New Home construction: ಕೇವಲ 17 ಲಕ್ಷದಲ್ಲಿ ಸುಂದವಾದ ಡುಪ್ಲೆಕ್ಸ್ ಮನೆ ಕಟ್ಟಬೇಕು ಅನ್ನೋರಿಗಾಗಿ ಈ ಮಾಹಿತಿ

0 46

New Home construction 2023 ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ (Owen House) ಮನೆಯಲ್ಲಿ ವಾಸಿಸಬೇಕು ಎಂಬ ಆಸೆ ಇರುತ್ತದೆ ಇದು ಎಲ್ಲರೂ ಆಸೆ ಪಡುವ ಒಂದು ಮೂಲಭೂತ ಅವಶ್ಯಕತೆಯಾಗಿದೆ ಇತ್ತೀಚಿನ ದಿನಗಳಲ್ಲಿ ಅಂತೂ ಮನೆಯನ್ನು ನಿರ್ಮಿಸುವುದು ಕೂಡ ಕೆಲವರಿಗೆ ಪ್ರತಿಷ್ಠೆಯ ರೂಪವಾಗಿ ತೋರುತ್ತಿದೆ ಆದರೆ ಕೆಲವರಿಗೆ ಮನೆ ಕಟ್ಟಿಕೊಳ್ಳುವಷ್ಟು ಹಣ ಇರುವುದಿಲ್ಲ ಆದರೂ ಹೇಗೋ ಮಾಡಿ ತಮ್ಮದೇ ಆದ ಪುಟ್ಟದೊಂದು ಮನೆಯನ್ನು ನಿರ್ಮಿಸಲು ಕನಸನ್ನ ಕಾಣುತ್ತಾರೆ ಅಂತಹ ಜನರಿಗೆ ಸಹಾಯವಾಗಲೆಂದೇ ಅನೇಕ ಏಜೆಂಟ್ (Agent Company) ಕಂಪನಿಗಳು ಇರುತ್ತವೆ ಇವುಗಳ ಮೂಲಕ ಜನರು ಮನೆಯನ್ನ ನಿರ್ಮಿಸುವಂತಹ ತಮ್ಮ ಕನಸುಗಳನ್ನು ನೆರವೇರಿಸಿಕೊಳ್ಳಬಹುದು ಕಡಿಮೆ ಬಜೆಟ್ ನಲ್ಲಿ ಒಂದು ಒಳ್ಳೆಯ ಮನೆಯನ್ನ ಕಟ್ಟಿಸಿಕೊಳ್ಳಬೇಕು ಎಂದಾದರೆ ಅಂತಹ ಜನರಿಗೆ ಇಲ್ಲಿ ಕೆಲವೊಂದು ಟಿಪ್ಸ್ ಗಳು ನಾವು ನೋಡಬಹುದು.

ಮನೆ ಎಂದರೆ ಅದು ಚಿಕ್ಕದಾಗಿ ಚೊಕ್ಕದಾಗಿ ನೋಡುಗರಿಗೆ ಆಕರ್ಷಣೀಯವಾಗಿರಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಆಸೆ ಆಗಿರುತ್ತದೆ ಅದಕ್ಕೆ ತಕ್ಕಂತೆ ಬರೀ ಕನ್ಸ್ಟ್ರಕ್ಷನ್ (Construction) ಮಾತ್ರವಲ್ಲದೇ ಇಂಟೀರಿಯರ್ ಡಿಸೈನಿಂಗ್ (Designing) ವಾಟರ್ ಕನೆಕ್ಷನ್ ವಿದ್ಯುತ್ ಕನೆಕ್ಷನ್ ಮನೆಯ ಫರ್ನಿಚರ್ಸ್ ಎಲೆಕ್ಟ್ರಾನಿಕ್ ಉಪಕರಣಗಳು ಅಲಂಕಾರಿಕ ವಸ್ತುಗಳು ಹೀಗೆ ಇತ್ಯಾದಿ ಉಪಕರಣಗಳು ಸೇರಿರುತ್ತವೆ ಈ ಎಲ್ಲಾ ಅಂಶಗಳನ್ನು ಸೇರಿಸಿಕೊಂಡು ಸುಂದರವಾದ ಮನೆಯನ್ನು ನಿರ್ಮಿಸಬಹುದು.

ಮನೆಯನ್ನು ನಿರ್ಮಾಣ ಮಾಡಲು ಯೋಜನೆಯನ್ನು ನಡೆಸುವಾಗಲೇ ಖರ್ಚಾಗುವ ಹಣದ ಬಗ್ಗೆ ಐಡಿಯಾ ಹೊಂದಿರಬೇಕು ಇಲ್ಲವಾದರೆ ಸಾಲಕ್ಕೆ ಮೊರೆ ಹೋಗಬೇಕಾಗುತ್ತದೆ ಒಂದು ವೇಳೆ ನೀವು ಮನೆ ಕಟ್ಟುವವರ ಬಳಿ ನಿಮಗಿರುವ ಸೈಟಿನ ವಿಸ್ತೀರ್ಣವನ್ನು ಹೇಳಿ ಎಸ್ಟಿಮೇಟ್ ಕೇಳಿದಾಗ ಅದನ್ನ ವಹಿಸಿಕೊಳ್ಳುವವರು ಕೇವಲ ಕಟ್ಟಡ ಕಾರ್ಯಕ್ಕೆ ಆಗುವ ಲೆಕ್ಕಾಚಾರದ ಬಗ್ಗೆ ಮಾತ್ರ ನಿಮಗೆ ವಿವರಿಸುತ್ತಾರೆ ಇದನ್ನ ಹೊರತುಪಡಿಸಿ ಉಳಿದ ಖರ್ಚುಗಳ ಬಗ್ಗೆ ಅವರು ಲೆಕ್ಕಾಚಾರ ನೀಡುವುದಿಲ್ಲ ಅದಕ್ಕಾಗಿ ಸ್ವಲ್ಪ ವಿಚಾರ ಮಾಡಿ ಎಲ್ಲಾ ರೀತಿಯಲ್ಲಿಯೂ ನಮ್ಮ ಕಾರ್ಯವನ್ನ ಸುಲಭವಾಗಿಸಿಕೊಳ್ಳುವುದು ಉತ್ತಮ.

ಇದರ ಜೊತೆಗೆ ಒಂದೇ ಬಾರಿ ಮನೆಯನ್ನು ಸರಿಯಾದ ಕ್ರಮದಲ್ಲಿ ವಿನ್ಯಾಸ ಮಾಡಿ ಮುಗಿಸಬೇಕು ಪದೇ ಪದೇ ಮನೆಯ ವಿನ್ಯಾಸ ಬದಲಾಯಿಸುವ ಅಥವಾ ಮನೆಯನ್ನು ಮತ್ತೆ ಕಟ್ಟುವ ಅವಕಾಶಗಳು ಈಗಿನ ಕಾಲದ ಕರ್ಜಿನಲ್ಲಿ ಅಸಾಧ್ಯದ ಮಾತು ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಮನೆಯನ್ನು ಕಟ್ಟಿಸಿ ಕೊಡುತ್ತೇವೆ ಎಂದು ಹೇಳಿ ಮೋಸ ಮಾಡುವವರೇ ಜಾಸ್ತಿ ಇಂತಹ ಮೋಸಗಳಿಗೆ ಒಳಗಾಗದೆ ಸರಿಯಾದ ರೀತಿಯಲ್ಲಿ ಯೋಚಿಸಿ ಒಳ್ಳೆಯ ಕಾಂಟ್ರಾಕ್ಟರ್ ಸಂಪರ್ಕಿಸಿ ಮನೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಬೇಕು. ಇದನ್ನೂ ಓದಿ..ಉಡುಪಿಯಲ್ಲಿದೆ ಹೊಸ ರೀತಿಯ ಗೃಹ ನಿರ್ಮಾಣ ಕಡಿಮೆ ಬೆಲೆ ಇದರ ಕುರಿತು ಸಂಪೂರ್ಣ ಮಾಹಿತಿ

Leave A Reply

Your email address will not be published.