ಮನುಷ್ಯನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಬೇವು ರಾಮಬಾಣವಾಗಿದೆ ಚರ್ಮ ರೋಗಗಳು ಕೂದಲಿನ ಸಮಸ್ಯೆಗಳು ಮತ್ತು ದೇಹದ ಆಂತರಿಕ ಆರೋಗ್ಯ ಸಮಸ್ಯೆಗಳು ಬೇವಿನಲ್ಲಿರುವ ಔಷಧಿಯ ಗುಣದಿಂದಲೇ ಪರಿಹಾರ ಕಾಣಬಹುದು ಬೇವಿನ ಎಲೆ ತೊಗಟೆ ಹೂವು ಬೀಜಗಳಿಂದ ಅನೇಕ ಆರೋಗ್ಯ ಮತ್ತು ಸೌಂದರ್ಯ ಸಂಬಂಧಿತ ಪ್ರಯೋಜನಗಳಿವೆ ಭಾರತದ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿ ಬೇವಿಗೆ ಅಪಾರವಾದ ಪ್ರಾಮುಖ್ಯತೆ ನೀಡಲಾಗಿದೆ
ಮರದ ಪ್ರತಿಯೊಂದು ಭಾಗವೂ ಅಂದರೆ ಎಲೆಗಳು ಕೊಂಬೆಗಳು ತೊಗಟೆ ಬೀಜಗಳು ಬೇರು ಹಣ್ಣುಗಳು ಅಥವಾ ಹೂವುಗಳಾಗಿರಲಿ ಇವೆಲ್ಲವನ್ನೂ ಉರಿಯೂತ ಸೋಂಕು ಜ್ವರ ಚರ್ಮರೋಗ ಮತ್ತು ಹಲ್ಲಿನ ಕಾಯಿಲೆಗಳಿಂದ ಹಿಡಿದು ಅನೇಕ ಸಮಸ್ಯೆಗಳಿಗೆ ಸಾಂಪ್ರದಾಯಿಕವಾಗಿ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ನಾವು ಈ ಲೇಖನದ ಮೂಲಕ ಬೇವಿನ ಎಲೆಯ ಪ್ರಯೋಜನವನ್ನು ತಿಳಿದುಕೊಳ್ಳೋಣ.
ಹತ್ತು ಬೇವಿನ ಎಲೆ ಹಾಗೂ ಹತ್ತು ಗ್ರಾಂ ಓಮವನ್ನು ಜೇನುತುಪ್ಪದಲ್ಲಿ ಕಲಸಿ ಚೆನ್ನಾಗಿ ಕುಡಿದರೆ ಹೊಟ್ಟೆಯಲ್ಲಿರುವ ಜಂತು ನಿವಾರಣೆಯಾಗುತ್ತದೆ ಮತ್ತು ಜಂತು ಹುಳುಗಳ ತೊಂದರೆ ಕಡಿಮೆಯಾಗುತ್ತದೆ ಹಾಗೂ ಬಿಸಿ ನೀರಿಗೆ ಬೇವಿನ ಎಲೆಯನ್ನು ಹಾಕಿ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆ ಹಾಗೂ ಚರ್ಮ ರೋಗ ಬರುವುದಿಲ್ಲ ಮತ್ತು ಸಿಡುಬು ಇರುವರಿಗೆ ಅರಿಶಿನ ಮತ್ತು ಬೇವಿನ ಎಲೆಯನ್ನು ನೀರಿಗೆ ಹಾಕಿಕೊಂಡು ಸ್ನಾನ ಮಾಡಿದರೆ ಸಿಡುಬು ರೋಗ ಬಹು ಬೇಗನೆ ನಿವಾರಣೆ ಮಾಡುವಂತ ಶಕ್ತಿಯಿದೆ ಬೇವಿನ ಎಲೆಗಿದೆ
ಬೇವು ಲೋದ್ರ ಮಂಜಿಷ್ಟ ಅರಿಶಿನ ಕೆಂಪು ಶ್ರೀಗಂಧ ಮತ್ತು ಸುಗಂಧಿ ಹಾಗೂ ಬಜೆ ಬೇರನ್ನು ಸುಮಾರು ಹತ್ತು ಗ್ರಾಂ ನಂತೆ ತೆಗೆದುಕೊಂಡು ನೆನೆಸಿ ಮೊಸರಿನಲ್ಲಿ ಕಲಸಿ ಮುಖಕ್ಕೆ ಲೇಪನ ಮಾಡಿದರೆ ಮೊಡವೆಗಳು ಮಾಯವಾಗುತ್ತದೆ ಹಾಗೂ ಬೇವಿನ ಎಲೆ ಹಾಗೂ ಗೊರಂಟಿಯನ್ನು ಸಮಪ್ರಮಾಣದಲ್ಲಿ ನೀರಲ್ಲಿ ಹಾಕಿ ನೀರು ಇಂಗುವರೆಗೆ ಕುದಿಸಿ ಅದಕ್ಕೆ ಹೊಂಗೆ ಎಣ್ಣೆ ಹಾಕಿ ಇಸುಬಿಕೆ ಹಚ್ಚಿದರೆ ಇಸುಬು ವಾಸಿಯಾಗುತ್ತದೆ ಹಾಗೂ ಬೇವಿನ ಎಲೆಯ ಪುಡಿ ಹಾಗೂ ತುಲಸಿ ಎಲೆಯ ಪುಡಿಯನ್ನು ನೀರಿನಲ್ಲಿ ಕಲಸಿ ಪೆಸ್ಟ್ ಮಾಡಿಕೊಂಡು ಕೂದಲಿನ ಬುಡಕ್ಕೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಹೊಟ್ಟು ಮತ್ತು ಹೇನುಗಳು ನಾಶ ಮಾಡುವ ಶಕ್ತಿ ಬೇವಿನ ಎಲೆಗಿದೆ.
ಬೇವಿನ ಎಲೆಗಳಲ್ಲಿ ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ಗುಣಗಳಿವೆ ಇದು ಸೋಂಕುಗಳು ಉರಿಯೂತ ಮತ್ತು ಯಾವುದೇ ರೀತಿಯ ಚರ್ಮದ ಸಮಸ್ಯೆಗಳಿಗೆ ಅದ್ಭುತವಾದ ಶಮನ ಮಾಡುತ್ತದೆ ಕೀಟಗಳ ಕಡಿತ ತುರಿಕೆ ಹುಳಕಡ್ಡಿ ಮತ್ತು ಕೆಲವು ಸೌಮ್ಯ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬೇವಿನ ಎಲೆಗಳು ಮತ್ತು ಅರಿಶಿನ ಅರೆದು ಲೇಪವನ್ನು ಹಚ್ಚುದರಿಂದ ರೋಗ ನಿವಾರಣೆಯಾಗುತ್ತದೆ ಎಲೆಗಳನ್ನು ಅಗಿಯುವುದರಿಂದ ಹೆಚ್ಚಿನ ಪೋಷಣೆ ಶುದ್ಧೀಕರಿಸಿದ ಮತ್ತು ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು
ಬೇವಿನ ಎಲೆಗಳು ಆರೋಗ್ಯಕರ ಕೋಶ ವಿಭಜನೆಯನ್ನು ಉತ್ತೇಜಿಸುತ್ತದೆ ಮತ್ತು ನೆತ್ತಿಯ ಪ್ರದೇಶದ ಸುತ್ತಲಿನ ಕೂದಲುಗಳ ಬುಡದಿಂದ ಕೂದಲ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಕೂದಲನ್ನು ಕುದಿಸಿದ ಬೇವಿನ ನೀರಿನಿಂದ ತೊಳೆಯುವ ಮೂಲಕ ತಲೆಹೊಟ್ಟು ಮತ್ತು ಅಪೌಷ್ಟಿಕತೆ ಘಾಸಿಗೊಂಡ ಕೂದಲನ್ನು ಸರಿಪಡಿಸುವುದು ಒಂದು ಸಾಂಪ್ರದಾಯಿಕ ವಿಧಾನವಾಗಿದೆ.
ಪಿತ್ತಜನಕಾಂಗಕ್ಕೆ ಬೇವಿನ ಎಲೆಗಳು ಅತ್ಯುತ್ತಮವಾಗಿವೆ ಇದು ನಿಮ್ಮ ಜೀರ್ಣಕ್ರಿಯೆಯನ್ನು ಸ್ವಯಂಚಾಲಿತವಾಗಿ ಹೆಚ್ಚಿಸುತ್ತದೆ ಇದಲ್ಲದೆ ಪ್ರತಿದಿನ ಬೇವಿನ ಎಲೆ ಸೇವನೆಯಿಂದ ಕರುಳಿನ ಪ್ರದೇಶದಲ್ಲಿ ಅಗತ್ಯಕ್ಕೂ ಹೆಚ್ಚು ಇರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ ಮತ್ತು ಕರುಳುಗಳನ್ನು ಶುದ್ಧಗೊಳಿಸುತ್ತದೆ ಇದು ಸುಗಮವಾದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ ಬೇವಿನಲ್ಲಿರುವ ಸೂಕ್ಷ್ಮಜೀವಿ ನಿರೋಧಕ ಗುಣ ಬಾಯಿಯಲ್ಲಿ ಆಶ್ರಯ ಪಡೆದಿದ್ದ ಸೂಕ್ಷ್ಮಜೀವಿಗಳೊಂದಿಗೆ ಹೋರಾಡುತ್ತದೆ ಮತ್ತು ನಮ್ಮ ಲಾಲಾರಸದ ಕ್ಷಾರೀಯ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ.