕಂಡುಕೊಳ್ಳಲಾಗಿದೆ.
ಇದಕ್ಕೆ ನೀವು ಸ್ವಲ್ಪ ಲಿಂಬೆ ರಸ ಹಾಕಿಕೊಂಡು ಕುಡಿದರೆ ಅದರಿಂದ ಕೆಮ್ಮು ಮತ್ತು ಶೀತ ದೂರವಾಗುವುದು. ವಿಟಮಿನ್ಗಳು ಮತ್ತು ಪೋಷಕಾಂಶಗಳ ಮಟ್ಟವನ್ನು ಸ್ಥಿರತೆಯಲ್ಲಿ ಇರುವಂತೆ ಮಾಡುವುದು. ಸ್ನಾಯುಗಳು ಮತ್ತು ಮೂಳೆಗಳು ವಿಶ್ರಾಂತಿ ಪಡೆಯಲು ಸಹಾಯ ಮಾಡುವುದು. ಜೊತೆಗೆ ದೇಹವು ಮರುದಿನದ ಕಾರ್ಯಗಳಿಗೆ ಸಜ್ಜಾಗಲು ಅಥವಾ ಶಕ್ತಿಯನ್ನು ಪಡೆದುಕೊಳ್ಳಲು ಸಹಾಯವಾಗುವುದು. ಪ್ರಮುಖವಾಗಿ ದೇಹವು ಎಲ್ಲಾ ರೀತಿಯಲ್ಲೂ ವಿಶ್ರಾಂತಿ ಪಡೆಯುವುದು. ಜೊತೆಗೆ ಉತ್ತಮ ನಿದ್ರೆಗೆ ಪ್ರಚೋದನೆ ನೀಡುವುದು.