ಕನ್ನಡ ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಎಂದು ಪ್ರೇಮ್ ಅವರನ್ನು ಕರೆಯಲಾಗುತ್ತದೆ. ಇವರು ಕನ್ನಡ ಚಿತ್ರರಂಗದ ಹಾಂಡ್ಸಮ್ ಹೀರೋಗಳಲ್ಲಿ ಒಬ್ಬರು. ನೆನಪಿರಲಿ ಎಂಬ ಹೆಸರು ಕೇಳಿದರೆ ಸಾಕು ಇವರು ನೆನಪಾಗುತ್ತಾರೆ. ಏಕೆಂದರೆ ಅವರ ನೆನಪಿರಲಿ ಸಿನೆಮಾದ ನೆನಪಿರಲಿ ಹಾಡು ಬಹಳ ಚೆನ್ನಾಗಿದೆ. ಹಾಗೆಯೇ ಇವರು ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ಕೇವಲ ತಮ್ಮ ನಟನೆಯಿಂದ ಗುರುತಿಸಿಕೊಂಡವರು ಹಲವರು ಇದ್ದಾರೆ. ಅಂತಹವರಲ್ಲಿ ಇವರೂ ಕೂಡ ಒಬ್ಬರು. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರು ನೋಡಲು ಬಹಳ ಸುಂದರವಾಗಿ ಮತ್ತು ಮುದ್ದಾಗಿ ಇದ್ದಾರೆ. ಇವರು ಮೂಲತಃ ಬೆಂಗಳೂರಿನವರು. ಇವರು 1976 ಏಪ್ರಿಲ್ 18ರಂದು ಒಂದು ಸಾಧಾರಣ ಕುಟುಂಬದಲ್ಲಿ ಹಿರಿಯರಾಗಿ ಜನಿಸಿದರು. ಇವರ ಮನೆತನ ಕೈ ಮಗ್ಗದ ನೇಕಾರರ ಮನೆತನ ಆಗಿದೆ. ಇವರ ಬಾಲ್ಯದ ಹೆಸರು ಪರಮೇಶ್. ಇವರ ಬಾಲ್ಯ ಶಿಕ್ಷಣ ಕಲ್ಯಾಣಿ ಶಾಲೆಯಲ್ಲಿ ಜರುಗಿತ್ತು. ಇವರ ತಂದೆ ನೇಯ್ದ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ಅವರ ಮನೆಯ ಆದಾಯವಾಗಿತ್ತು. ಮನೆಯಲ್ಲಿ ಬಡತನ ಇದ್ದರೂ ಕೂಡ ಸಿನೆಮಾಗಳಲ್ಲಿ ಬಹಳ ಆಸಕ್ತಿ ಇತ್ತು. ಚಿಕ್ಕಂದಿನಲ್ಲಿ ಸಿನೆಮಾ ನೋಡಬೇಕೆಂದು ಸ್ನೇಹಿತರ ಜೊತೆ ಹಣವನ್ನು ಒಟ್ಟು ಮಾಡಿ ಹೋಗಿ ನೋಡುತ್ತಿದ್ದರು.

ರಿಲೀಸ್ ಆಗುವ ಪ್ರತಿ ಸಿನೆಮಾಗಳನ್ನು ಇವರು ನೋಡುತ್ತಿದ್ದರು. ಈ ಸಮಯದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿದ್ದಾರೆ. ಹಾಗೆಯೇ ಚಪ್ಪಲಿ ರಿಪೇರಿ ಮಾಡುವ ಕೆಲಸ ಕೂಡ ಮಾಡಿದ್ದಾರೆ. ವರ್ಷಕ್ಕೆ 160 ರಿಂದ 170 ಸಿನೆಮಾಗಳನ್ನು ನೋಡುತ್ತಿದ್ದರು. ಹಾಗೆಯೇ ದೇಹವನ್ನು ಚೆನ್ನಾಗಿ ಆಕರ್ಷಕವಾಗಿ ಇಟ್ಟುಕೊಳ್ಳಬೇಕು ಎಂದು ಜಿಮ್ ಗೆ ಹೋಗುತ್ತಿದ್ದರು. ಇವರು ಟಿ.ಎನ್. ಸೀತಾರಾಮ್ ಅವರ ಕಾರ್ ಡ್ರೈವರ್ ಆಗಿದ್ದರು. ಇವರ ಆಸಕ್ತಿಯನ್ನು ನೋಡಿ ಧಾರಾವಾಹಿಯಲ್ಲಿ ನಟಿಸುವಂತೆ ಹೇಳುತ್ತಾರೆ. ಇದರಿಂದ ದಿನಕ್ಕೆ ಎರಡು ನೂರರಿಂದ ಮುನ್ನೂರು ರೂಪಾಯಿ ಸಂಭಾವನೆ ಸಿಗುತ್ತಿತ್ತು.

ಇವರ ಮೊದಲ ಬಾರಿಗೆ ಬಣ್ಣ ಹಚ್ಚಿದ ಧಾರಾವಾಹಿ ಎಂದರೆ ಅದು ಮನ್ಮಮಂಥರಾ ಆಗಿದೆ. ನಂತರ ಅರ್ಧಸತ್ಯ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುತ್ತಾರೆ. ಹಾಗೆಯೇ ಪೂರ್ಣ ಪ್ರಮಾಣದ ನಾಯಕರಾಗಿ ಪ್ರಾಣ ಎಂಬ ಸಿನೆಮಾದಲ್ಲಿ ನಟನೆ ಮಾಡುತ್ತಾರೆ. ಇದು ಸಾಧಾರಣ ಯಶಸ್ಸನ್ನು ನೀಡಿತು. ಆದರೆ 2005ರ ನೆನಪಿರಲಿ ಚಿತ್ರ ಇವರಿಗೆ ಯಶಸ್ಸನ್ನು ನೀಡಿತ್ತು. ಇದು ಶತದಿನಗಳವರೆಗೆ ಓಡಿತು. ಇದರಿಂದಾಗಿ ಮೊಟ್ಟ ಮೊದಲು ಫಿಲ್ಮ್ ಫೇರ್ ಅವಾರ್ಡನ್ನು ಪಡೆಯುತ್ತಾರೆ. ನಂತರ ಜೊತೆ ಜೊತೆಯಲಿ ಸಿನೆಮಾ ಇವರಿಗೆ ಲವ್ಲಿಸ್ಟಾರ್ ಎಂಬ ಬಿರುದನ್ನು ನೀಡುತ್ತದೆ. ನಂತರದಲ್ಲಿ ಎಷ್ಟೇ ಸಿನೆಮಾಗಳನ್ನು ಮಾಡಿದರೂ ಯಶಸ್ಸು ಕಾಣಲಿಲ್ಲ.

ಚಾರ್ಮಿನಾರ್ ಚಿತ್ರ ಇದು ಆರ್.ಚಂದ್ರು ಅವರ ನಿರ್ದೇಶನದ ಚಿತ್ರವಾಗಿದ್ದು ಪ್ರೇಮ್ ಅವರಿಗೆ ಯಶಸ್ಸನ್ನು ನೀಡಿತು. ಎರಡನೇ ಫಿಲ್ಮ್ ಫೇರ್ ಅವಾರ್ಡ್ ಇದರಿಂದ ಸಿಕ್ಕಿತು. ನಂತರದ ಸಿನೆಮಾಗಳು ಮತ್ತೆ ಸೊಲ್ಲಾನ್ನುಂಡವು. ಇದೀಗ ಪ್ರೇಮಮ್ ಪೂಜ್ಯಮ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದು ಒಳ್ಳೆಯ ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!