1995 ಮೇ19ರಂದು ಅದೊಂದು ಸಿನೆಮಾ ಗಾಂಧಿನಗರದಲ್ಲಿ ಹೊಚ್ಚ ಹೊಸತಾಗಿ ತೆರೆ ಕಂಡಿತು. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿನ ಆವರೆಗಿನ ಎಲ್ಲಾ ದಾಖಲೆಗಳನ್ನು ಮುರಿಯಿತು. ಆ ಸಿನೆಮಾ ಯಶಸ್ಸಿನತ್ತ ಸಾಗಿತ್ತು. ಆ ಸಿನೆಮಾದ ಹೆಸರು ಓಂ. ಈಗಲೂ ಈ ಸಿನಿಮಾದ ಕ್ರೇಜ್ ಕಡಿಮೆ ಆಗಿಲ್ಲ. 632ಬಾರಿ ರಿರಿಲೀಸ್ ಆಗಿರುವ ಈ ಸಿನಿಮಾಕ್ಕೆ ಇನ್ನೂ ಕ್ರೇಜ್ ಕಡಿಮೆ ಆಗಿಲ್ಲ. ಇವತ್ತಿಗೆ ಈ ಸಿನೆಮಾಗೆ 25ವರ್ಷ ಪ್ರಾಯ. ಈ ಸಿನಿಮಾದ ಮೇಕಿಂಗ್ ಹಾಗೂ ಸ್ವಾರಸ್ಯಕರ ವಿಷಯಗಳನ್ನು ನಾವು ಇಲ್ಲಿ ತಿಳಿಯೋಣ.
ಈ ಚಿತ್ರದ ನಿರ್ದೇಶಕ ಉಪೇಂದ್ರ ಅವರು ಆಗಿದ್ದಾರೆ. ಅವರೇ ಹೇಳಿದ ಪ್ರಕಾರ 80ರ ದಶಕದಲ್ಲಿ ಲಂಕೇಶ ಪತ್ರಿಕೆಯಲ್ಲಿ ಬಂದ ರೌಡಿಸಂಗಳನ್ನು ಲೆಕ್ಕ ಹಾಕಿ ಓಂ ಚಿತ್ರಕ್ಕೆ ಕಥೆ ಬರೆಯುತ್ತಿದ್ದರು. ಇವರ ತರ್ಲೆ ನನ್ ಮಗ, ಶ್ ಚಿತ್ರಗಳು ಬಹಳ ಸಂಚಲನ ಮೂಡಿಸಿದವು. ಈ ಹೊತ್ತಿಗೆ ಓಂ ಸಿನೆಮಾವನ್ನು ಹೊರತರಲು ಯೋಚಿಸುತ್ತಿದ್ದರು. ಶ್ ಚಿತ್ರ ನೋಡಿದ ನಂತರ ಕುಮಾರ್ ಗೋವಿಂದ ಅವರನ್ನು ಓಂ ಚಿತ್ರಕ್ಕೆ ಹೀರೊ ಮಾಡಬೇಕು ಎಂದು ಅಂದುಕೊಂಡರು. ಆದರೆ ಕುಮಾರ್ ಗೋವಿಂದ ಮತ್ತು ಇವರಿಗೆ ಸಣ್ಣ ಜಗಳವಾಯಿತು. ಹೀಗಾಗಿ ಉಪೇಂದ್ರ ಅವರು ತಮ್ಮ ಕೆಲಸವನ್ನು ಕಳೆದುಕೊಂಡರು. 1994ರಲ್ಲಿ ಉಪೇಂದ್ರ ಅವರು ಅಕ್ಷರಶಃ ನಿರುದ್ಯೋಗಿಯಾಗಿದ್ದರು. ಓಂ ಬಗೆಗಿನ ಅವರ ತುಡಿತ ಕಡಿಮೆಯಾಗಿರಲಿಲ್ಲ.
ಆಗ ಕಂಡಿದ್ದು ಶಿವರಾಜ್ ಕುಮಾರ್ ಅವರು. ಉಪೇಂದ್ರ ಅವರು ಈ ನಿರ್ಧಾರವನ್ನು ಹೊನ್ನವಳ್ಳಿ ಕೃಷ್ಣ ಅವರಿಗೆ ಹೇಳಿದಾಗ ಕೃಷ್ಣ ಅವರು ವರದರಾಜ್ ಅವರ ಬಳಿ ಇದರ ಬಗ್ಗೆ ಮಾತನಾಡಿದರು. ವರದರಾಜ್ ಅವರು ಉಪೇಂದ್ರ ಅವರ ಕಥೆ ಕೇಳಿ ರಾಜ್ ಕುಮಾರ್ ಅವರ ಹತ್ತಿರ ಕರೆದುಕೊಂಡು ಹೋಗಿ ಕೂರಿಸುತ್ತಾರೆ. ಶಿವಣ್ಣ ಅವರ ಕಣ್ಣಿನಲ್ಲಿ ಒಂದು ತರಹದ ಬೆಂಕಿ ಇದೆ. ಹಾಗಾಗಿ ಇವರೇ ಸೂಕ್ತ ಎಂದು ಹೇಳಿದರು. ಈ ಸಿನೆಮಾದ ನಟಿಯ ಪಾತ್ರಕ್ಕೆ ಜೂಹಿ ಚಾವ್ಲಾ ಅವರನ್ನು ಕರೆದರೆ ಎಂಬ ಪ್ರಶ್ನೆ ಹುಟ್ಟಿತು. ನಂತರ ಇದಕ್ಕೆ ಹೊಚ್ಚ ಹೊಸ ನಟಿ ಪ್ರೇಮ ಅವರನ್ನು ಆರಿಸಬೇಕು ಎಂದು ನಿರ್ಧರಿಸಲಾಯಿತು.
ಈ ಸಿನಿಮಾಕ್ಕೆ ಹಾಡುಗಳ ಸಂಯೋಜನೆಯನ್ನು ಹಂಸಲೇಖ ಅವರು ಮಾಡಿದ್ದಾರೆ. ಈ ಸಿನೆಮಾಕ್ಕೆ ರಾಜ್ ಕುಮಾರ್ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ಹೇ ದಿನಕರ ಎನ್ನುವ ಹಾಡು ಈಗಲೂ ಸಹ ಕೇಳಿದರೆ ಮನಸ್ಸಿಗೆ ಮುದ ನೀಡುತ್ತದೆ. ಹಾಗೆಯೇ ಓ ಗುಲಾಬಿಯೇ ಹಾಡಂತೂ ಎಂದಿಗೂ ಎವರ್ ಗ್ರೀನ್ ಎಂದು ಹೇಳಬಹುದು. ಇದರಲ್ಲಿ 4 ರೌಡಿಗಳನ್ನು ಶೂಟಿಂಗ್ ಗಾಗಿ ಬೇಲ್ ಕೊಟ್ಟು ಜೈಲ್ ನಿಂದ ಹೊರತರಲಾಗಿದೆ ಎನ್ನುವ ವದಂತಿ ಇದೆ. ಅವತ್ತಿನ ಗಳಿಕೆ 1ವಾರದ ಈ ಸಿನೆಮಾ ಬರೋಬ್ಬರಿ 1ವರೆ ಕೋಟಿ. ಬಿಡುಗಡೆ ಯಾದ ಒಂದೇ ತಿಂಗಳಲ್ಲಿ ರಾಜ್ಯದ ಮನೆ ಮಾತಾಯಿತು ಈ ಚಿತ್ರ . ಆ ವರ್ಷದ ಫಿಲಿಫಾರ್ ಪ್ರಶಸ್ತಿಗೆ ಶಿವಣ್ಣ ಅವರು ಆಯ್ಕೆಯಾದರು. ಈ ಚಿತ್ರ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಕೂಡ ರಿಮೇಕ್ ಆಯಿತು. 2015ರಲ್ಲಿ ಮೊಟ್ಟ ಮೊದಲ ಬಾರಿಗೆ ಉದಯ ಚಾನಲ್ ನಲ್ಲಿ ಹಾಕಲಾಗಿತ್ತು.