ಹಸಿವು ತಾಳಲಾರದ ಸ್ಥಿ’ತಿಯಲ್ಲಿದ್ದ ಕೋತಿಗಳಿಗೆ ಈ ಹಸು ಮಾಡಿದ ಪ್ಲಾನ್ ಇದೀಗ ಸಕತ್ ವೈ’ರಲ್

0 17,573

ಪ್ರಿಯ ಓಡಿಗರೇ ನಾವುಗಳು ಬದುಕುತ್ತಿರೋದೇ ಒಂದು ವಿಸ್ಮಯ ಜಗತ್ತಿನಲ್ಲಿ ಇಗಿದ್ದಾಗ ನಮ್ಮ ಕಣ್ಣಿಗೆ ಕಂಡು ಕಾಣದೆ ಅದೆಷ್ಟೋ ವಿಚಾರಗಳು, ಘಟನೆಗಳು ನಡೆಯುತ್ತಲೇ ಇರುತ್ತವೆ, ಇಲ್ಲಿ ಕೂಡ ಅಂತದ್ದೇ ಒಂದು ಸ್ಟೋರಿ ಇದೆ ನೀವು ಕೂಡ ಇದನ್ನ ನಿಜಕ್ಕೂ ಇಷ್ಟ ಪಡುತ್ತೀರಾ ಯಾಕೆಂದರೆ ಮನುಷ್ಯ ಮಾಡದ ಕೆಲಸವನ್ನು ಕೆಲವೊಮ್ಮೆ ಮೂಕಪ್ರಾಣಿಗಳು ಸಹ ಮಾಡುತ್ತವೆ.

ಹೌದು ಹಸಿವು ತಾಳಲಾರದ ಸ್ಥಿತಿಯಲ್ಲಿರುವ ಕೋತಿಗಳಿಗೆ ಈ ಹಸು ಮಾಡಿದ ಉಪಾಯ ನೋಡಿ. ದೇವರು ಬರುವುದಕ್ಕೆ ಆಗುವುದಿಲ್ಲ ಎಂದು ಬೇರೆ ಬೇರೆ ರೂಪದಲ್ಲಿ ಬಂದು ಕಷ್ಟಪಡುತ್ತಿರುವ ಜೀವಿಗಳಿಗೆ ನೆರವಾಗುತ್ತಾನೆ ಎಂದು ಹಿರಿಯರು ಹೇಳುತ್ತಾರೆ. ಭೀಕರ ಬಿಸಿಲಿನಿಂದ ನೀರು ಆಹಾರ ಇಲ್ಲದೆ ನರಳಾಡುತ್ತಿದ್ದ ಕೋತಿಗಳಿಗಾಗಿ ಈ ಹಸು ಒಂದು ಆಶ್ಚರ್ಯ ಕೆಲಸವನ್ನು ಮಾಡಿದೆ.ಮರುಭೂಮಿ ಪ್ರದೇಶವಾಗಿರುವ ರಾಜಸ್ಥಾನದಲ್ಲಿ ತುಂಬಾ ಬಿಸಿಲು ಇರುತ್ತದೆ.ಅಲ್ಲಿನ ಬಿಸಿಲಿನ ತಾಪಮಾನ ಮಿತಿಮೀರಿದಾಗ ತುಂಬಾ ಜನರು ಸಾವನ್ನಪ್ಪುತ್ತಾರೆ.ನೀರಿಗಾಗಿ ಇಲ್ಲಿನ ಜನರು ಪರದಾಡುತ್ತಿರುವಾಗ ಪ್ರಾಣಿಗಳಿಗೆ ನೀರು, ಆಹಾರ ಸಿಗುವುದಿಲ್ಲ.

ಹೀಗೆ ನೀರು, ಆಹಾರ ಸಿಗದೇ ನರಳಾಡುತ್ತಿದ್ದ ಕೋತಿಗಳಿಗೆ ಈ ಹಸು ಮಾಡಿರುವ ಕೆಲಸಕ್ಕೆ ಹೃದಯ ಕಂಪಿಸಿದೆ. ಈ ಘಟನೆ ನಡೆದಿದ್ದು ರಾಜಸ್ಥಾನದ ಸಿರೋಯಿ ಜಿಲ್ಲೆಯ, ರೋಹಿದ ಪ್ರದೇಶದ ಮಹಾದೇವ ದೇವಸ್ಥಾನದಲ್ಲಿ.ತುಂಬ ವರ್ಷಗಳಿಂದ ಮಹದೇವ ದೇವಸ್ಥಾನದ ಆವರಣದಲ್ಲಿ ನೆಲೆಸಿರುವ ಈ ಹಸು ನೀರು ಆಹಾರ ಸಿಗದೇ ನರಳಾಡುತ್ತಿದ್ದ ಕೋತಿಗಳಿಗೆ ಹಾಲು ಉಣಿಸಿದೆ. ಹಾಲು ಉಣಿಸಿ ಕೋತಿಗಳ ಹಸಿವು, ದಾಹವನ್ನು ತೀರಿಸುತ್ತಿದೆ ಈ ಹಸು.ಈ ದೃಶ್ಯವನ್ನು ನೋಡಲು ಎಲ್ಲಾ ಜನರು ಬಂದಿದ್ದು ಎಲ್ಲಾ ಮಹಾದೇವನ ಪವಾಡ ಎಂದು ಹೇಳುತ್ತಿದ್ದಾರೆ ಹಾಗೂ ತಾಯಿಯಂತ ಹಸಿವಿಗೆ ನಮಸ್ಕಾರ ಮಾಡುತ್ತಿದ್ದಾರೆ.

Leave A Reply

Your email address will not be published.