ರೈತನು ಬೇಸಾಯಮಾಡುವ ಜಮೀನಿನ ಮಾಲೀಕನಾಗಿರಬಹುದು ಅಥವಾ ಇತರರು ಒಡೆಯರಾಗಿರುವ ಜಮೀನಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬಹುದು. ಆದರೆ ಮುಂದುವರಿದ ಅರ್ಥವ್ಯವಸ್ಥೆಗಳಲ್ಲಿ, ರೈತನು ಸಾಮಾನ್ಯವಾಗಿ ಜಮೀನಿನ ಒಡೆಯನಾಗಿರುತ್ತಾನೆ. ಜಮೀನಿನ ಉದ್ಯೋಗಿಗಳನ್ನು ಜಮೀನು ಕಾರ್ಮಿಕರು, ಅಥವಾ ಆರಂಬದಾಳುಗಳೆಂದು ಕರೆಯಲಾಗುತ್ತದೆ. ಆದರೆ ಸ್ವಲ್ಪ ಕಾಲದ ಹಿಂದಿನವರೆಗೂ ರೈತನು ಪರಿಶ್ರಮ ಮತ್ತು ಗಮನದಿಂದ ಸಸ್ಯ, ಬೆಳೆ ಇತ್ಯಾದಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತಾ ಹೋದನು. ಆದ್ದರಿಂದ ನಾವು ಇಲ್ಲಿ ರೈತನ ಅಭಿವೃದ್ಧಿಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಮ್ಮದು ರೈತಾಪಿ ದೇಶ. ರೈತ ಬೆಳೆದರೆ ನಮಗೆ ಒಂದು ತುತ್ತಿನ ಊಟ ಸಿಗುತ್ತದೆ. ಇಂತಹ ಪರಿಸ್ಥಿತಿ ಇರುವಾಗ ಹಳ್ಳಿಗರು ವ್ಯವಸಾಯವನ್ನು ಬಿಟ್ಟು ಪಟ್ಟಣ ಸೇರಿದ್ದಾರೆ. ಇಂದಿನ ಯುವ ರೈತರಿಗೆ ವ್ಯವಸಾಯದ ಬಗ್ಗೆ ಮಾಹಿತಿ ಇಲ್ಲದೆ ಇರುವುದು ಮುಖ್ಯ ಕಾರಣವಾಗಿದೆ. ಜೊತೆಗೆ ಅವರ ಬೆಳೆಗೆ ಪ್ರೋತ್ಸಾಹ ಇಲ್ಲದೆ ಇರುವುದು, ಕಷ್ಟಪಟ್ಟು ದುಡಿದರೂ ಅದರ ಬೆಲೆ ಇಲ್ಲದ್ದಾಗ ಪ್ರತಿಯೊಬ್ಬರಿಗೂ ಜಿಗುಪ್ಸೆ ಬರುವುದು ಸಹಜ. ಅದಕ್ಕೆ ರಾಜಕಾರಣಿಗಳು ಮುಖ್ಯ ಕಾರಣರಾಗಿರುತ್ತಾರೆ. ಕೃಷಿಕರಿಗೆ ಉತ್ತಮ ಪ್ರೋತ್ಸಾಹ ನೀಡಿದ್ದರೆ ನಮ್ಮ ದೇಶ ಎಂದೋ ಉದ್ದಾರವಾಗುತ್ತಿತ್ತು. ಕೃಷಿಯನ್ನು ನಿರ್ವಹಿಸಲು ಹಣದ ಅವಶ್ಯಕತೆಯು ಕೂಡ ಇರುತ್ತದೆ. ಹಣ ಇರುವವರು ಕೃಷಿಯನ್ನು ನಿಭಾಯಿಸಿಕೊಂಡು ಲಾಭವನ್ನು ಪಡೆಯುತ್ತಾರೆ.

ಆದರೆ ಹಣವಿಲ್ಲದೇ ಕೃಷಿ ಮಾಡುವುದು ತುಂಬಾ ಕಷ್ಟಕರವಾದ ಸಂಗತಿಯಾಗಿದೆ. ತುಂಬಾ ನಷ್ಟವನ್ನು ಅನುಭವಿಸಿದ ರೈತರಿಗೆ ಶ್ರೀಮಂತರಾಗುವ ಬಗೆಯನ್ನು ಖ್ಯಾತ ಹಣಕಾಸು ತಜ್ಞರಾದ ಸಿಎಸ್ ಸುಧೀರ್ ಅವರು ಕೆಲವು ಟಿಪ್ಸ್ ಗಳನ್ನು ನೀಡಿದ್ದಾರೆ. ಅದೇನೆಂದರೆ ರೈತರು ಕೃಷಿಯಲ್ಲಿ ಪಡೆಯುವ ಆದಾಯವು ಹೆಚ್ಚಾಗಿ ಅವರ ವೆಚ್ಚಕ್ಕಿಂತ ಕಡಿಮೆ ಯಾಗಿರುತ್ತದೆ. ಇದಕ್ಕೆ ಮೂಲಕಾರಣ ಆ ರೈತನಿಗೆ ತಮ್ಮ ಜಮೀನನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಮತ್ತು ಜಮೀನಿಗೆ ನಾವು ಮಾಡುವ ವೆಚ್ಚವು ಬಹುಮುಖ ರೀತಿಯಲ್ಲಿ ಪ್ರಯೋಜನವನ್ನು ನೀಡುವಂತೆ ಯೋಜನೆ ಮಾಡಿಕೊಳ್ಳಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ ಇರುವುದಾಗಿದೆ.

ದೊಡ್ಡ ಪ್ರಮಾಣದ ಜಮೀನು ಇದ್ದವರು ಜಮೀನಿನಲ್ಲಿ ಕೆರೆ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ. ಇದರಿಂದ ಅನೇಕ ಪ್ರಯೋಜನಗಳು ಕೂಡ ದೊರಕುತ್ತದೆ. ಕೃಷಿ ಜಮೀನಿಗೆ ಬ್ಯಾಂಕಿನಿಂದ ಡೆವಲಪ್ಮೆಂಟ್ ಲೋನ್ ಗಳು ದೊರಕುತ್ತವೆ. ಅದನ್ನು ಪಡೆದು ಸರಿಯಾಗಿ ಜಮೀನಿಗೆ ಹೂಡಿಕೆ ಮಾಡಿ ಲಾಭವನ್ನು ಪಡೆದುಕೊಳ್ಳಬಹುದು. ಪ್ರತಿಯೊಬ್ಬ ಕೃಷಿಕನೂ ಕೃಷಿ ಭೂಮಿಗೆ ಬಂಡವಾಳವನ್ನು ಸರಿಯಾದ ರೀತಿಯಲ್ಲಿ ಹಾಕಿದಾಗ ಉತ್ಪನ್ನಗಳು ಸರಿಯಾಗಿ ದೊರಕುತ್ತದೆ. ಹಾಗೆಯೇ ಲಾಭಗಳು ಕೂಡ ದೊರಕುತ್ತವೆ ಎಂದು ಸರಿಯಾದ ಮಾರ್ಗದರ್ಶನವನ್ನು ಕೃಷಿಕರಿಗೆ ನೀಡಿದ್ದಾರೆ.

Leave a Reply

Your email address will not be published. Required fields are marked *