ಸುದೀಪ್ ಅವರ JP ನಗರದಲ್ಲಿರೋ ಮನೆ ಹೇಗಿದೆ?ನೋಡಿ ವಿಡಿಯೋ

0 61

ಸುದೀಪ್ ಇವರನ್ನು ಅಭಿನಯ ಚಕ್ರವರ್ತಿ ಎಂದು ಕರೆಯಲಾಗುತ್ತದೆ. ಇವರು ಕನ್ನಡ ಸಿನಿಮಾಕ್ಕೆ ಬಂದ ಮೇಲೆ ಒಳ್ಳೆಯ ಯಶಸ್ಸನ್ನು ಕಂಡಿದ್ದಾರೆ. ಹಾಗೆಯೇ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇವರು ತುಂಬಾ ಪ್ರತಿಭಾನ್ವಿತ ನಟ ಎಂದು ಗುರುತಿಸಿಕೊಂಡಿದ್ದಾರೆ ಎಂದು ಹೇಳಬಹುದು. ತಮ್ಮ ಹಲವಾರು ಬೇರೆ ಬೇರೆ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಕುಳಿತಿದ್ದಾರೆ.

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್ 2 1973ರಲ್ಲಿ ಜನಿಸಿದ್ದಾರೆ. ಸುದೀಪ್ ಅವರು ಜನಿಸಿದರು. ಇವರ ತಂದೆಯ ಹೆಸರು ಸಂಜೀವ್ ಸರೋವರ್ ಆಗಿದೆ. ಹಾಗೆಯೇ ಇವರ ತಾಯಿಯ ಹೆಸರು ಸರೋಜ ಸಂಜೀವ್ ಆಗಿದೆ. ಇವರು ಪ್ರಿಯಾ ರಾಧಾಕೃಷ್ಣನ್ ಅವರನ್ನು ವಿವಾಹವಾಗಿದ್ದಾರೆ. ಈಗ ಅವರಿಗೆ ಒಂದು ಮಗಳು ಸಹ ಇದ್ದಾಳೆ. ಅವಳ ಹೆಸರು ಸಾನ್ವಿ. ಸುದೀಪ್ ಅವರಿಗೆ ಅಭಿನಯ ಚಕ್ರವರ್ತಿ, ಕಿಚ್ಚ, ಅನ್ನದಾತರ ಅನ್ನದಾತ, ಕಲಾ ಭೂಷಣ, ಕಲಾ ಕೇಸರಿ, ಸ್ಟೈಲಿಶ್ ಸ್ಟಾರ್, ಅಗ್ರಿ ಯಂಗ್ ಮಾನ್, ಕನ್ನಡ ಸೂಪರ್ ಸ್ಟಾರ್, ಕರುನಾಡ ಕಿಂಗ್, ಬಿಗ್ಬಾಸ್ ಎಂಬ ಹೆಸರುಗಳಿಂದ ಕರೆಯುತ್ತಾರೆ.

ಇವರು ನಟ, ಚಲನಚಿತ್ರ, ನಿರ್ಮಾಪಕ, ವಿತರಕ, ಹಿನ್ನೆಲೆ ಗಾಯಕ, ಕಥೆಗಾರ, ನಿರ್ದೇಶಕ ಎಲ್ಲವೂ ಆಗಿದ್ದಾರೆ. ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ
ಕನ್ನಡ ಚಿತ್ರಗಳಾದ ಸ್ಪರ್ಶ, ಹುಚ್ಚಾ, ನಂದಿ, ಕಿಚ್ಚಾ ಸ್ವಾತಿಮುತ್ತು, ಮೈ ಆಟೋಗ್ರಾಫ್, ನಂ.73 ಶಾಂತಿ ನಿವಾಸ, ಮುಸ್ಸಂಜೆ ಮಾತು, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಈಗ ಇದು ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲಿ ಇದ್ದು ಇವೆಲ್ಲಾ ಸಿನೆಮಾಗಳನ್ನು ಸುದೀಪ್ ಅವರು ಮಾಡಿದ್ದಾರೆ.

ಇವರಿಗೆ ಸಾನ್ವಿ ಎನ್ನುವ ಮಗಳು 17ವರ್ಷಗಳನ್ನು ಕಳೆದು ಸುದೀಪ್ ಅವರಷ್ಟೇ ಎತ್ತರವಾಗಿದ್ದಾಳೆ. ಬೆಂಗಳೂರಿನಲ್ಲಿ ವಾಸವಿದ್ದಾರೆ. ಬೆಂಗಳೂರಿನ ಜೆಪಿನಗರದಲ್ಲಿ ಇವರು ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದಾರೆ. ಇವರ ಮನೆಯು ಬಹಳ ಸುಂದರವಾಗಿ ಕಾಣುತ್ತದೆ. ಹಾಗೆಯೇ ಇವರ ಮನೆ ಬಹಳ ಸೇಫ್ ಆಗಿ ಇದೆ. ಹೇಗೆಂದರೆ ಇವರ ಮನೆಯ ಗೇಟ್ ನ್ನು ಬಹಳ ದೊಡ್ಡದಾಗಿ ಮಾಡಿಸಿದ್ದಾರೆ. ಹಾಗೆಯೇ ಮನೆಯ ಹೊರಗಡೆ ಕಂಪೌಂಡ್ ಕೂಡ ಬಹಳ ಎತ್ತರವಾಗಿ ದಪ್ಪವಾಗಿ ಇದೆ. ಹಾಗೆಯೇ ಹೂವಿನ ಗಿಡಗಳನ್ನು ಸಹ ನೆಟ್ಟಿದ್ದಾರೆ.

Leave A Reply

Your email address will not be published.