ಜಗತ್ತಿನ ಆದಾಯದ ಮೂಲ ಆರೋಗ್ಯ ಮತ್ತು ಯುದ್ಧ. ಹೊಸ ವೈರಾಣು ಹುಟ್ಟಿಕೊಂಡರೆ ಅದು ಮಿಲಿಯನ್ ಡಾಲರ್ ವ್ಯವಹಾರಕ್ಕೆ ಬುನಾದಿ ಹಾಕಿತು ಎಂದು ಅರ್ಥ. ಅಮೆರಿಕ, ಚೀನಾ, ರಷ್ಯಾ ದೇಶಗಳಲ್ಲಿ ಯುದ್ಧೋಪಕರಣಗಳನ್ನು ತಯಾರಿಸಿ ದೇಶ ದೇಶಗಳೊಂದಿಗೆ ಯುದ್ದ ಮಾಡಿಸಿ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುತ್ತದೆ. ಭಾರತದಂಥಹ ದೇಶದಲ್ಲಿ ಆದಾಯದ ಸ್ವಲ್ಪ ಭಾಗವನ್ನು ಸೇನೆಗೆ ಮೀಸಲಿಡಬೇಕು ಆದರೆ ಕೆಲವು ದೇಶಗಳಲ್ಲಿ ಸೈನ್ಯವಾಗಲಿ ಯುದ್ಧವಾಗಲಿ ನಡೆಯುವುದಿಲ್ಲ ಅಂತಹ ದೇಶಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಆಗಾಗ ದೇಶದ ಗಡಿಯಲ್ಲಿ ಕದನ, ಗುಂಡಿನ ಧಾಳಿ ನಡೆಯುತ್ತದೆ. ಅದೆಷ್ಟೊ ಮಕ್ಕಳು ತಂದೆಯನ್ನು ಕಳೆದುಕೊಳ್ಳುತ್ತಾರೆ, ತಂದೆ ತಾಯಿ ಮಗನನ್ನು ಕಳೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಸೈನ್ಯ, ಯುದ್ಧವಿಲ್ಲದ ದೇಶ ಇರುವುದಿಲ್ಲ ಆದರೆ ಸೇನೆ, ಬಂದೂಕು, ಮಿಸೈಲ್ ಗಳ ಖರೀದಿ ಇಲ್ಲದ ದೇಶಗಳಿವೆ. ಜಗತ್ತಿನಲ್ಲಿ ದೇಶ ದೇಶಗಳ ನಡುವೆ ಕದನ ನಡೆಯುವ ಭಯಾನಕ ವಾತಾವರಣ ಕಂಡುಬರುತ್ತಿದೆ. ಪೋಲಿಸ್, ಮಿಲಿಟರಿ ಇಲ್ಲದ ದೇಶಗಳ ಪಟ್ಟಿಯನ್ನು ಅಮೆರಿಕದ ಗುಪ್ತಚರ ಸಂಸ್ಥೆ CIA ಸಿದ್ಧಗೊಳಿಸಿದೆ.

ಪಟ್ಟಿಯಲ್ಲಿ ಇರುವ ದೇಶಗಳೆಂದರೆ ಆಡೋರ ಈ ದೇಶ ಇರುವುದು ಯುರೋಪಿನಲ್ಲಿ 468 ಚದರ ಕಿಲೋಮೀಟರ್ ವಿಸ್ತಾರವನ್ನು ಹೊಂದಿದೆ. ಈ ದೇಶದಲ್ಲಿ ಸುಮಾರು 78 ಸಾವಿರ ಜನರಿದ್ದಾರೆ. ಸ್ಪೇನ್ ಮತ್ತು ಫ್ರಾನ್ಸ್ ದೇಶದ ನಡುವೆ ಇರುವ ಈ ದೇಶ ಸ್ಪೇನ್ ಮತ್ತು ಫ್ರಾನ್ಸ್ ದೇಶಗಳಿಗೆ ಮಿತ್ರರಾಷ್ಟ್ರವಾಗಿದೆ ಆದ್ದರಿಂದ ಈ ದೇಶ ತನ್ನದೆ ಆದ ಸೈನ್ಯವನ್ನು ಹೊಂದಿಲ್ಲ. ಈ ದೇಶಕ್ಕೆ ಸೈನ್ಯದ ಅವಶ್ಯಕತೆ ಇದ್ದರೆ ಫ್ರಾನ್ಸ್ ಹಾಗೂ ಸ್ಪೇನ್ ದೇಶಗಳು ಸೈನ್ಯವನ್ನು ಒದಗಿಸುತ್ತದೆ.

ಕೆರೆಬಿಯನ್ ದ್ವೀಪ ಸಮುದ್ರದಲ್ಲಿರುವ ಅರುಬಾ ಎಂಬ ದೇಶದಲ್ಲಿ ಸೈನ್ಯವಿಲ್ಲ. ಈ ದೇಶ 1986 ರಲ್ಲಿ ನೆದರ್ಲ್ಯಾಂಡ್ ನಿಂದ ಸ್ವಾತಂತ್ರ್ಯ ಪಡೆದಿದೆ ಆದರೂ ಈಗಲೂ ಕೂಡ ನೆದರ್ಲ್ಯಾಂಡ್ ನ ಅರೆ ಸ್ವಾಯತ್ತ ಪ್ರದೇಶವಾಗಿ ಉಳಿದುಕೊಂಡಿದೆ. ಈ ದೇಶ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಂಡಿದೆ 11,4000 ಜನರಿರುವ ಈ ದ್ವೀಪದಲ್ಲಿ ಸೈನ್ಯ ಇಲ್ಲ ಆದರೆ ಈ ದೇಶದಲ್ಲಿರುವ ನ್ಯಾಷನಲ್ ಸೆಕ್ಯೂರಿಟಿ ಸರ್ವಿಸ್ ಫೋರ್ಸ್ ಕ್ರಿಮಿನಲ್ ಹಾಗೂ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತದೆ.

ಒಂದು ವೇಳೆ ಈ ದೇಶಕ್ಕೆ ಸೈನ್ಯದ ಅವಶ್ಯಕತೆ ಇದ್ದರೆ ನೆದರ್ಲ್ಯಾಂಡ್ ಒದಗಿಸುತ್ತದೆ. ಕೆರೆಬಿಯನ್ ದ್ವೀಪ ಸಮೂಹದಲ್ಲಿರುವ ಮತ್ತೊಂದು ದೇಶವಾದ ಕ್ಯೆಮನ್ ಐಲ್ಯಾಂಡ್ ಇದು ಬ್ರಿಟಿಷರ ಅಧಿಪತ್ಯಕ್ಕೆ ಒಳಗಾಗಿದ್ದ ಪ್ರದೇಶವಾಗಿತ್ತು. ಹಿಂದೆ ಜಮೈಕಾದ ಭಾಗವಾಗಿದ್ದ ಈ ದ್ವೀಪ ಸ್ವಾತಂತ್ರ್ಯ ಪಡೆದು ತನ್ನದೆ ಆದ ಸರ್ಕಾರ ಹೊಂದಿದೆ. ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಈ ದೇಶದಲ್ಲಿ ಕ್ಯೆಮಲ್ ರಾಯಲ್ ಫೋರ್ಸ್ ಎಂಬ ಪೊಲೀಸ್ ಪಡೆ ಇದೆ, ಇಲ್ಲಿನ ಮಿಲಿಟರಿ ಅಗತ್ಯಗಳನ್ನು ಬ್ರಿಟನ್ ಪೂರೈಸುತ್ತದೆ.

ಕುಕ್ ಐಲ್ಯಾಂಡ್ ಕೂಡ ಸೈನ್ಯವನ್ನು ಹೊಂದಿಲ್ಲ ಈ ದ್ವೀಪ ನ್ಯೂಜಿಲ್ಯಾಂಡ್ ಸಮೀಪದಲ್ಲಿದ್ದು, 236 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. 61,500 ಜನರು ಇಲ್ಲಿ ವಾಸವಾಗಿದ್ದಾರೆ. ಈ ದೇಶದ ಸೈನ್ಯದ ಅಗತ್ಯವನ್ನು ನ್ಯೂಜಿಲ್ಯಾಂಡ್ ಪೂರೈಸುತ್ತದೆ. ಅಮೆರಿಕ ದೇಶದ ಸಮೀಪ ಇರುವ ಕೋಸ್ಟರಿಕಾ ದೇಶದಲ್ಲಿಯೂ ಸೈನ್ಯವಿಲ್ಲ. ಈ ದೇಶದಲ್ಲಿ ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಪೊಲೀಸ್ ಪಡೆಯನ್ನು ಬಳಸಲಾಗುತ್ತದೆ.

ಈ ದೇಶದ ಮಿಲಿಟರಿ ಅಗತ್ಯಗಳನ್ನು ಅಮೆರಿಕ ನೋಡಿಕೊಳ್ಳುತ್ತದೆ. 51 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಈ ದೇಶದಲ್ಲಿ 3,34,000 ಜನರು ವಾಸವಾಗಿದ್ದಾರೆ. ಅಮೆರಿಕದ ಸಮೀಪದಲ್ಲಿರುವ ಇನ್ನೊಂದು ದೇಶವಾದ ಡೊಮೆನಿಕಾ ದೇಶದಲ್ಲಿಯೂ ಸೈನ್ಯವಿಲ್ಲ. ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ದೇಶದಲ್ಲಿ ಪೊಲೀಸ್ ಪಡೆ ಮಾತ್ರ ಇದೆ. ಕಾಮನ್ವೆಲ್ತ್ ನ ಸದಸ್ಯ ರಾಷ್ಟ್ರವಾದ ಇದು ಕ್ಯೂಬಾದ ನಂತರ ಅತಿ ದೊಡ್ಡ ದ್ವೀಪ ರಾಷ್ಟ್ರ ಎಂಬ ಹೆಸರನ್ನು ಪಡೆದಿದೆ.

ಗ್ರೀನ್ಲ್ಯಾಂಡ್ ನಲ್ಲಿಯೂ ಸೈನ್ಯವಿಲ್ಲ, 2009 ರಿಂದ ಗ್ರೀನ್ಲ್ಯಾಂಡ್ ಸ್ವತಂತ್ರ ಸರ್ಕಾರವನ್ನು ಹೊಂದಿದ್ದರೂ ಡೆನ್ಮಾರ್ಕ್ ದೇಶ ಇದನ್ನು ಕಂಟ್ರೋಲ್ ಮಾಡುತ್ತಿದೆ. ಐಸ್ಲ್ಯಾಂಡ್ ನ್ಯಾಟೊ ಸದಸ್ಯ ರಾಷ್ಟ್ರವಾಗಿದ್ದು 2006ರವರೆಗೆ ಅಮೆರಿಕ ದೇಶದ ಪೊಲೀಸ್ ಪಡೆ ಇತ್ತು ಈಗ ಯಾವುದೆ ಪಡೆ ಇಲ್ಲ. ಐಸ್ ಲ್ಯಾಂಡ್ ದೇಶದ ಮಿಲಿಟರಿ ಅವಶ್ಯಕತೆಗಳನ್ನು ನ್ಯಾಟೊ ನೋಡಿಕೊಳ್ಳುವುದರಿಂದ ಇಲ್ಲಿ ಸೈನ್ಯವಿಲ್ಲ. ಜಗತ್ತಿನ ಅತಿ ಚಿಕ್ಕ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಲಿಟನ್ ಸ್ಟೇನ್ ಜಗತ್ತಿನ ಅತಿ ಚಿಕ್ಕ ರಾಷ್ಟ್ರಗಳ ಪಟ್ಟಿಯಲ್ಲಿರುವ ಈ ರಾಷ್ಟ್ರ ತನ್ನ ಸೈನ್ಯದ ಅವಶ್ಯಕತೆಗಳನ್ನು ಸ್ವಿಸ್ ಹಾಗೂ ಆಸ್ಟ್ರೀಯಾ ದೇಶಗಳಿಂದ ಪಡೆದುಕೊಳ್ಳುತ್ತದೆ.

ಈ ದೇಶದಲ್ಲಿ ಸ್ಥಳೀಯ ಪೊಲೀಸ್ ಫೋರ್ಸ್ ಇದ್ದು ಅಲ್ಲಿಯ ಕಾನೂನು ನಿಯಮಗಳನ್ನು ಕಾಪಾಡುತ್ತದೆ. ಮತ್ತೊಂದು ಪುಟ್ಟ ರಾಷ್ಟ್ರವಾದ ಮಾರ್ಶೋ ಐಲ್ಯಾಂಡ್ ನಲ್ಲಿಯು ಸೈನ್ಯವಿಲ್ಲ. ಈ ದೇಶದ ಮಿಲಿಟರಿ ಅವಶ್ಯಕತೆಗಳನ್ನು ಅಮೇರಿಕ ದೇಶ ನೋಡಿಕೊಳ್ಳುತ್ತದೆ. ಮೋರಿಷಿಯಸ್ ಹಿಂದೂ ಮಹಾಸಾಗರದಲ್ಲಿರುವ ಈ ದೇಶದಲ್ಲಿ ಸುಮಾರು 13 ಲಕ್ಷ ಜನರು ವಾಸವಾಗಿದ್ದು ಪ್ರವಾಸೋದ್ಯಮಕ್ಕೆ ಹೆಸರಾಗಿದೆ. 1968 ರಲ್ಲಿ ಈ ದೇಶ ಬ್ರಿಟನ್ ನಿಂದ ಸ್ವತಂತ್ರಗೊಂಡಿದೆ. ಈ ದೇಶದಲ್ಲಿ ಸೈನ್ಯವಿಲ್ಲ.

ಮೋನೆಕೊ ಎಂಬ ದೇಶದಲ್ಲಿಯೂ ಸೈನ್ಯವಿಲ್ಲ. ಮೋನೆಕೊ ದೇಶ ಜಗತ್ತಿನ ಅತಿ ಚಿಕ್ಕ ರಾಷ್ಟ್ರಗಳಲ್ಲಿ ಎರಡನೇ ಚಿಕ್ಕ ರಾಷ್ಟ್ರವಾಗಿದೆ. ಈ ದೇಶದಲ್ಲಿ 31,000 ಜನರಿದ್ದಾರೆ, ಇಲ್ಲಿನ ಮಿಲಿಟರಿ ಅಗತ್ಯಗಳನ್ನು ಫ್ರಾನ್ಸ್ ಪೂರೈಸುತ್ತದೆ. ಈ ದೇಶದಲ್ಲಿ ಪೊಲೀಸ್ ಫೋರ್ಸ್ ಇದ್ದು ಕಾನೂನು ನಿಯಮಗಳನ್ನು ರಕ್ಷಿಸುತ್ತದೆ. ಆಸ್ಟ್ರೇಲಿಯಾದ ಸಮೀಪವಿರುವ ನವೂರು ಎಂಬ ದೇಶದಲ್ಲಿಯೂ ಸೈನ್ಯವಿಲ್ಲ. ಇದು 1968 ರಲ್ಲಿ ಸ್ವತಂತ್ರವಾಯಿತು. ಎರಡನೆ ಮಹಾಯುದ್ಧದ ನಂತರ ವಿಶ್ವಸಂಸ್ಥೆಯ ಅತಿ ನಂಬಿಗಸ್ತ ರಾಷ್ಟ್ರವಾಗಿ ಹೊರಹೊಮ್ಮಿತು.

ಈ ದೇಶದ ಮಿಲಿಟರಿ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ಆಸ್ಟ್ರೇಲಿಯಾ ದೇಶಕ್ಕಿದೆ. ಮಧ್ಯ ಅಮೆರಿಕದ ಪನಾಮಾ ದೇಶದಲ್ಲಿ 1998 ರಲ್ಲಿ ಮಿಲಿಟರಿಯನ್ನು ವಿಸರ್ಜಿಸಲಾಗಿದೆ. ಪನಾಮ ದೇಶದಲ್ಲಿ ಕೇವಲ ಪೋಲಿಸ್ ಸೆಕ್ಯೂರಿಟಿ ವಾಯುಪಡೆ ಇದೆ. ಸ್ಯಾನ್ ಮರಿನೊ ದೇಶದಲ್ಲಿಯೂ ಸೈನ್ಯವಿಲ್ಲ ಈ ದೇಶ ಜಗತ್ತಿನ ಪುರಾತನ ಗಣರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುರೋಪ್ ನಲ್ಲಿರುವ ಅತಿ ಚಿಕ್ಕ ರಾಷ್ಟ್ರಗಳಲ್ಲಿ ಇದು ಮೂರನೆ ಸ್ಥಾನ ಪಡೆದಿದೆ. ಈ ದೇಶದ ಮಿಲಿಟರಿ ಅಗತ್ಯಗಳನ್ನು ಇಟಲಿ ಪೂರೈಸುತ್ತದೆ. ಜಗತ್ತಿನ ಚಿಕ್ಕ ರಾಷ್ಟ್ರಗಳಲ್ಲಿ ಒಂದು ರಾಷ್ಟ್ರವಾದ ಟುವಾಲು ದೇಶದಲ್ಲಿ ಸೈನ್ಯವಿಲ್ಲ. ಈ ದೇಶದ ಮಿಲಿಟರಿ ಅಗತ್ಯಗಳನ್ನು ಬ್ರಿಟನ್ ಪೂರೈಸುತ್ತದೆ. ಈ ದೇಶದಲ್ಲಿ 11,000 ಜನರಿದ್ದು ಪೊಲೀಸ್ ಫೋರ್ಸ್ ಇದೆ.

ಸೋಲೋಮನ್ ದೇಶದಲ್ಲಿಯೂ ಸೈನ್ಯವಿಲ್ಲ. ಈ ದ್ವೀಪರಾಷ್ಟ್ರ ಆರು ದ್ವೀಪಗಳನ್ನು ಹೊಂದಿದೆ, ಇಲ್ಲಿ ಆರೂವರೆ ಲಕ್ಷ ಜನರು ವಾಸವಾಗಿದ್ದಾರೆ, ಇಲ್ಲಿ ಪೊಲೀಸ್ ಪಡೆ ಮಾತ್ರ ಇದೆ. ನ್ಯೂಜಿಲೆಂಡ್ ಪಕ್ಕದಲ್ಲಿರುವ ಸೊಮಹ, ಸೇಂಟ್ ಲೂಸಿಯಾ, ಗ್ರೆನಡಾ, ಮೈಕ್ರೋನೇಷಿಯಾ, ಕಿರಿಬಸ್, ಫ್ರೆಂಚ್ ಪೊಲನೇಷಿಯಾ ದೇಶಗಳಲ್ಲಿ ಸೇನಾಪಡೆಗಳು ಇಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಪತ್ತೆ ಹಚ್ಚಿದೆ. ಈ ದೇಶಗಳ ಪೈಕಿ 16 ದೇಶಗಳಲ್ಲಿ ಪೋಲಿಸ್ ಪಡೆಯು ಇಲ್ಲ. ಈ ದೇಶಗಳಲ್ಲಿ ಆದಾಯವನ್ನು ಸಂಪೂರ್ಣವಾಗಿ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬಹುದು. ಜಗತ್ತಿನ ಎಲ್ಲ ರಾಷ್ಟ್ರಗಳು ಮಿಲಿಟರಿ, ಸೇನೆ, ಯುದ್ಧವಿಲ್ಲದೆ ಇದ್ದರೆ ಜಗತ್ತು ಸುಂದರವಾಗಿರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!