ಈ ಭೂಮಿಯ ಮೇಲಿರುವ ಸಸ್ಯರಾಶಿಗಳಲ್ಲಿ ಪ್ರತಿಯೊಂದು ಸಸ್ಯಗಳು ಒಂದೊಂದು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಹಾಗೆಯೇ ಎಲ್ಲಾ ಸಸ್ಯಗಳೂ ಸಸ್ಯರಾಶಿಯ ಗುಂಪು ಸೇರಿದರೂ ಕೂಡ ಒಂದೇ ರೀತಿಯ ಗುಣಲಕ್ಷಣಗಳನ್ನು ಮತ್ತು ಔಷಧೀಯ ಗುಣಗಳನ್ನು ಹೊಂದಿರುವುದಿಲ್ಲ. ನಿತ್ಯಪುಷ್ಪ ಗಿಡವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದ್ದರಿಂದ ನಾವು ಇಲ್ಲಿ ಇದರ ಔಷಧೀಯ ಗುಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಿತ್ಯಪುಷ್ಪ ಗಿಡ ಇದು ವರ್ಷದಲ್ಲಿ 365 ದಿನವೂ ಹೂವನ್ನು ಬಿಡುತ್ತದೆ. ಆದ್ದರಿಂದ ಇದನ್ನು ನಿತ್ಯಪುಷ್ಪ ಎಂದು ಕರೆಯುತ್ತಾರೆ. ಹಾಗೆಯೇ ಇದರಲ್ಲಿ ಹಲವಾರು ವಿಧದ ಬಣ್ಣಗಳು ಇವೆ. ಹಾಗೆಯೇ ಇದರ ಎಲೆಯಿಂದ ಹಲವಾರು ಪ್ರಯೋಜನಗಳು ಇವೆ. ಇದರ ಎಲೆಯನ್ನು ಬೆಳಿಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಶುಗರ್ ಇರುವವರು ತಮ್ಮ ಶುಗರ್ ಲೆವೆಲ್ ನ್ನು ಸಮಪ್ರಮಾಣದಲ್ಲಿ ಇಟ್ಟುಕೊಳ್ಳಬಹುದು. ಹಾಗೆಯೇ ಈ ಎಲೆಯನ್ನು ಒಣಗಿಸಿ ಆ ಪುಡಿಯನ್ನು ಬೆಳಿಗ್ಗೆ ಒಂದು ಲೋಟ ನೀರಿಗೆ ಹಾಕಿ ಕುದಿಸಬೇಕು. ಅರ್ಧ ಲೋಟ ಆದ ನಂತರ ಹಸಿದ ಹೊಟ್ಟೆಯಲ್ಲಿ ಕುಡಿಯಬೇಕು.

ಇದರಿಂದ ಶುಗರ್ ಲೆವೆಲ್ ಸರಿಯಾಗಿ ಇರುತ್ತದೆ. ಹಾಗೆಯೇ ಬಿಳಿಕೂದಲು ಇರುವವರು ಅಥವಾ ಕೂದಲು ಉದುರುವವರು ಇದನ್ನು ಒಂದು ವಿಧಾನದಿಂದ ಬಳಸಿದರೆ ಕೂದಲು ಉದುರುವುದು ಮತ್ತು ಬಿಳಿಕೂದಲು ಇರುವುದು ಕಪ್ಪು ಬಣ್ಣವಾಗುತ್ತದೆ. ಮೊದಲು ಇದರ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದುಕೊಂಡು ಕುಟ್ಟಾಣಿಯಲ್ಲಿ ಜಜ್ಜಬೇಕು. ನಂತರ ಅದು ಚೆನ್ನಾಗಿ ಜಜ್ಜಿದ ಮೇಲೆ ಅದನ್ನು ಒಂದು ಬಟ್ಟೆಯಲ್ಲಿ ಹಾಕಿಕೊಂಡು ಸೋಸಿಕೊಳ್ಳಬೇಕು. ಆ ಸೋಸಿಕೊಂಡ ರಸಕ್ಕೆ ಒಂದು ಚಮಚ ಅಲೋವೆರಾ ಜೆಲ್ ನ್ನು ಹಾಕಬೇಕು.

ನಂತರ ಅದಕ್ಕೆ ಮನೆಯಲ್ಲಿ ಮಾಡಿಟ್ಟುಕೊಂಡ ಅಥವಾ ಅಂಗಡಿಯಲ್ಲಿ ತೆಗೆದುಕೊಂಡ ನೆಲ್ಲಿಕಾಯಿ ಎಣ್ಣೆಯನ್ನು ಒಂದು ಚಮಚ ಹಾಕಬೇಕು. ನಂತರ ಅದಕ್ಕೆ ಒಂದು ಚಮಚ ಕ್ಯಾಸ್ಟ್ರೋಲ್ ಹಾಕಬೇಕು. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆ ಬಿಟ್ಟು ತಲೆಗೆ ಹಚ್ಚಬೇಕು. ಹಾಗೆಯೇ ಹೆಚ್ಚಾಗಿ ಮೊಡವೆ ಆದವರು ಈ ಎಲೆಯ ಪೇಸ್ಟ್ ಮಾಡಿ ದಿನಕ್ಕೆ ಎರಡು ಬಾರಿ ಮುಖಕ್ಕೆ ಹಚ್ಚಬೇಕು. ಬಿದ್ದು ಗಾಯಗಳು ಆದಾಗ ಇದರ ರಸವನ್ನು ಹಚ್ಚಬೇಕು. ಹಾಗೆಯೇ ಹೆಚ್ಚಿನ ಬಿಪಿ ಇರುವವರು ಬೆಳಿಗ್ಗೆ ಎದ್ದ ತಕ್ಷಣ ಎರಡು ಎಲೆಯನ್ನು ತಿನ್ನಬೇಕು. ಇದರಿಂದ ಬಿಪಿ ಸರಿಯಾದ ಪ್ರಮಾಣದಲ್ಲಿ ಇರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!