ಕೆಲವೊಂದು ಸಂಘ ಮತ್ತು ಸಂಸ್ಥೆಗಳು ತಮಗೆ ಅಭ್ಯರ್ಥಿಗಳು ಬೇಕಾದಾಗ ಅರ್ಜಿಯನ್ನು ಆಹ್ವಾನಿಸುತ್ತವೆ. ಹಾಗೆಯೇ ರಾಷ್ಟ್ರೀಯ ಜಲ ಅಭಿವೃದ್ಧಿ ಮಂಡಳಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಿಬ್ಬಂದಿ ನೇಮಕಾತಿಯ ವಿವಿಧ ಹುದ್ದೆಗಳ ಅರ್ಜಿಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಜೂನಿಯರ್ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ ಆಗಿರಬೇಕು. ಹಾಗೆಯೇ ಜನರಲ್ ಅವರಿಗೆ 18 ರಿಂದ 27ವಯಸ್ಸು ಆಗಿರಬೇಕು. ಹಾಗೆಯೇ ಇದಕ್ಕೆ ಸಿವಿಲ್ ಇಂಜಿನಿಯರಿಂಗ್ ಆಗಿರಬೇಕು. ಇವರಿಗೆ ವೇತನ 35,400 ರಿಂದ 1,12,400ರೂಪಾಯಿ ಇದೆ. ನಂತರದಲ್ಲಿ ಹಿಂದಿ ಟ್ರಾನ್ಸ್ಲೇಟರ್ ಹುದ್ದೆಗೆ ಮಾಸ್ಟರ್ ಡಿಗ್ರಿ ಆಗಿರಬೇಕು. 21ವರ್ಷದಿಂದ 30ವರ್ಷದವರೆಗೆ ವಯೋಮಿತಿ ಇದೆ. ಇವರಿಗೆ ವೇತನ 35,400 ರಿಂದ 1,12,400ರೂಪಾಯಿ ಇದೆ. ನಂತರದಲ್ಲಿ ಜೂನಿಯರ್ ಅಕೌಂಟೆಂಟ್ ಆಫೀಸರ್ ಹುದ್ದೆಗೆ ಡಿಗ್ರಿ ಮಾಡಿರಬೇಕು.
ಕಾಮರ್ಸ್ ಮಾಡಿರಬೇಕು ಹಾಗೂ 3 ವರ್ಷಗಳ ಅಕೌಂಟ್ ನ ಅನುಭವ ಇರಬೇಕು. 21ವರ್ಷದಿಂದ 30ವರ್ಷದವರೆಗೆ ವಯೋಮಿತಿ ಇದೆ. ಹಾಗೆಯೇ ಇವರ ವೇತನ 35,400 ರಿಂದ 1,12,400ರೂಪಾಯಿ ಇದೆ. ಅಪ್ಪರ್ ಡಿವಿಸನ್ ಕ್ಲರ್ಕ್ ಹುದ್ದೆಗೆ 18 ರಿಂದ 27ವರ್ಷ ವಯೋಮಿತಿ ಹೊಂದಿರಬೇಕು. ಹಾಗೆಯೇ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಇದಕ್ಕೆ ವೇತನ 25,500 ರಿಂದ 81,100 ಇದೆ. ಹಾಗೆಯೇ ಸ್ಟೆನೋಗ್ರಾಫರ್ ಹುದ್ದೆಗೆ 18 ರಿಂದ 27ವರ್ಷ ವಯೋಮಿತಿ ಹೊಂದಿರಬೇಕು. ಹಾಗೆಯೇ ಟೈಪಿಂಗ್ ಸರ್ಟಿಫಿಕೇಟ್ ಇರಬೇಕು.
ಪಿಯುಸಿ ಪಾಸಾಗಿದ್ದರೆ ಸಾಕಾಗುತ್ತದೆ. ಇದಕ್ಕೆ ವೇತನ 25,500 ರಿಂದ 81,100 ಇದೆ. ಕೊನೆಯದಾಗಿ ಲೋವರ್ ಡಿವಿಸನ್ ಕ್ಲರ್ಕ್ ಹುದ್ದೆಗೆ 18 ರಿಂದ 27ವರ್ಷ ವಯೋಮಿತಿ ಹೊಂದಿರಬೇಕು. ವೇತನ 19,900 ರಿಂದ 63,200 ಇದೆ. ಹಾಗೆಯೇ ಟೈಪಿಂಗ್ ಸರ್ಟಿಫಿಕೇಟ್ ಇರಬೇಕು. ಪಿಯುಸಿ ಪಾಸಾಗಿದ್ದರೆ ಸಾಕಾಗುತ್ತದೆ. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 10-5-2021 ಆಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-6-2021 ಆಗಿದೆ. ಅರ್ಜಿಶುಲ್ಕ ಜನರಲ್ ಅವರಿಗೆ 840ರೂಪಾಯಿ ಇದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 500ರೂಪಾಯಿ ಇದೆ. ಎಲ್ಲರಿಗೂ ಕಂಪ್ಯೂಟರ್ ಟೆಸ್ಟ್ ನ್ನು ಮಾಡಲಾಗುತ್ತದೆ.