ಮಕರ ರಾಶಿಯವರಿಗೆ ಈ ಅಕ್ಟೋಬರ್ ತಿಂಗಳು ಹೇಗಿರಲಿದೆ ನೋಡಿ

0 3

ಪ್ರತಿಯೊಬ್ಬ ಮನುಷ್ಯನು ಅವನದೇ ಆದ ರಾಶಿಗಳು ಮತ್ತು ನಕ್ಷತ್ರಗಳನ್ನು ಹೊಂದಿರುತ್ತಾನೆ. 12 ರಾಶಿಗಳು ಮತ್ತು 27 ನಕ್ಷತ್ರಗಳು ಇವೆ. ಪ್ರತಿಯೊಂದು ರಾಶಿ ನಕ್ಷತ್ರಗಳು ಬೇರೆಬೇರೆ ಗುಣಲಕ್ಷಣಗಳನ್ನು ಹೊಂದಿರುತ್ತದೆ. ನಾವು ಇಲ್ಲಿ 2020ರ ಅಕ್ಟೋಬರ್ ತಿಂಗಳ ಮಕರ ರಾಶಿಯ ಬಗ್ಗೆ ತಿಳಿಯೋಣ.

ಮಕರ ರಾಶಿಗೆ ರಾಶಿ ಅಧಿಕಾರ ಹೊಂದಿರುವ ಶನಿ ಮಹಾರಾಜ ಜನ್ಮಸ್ಥಿತ ಆಗಿರುತ್ತಾನೆ. ಅಂದರೆ ಜನ್ಮದಲ್ಲೇ ಶನಿ ಇರುವುದರಿಂದ ಏಳುವರೆ ವರ್ಷದ ಶನಿಕಾಟ ಎಂದು ಹೇಳಬಹುದು.ಆತುರ, ಒತ್ತಡದಿಂದ ಕೆಲಸ ಮಾಡುವ ಪರಿಸ್ಥಿತಿ ಎದುರಾಗುತ್ತದೆ.ಉದ್ವೇಗಕ್ಕೆ ಒಳಗಾಗದೆ ಶಾಂತ ಚಿತ್ತವಾಗಿ ಕೆಲಸ ಮಾಡಬೇಕು.

ಆರೋಗ್ಯ ವಿಚಾರದಲ್ಲಿ ಸ್ವಲ್ಪ ಒತ್ತಡಗಳಿರುತ್ತವೆ. ಕೈಕಾಲುಗಳಲ್ಲಿ ನೋವು ಕಂಡು ಬರುತ್ತದೆ.ರಕ್ತ ಒತ್ತಡ ಉಂಟಾಗಬಹುದು. ಗುರು ಆರಾಧನೆ, ಶನಿ ಆರಾಧನೆ, ಸ್ವಲ್ಪ ದುರ್ಗಿಯ ಆರಾಧನೆಯನ್ನು ಮಾಡಬೇಕು.ಅಷ್ಟಮ ಸ್ಥಾನದಲ್ಲಿ ಶುಕ್ರನು ಸ್ಥಿತನಾಗಿರುತ್ತಾನೆ.ಹಾಗಾಗಿ ದೇವಿಯ ಉಪಾಸನೆ ಮಾಡಿದರೆ ಒಳ್ಳೆಯ ಶುಭಫಲ ಉಂಟಾಗುತ್ತದೆ.ಜೀವನ ಜೊತೆಯಿರುವವರ ಜೊತೆ ಒಳ್ಳೆಯ ಮೈತ್ರಿಯಿಂದ ನಡೆಯುವಂತೆ ನೋಡಿಕೊಳ್ಳುತ್ತಾನೆ.

ಧನ,ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಧನ ವ್ಯಯ ಆಗುವ ಲಕ್ಷಣಗಳು ಕಾಣುತ್ತಿವೆ. ಹೆಚ್ಚು ಬೆಲೆಯುಳ್ಳ ಅಂದರೆ ಬಂಗಾರ, ಬೆಳ್ಳಿಗಳನ್ನು ಸ್ವಲ್ಪ ಜೋಪಾನವಾಗಿ ಇಡಬೇಕು.ಇಲ್ಲಿ ಗುರು ಸ್ಥಿತನಾಗಿರುತ್ತಾನೆ. ಹಣವು ನೀರೀಕ್ಷೆ ಮಾಡಿದಷ್ಟು ಬರುವುದಿಲ್ಲ.2021 ಏಪ್ರಿಲ್ ವರೆಗೂ ಹಣಕಾಸಿನ ವಿಚಾರದಲ್ಲಿ ಅತಿಯಾದ ನಿರೀಕ್ಷೆ ಒಳ್ಳೆಯದು ಅಲ್ಲ.

ಸೋದರ ಸೋದರಿಯರು ಸಂಕಷ್ಟ ಬಂದಾಗ ಸಹಾಯ ಮಾಡಿ ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಿ.ಇದರಿಂದ ವಿಶ್ವಾಸ ಹೆಚ್ಚಾಗುತ್ತದೆ.ಪಂಚಮಾಧೀಶನು ಅಷ್ಟಮದಲ್ಲಿದ್ದು ರಾಹು ಸ್ಥಿತನಾಗುತ್ತಾನೆ. ಮಕ್ಕಳ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಬೇಕು. ಟೆನ್ಷನ್ ಜಾಸ್ತಿಯಾಗುತ್ತದೆ.ಈ ಸಮಯದಲ್ಲಿ ಯಾರಿಗಾದರೂ ಸಂತಾನ ಪ್ರಾಪ್ತಿ ಇದ್ದರೆ ಅದು ಅಷ್ಟೊಂದು ಶುಭಕರವಾಗಿರುವುದಿಲ್ಲ.

ವ್ಯಾಸಂಗ ಮಾಡುತ್ತಿರುವವರಿಗೆ ತಮ್ಮ ಆಕಾಂಕ್ಷೆಗಿಂತ ಕಡಿಮೆ ಅಂಕಗಳು ಬರುವ ಸಾಧ್ಯತೆ ಇದೆ.ಇದನ್ನು ಹಿರಿಯರು ಸ್ವಲ್ಪ ಆತಂಕಕ್ಕೆ ಒಳಗಾಗದೆ ಸಹಕರಿಸಬೇಕು.ಉನ್ನತ ಶಿಕ್ಷಣದ ಅಭಿಲಾಷೆಗಳಿಗೆ ಇದು ಅಷ್ಟು ಶುಭಕರವಲ್ಲ.ಹಾಗೆಯೇ ಯಾವುದಾದರೂ ಸ್ನೇಹಿತರಿಂದ ಹಣಕಾಸಿನ ಯಾಚನೆ ಬರುವ ಸಾಧ್ಯತೆ ಇದೆ. ಅವರು ತುಂಬಾ ಸಜ್ಜನರಾಗಿರುತ್ತಾರೆ.ಆದ್ದರಿಂದ ಪುಣ್ಯ ದೊರಕುವ ಸಾಧ್ಯತೆ ಇದೆ. ಹಾಗೆಯೇ ವಿವಾಹದ ವಿಷಯಗಳು ಇದ್ದರೆ ಸ್ವಲ್ಪ ಮುಂದೂಡುವುದು ಒಳ್ಳೆಯದು.2021 ಏಪ್ರಿಲ್ 6 ರಿಂದ ಗುರುವಿನ ಆಶೀರ್ವಾದ ದೊರೆಯುತ್ತದೆ.

Leave A Reply

Your email address will not be published.