ನಮ್ಮ ದೇಶದಲ್ಲಿಸಾಮಾನ್ಯವಾಗಿ ಪ್ರಯಾಣಿಕರು ಹೆಚ್ಚು ಇದ್ದರೆ ಮಾತ್ರ ಟ್ರೈನ್, ಬಸ್ ಸರ್ವಿಸ್ ಇರುತ್ತದೆ. ಆದರೆ ಇಲ್ಲೊಂದು ವಿಭಿನ್ನವಾಗಿ ಜಪಾನಿನ ಸರ್ಕಾರ ಒಂದು ಮಗುವಿಗಾಗಿ ಅವಳ ವಿದ್ಯಾಭ್ಯಾಸಕ್ಕಾಗಿ 12 ವರ್ಷ ಟ್ರೈನ್ ಓಡಿಸಿದ ಕಥೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ನಮ್ಮ ದೇಶದ ರೈಲು ವ್ಯವಸ್ಥೆ ಸರಿಯಾಗಿಲ್ಲ ಅವು ಸರಿಯಾದ ಸಮಯಕ್ಕೆ ಬರುವುದಿಲ್ಲ, ಕ್ಲೀನ್ ಇರುವುದಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯ. ಪರೀಕ್ಷೆ ಇರುವ ವಿದ್ಯಾರ್ಥಿಗಳು ಅಪ್ಪಿ ತಪ್ಪಿಯೂ ರೈಲು ಹತ್ತುವ ಹಾಗಿಲ್ಲ ಕಾರಣ ಎಲ್ಲಿ ಸಿಗ್ನಲ್ ಬಿದ್ದು ನಿಂತು ಹೋಗುತ್ತದೋ ಎಂಬ ಭಯ ವಿದ್ಯಾರ್ಥಿಗಳಿಗಿದೆ. ನಮ್ಮ ದೇಶದ ರೈಲು ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ಜಪಾನಿನ ಒಂದು ಐಸಲ್ಯಾಂಡ್ ಪ್ರದೇಶಕ್ಕೆ ಸಿಟಿಯಿಂದ ಪ್ರತಿದಿನ ಅಲ್ಲಿಗೆ ಟ್ರೇನ್ ಹೋಗುತ್ತಿತ್ತು. ಆದರೆ ಆ ರೈಲಿಗೆ ಪ್ರಯಾಣಿಕರು ಇರುತ್ತಿರಲಿಲ್ಲ ಈ ಕಾರಣಕ್ಕಾಗಿ ಸರ್ಕಾರ ರೈಲು ಓಡುವುದನ್ನು ನಿಲ್ಲಿಸುವ ನಿರ್ಧಾರ ಮಾಡಿತು. ಆ ಪ್ರದೇಶದ ಒಬ್ಬಳು ಹುಡುಗಿ ಶಾಲೆಗೆ ಹೋಗಲು ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು ಇದನ್ನು ತಿಳಿದ ಸರ್ಕಾರ ರೈಲನ್ನು ನಿಲ್ಲಿಸಿದರೆ ಅವಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಭಾವಿಸಿ ಅವಳಿಗಾಗಿ ಟ್ರೈನ್ ಓಡಿಸಲು ನಿರ್ಧರಿಸಿತು. ಸುಮಾರು 12 ವರ್ಷಗಳು ಒಬ್ಬ ಹುಡುಗಿಗಾಗಿ ಟ್ರೈನ್ ಪ್ರತಿದಿನ ಓಡಿತು ಶಾಲೆ ಪ್ರಾರಂಭವಾಗುವ ಮತ್ತು ಸಾಯಂಕಾಲ ಶಾಲೆ ಬಿಡುವ ಸಮಯಕ್ಕೆ ಟ್ರೈನ್ ನ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು.
ಈಗ ಅವಳು ಉನ್ನತ ಶಿಕ್ಷಣಕ್ಕಾಗಿ ಸಿಟಿಯಲ್ಲಿ ಹಾಸ್ಟೇಲ್ ನಲ್ಲಿ ಇದ್ದು ಓದುತ್ತಿದ್ದಾಳೆ ಹಾಗೂ ಟ್ರೈನ್ ಕೂಡ ಸ್ಟಾಪ್ ಆಗಿದೆ. ಮೊದಲೇ ಅವಳನ್ನು ಹಾಸ್ಟೆಲ್ ನಲ್ಲಿ ಬಿಡಲು, ಓದುವ ಸಣ್ಣ ಮಕ್ಕಳು ಅವರ ಪೋಷಕರ ಮನೆಯಲ್ಲೇ ಬೆಳೆಯಬೇಕು ದೂರ ಇಡಬಾರದು ಎಂಬುದು ಅಲ್ಲಿಯ ಸರ್ಕಾರದ ಆಶಯ. ಪುಟ್ಟ ಹುಡುಗಿಗೆ ದೇಶ ಕೊಟ್ಟ ಪ್ರಾಮುಖ್ಯತೆ ಕೇಳಿದರೆ ನಿಜಕ್ಕೂ ಖುಷಿಯಾಗುತ್ತದೆ. ಮಗು ಪೋಷಕರ ಬಳಿಯೇ ಇರಲಿ ಎಂಬ ಭಾವನೆಗೆ ಬೆಲೆಕೊಟ್ಟು ಜಪಾನ್ ಸರ್ಕಾರ 12 ವರ್ಷಗಳ ಟ್ರೈನ್ ವೆಚ್ಚ ಭರಿಸಲು ಸಿದ್ಧವಾಗಿರುವುದನ್ನು ಮೆಚ್ಚಲೇಬೇಕು. ಇಂತಹ ಸರ್ಕಾರ ಬೇರೆ ಎಲ್ಲಿಯೂ ಇರುವುದಿಲ್ಲ ಎಂದರೆ ಬಹುಶಃ ತಪ್ಪಾಗುವುದಿಲ್ಲ ಹಾಗೂ ಜಪಾನ್ ಸರ್ಕಾರಕ್ಕೆ ಒಂದು ಸಲಾಮ್.