Krushi Honda Scheme on Karnataka Govt 2023 : ಈ ಮೊದಲು ರೈತರಿಗೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡುವುದಕ್ಕೆ ಸಹಾಯಧನ ಬರುತ್ತಿತ್ತು ಆದರೆ ಸ್ವಲ್ಪ ವರ್ಷ ಬಂದಿರಲಿಲ್ಲ ಈಗ ಮತ್ತೆ ಈ ಯೋಜನೆಯನ್ನು ತಂದಿದ್ದಾರೆ ಅಸಕ್ತ ರೈತರು ಅರ್ಜಿ ಸಲ್ಲಿಸಿ. ರೈತರಿಗೆ ಕೃಷಿ ಮಾಡಲು ನೀರು ಬಹಳ ಮುಖ್ಯ. ಮಳೆ ನೀರು ಹರಿದು ಹಾಳು ಮಾಡುವ ಬದಲು ಸಂಗ್ರಹಿಸಿಟ್ಟುಕೊಂಡರೆ ಕೃಷಿಗೆ ಬಹಳ ಉಪಯೋಗವಾಗುತ್ತದೆ. ಊರಿಗೆ ಬರಗಾಲ ಬಂದು ಸಮಯದಲ್ಲಿ ಆ ನೀರನ್ನು ಉಪಯೋಗಿಸಿಕೊಳ್ಳಬಹುದು ಆದ ಕಾರಣಕ್ಕಾಗಿ ಸರ್ಕಾರ ಜಮೀನಿನಲ್ಲಿ ಕೃಷಿ ಹೊಂಡ (Krushi Honda) ನಿರ್ಮಾಣ ಮಾಡುವ ಯೋಜನೆಯನ್ನು ತಂದಿದೆ ಪ್ರತಿಯೊಬ್ಬ ರೈತರು ಇದನ್ನು ಉಪಯೋಗಿಸಿಕೊಳ್ಳಿ. ಬರಗಾಲದ ಸಮಯದಲ್ಲಿ ಈ ಗುಂಡಿ ತೋಡಿದ ನೀರು ಬಹಳ ಉಪಯೋಗಕಾರಿ ಆಗುತ್ತದೆ.

ಹೋಂಡಾ ತೋಡಿದಾಗ ಮಳೆ ನೀರು ಅಲ್ಲಿ ಶೇಖರಣೆಯಾಗುತ್ತದೆ ನೀರು ಇಂಗ ಬಾರದೆಂದು ಪಾಲಿಥಿನ್ ಟಾರ್ಪಲ್ ಅನ್ನು ಬಳಸುತ್ತಾರೆ. ಆ ಹೊಂಡಕ್ಕೆ ಒಂದು ಕಟ್ಟೆಯನ್ನು ಕಟ್ಟುತ್ತಾರೆ ಏಕೆಂದರೆ ಯಾರಾದರೂ ತಪ್ಪಿ ಜಾರಿ ಬಿದ್ದರೆ ಎನ್ನುವ ಕಾರಣಕ್ಕೆ. ಆ ಹೊಂಡದಿಂದ ನೀರು ಎತ್ತಲು ಪಂಪ್ ಸೆಟ್ ಅನ್ನು ಹಾಕಿಕೊಳ್ಳಿ. ಬರಗಾಲದ ಸಮಯದಲ್ಲಿ ಈ ಹೊಂಡದಲ್ಲಿ ನೀರು ಇದ್ದರೆ ಉಪಯೋಗಿಸಿಕೊಳ್ಳಲು ಸಹಾಯವಾಗುತ್ತದೆ.

ಈ ತಿಂಗಳು ರಾಜ್ಯ ಸರ್ಕಾರದಿಂದ ಬಜೆಟ್ (Govt Badget) ಕೂಡ ಮಂಡನೆ ಆಗಲಿದೆ. ಈ ಬಾರಿ ಕೃಷಿ ಹೊಂಡ ನಿರ್ಮಾಣ ಯೋಜನೆಗೆ ಸುಮಾರು 4 ಲಕ್ಷ ದವರೆಗೆ ಹಣ ಬಿಡುಗಡೆಯಾಗಬಹುದು. ಪ್ರತಿಯೊಬ್ಬ ರೈತರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಫಲವನ್ನು ಪಡೆದುಕೊಳ್ಳಿ. ಇನ್ನಿತರ ಖರ್ಚಿಗಾಗಿ ಸಹಾಯಧನವನ್ನು ರೈತನ ಖಾತೆಗೆ ಜಮ ಮಾಡಲಾಗುತ್ತದೆ.

Krushi Honda Scheme on Karnataka Govt 2023

ನಮ್ಮ ದೇಶದಲ್ಲಿ ರೈತ ಎಂದರೆ ಒಂದು ಮುಗ್ಧ ಮನಸ್ಸಿನ ವ್ಯಕ್ತಿ. ರೈತ ತನ್ನ ಜೀವನದಲ್ಲಿ ಬಹಳ ಸರಳವಾಗಿ ಬದುಕುತ್ತಾನೆ ಆತನಿಗೆ ಈಗಿನ ಕಾಲದ ಟೆಕ್ನಾಲಜಿ ಬಗ್ಗೆ ಅಷ್ಟು ಗೊತ್ತಿರುವುದಿಲ್ಲ ಈ ಯೋಜನೆಯ ಮಾಹಿತಿಯನ್ನು ಎಲ್ಲರೂ ಕೂಡ ನಿಮ್ಮ ಹತ್ತಿರ ಇರುವ ರೈತರಿಗೆ ಹೇಳಿ ಅವರಿಗೆ ಈ ಯೋಜನೆ ಉಪಯೋಗಕಾರಿ ಆಗುವಂತೆ ಮಾಡಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
ಜಮೀನಿನ ಪಹಣಿ ಪತ್ರ,ಆಧಾರ್ ಕಾರ್ಡ್,ಭಾವಚಿತ್ರ
ಬ್ಯಾಂಕ್ ಖಾತೆ ವಿವರ ಇವೆಲ್ಲ ದಾಖಲಾತಿಗಳು ಬೇಕಾಗುತ್ತದೆ. ಈ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೆ ಮುಟ್ಟಿಸುವುದು ನಮ್ಮ ಕರ್ತವ್ಯ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಗ್ರಾಮ ಪಂಚಾಯ್ತಿಯಲ್ಲಿ ವಿಚಾರಿಸಿ ಯೋಜನೆಯ ಸಂಪೂರ್ಣ ಮಾಹಿತಿ ತಿಳಿಸಿ ಕೊಡುತ್ತಾರೆ ಧನ್ಯವಾದಗಳು

By

Leave a Reply

Your email address will not be published. Required fields are marked *