ನವೆಂಬರ್ ತಿಂಗಳಿನಲ್ಲಿ ಯಾವ ರಾಶಿಯರಿಗೆ ಅದೃಷ್ಟದ ತಿಂಗಳು ಆಗಲಿದೆ

0 3

ಜ್ಯೋತಿಷ್ಯವು ಹೇಳುವ ಭವಿಷ್ಯವನ್ನು ಹೆಚ್ಚಾಗಿ ಎಲ್ಲರೂ ನಂಬುತ್ತಾರೆ. ದಿನ ಭವಿಷ್ಯ, ವಾರ ಭವಿಷ್ಯ, ರಾಶಿ, ಭವಿಷ್ಯ, ತಿಂಗಳ ಭವಿಷ್ಯ, ವರ್ಷದ ಭವಿಷ್ಯ ಹೀಗೆ ಅವುಗಳಲ್ಲಿ ಕೆಲವು ವಿಧಗಳಿವೆ. ಈ ವಿಧಗಳಲ್ಲಿ ಒಂದಾದ ತಿಂಗಳ ಭವಿಷ್ಯದಲ್ಲಿ ನವೆಂಬರ್ ತಿಂಗಳ ಭವಿಷ್ಯ ಯಾವ ರಾಶಿಗಳಿಗೆ ಯಾವ ಫಲಗಳಿವೆ ಎಂಬುದನ್ನು ನಾವು ತಿಳಿಯೋಣ.

ನವೆಂಬರ್ ತಿಂಗಳಿನ 20 ನೆ ದಿನಾಂಕದಂದು ಬೆಳಗ್ಗೆ 11:58 ನಿಮಿಷಕ್ಕೆ ಗುರುವಿನ ಸ್ಥಾನ ಪಲ್ಲಟವಾಗುತ್ತದೆ. ಗುರುವಿನ ಸ್ಥಾನ ಪಲ್ಲಟ ಪ್ರತಿ ವರ್ಷವು ನಡೆಯುತ್ತದೆ. ಗುರುವು ಧನು ರಾಶಿಯಿಂದ ಮಕರ ರಾಶಿಗೆ ಬದಲಾವಣೆಯಾಗುತ್ತಾನೆ. ತುಲಾ ರಾಶಿಯಲ್ಲಿ ಸೂರ್ಯನು ನೀಚ ಸ್ಥಾನದಲ್ಲಿ ಇದ್ದಾನೆ. ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ನವೆಂಬರ್ 16 ರಂದು ಬದಲಾಗುತ್ತಾನೆ. ಶುಕ್ರನು ಕನ್ಯಾ ರಾಶಿಯಲ್ಲಿ ನೀಚ ಸ್ಥಾನದಲ್ಲಿ ಇದ್ದಾನೆ. ಶುಕ್ರ ನೀಚ ಸ್ಥಾನದಲ್ಲಿ ಇದ್ದಾಗ ಆರ್ಥಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಶುಕ್ರನು ತುಲಾ ರಾಶಿಯಲ್ಲಿ ನವೆಂಬರ್ 17ರಂದು ಸ್ಥಾನ ಬದಲಾವಣೆ ಮಾಡುತ್ತಾನೆ. ಈ ಮೂರು ಗ್ರಹಗಳು ಬಲಾವಣೆಗೊಳ್ಳುತ್ತದೆ. ಇನ್ನೂ ಮೇಷ ರಾಶಿಯನ್ನು ನೋಡಿದಾಗ, ಈ ಮೂರು ಗ್ರಹಗಳ ಬದಲಾವಣೆಗೂ ಮೊದಲು ಅಣ್ಣ, ತಮ್ಮಂದಿರ ಜೊತೆಗೆ ಜಗಳ ಆಗಬಹುದು. ಸಿಟ್ಟು ಹೆಚ್ಚಾಗುತ್ತದೆ. ಯಾಕೆಂದರೆ ಮಂಗಳ ಗ್ರಹವೂ ರಾಶಿಯ 12ನೆಯ ಮನೆಯಲ್ಲಿ ಇದೆ. ಕುಜ ದೋಷ ಬರುವುದು ಇದೆ. ಆದ್ದರಿಂದ ಮೇಷ ರಾಶಿಯವರು 900 ಗ್ರಾಂ ತೊಗರಿ ಬೇಳೆಯನ್ನು ಕೆಂಪು ಬಟ್ಟೆಯಿಂದ ಕಟ್ಟಿ, ಸುಬ್ರಹ್ಮಣ್ಯ ದೇವಾಲಯಕ್ಕೆ ತಲುಪಿಸುವುದು ಒಳ್ಳೆಯದು. ಇದರ ಜೊತೆಗೆ ಸುಬ್ರಹ್ಮಣ್ಯ ಸ್ವಾಮಿಯ ಸ್ತೋತ್ರಗಳನ್ನು ಕೇಳುವುದು ಸಹ ಉತ್ತಮ. ಓಂ ಶರವಣಭವ ಎಂಬ ಜಪವನ್ನು ಮಾಡಬಹುದು. ವೃಷಭ ರಾಶಿಯವರಿಗೆ ಕೆಲಸ ಮಾಡುವ ಜಾಗದಲ್ಲಿ ಅಥವಾ ಸ್ವಂತ ವ್ಯವಹಾರ ಮಾಡುವಲ್ಲಿ, ಇಲ್ಲವೇ ಸಂಸಾರದಲ್ಲಿ ಪಾಲುದಾರರೊಂದಿಗೆ ಮನಸ್ತಾಪ ಬರಬಹುದು. ವೃಷಭ ರಾಶಿಯವರಿಗೆ 20 ನೆ ದಿನಾಂಕದ ನಂತರ ಒಳ್ಳೆಯ ಫಲಗಳು ಸಿಗುತ್ತವೆ. ಗುರುವಿನ ಸ್ಥಾನ 8ನೆಯ ಮನೆಯಲ್ಲಿ ಇತ್ತು. 20ರ ನಂತರದಲ್ಲಿ ಗುರು 9ನೆಯ ಮನೆಗೆ ಬದಲಾಗುತ್ತಾನೆ ಇದು ಭಾಗ್ಯ ಸಿಗುತ್ತದೆ. ಬೂದುಗುಂಬಳದ ದೀಪ ಹಚ್ಚುವುದು ಉತ್ತಮ ಪರಿಹಾರವನ್ನು ನೀಡುತ್ತದೆ. ಆದಷ್ಟು ಬೀದಿ ನಾಯಿಗಳಿಗೆ ಊಟದ ವ್ಯವಸ್ಥೆ ಮಾಡಿದರೆ ಉತ್ತಮ.

ಮಿಥುನ ರಾಶಿಯವರಿಗೆ ಗುರು 8ನೆ ಮನೆಯ ಪ್ರವೇಶದಿಂದ ತೊಂದರೆಗಳು ಪ್ರಾರಂಭವಾಗುವ ಲಕ್ಷಣಗಳು ಇದೆ. ಕೆಲಸಕಾರ್ಯಗಳಲ್ಲಿ ತೊಂದರೆ ಸಂಭವ. ಶನಿಯೂ ಸ್ಥಾನವೂ ಇರುವುದರಿಂದ ತೊಂದರೆ. ಮನಶ್ಶಾಂತಿ ಕಡಿಮೆ ಆಗಬಹುದು. ಇದಕ್ಕೆ ಪರಿಹಾರವಾಗಿ ಕಾಲಭೈರವ ದೇವಾಲಯಗಳಿಗೆ ಆಗಾಗ ಭೇಟಿ ನೀಡುವುದು ಉತ್ತಮ. ಎಳ್ಳೆಣ್ಣೆಯನ್ನು ನಾಲ್ಕು ಶನಿವಾರ ಶನಿ ದೇವರಿಗೆ ಅರ್ಪಿಸುವುದು ಉತ್ತಮ. ಕರ್ಕ ರಾಶಿಯವರಿಗೆ ಶುಭ ಸಮಯ ಇದಾಗಿದೆ. ಒಳ್ಳೆಯ ಫಲಗಳಿದ್ದರೂ ಸಣ್ಣ ಪ್ರಮಾಣದ ಸರ್ಪ ದೋಷ ಇರುವುದು. ಬಿಳಿ ಮತ್ತು ಕಪ್ಪು ಎರಡು ಬಣ್ಣಗಳು ಒಂದರಲ್ಲೆ ಇರುವ ಗುಲಗಂಜಿ ಸಿಗುತ್ತದೆ. ಅಂತಹ ಗುಲಗಂಜಿಯನ್ನು 24 ಗುಲಗಂಜಿಯನ್ನು ಪರ್ಸಿನಲ್ಲಿ ಇಟ್ಟುಕೊಳ್ಳುವುದು ಉತ್ತಮ. ಸರ್ಪದೋಷ ಕಾಣಿಸುವುದರಿಂದ ಕಾಳಹಸ್ತಿ ಕ್ಷೇತ್ರದ ಭೇಟಿ ಉತ್ತಮ. 700ಗ್ರಾಂ ಹುರುಳಿ ಕಾಳನ್ನು ನವೆಂಬರ್‌ನಲ್ಲಿ ಬರುವ ಎಲ್ಲ ಗುರುವಾರದಂದು ಶಿವನ ದೇವಾಲಯಗಳಿಗೆ ಹೋಗಿ ದಾನ ಮಾಡಬೇಕು. ಸಿಂಹ ರಾಶಿಯವರಿಗೆ ನವೆಂಬರ್ ನಲ್ಲಿ ಹಣಕಾಸಿನ ತೊಂದರೆ ಆಗಬಹುದು. ಅನಾವಶ್ಯಕ ಖರ್ಚುಗಳು ಉಂಟಾಗುತ್ತದೆ. ನವೆಂಬರ್ 17ರ ಸಮಯದಲ್ಲಿ ಈ ತೊಂದರೆ ಅತಿಯಾಗಬಹುದು. ಹಾಗಾಗಿ ಹುಣ್ಣಿಮೆಯ ದಿನದಂದು ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡುವುದು ಜೊತೆಗೆ ಆದಂತಹ ದಾನ ಮಾಡುವುದು ಉತ್ತಮ. ಹಳದಿ ಬಣ್ಣವಿಲ್ಲದ ಶುದ್ಧ ತುಪ್ಪವನ್ನು ಪ್ರತಿ ಶುಕ್ರವಾರ ಲಕ್ಷ್ಮಿ ದೇವಸ್ಥಾನಗಳಿಗೆ ಅಥವಾ ಬಡವರಿಗೆ ಕೊಟ್ಟಾಗ ಉತ್ತಮ ಫಲ ಸಿಗುತ್ತದೆ. ಕನ್ಯಾ ರಾಶಿಯವರಿಗೆ ನವೆಂಬರ್‌ನಲ್ಲಿ ಮಾನಸಿಕ ನೆಮ್ಮದಿಗೆ ತೊಂದರೆ, ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾದೀತು. ಗುರು 5ನೆಯ ಮನೆಗೆ ಬರುವುದರಿಂದ ಮಕ್ಕಳ ಭಾಗ್ಯವಿದೆ. ಅದೃಷ್ಟ ಬರುತ್ತದೆ. ಆದಷ್ಟು ರಾಯರು ಹಾಗೂ ಗುರುಗಳ ದರ್ಶನ ಮಾಡುವುದು ಹಾಗೂ ಅವರಿಗೆ ಕಾಣಿಕೆ ಅರ್ಪಿಸುವುದು ಉತ್ತಮ. 300ಗ್ರಾಂ ಕಡಲೆ ಬೇಳೆಯನ್ನು ಅರಿಶಿನ ಬಟ್ಟೆಯಲ್ಲಿ ಕಟ್ಟಿ, ಪ್ರತಿ ಗುರುವಾರ ಶಿವನ ದೇವಸ್ಥಾನಕ್ಕೆ ಕೊಡುವುದು ಉತ್ತಮ.

ತುಲಾ ರಾಶಿಯವರು ನವೆಂಬರ್ ತಿಂಗಳಲ್ಲಿ ಹಣದ ಅನಾವಶ್ಯಕ ಖರ್ಚು ಆಗಬಹುದು. ರಾಹು 8ನೆ ಮನೆಯಲ್ಲಿ ಇರುವುದರಿಂದ ಅಪಘಾತ ಆಗುವ ಸಂಭವ ಹೆಚ್ಚು ಜಾಗೃತೆ ಅವಶ್ಯಕತೆ ಇದೆ. ಶಿವನ ದೇವಸ್ಥಾನಕ್ಕೆ ಒಣದ್ರಾಕ್ಷಿ ಅರ್ಧ ಕೆಜಿಯಷ್ಟು ದಾನ ಕೊಡುವುದು ಇಲ್ಲವೆ ಸಾಸಿವೆ ಎಣ್ಣೆ ಕೊಡುವುದು ಒಳ್ಳೆಯದು. ಆದಷ್ಟು ಸೋಮವಾರ ಮತ್ತು ಗುರುವಾರ ಕೊಡುವುದು ಉತ್ತಮ. ವೃಶ್ಚಿಕ ರಾಶಿಯವರಿಗೆ ಪಾಲುದಾರರ ಜೊತೆ ತೊಂದರೆ ಆಗುತ್ತದೆ. ಆರ್ಥಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅನಾವಶ್ಯಕ ಹಣ ವ್ಯಯದ ಜೊತೆಗೆ ಕೊಟ್ಟ ಹಣ ತಿರುಗಿ ಬರದೆ ಇರುವಂತದ್ದು ಆಗಬಹುದು. ಮಾತು ಕಡಿಮೆ ಮಾಡಿಕೊಳ್ಳಬೇಕು. ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆರು ತಾವರೆ ಹೂವನ್ನು ಶುಕ್ರವಾರ ಕೊಡುವುದು ಉತ್ತಮ. ತುಂಬಾ ಸುಗಂಧಭರಿತ ಮಲ್ಲಿಗೆ ಮಾಲೆ ಕೊಡುವುದು ಉತ್ತಮ.

ಧನು ರಾಶಿಯವರಿಗೆ ನವೆಂಬರ್ ಉತ್ತಮ ಸಮಯ. ಎರಡನೆಯ ಮನೆಯಲ್ಲಿ ಗುರು ಇರುವುದರಿಂದ ಗುರುಬಲ ಚೆನ್ನಾಗಿ ಇರುತ್ತದೆ. ಜೊತೆಗೆ ಶನಿಯು ಅದೆ ಸ್ಥಾನದಲ್ಲಿ ಇರುವುದರಿಂದ ಮತ್ತು ಒಳ್ಳೆಯದು. ಕೆಲಸದಲ್ಲಿ ಬಡ್ತಿ, ವ್ಯವಹಾರ ಯೋಚನೆ ಇದ್ದರೆ ಕೈಗೂಡುತ್ತದೆ. ಧರ್ಮಸ್ಥಳ ಅಧವಾ ನಂಜನಗೂಡಿನಂತಹ ಶಿವನ ಕ್ಷೇತ್ರಗಳನ್ನು ಭೇಟಿ ಮಾಡುವುದು ಉತ್ತಮ. ಬಡವರಿಗೆ, ಆಶ್ರಮಗಳಿಗೆ ದಾನ ಅಥವಾ ಊಟದ ವ್ಯವಸ್ಥೆ ಮಾಡುವುದು ಉತ್ತಮ. ಒಳ್ಳೆಯದು ಮಾಡುವುದು ಮತ್ತೆ ಎರಡರಷ್ಟು ತಿರುಗಿ ಬರುತ್ತದೆ. ಮಕರ ರಾಶಿಯವರಿಗೆ ಈ ಸಮಯದಲ್ಲಿ ಏನನ್ನಾದರೂ ಎದುರಿಸುವ ಭಂಡ ಧೈರ್ಯ ಬರುವ ಸಾಧ್ಯತೆ ಇದೆ. ಒಳ್ಳೆಯದನ್ನು ನೋಡಿ ಈ ಭಂಡ ಧೈರ್ಯವನ್ನು ಉಪಯೋಗಿಸಿಕೊಳ್ಳಿ. ಸ್ವಲ್ಪ ಪ್ರಮಾಣದ ಸರ್ಪದೋಷ ಕಾಣಿಸುತ್ತದೆ. ಮೆಟ್ಟಿಲು ಹತ್ತುವಾಗ, ನೀರಿನಲ್ಲಿ ಓಡಾಡುವಾಗ ಗರ್ಭಿಣಿಯರು ಜಾಗ್ರತೆ ವಹಿಸುವುದು ಉತ್ತಮ. ಕುಕ್ಕೆ ಸುಬ್ರಹ್ಮಣ್ಯ ಅಥವಾ ಕಾಳಹಸ್ತಿ ದೇವಾಲಯಗಳಿಗೆ ಭೇಟಿ ಕೊಡುವುದು ಉತ್ತಮ. ಬಡವರಿಗೆ ಕೈಯಲ್ಲಿ ಆಗುವಂತ ದಾನ ಕೊಡಿ. ಕುಂಭ ರಾಶಿಯವರ ತಾಯಿಯ ಆರೋಗ್ಯದಲ್ಲಿ ಏರು ಪೇರು ಆಗುವ ಸಾಧ್ಯತೆ ಇದೆ. ವಾಹನಗಳಿಂದ ಅಪಾಯವಾಗುವ ಸಂಭವ ಇದೆ. ಪ್ರಯಾಣದ ಸಮಯದಲ್ಲಿ ಜಾಗ್ರತೆ ವಹಿಸಬೇಕು. ಅಚಾನಕ್ಕಾಗಿ ಕೆಲಸ ಅಥವಾ ಪ್ರಯಾಣದ ಯೋಗವಿದೆ. ಸೋಮವಾರ ಒಣಖರ್ಜೂರವನ್ನು ಶಿವನ ದೇವಸ್ಥಾನಕ್ಕೆ ಕೊಡುವುದು ಉತ್ತಮ. ಜೊತೆಗೆ ಖರ್ಜೂರ ತಿನ್ನುವುದು ಉತ್ತಮ. ಕೊನೆಯದಾಗಿ ಮೀನ ರಾಶಿಯವರಿಗೆ ಉತ್ತಮ ಫಲಿತಾಂಶ ಇದೆ. ನವೆಂಬರ್ 17ರ ನಂತರ ಅನಾವಶ್ಯಕ ಹಣ ವ್ಯಯ ಆಗುವ ಸಂಭವಿದೆ. ಉಳಿದಂತೆ ಎಲ್ಲವೂ ಉತ್ತಮ ಫಲಗಳಿವೆ. ಎರಡು ವರ್ಷಗಳ ಕಾಲ ರಾಜಯೋಗ ಬರುತ್ತದೆ. ಆದಷ್ಟು ದಾನ ಧರ್ಮ ಮಾಡುವುದು ಒಳ್ಳೆಯದು. ಯಾರಿಗೆ ಸಹಾಯದ ಅವಶ್ಯಕತೆ ಇದೆಯೋ ಅವರಿಗೆ ಅಗತ್ಯ ವಸ್ತುಗಳ ದಾನ ಮಾಡುವುದು ಉತ್ತಮ.

ಇವುಗಳು ಹನ್ನೆರಡು ರಾಶಿಯವರ ತಿಂಗಳ ಭವಿಷ್ಯ. ಯಾವ ರಾಶಿಯವರಿಗೆ ಒಳ್ಳೆಯ ಫಲವಿದೆ ಇಂಥವರು ಏನು ಮಾಡಬೇಕು. ಯಾವ ರಾಶಿಯವರಿಗೆ ಕೆಟ್ಟ ಫಲವಿದೆ ಅದಕ್ಕೆ ಪರಿಹಾರಗಳೇನು ಎಂಬುದನ್ನು ವಿವರಿಸಲಾಗಿದೆ. ಜಾಗ್ರತೆ ವಹಿಸುವುದು ಉತ್ತಮ. ಜೊತೆಗೆ ಆದಾಗ ದಾನ ಮಾಡುವುದು ಉತ್ತಮ.

Leave A Reply

Your email address will not be published.