NSC post office scheme 2023: ಪ್ರತಿಯೊಬ್ಬರೂ ಕೂಡ ಹಣವನ್ನು ಕೂಡಿಡಬೇಕು ಎಂದು ಅಂದುಕೊಳ್ಳುತ್ತಾರೆ, ಆತನಿಗೆ ಹಣ ಕೂಡಿಡಲು ಒಂದು ಸಂಸ್ಥೆಯ ಅವಶ್ಯಕತೆ ಇರುತ್ತದೆ. ಆತನ ಹಣಕ್ಕೆ ಭದ್ರತೆ ಇರುವ ಹಣಕಾಸಿನ ಸಂಸ್ಥೆ ಮತ್ತು ಅದಕ್ಕೆ ಉತ್ತಮವಾದ ಬಡ್ಡಿದರ ಇದ್ದರೆ ಸಾಕು ಅದರತ್ತವಾಲುತ್ತಾರೆ. ಅಂಚೆ ಕಚೇರಿ ಸಂಸ್ಥೆಯು ಕೇಂದ್ರ ಸರ್ಕಾರದ ಸಂಸ್ಥೆ ಆಗಿರುವುದರಿಂದ ಅಲ್ಲಿ ಹಣಕ್ಕೆ ತುಂಬಾ ಭದ್ರತೆ ಇರುತ್ತದೆ.

ಏನಾದರೂ ತೊಂದರೆಯಾದರೂ ಕೂಡ ಅದಕ್ಕೆ ಸರ್ಕಾರವೇ ಸಂಪೂರ್ಣ ಹೊಣೆಯಾಗಿರುವುದರಿಂದ ಅಲ್ಲಿ ಹಣವನ್ನು ಕೂಡಿಡಲು ಯಾವುದೇ ರೀತಿ ಭಯ ಜನರಿಗಿರುವುದಿಲ್ಲ. ಹಾಗಾಗಿ ಎಲ್ಲರೂ ಹೆಚ್ಚಿನದಾಗಿ ಅಂಚೆ ಕಚೇರಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ.

ಈಗಾಗಲೇ ಅಂಚೆ ಕಚೇರಿಯ ಹಲವು ಯೋಜನೆಗಳನ್ನು ನೀವು ನೋಡಿರಬಹುದು. ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನಮಂತ್ರಿ ಮಾಸಿಕ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಅನೇಕ ಹೆಸರಾಂತ ಸ್ಕೀಮ್ ಇತ್ಯಾದಿ.

NSC post office scheme 2023

NSC ಯೋಜನೆಯನ್ನು ನೀವು ಕೂಡ ಕೇಳಿರಬಹುದು. ಇದು ಒಂದು ಹೆಸರಾಂತ ಯೋಜನೆಯಾಗಿದೆ.ಇದನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಎಂದು ಕರೆಯುತ್ತಾರೆ. ನೀವು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಚಿನ್ನ ಬಡ್ಡಿ ದರವನ್ನು ಪಡೆಯಬಹುದು. ನಾವು ಹೂಡಿಕೆ ಮಾಡಿರುವಂತಹ ಹಣ ದೇಶದ ಅಭಿವೃದ್ಧಿಗೆ ವಿನಿಯೋಗವಾಗುವುದು ತುಂಬಾ ಖುಷಿಯ ವಿಚಾರ.

ಈ ಯೋಜನೆಯನ್ನು ಪಡೆಯಲು ಏನೆಲ್ಲಾ ಅರ್ಹತೆ ಇರಬೇಕು?
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವನ್ನು ಖರೀದಿಸಲು ನೀವು ಭಾರತೀಯ ನಿವಾಸಿಯಾಗಿರಬೇಕು. ಹಣವನ್ನು ಹೂಡಿಕೆ ಮಾಡಲು ಯಾವುದೇ ರೀತಿಯ ಮಿತಿ ಇರುವುದಿಲ್ಲ. ಕನಿಷ್ಠ 100 ರೂಪಾಯಿಯಿಂದ ಕೂಡ ಇದನ್ನು ಆರಂಭಿಸಬಹುದು. ಖಾತೆಯನ್ನು ತೆರೆಯಲು ಯಾವುದೇ ರೀತಿಯ ವಯಸ್ಸನ್ನು ನಿಗದಿಪಡಿಸಿಲ್ಲ.

ಒಬ್ಬರೇ ಅಥವಾ ಎರಡು ಮೂರು ಜನ ಸೇರಿ ಈ ಯೋಜನೆಯನ್ನು ಪಡೆದುಕೊಳ್ಳಬಹುದು.
ಸದ್ಯಕ್ಕೆ ಈಗ NSC ಯ ಬಡ್ಡಿ ದರವು 6.80% ಇದೆ ಆದರೆ ಇದು ಕಾಲಕಾಲಕ್ಕೆ ಬದಲಾಗುತ್ತದೆ.ಒಂದು ಬಾರಿ ನೀವು ಸ್ಕೀಮ್ ಮಾಡುವಾಗ ಎಷ್ಟು ಬಡ್ಡಿ ದರವನ್ನು ನಿಗಡಿಸಿರುತಿರೋ ಆ ಯೋಜನೆ ಮುಗಿಯುವ ತನಕ ಅಷ್ಟೇ ಇರುತ್ತದೆ. ಒಂದು ವೇಳೆ ನೀವು ಯೋಜನೆ ಖರೀದಿಸಿದ ನಂತರ ಬಡ್ಡಿದರ ಇಳಿಕೆ ಆದರೂ ಕೂಡ ನೀವು ಆರಂಭಿಸುವಾಗ ಎಷ್ಟು ಬಡ್ಡಿ ದರವನ್ನು ನಿಗದಿಪಡಿಸಿರುತ್ತೀರೋ ಅದೇ ಮೊತ್ತದಲ್ಲಿ ನಿಮಗೆ ಲಾಭ ಸಿಗುತ್ತದೆ.

ನೀವು 15 ಲಕ್ಷ ರೂಪಾಯಿಗಳನ್ನು ಒಂದೇ ಬಾರಿಗೆ ಈ ಯೋಜನೆಯಡಿ ಹೂಡಿಕೆ ಇಟ್ಟರೆ, ಐದು ವರ್ಷದ ಮೆಚುರಿಟಿ ಸಮಯ ಮುಗಿದ ಬಳಿಕ 20.85 ಲಕ್ಷ ರಿಟರ್ನ್ಸ್ ಸಿಗಲಿದೆ. ಯೋಜನೆ ಖರೀದಿಸಿದವರು ಮರಣ ಹೊಂದಿದ್ದರೆ ಅವರ ನಾಮಿನಿಗೆ ಸೇರಬೇಕಾದ ಹಣ ಅವರ ಖಾತೆಗೆ ಬಂದು ಬೀಳುತ್ತದೆ. ಮತ್ತು ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿಗೆ ಭೇಟಿ ನೀಡಿ ಹಾಗೂ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಿ. ಇದನ್ನೂ ಓದಿ ಹೆಂಡತಿಯನ್ನು ಕಷ್ಟ ಪಟ್ಟು ಓದಿಸಿ ನ್ಯಾಯಾಧೀಶೆ ಮಾಡಿಸಿದ, ಆದ್ರೆ ಹೆಂಡತಿಯ ಕಳ್ಳಾಟಕ್ಕೆ ಗಂಡ ಜೈಲು ಪಾಲಾಗಿದ್ದೇಕೆ? ಇಲ್ಲಿದೆ ಅಸಲಿ ಕಹಾನಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!