ಯಾವ ವ್ಯಕ್ತಿಯ ಯೋಚನೆಗಳು ಮತ್ತು ಆಲೋಚನೆಗಳು ದೊಡ್ಡದಿದ್ದಲ್ಲಿ ಮತ್ತು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲವಿದ್ದರೆ ಆತನಿಗೆ ಆತನ ವರ್ತಮಾನದ ಸಮಯ ಮತ್ತು ಪರಿಸ್ಥಿತಿ ಹೇಗೆ ಇರಲಿ ಆತ ತನ್ನ ಗುರಿಯನ್ನು ಮುಟ್ಟುತ್ತಾನೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಅದು ನಿರ್ಮಾ ಗ್ರೂಪ್ ನ ಸಂಸ್ಥಾಪಕರಾದ ಕರ್ಸನ್ ಬಾಯ್ ಪಟೇಲ್.
ಇವರು ಒಂದು ಕಾಲದಲ್ಲಿ ಡಿಟರ್ಜೆಂಟ್ ಗಳನ್ನು ಮನೆಮನೆಗೆ ಹೋಗಿ ಮಾರುತ್ತಿದ್ದರು. ಆದರೆ ಇಂದು ಅವರ ಒಟ್ಟು ಆಸ್ತಿ12,000ಕೋಟಿ ಆಗಿದೆ.ಇವರು ಏಪ್ರಿಲ್ 13 1944ರಂದು ಗುಜರಾತಿನಲ್ಲಿ ಜನಿಸಿದರು. ನಂತರ ಇವರು ರಸಾಯನ ಶಾಸ್ತ್ರದಲ್ಲಿ ತಮ್ಮ BSC ಡಿಗ್ರಿಯನ್ನು ಮುಗಿಸುತ್ತಾರೆ. ಇದರ ನಂತರ ಗುಜರಾತ್ ನ ಅಹಮದಾಬಾದ್ ನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಸರ್ಕಾರಿ ನೌಕರಿ ಸಿಗುತ್ತದೆ. ಆದರೆ ಇವರಿಗೆ ಸಂತೋಷ ಇರುವುದಿಲ್ಲ ಏನಾದರೂ ಮಾಡಬೇಕು ಎಂಬ ಆಲೋಚನೆ ಮಾಡುತ್ತಿರುತ್ತಾರೆ.ಒಂದು ದಿನ ಏಕೆ ಕಡಿಮೆ ಬೆಲೆಯಲ್ಲಿ ಒಳ್ಳೆ ಕ್ವಾಲಿಟಿಯ ಡಿಟರ್ಜೆಂಟ್ ತಯಾರಿಸಬಾರದು ಎಂದು.
ತಮ್ಮ BSC ಕೆಮಿಸ್ಟ್ರಿಯ ಮತ್ತು ಲ್ಯಾಬ್ ನ ಸಹಾಯದಿಂದ ಒಂದು ಡಿಟರ್ಜೆಂಟ್ ತಯಾರಿಸಿ ತಮ್ಮ ಮನೆಯಲ್ಲಿ ಪ್ರಯೋಗಿಸುತ್ತಾರೆ. ಕ್ವಾಲಿಟಿ ತುಂಬಾ ಚೆನ್ನಾಗಿ ಇರುತ್ತದೆ. ತಮ್ಮ ಮನೆಯ ಹಿತ್ತಲಿನಲ್ಲಿ ಇದನ್ನು ತಯಾರಿಸಲು ಶುರು ಮಾಡುತ್ತಾರೆ. ಇದನ್ನು ಪ್ಲಾಸ್ಟಿಕ್ ನಲ್ಲಿ ತುಂಬಿ ಆಫೀಸ್ ಗೆ ಹೋಗುವಾಗ ಮನೆಮನೆಗಳಿಗೆ, ದಾರಿಯಲ್ಲಿ ಸಿಗುವವರಿಗೆ “ಒಂದು ಸಾರಿ ಬಳಸಿ ನೋಡಿ” ಎನ್ನುತ್ತಾರೆ. ಆಗ ಸಿಗುವ ಡಿಟರ್ಜೆಂಟ್ ಬೆಲೆ ಕೆ.ಜಿಗೆ 13ರೂಪಾಯಿಗಳು. ಆದರೆ ಇವರು 3ರೂಗಳಿಗೆ ಮಾರುತ್ತಾರೆ. ನಂತರ ಇದನ್ನು ಎಲ್ಲರೂ ಇಷ್ಟ ಪಡುತ್ತಾರೆ.
ನಂತರ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಾಗ ಅವರು ತಮ್ಮ ಕೆಲಸಕ್ಕೆ ರಿಸೈನ್ ಮಾಡಿ ಒಂದು ಫ್ಯಾಕ್ಟರಿಯನ್ನು ಆರಂಭಿಸಿ ಕಾರ್ಮಿಕರನ್ನು ಸೇರಿಸಿಕೊಂಡು ತಮ್ಮ ತೀರಿ ಹೋದ ಮಗಳ ಹೆಸರಿನಲ್ಲಿ ಅಂದರೆ “ನಿರ್ಮಾ” ಎಂಬ ಹೆಸರಿನಲ್ಲಿ ಮಾರಾಟ ಮಾಡಲು ಶುರು ಮಾಡುತ್ತಾರೆ. ಇವರ ಕಂಪನಿ ಮೇಲಕ್ಕೆ ಹೋಗುತ್ತದೆ.
ಆಗ ತಾನೇ ಭಾರತದಲ್ಲಿ ದೂರದರ್ಶನ ಬರುತ್ತಿತ್ತು. ಇವರಿಗೆ ಸರಿಯಾಗಿ ಹಣ ಬರುತ್ತಿರಲಿಲ್ಲ. ಇದಕ್ಕಾಗಿ ದೂರದರ್ಶನದಲ್ಲಿ ಜಾಹೀರಾತು ನೀಡುತ್ತಾರೆ. ಗ್ರಾಹಕರು ಇದನ್ನು ಬಿಟ್ಟು ಬೇರೆಯದನ್ನು ಹಿಡಿಯುತ್ತಿರಲಿಲ್ಲ ಅಷ್ಟು ಬೇಡಿಕೆ ಹೆಚ್ಚಾಯಿತು. 2000ಇಸವಿಯಲ್ಲಿ ಇದು ದೊಡ್ಡ ಬ್ರಾಂಡ್ ಆಗಿ ಹೊರಹೊಮ್ಮುತ್ತದೆ. ಅದರ ಬೆಲೆ12,000 ಕೋಟಿಗಿಂತಲೂ ಹೆಚ್ಚಿನ ಮೌಲ್ಯ. ಮನುಷ್ಯ ತಾನು ಏನನ್ನು ಬಯಸುತ್ತಾನೋ ಅದನ್ನು ಮಾಡಬಹುದು. ನಮ್ಮಲ್ಲಿ ಅದನ್ನು ಮಾಡುವಂತಹ ಛಲ ಇರಬೇಕು ಅಷ್ಟೇ