ಮನೆಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು, ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ವರ್ತಮಾನ ಕಾಲದಲ್ಲಿ ಮನೆಯ ಪರಿಕಲ್ಪನೆ ಉಪಯುಕ್ತತೆ, ಸೌಂದರ್ಯ ಹಾಗೂ ಭದ್ರತೆ ಎಂಬ ಮೂರು ಮುಖ್ಯ ಗುಣಗಳಿಂದ ರೂಪಿತವಾಗಿದೆ.ಆದ್ದರಿಂದ ನಾವು ಇಲ್ಲಿ ರೈತರು ಹೇಗೆ ಚಿಕ್ಕದಾಗಿ ಮತ್ತು ಸಣ್ಣ ಮೌಲ್ಯದಲ್ಲಿ ಮನೆಯನ್ನು ಕಟ್ಟಬಹುದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಪ್ರತಿಯೊಬ್ಬ ರೈತನೂ ಒಳ್ಳೆಯ ಅನುಕೂಲವನ್ನು ಹೊಂದಿರುವುದಿಲ್ಲ. ಏಕೆಂದರೆ ಜಮೀನು ಕೆಲವೊಬ್ಬರಿಗೆ ಕಡಿಮೆ ಇರುತ್ತದೆ. ಹಾಗೆಯೇ ಕೆಲವೊಬ್ಬರಿಗೆ ಜಮೀನು ಜಾಸ್ತಿ ಇದ್ದರೂ ಕೂಡ ಸಂಸಾರ ದೊಡ್ಡದಾಗಿರುತ್ತದೆ. ಹಾಗೆಯೇ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲ. ಕೆಲವೊಬ್ಬರಿಗೆ ಅವರ ಪಿತ್ರಾರ್ಜಿತವಾಗಿ ಆರ್ಥಿಕತೆ ಚೆನ್ನಾಗಿ ದೊರಕಿರುತ್ತದೆ. ಇಂತಹವರಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಆದರೆ ಕೆಲವೊಬ್ಬರಿಗೆ ಅವರ ದುಡಿಮೆಯೇ ಅವರ ಜೀವನ ನಡೆಸುವಂತಿರುತ್ತದೆ.
ಪ್ರತಿಯೊಬ್ಬರೂ ಅವರ ಆದಾಯದ ಮೇಲೆ ಮತ್ತು ಮನೆ ನಿರ್ಮಾಣ ಮಾಡಲು ಅವರ ಬಜೆಟ್ ನ ಮೇಲೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ಬಡವರು ವಾಸಿಸಲು ಯೋಗ್ಯವಾದ ಕಡಿಮೆ ಖರ್ಚಿನಲ್ಲಿ ಮನೆಯನ್ನು ಕೂಡ ನಿರ್ಮಾಣ ಮಾಡಿಕೊಳ್ಳುತ್ತಾರೆ. ಸಾದಾ ಸಿಂಗಲ್ ಫ್ಲೋರ್ ಮನೆಯನ್ನು ಯಾವುದೇ ಆಡಂಬರವಿಲ್ಲದೆ ನಿರ್ಮಾಣ ಮಾಡುವುದರಿಂದ ಮನೆ ನಿರ್ಮಾಣದ ಖರ್ಚಿನಲ್ಲಿ ಉಳಿತಾಯವಾಗುತ್ತದೆ. ಮನೆಯ ಒಳಗಡೆ ಪ್ರವೇಶ ಮಾಡಿದಾಗ ಮೊದಲು ಹೊರ ಜಗುಲಿ ದೊರಕುತ್ತದೆ. ಇದನ್ನು ಕುಳಿತುಕೊಳ್ಳಲು ಯೋಗ್ಯವಾಗುವ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಕೊಳ್ಳಬೇಕು.
ಮನೆಯ ರೂಮುಗಳಿಗೆ ಯಾವುದೇ ಅಟ್ಯಾಚ್ ಬಾತ್ರೂಮ್ ವ್ಯವಸ್ಥೆಯನ್ನು ನೀಡದೆ ಇಡೀ ಮನೆಗೆ ಒಂದೇ ಬಾತ್ರೂಮ್ ವ್ಯವಸ್ಥೆಯನ್ನು ಮಾಡಿಸಬೇಕು. ಇದರಿಂದ ದುಡ್ಡಿನ ವ್ಯಯವಾಗುವುದು ಕಡಿಮೆಯಾಗುತ್ತದೆ. ಅಂತೆಯೇ ಕಿಚನ್ ನನ್ನು ಕೂಡ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳಬಹುದು. ಅಡಿಗೆ ಮಾಡಲು ಯೋಗ್ಯವಾದ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಕೊಂಡರೆ ತುಂಬಾ ಹಣದ ವ್ಯಯವು ಇದರಲ್ಲಿ ಉಳಿಯುತ್ತದೆ. ಹೀಗೆ ಒಂದು ಮನೆಯನ್ನು ಕಡಿಮೆ ಖರ್ಚಿನಲ್ಲಿ ಉಳಿಯಲು ಯೋಗ್ಯವಾದ ರೀತಿಯಲ್ಲಿ ನಿರ್ಮಾಣ ಮಾಡಿಕೊಳ್ಳಬಹುದು.