ಯೋಗ ಅಥವಾ ಧ್ಯಾನ ಮಾಡುವವರಿಗೆ ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಏಳು ಚಕ್ರಗಳು ಇವೆ ಎನ್ನುವ ಈ ವಿಷಯ ತಿಳಿದೇ ಇರುತ್ತದೆ. ಆ ಏಳು ಚಕ್ರಗಳಲ್ಲಿ ಒಂದು ಹಾಗೂ ಮುಖ್ಯವಾದ ಚಕ್ರ ಎಂದರೆ ‘ನಾಭಿ ಚಕ್ರ’. ಮನುಷ್ಯನ ದೇಹದಲ್ಲಿ ಇರುವ 72ಸಾವಿರ ನರನಾಡಿಗಳು ಈ ನಾಭಿ ಚಕ್ರದ ಭಾಗದಲ್ಲೇ ಇರುತ್ತವೆ. ಅಂದರೇ ಇದರಿಂದಲೇ ನಾಭಿ ಚಕ್ರ ಮನುಷ್ಯನ ದೇಹಕ್ಕೆ ಎಷ್ಟು ಮುಖ್ಯವಾದದ್ದು ಎನ್ನುವುದು ತಿಳಿಯುತ್ತದೆ. ಈ ನಾಭಿ ಚಕ್ರವು ನಮ್ಮ ದೇಹದಲ್ಲಿ ಶಕ್ತಿಯನ್ನು ಉತ್ಪಾದನೆ ಮಾಡುತ್ತದೆ.
ಇನ್ನೊಂದು ವಿಷಯ ಎಂದರೆ, ಮಗು ತಾಯಿಯ ಗರ್ಭದಲ್ಲಿ ಇರುವಾಗ ಆ ಮಗುವಿಗೆ ತಾಯಿಯ ಹೊಕ್ಕಳ ಬಳ್ಳಿಯಿಂದ ಆಹಾರ ಪೌಷ್ಟಿಕಾಂಶ ಪೂರೈಕೆ ಆಗುತ್ತದೆ. ಇದರಿಂದಲೂ ಸಹ ನಮಗೆ ತಿಳಿಯುತ್ತದೆ ಈ ನಾಭಿ ಚಕ್ರ ಮನುಷ್ಯನಿಗೆ ಎಷ್ಟು ಮುಖ್ಯವಾದುದ್ದು ಎಂದು. ಇಷ್ಟು ಚಿಕ್ಕದಾದ ಹಾಗೂ ಸೂಕ್ಷ್ಮವಾದ ನಾಭಿಯ ಕಾಳಜಿಯನ್ನು ನಾವು ಮಾಡಿದರೆ ನಮಗೆ ವಯಸ್ಸಾಗುವವರೆಗೂ ಹಲವಾರು ಕಾಯಿಲೆಗಳು ಬರದಂತೆ ನಾವೇ ತಡೆಗಟ್ಟಿಕೊಳ್ಳಬಹುದು.
ಈ ನಾಭಿಯ ಕಾಳಜಿ ಬಗ್ಗೆ ಆಯುರ್ವೇದದಲ್ಲಿ ಹಾಗೂ ಕೆಲವು ಸಂಪ್ರದಾಯಗಳಲ್ಲಿ ಇಂದಿಗೂ ಕೂಡಾ ನಾಭಿಗೆ ಎಣ್ಣೆ ಹಾಕುವ ರೂಢಿಯನ್ನು ಬೆಳೆಸಿಕೊಂಡು ಬರುತ್ತಾ ಇದ್ದಾರೆ. ಇದರಿಂದ ನಾವು ಹಲವಾರು ರೀತಿಯ ಕಾಯಿಲೆಗಳು ಜೀವನ ಪರ್ಯಂತ ನಮ್ಮ ಬಳಿ ಸುಳಿಯದಂತೇ ನೋಡಿಕೊಳ್ಳಬಹುದು. ಹಾಗಿದ್ದರೆ ನಾಭಿಗೆ ನಾವು ಎಣ್ಣೆಯನ್ನು ಹಾಕುವುದರಿಂದ ಪ್ರಯೋಜನ ಏನು? ಯಾವಾಗ ಯಾವ ಎಣ್ಣೆಯನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಅನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ವಾರಕ್ಕೆ ಮೂರು ಸಲ ಅಂದರೆ, ದಿನ ಬಿಟ್ಟು ದಿನಕ್ಕೆ ನಾಭಿಗೆ ಎಣ್ಣೆಯನ್ನು ಹಾಕಬೇಕು. ಮೊದಲು ಹರಳೆಣ್ಣೆ ಹಾಕುವುದರಿಂದ ಏನು ಪ್ರಯೋಜನ ಅಂತ ನೋಡುವುದಾದರೆ ಹರಳೆಣ್ಣೆಯನ್ನು ನಾಭಿಗೆ ಹಾಕುವುದರಿಂದ ಮಂಡಿ ನೋವು, ಸೊಂಟ ನೋವು, ಕಾಲು ನೋವು ಹಾಗೂ ಕೀಲುನೋವು ಎಲ್ಲಾ ವಾಸಿ ಆಗುತ್ತದೆ. ಹತ್ತಿಯನ್ನು ಎಣ್ಣೆಯಲ್ಲಿ ಅದ್ದಿ ರಾತ್ರಿ ಮಲಗುವಾಗ ಅಂಗಾತ ಮಲಗಿಕೊಂಡು ಮೂರರಿಂದ ನಾಲ್ಕು ಹನಿಗಳಷ್ಟು ಹರಳೆಣ್ಣೆಯನ್ನು ನಾಭಿಗೆ ಹಾಕಬೇಕು. ಈ ರೀತಿ ಒಂದು ವಾರ ಮಾಡಿದರೆ ದೇಹದಲ್ಲಿ ಆಗುವಂತಹ ಬದಲಾವಣೆಗಳನ್ನು ಗಮನಿಸಬಹುದು. ಇದೆ ರೀತಿಯಾಗಿ ಮುಂದೆ ಹೇಳುವಂತಹ ಎಲ್ಲಾ ರೀತಿಯ ಎಣ್ಣೆಗಳಲ್ಲೂ ಮಾಡಬೇಕಾಗುತ್ತದೆ.
ಸಾಸಿವೆ ಎಣ್ಣೆ, ಸಾಸಿವೆ ಎಣ್ಣೆಯನ್ನು ನಾಭಿಗೆ ಹಾಕುವುದರಿಂದ ಒಡೆದ ತುಟಿ, ಸುಕ್ಕುಗಟ್ಟಿದ ಚರ್ಮ, ಒಣಗಿದ ಚರ್ಮದಿಂದ ಮುಕ್ತಿ ಹೊಂದಬಹುದು. ಜೀರ್ಣ ಶಕ್ತಿ ಹೆಚ್ಚುತ್ತದೆ. ಈ ಎಣ್ಣೆಯನ್ನು ಸಹ ರಾತ್ರಿ ಮಲಗುವಾಗ ಮೇಲೆ ತಿಳಿಸಿದ ವಿಧಾನದಂತೆ ಒಂದು ವಾರ ಹಾಕಿದರೆ ಪರಿಣಾಮ ಬೀರುತ್ತದೆ ಹಾಗೂ ಹೊಸ ಚೈತನ್ಯ ನೀಡುತ್ತದೆ ಉತ್ಸಾಹದಿಂದ ಇರಬಹುದು.
ಕೊಬ್ಬರಿ ಎಣ್ಣೆ: ಮೂರರಿಂದ ನಾಲ್ಕು ಹನಿ ಕೊಬ್ಬರಿ ಎಣ್ಣೆಯನ್ನು ಹಾಕುತ್ತ ಬಂದಲ್ಲಿ ಮುಖದಲ್ಲಿ ಹೊಳಪು ಮೂಡುತ್ತದೆ. ಮುಖದಲ್ಲಿ ಏನಾದರೂ ಕಪ್ಪು ಕಲೆಗಳು ಆಗಿದ್ದರೆ ಅವೂ ಸಹ ಮಾಯ ಆಗುತ್ತವೆ. ಇದನ್ನೂ ಕೂಡಾ ಮೇಲೆ ಹೇಳಿದ ರೀತಿಯಲ್ಲಿಯೇ ಹಾಕಬೇಕು.
ಬೇವಿನ ಎಣ್ಣೆ: ಬೇವಿನ ಎಣ್ಣೆಯನ್ನು ನಾಭಿಗೆ ಹಾಕುವುದರಿಂದಲೂ ಸಹ ಸಾಕಷ್ಟು ಉಪಯೋಗಗಳು ಇವೆ. ಮುಖದ ಮೇಲೆ ಮೊಡವೆಗಳು ಆಗಿದ್ದರೆ ಅಥವಾ ಬಿಳಿ ಕಲೆಗಳು ಆಗಿದ್ದರೆ ನಾಭಿಗೆ ಬೇವಿನ ಎಣ್ಣೆಯನ್ನು ಹಾಕುವುದರಿಂದ ಕಡಿಮೆ ಆಗುತ್ತದೆ.
ಆಲಿವ್ ಆಯಿಲ್: ನಾಲ್ಕರಿಂದ ಐದು ಹನಿ ಆಲಿವ್ ಆಯಿಲ್ ಹಾಕುವುದರಿಂದ ಗ್ಯಾಸ್, ಆಸಿಡಿಟಿ ಆಗಿದ್ದಲ್ಲಿ, ಬಿಪಿ, ಅತಿಯಾಗಿ ಟೆನ್ಷನ್ ಆಗುವುದು ಸಹ ಕಡಿಮೆ ಆಗುತ್ತದೆ. ಲೆಮನ್ ಆಯಿಲ್: ಇದನ್ನು ನಾಲ್ಕೈದು ಹನಿ ಹಾಕುವುದರಿಂದ ಹೆಣ್ಣುಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಬರುವಂತಹ ಹೊಟ್ಟೆನೋವು ಸಮಸ್ಯೆ ಹಾಗೂ ಏನಾದರೂ ಇನ್ಫೆಕ್ಷನ್ ಆಗುತ್ತಾ ಇದ್ದಲ್ಲಿ ಕಡಿಮೆ ಆಗುತ್ತದೆ.
ಇನ್ನು ನಮ್ಮ ನಾಭಿಗೆ ಅಮೃತಕ್ಕೆ ಸಮಾನವಾದ ತುಪ್ಪವನ್ನು ಹಾಕಿದರೆ ಇನ್ನೂ ಒಳ್ಳೆಯದು. ಮೂರರಿಂದ ನಾಲ್ಕು ಹನಿ ತುಪ್ಪವನ್ನು ನಾಭಿಗೆ ಹಾಕುವುದರಿಂದ ಕೂದಲು ಉದುರುವುದನ್ನು ತಪ್ಪಿಸಬಹುದು. ಚಿಕ್ಕ ಮಕ್ಕಳಲ್ಲಿ ಆಗುವಂತಹ ಬಾಲ ನೆರೆ ಇದು ಸಹ ಕಡಿಮೆ ಆಗುತ್ತದೆ. ಸತತವಾಗಿ ಒಂದು ತಿಂಗಳು ಮಾಡಿದಲ್ಲಿ ಕೂದಲು ಉದುರುವ ಸಮಸ್ಯೆ ಕಡಿಮೆ ಆಗಿ ಕಪ್ಪು ಕೂದಲು ಬೆಳೆಯುತ್ತದೆ.
ಬಾದಾಮಿ ಎಣ್ಣೆ: ಇದನ್ನು ನಾಭಿಗೆ ಹಾಕುವುದರಿಂದ ಇದು ಚರ್ಮವನ್ನು ಮೃದುವಾಗಿ ಇಡುತ್ತದೆ. ಹಿಮ್ಮಡಿ ಒಡಕು ಇದ್ದರೆ ಕಡಿಮೆ ಆಗುತ್ತದೆ. ಅಲರ್ಜಿಯಿಂದ ಚರ್ಮದಲ್ಲಿ ಕೆಂಪು ಗುಳ್ಳೆಗಳು ಆಗುತ್ತಾ ಇದ್ದರೆ ಅವೂ ಸಹ ನಿವಾರಣೆ ಆಗುತ್ತವೆ. ಒಂದು ನಾಭಿಗೆ ಎಣ್ಣೆಯನ್ನು ಹಾಕುವುದರಿಂದ ನಮ್ಮ ಇಡೀ ಶರೀರಕ್ಕೆ ಎಷ್ಟೊಂದು ಲಾಭಗಳಿವೆ ಹೀಗಿದ್ದಾಗ ತಪ್ಪದೆ ಮಾಡಬಹುದಲ್ಲ ಇದನ್ನ?ನಿಮಗೆ ಈ ಆರೋಗ್ಯಕಾರಿ ಮಾಹಿತಿ ಇಷ್ಟವಾದಲ್ಲಿ ಒಂದು ಶೇರ್ ಮೂಲಕ ನಮ್ಮನ್ನು ಬೆಂಬಲಿಸಿ ಶುಭವಾಗಲಿ