ಬಳಹಳಸ್ಟು ಜನಕ್ಕೆ ಈ ಹಣ್ಣು ಚಿರಪರಿಚಿತವಾಗಿರುತ್ತದೆ ಈ ಹಣ್ಣನ್ನು ನೇರಳೆ ಹಣ್ಣು ಎಂಬುದಾಗಿ ಕರೆಯಲಾಗುತ್ತದೆ, ಇದು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ನೀಡುವಂತ ಈ ಹಣ್ಣು ದೊಡ್ಡ ದೊಡ್ಡ ಮಾರಕ ಕಾಯಿಲೆಗಳನ್ನು ನಿಯಂತ್ರಿಸುವಂತ ಔಷದಿ ಗುಣಗಳನ್ನು ಹೊಂದಿದೆ.
ಈ ಹಣ್ಣು ನೋಡಲು ಬಣ್ಣದಲ್ಲಿ ನೇರಳೆ ಬಣ್ಣ ಹೊಂದಿದ್ದರು ಇದರ ರುಚಿ ಬಲು ಚಂದ ಇರುತ್ತದೆ, ಇನ್ನು ಈ ಹಣ್ಣಿನ ಸೇವನೆ ಮಾಡುವುದರಿಂದ ದೇಹಕ್ಕೆ ಎಷ್ಟೊಂದು ಪ್ರಯೋಜನವಿದೆ ಅನ್ನೋದನ್ನ ನೋಡುವುದಾದರೆ ಈ ಹಣ್ಣು ಸೇವನೆ ಮಾಡುವುದರಿಂದ ಕ್ಯಾನ್ಸರ್ ಹಾಗೂ ಮಧುಮೇಹ ರೋಗ ನಿಯಂತ್ರಣವಾಗುತ್ತದೆ ಎಂಬುದಾಗಿ ಸಂಶೋಧನೆಯ ಮೂಲಕ ತಿಳಿಯಲಾಗಿದೆ.
ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಕಣಗಳನ್ನು ಕೊಲ್ಲಲ್ಪಡುತ್ತದೆ, ಹಾಗೂ ಈ ಕಾಯಿಲೆಯಿಂದ ರಕ್ಷಿಸಲ್ಪಡುತ್ತದೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಐರನ್, ಮಿಟಮಿನ್ ಸಿ ತುಂಬಾ ಜಾಸ್ತಿ ಇದೆ. ಇದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಇನ್ನು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ನೇರಳೆಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿದೆ, ಆದ್ದರಿಂದ ಹೃದಯ ಸಂಬಂಧಿ ರೋಗ ರಕ್ತದೊತ್ತಡ ಮುಂತಾದ ಸಮಸ್ಯೆ ಬರೋದಿಲ್ಲ. ಅಷ್ಟೇ ಅಲ್ಲದೆ ಮಧುಮೇಹ ರೋಗಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತೆ ಈ ಹಣ್ಣು. ಇನ್ನು ಹಲವು ಉಪಯೋಗಗಳನ್ನು ಹೊಂದಿರುವಂತ ಈ ನೇರಳೆಹಣ್ಣು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರು ಈ ಹಣ್ಣನ್ನು ತಿಂದರೆ 75%ನಷ್ಟು ರೋಗ ನಿಯಂತ್ರಣಕ್ಕೆ ಬರುತ್ತದೆ ಅನ್ನೋದನ್ನ ತಿಳಿಯಲಾಗಿದೆ.