ಯಾವ ಕೆಲಸವನ್ನಾದರೂ ಮನಸಿದ್ದರೆ ಸಾಧಿಸಬಹುದು ಅಸಾಧ್ಯವಾದುದು ಯಾವುದೂ ಇಲ್ಲ ಸಾಧಿಸುವ ಛಲ ಬೇಕು ದೇಹದ ನ್ಯೂನ್ಯತೆಗಳನ್ನು ಲೆಕ್ಕಿಸದೆ ಸಾಧಿಸಿದವರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ನಿಕ್ಕ ಈತನಿಗೆ ಎರಡು ಕಾಲುಗಳಿಲ್ಲ ಒಂದು ಕೈ ಇಲ್ಲ ಇದ್ದ ಒಂದು ಕೈ ಸರಿಯಾಗಿ ಬೆಳವಣಿಗೆಯಾಗಿಲ್ಲ ಈತ ತನ್ನಿಂದ ಏನು ಸಾಧ್ಯವಿಲ್ಲ ಎಂದು ಸುಮ್ಮನೆ ಕೂರಲಿಲ್ಲ ತನ್ನ ನ್ಯೂನತೆಗಳಿಗೆ ಸವಾಲೊಡ್ಡಿ ಬಾಡಿ ಬಿಲ್ಡರ್ ಆಗಿದ್ದಾನೆ ಈತ ಎಷ್ಟು ಫೇಮಸ್ ಆಗಿದ್ದಾನೆ ಅಂದ್ರೆ ಸ್ಟಾರ್ ನಟ ರಾಕಿ ಜಾನ್ಸನ್ ಈತನನ್ನು ಮೀಟ್ ಮಾಡ್ಲಿಕ್ಕೆ ಬರತಾರೆ ಈತ ಒಂದೇ ಕೈಯಿಂದ ಸ್ವಿಮ್ಮಿಂಗ್ ಮಾಡ್ತಾನೆ ಈತ ರೈಟರ್ ಮೋಟಿವೇಶನಲ್ ಸ್ಪೀಕರ್ ಕೂಡ ಆಗಿದ್ದಾನೆ ಇಷ್ಟೆಲ್ಲಾ ನಿನ್ನಿಂದ ಹೇಗೆ ಸಾದ್ಯ ಎಂದು ಕೇಳಿದರೆ ಯಾವುದೇ ಕೆಲಸ ಮಾಡಬೇಕಾದರೂ ಶಕ್ತಿ ಇದ್ದರೆ ಸಾಲದು ಮನಸು ಕೂಡ ಇರಬೇಕು ಅಂತಾನೆ. ಮತ್ತೊಬ್ಬ ಬ್ಲೇಕ್ ಲಿಪರ್ ಈತನ ಬಗ್ಗೆ ಕೇಳಿದರೆ ನೀವು ಶಾಕ್ ಆಗ್ತಿರಾ ಈತನಿಗೆ ಎರಡು ಕಾಲುಗಳಿಲ್ಲ ಆದ್ರೂ ಈತ ಎಷ್ಟು ವೇಗವಾಗಿ ಒಡ್ತಾನೆ ಅಂತ ಊಹಿಸಲು ಸಾಧ್ಯವಿಲ್ಲ ಪ್ಯಾರಾ ಒಲಿಂಪಿಕ್ ಗೇಮ್ಸ್ ನಲ್ಲಿ ಈತನ ಹೆಸರು ವರ್ಲ್ಡ್ ರೆಕಾರ್ಡ್ ಇದೆ ಈತನ ತಂದೆ ಸ್ಪೋರ್ಟ್ಸ್ ಮಾನ್ ಆಗಿದ್ದು ಮಗನಿಗೆ ಕಾಲುಗಳಿಲ್ಲವೆಂದು ಕುಗ್ಗುವುದಿಲ್ಲ ಈತನನ್ನು ಸ್ಪೋರ್ಟ್ಸ್ ಮ್ಯಾನ್ ಆಗಿ ಬೆಳೆಸುತ್ತಾರೆ ಈತನಿಗೆ ಫಾಸ್ಟ್ ಟೆಸ್ಟ್ ರನ್ನರ್ ಆಗಬೇಕೆಂಬ ಕನಸು ಇರುತ್ತದೆ ಅದಕ್ಕಾಗಿ ಹಗಲು ರಾತ್ರಿ ಕಷ್ಟ ಪಡ್ತಾರೆ ಮನಸಿಟ್ಟು ಮಾಡಿದರೆ ಯಾವ ಕೆಲಸವೂ ಕಷ್ಟವಲ್ಲ ಕಠಿಣ ಪರಿಶ್ರಮದಿಂದ ಬ್ಲೇಕ್ ತಮ್ಮ ಗುರಿಯನ್ನು ಸಾಧಿಸಿದ್ದಾರೆ ಅವರು ಫಾಸ್ಟ್ ಟೆಸ್ಟ್ ಸ್ಪ್ರಿಂಟರ್ ಆಗಿದ್ದಾನೆ. ಮತ್ತೊಬ್ಬ ಅಮೀರ್ ಹುಸೇನ್ ಈತ ಒಬ್ಬ ಕ್ರಿಕೆಟ್ ಪ್ಲೇಯರ್ ಈತ 8 ವರ್ಷ ದವನಿದ್ದಾಗ ಅಪಘಾತವಾಗಿ ತನ್ನ ಎರಡು ಕೈಗಳನ್ನು ಕಳೆದುಕೊಂಡನು ಆದ್ರೂ ಹುಸೇನ್ ಎದೆಗುಂದದೆ ತನ್ನ ಕಾಲುಗಳನ್ನು ಕೈಗಳೆಂದು ಕಾಲುಗಳಿಂದಲೆ ಎಲ್ಲ ಕೆಲಸ ಮಾಡುತ್ತಾನೆ ಈತ ಜಮ್ಮು ಕಾಶ್ಮೀರದ ಪ್ಯಾರಾ ಕ್ರಿಕೆಟ್ ಟೀಮ್ ನ ಕ್ಯಾಪ್ಟನ್.
ಜಮಾರಿಯನ್ ಸ್ಟೈಲ್ ಈತನಿಗೆ ಎರಡು ಕೈಗಳಿಲ್ಲ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈತನಿಗೆ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಬೇಕೆಂಬ ಕನಸು ಇರುತ್ತದೆ ಆದರೆ ಕೋಚ್ ಕೊಡಲು ಯಾರೂ ಒಪ್ಪುವುದಿಲ್ಲ ಕಠಿಣ ಪರಿಶ್ರಮದಿಂದ ಶಾಲೆಯ ಬೆಸ್ಟ್ ಪ್ಲೇಯರ್ ಆಗ್ತಾನೆ ಈಗ MBA ವಿದ್ಯಾರ್ಥಿಗಳ ಟೀಮ್ ನೊಂದಿಗೆ ಪ್ರಾಕ್ಟೀಸ್ ಮಾಡುತ್ತಿದ್ದಾನೆ.
ತೆರೆಸನ ವೇರಿಲಿನ್ 60 ವರ್ಷದ ಮಹಿಳೆ ಇವರು ತೈವಾನ್ ನ ಆರ್ಮಿಯಲ್ಲಿ ಕೆಲಸ ಮಾಡಿದ್ದಾರೆ ಇವರು ನ್ಯೂಯಾರ್ಕ್ ಸಿಟಿ ಮ್ಯಾರ್ ಥಾನ್ ನಲ್ಲಿ ಭಾಗವಹಿಸಿದ್ದಾರೆ 60ವರ್ಷದಲ್ಲಿ ಕೈ ಕಾಲುಗಳು ಸಾಥ್ ನೀಡದಿದ್ದರೂ ಮ್ಯಾರಥಾನ್ ಸಂಪೂರ್ಣ ಮಾಡಿದ್ದಾರೆ. ಡೈಸಿ ಮೇ ಡೆಮಸ್ಟ್ರಿ ಈ ಪುಟ್ಟ ಹುಡುಗಿಯ ಕಥೆ ರೋಚಕವಾಗಿದೆ 2ವರ್ಷದ ಮಗುವಾಗಿದ್ದಾಗ 2ಕಾಲುಗಳನ್ನು ಕಳೆದುಕೊಂಡು ಅಪ್ಪನ ಪ್ರೋತ್ಸಾಹದಿಂದ ಇವಳು ಈಗ ಇಂಗ್ಲೆಂಡ್ ನ ಸಕ್ಸೆಸ್ಫುಲ್ ಜ್ಯಿಮನಾಸ್ಟ್ ಮತ್ತು ಮೊಡೆಲ್ಲ ಆಗಿದ್ದಾರೆ. ಕನ್ಯಾ ಸಸ್ಸೆರ ಈಕೆಗೆ ಹುಟ್ಟುವಾಗಲೇ 2ಕೈಗಳಿರಲಿಲ್ಲ ಹೀಗಿರುವುದರಿಂದ ಅನಾಥಾಲಯದಲ್ಲಿ ಬೆಳೆಯುತ್ತಾಳೆ ಇವಳು ಈಗ ಅಮೆರಿಕದಲ್ಲಿ ಸ್ಕೇಟಿಂಗ್ ಚಾಂಪಿಯನ್ ಆಗಿದ್ದಾಳೆ ಅಮೆರಿಕದ ವೇಗವಾದ ಸ್ಕೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ ಮೊಡೆಲ್ ಆಗಿದ್ದಾರೆ ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಏನು ಇಲ್ಲದ ಇವರೆ ಇಷ್ಟು ಸಾಧನೆ ಮಾಡಿದಾಗ ಎಲ್ಲಾ ಇದ್ದ ನಾವು ಸಾಧಿಸಬಹುದಲ್ಲವೇ