ಇವತ್ತು ನಾವು ನಿಮಗೆ ತಿಳಿಸುವ ವಿಷಯ ಪರಿಶಿಷ್ಟ ಪಂಗಡದ ಅಲೆಮಾರಿ ಮತ್ತು ಆದಿವಾಸಿ ಜನರಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿಯಲ್ಲಿ ಯಾವರೀತಿಯ ಸಹಕಾರ ದೊರೆಯುತ್ತದೆ ಎಂಬ ವಿಷಯವನ್ನು ನಾವು ತಿಳಿದುಕೊಳ್ಳೋಣ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಅಲೆಮಾರಿ ಮತ್ತು ಆದಿವಾಸಿ ಜನರಿಗೆ ಐವತ್ತು ಸಾವಿರ ರೂಪಾಯಿ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಉಚಿತವಾಗಿ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ ಇನ್ನುಳಿದ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ನೀವು ಮರುಪಾವತಿ ಮಾಡಬೇಕಾಗುತ್ತದೆ. ಅಂದರೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಸಾಲದ ರೂಪದಲ್ಲಿ ಕೊಟ್ಟಿರುತ್ತಾರೆ.
ಹಾಗಾದರೆ ಈ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದಲ್ಲಿ ಬರುವಂತಹ ಅಲೆಮಾರಿ ಮತ್ತು ಆದಿವಾಸಿ ಜನಾಂಗದವರಿಗೆ ಐವತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ಯಾವ ಉದ್ದೆಶಕ್ಕಾಗಿ ನೀಡಲಾಗುತ್ತದೆ ಎಂಬುದನ್ನು ನೋಡುವುದಾದರೆ ಆನ್ಲೈನ್ ಮಾರ್ಕೆಟಿಂಗ್ ಸಂಬಂಧಪಟ್ಟಂತೆ ಪರಿಶಿಷ್ಟ ಪಂಗಡದಲ್ಲಿರುವ ಯುವಕರಿಗೆ ದ್ವೀಚಕ್ರ ವಾಹನ ಅಥವಾ ಇಲೆಕ್ಟ್ರಿಕ್ ವಾಹನವನ್ನು ಖರಿದಿಮಾಡುವುದಕ್ಕೆ ಆರ್ಥಿಕ ನೆರವನ್ನು ನೀಡಲಾಗುತ್ತದೆ.
ಹಾಗೂ ಇತರೆ ಉದ್ದೇಶಗಳಾದ ತರಕಾರಿ ಹಣ್ಣು ಹಂಪಲು ಮೀನು ಮಾಂಸ ಮಾರಾಟ ಅಥವಾ ಕುರಿ ಹಂದಿ ಮೊಲ ಸಾಕಾಣಿಕೆ ಮಾಡುವುದಾಗಿರಬಹುದು ಮತ್ತು ಇತರೆ ಸಣ್ಣ ಆರ್ಥಿಕ ಚಟುವಟಿಕೆಗಳು ಸಣ್ಣ ಅಂಗಡಿಗಳನ್ನು ತೆರೆಯಲು ಈ ರೀತಿ ತಮ್ಮದೇ ಆದ ಒಂದು ವ್ಯಾಪಾರವನ್ನು ಮಾಡಲು ಈ ಒಂದು ಜನಾಂಗದವರಿಗೆ ಐವತ್ತು ಸಾವಿರ ರೂಪಾಯಿ ಆರ್ಥಿಕ ನೆರವನ್ನು ನೀಡಲಾಗುತ್ತದೆ.
ಹಾಗಾದರೆ ಈ ಪರಿಶಿಷ್ಟ ಪಂಗಡ ಆದಿವಾಸಿ ಮತ್ತು ಅಲೆಮಾರಿ ಜನಾಂಗದವರು ಈ ಆರ್ಥಿಕ ನೆರವನ್ನು ಪಡೆಯಲು ಆನ್ಲೈನ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು ಏನೆಲ್ಲಾ ದಾಖಲಾತಿಗಳು ಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಮೊದಲಿಗೆ ಪರಿಶಿಷ್ಟ ಪಂಗಡಕ್ಕೇ ಸಂಬಂಧಿಸಿದ ಆಫಿಷಿಯಲ್ ವೆಬ್ ಸೈಟ್ ನ್ನು ಓಪನ್ ಮಾಡಿ ಕೊಳ್ಳಬೇಕು ಅರ್ಜಿಸಲ್ಲಿಸಲು ಆಗಸ್ಟ್ ಇಪ್ಪತ್ತೈದನೆ ತಾರೀಖಿನವರೆಗೆ ಸಮಯವಿರುತ್ತದೆ ಅಷ್ಟರೊಳಗಡೆ ನೀವು ಅರ್ಜಿಯನ್ನು ಸಲ್ಲಿಸಬೇಕು.
ನೀವು ವೆಬ್ ಸೈಟ್ ಓಪನ್ ಮಾಡಿದಾಗ ಅಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮಗಳು ಅಂತ ಬರುತ್ತದೆ ಅದರ ಕೆಳಗೆ ಸ್ವಯಂ ಉದ್ಯೋಗ ನೇರ ಸಾಲಯೋಜನೆಗೆ ಅರ್ಜಿ ಅಂತ ಇರುತ್ತದೆ ಅದರ ಕೆಳಗೆ ಆನ್ಲೈನ್ ನಲ್ಲಿ ಅನ್ವಯಿಸಿ ಅನ್ನುವ ಆಯ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು ನಂತರ ಅಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಒಂದು ಫಾರ್ಮ್ ಬರುತ್ತದೆ ಅಲ್ಲಿ ಕೇಳುವ ಮಾಹಿತಿಗಳನ್ನು ತುಂಬಬೇಕು. ಅಲ್ಲಿ ನೀವು ಯಾವ ಉದ್ದೇಶಕ್ಕಾಗಿ ಐವತ್ತು ಸಾವಿರ ರೂಪಾಯಿಯನ್ನು ಪಡೆಯುತ್ತಿದ್ದಿರಿ ಎಂಬುದನ್ನು ತಿಳಿಸಬೇಕಾಗುತ್ತದೆ.
ಇಲ್ಲಿ ಯಾವಯಾವ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ನೋಡುವುದಾದರೆ ನಿಮ್ಮ ಪಾಸ್ ಪೋರ್ಟ್ ಅಳತೆಯ ಫೋಟೊ ಜಾತಿ ಪ್ರಮಾಣಪತ್ರ ವರಮಾನ ದೃಢೀಕರಣ ಪತ್ರ ಆದಾಯ ಪ್ರಮಾಣಪತ್ರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಈ ದಾಖಲೆಗಳು ಬೇಕಾಗುತ್ತವೆ. ಸ್ನೇಹಿತರೆ ನೀವು ಪರಿಶಿಷ್ಟ ಪಂಗಡದ ಆದಿವಾಸಿ ಮತ್ತು ಅಲೆಮಾರಿ ಜನಾಂಗದವರಾಗಿದ್ದರೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ ನಿಮ್ಮ ಸ್ನೇಹಿತರಿಗೂ ತಿಳಿಸಿರಿ.