ನವರಾತ್ರಿ ಹಬ್ಬ ಪ್ರಾರಂಭವಾಗಿ ಇಂದಿಗೆ ಏಳು ದಿನಗಳಾಗಿದ್ದು, ಸರಸ್ವತಿ ಪೂಜೆ ಮುಖ್ಯವಾಗಿದೆ. ಸರಸ್ವತಿ ಪೂಜೆಯನ್ನು ಮಾಡುವುದರಿಂದ ಮಕ್ಕಳಿಗೆ ವಿದ್ಯಾಭ್ಯಾಸ ಲಭಿಸುತ್ತದೆ. ಹಾಗಾದರೆ ಸರಸ್ವತಿ ಪೂಜೆ ಹೇಗೆ ಮಾಡಬೇಕು, ಪೂಜಾ ವಿಧಿ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ನವರಾತ್ರಿಯಲ್ಲಿ ಸರಸ್ವತಿ ಪೂಜೆ ಬಹಳ ಮುಖ್ಯವಾದ ಪೂಜೆಯಾಗಿದೆ. ಮನೆಯಲ್ಲಿ ಮಕ್ಕಳಿಂದ ಸರಸ್ವತಿ ಪೂಜೆಯನ್ನು ಮಾಡಿಸುವುದರಿಂದ ಬಹಳ ಒಳ್ಳೆಯದು. ಸರಸ್ವತಿ ಪೂಜೆ ಮಾಡುವ ಮೊದಲು ವಿಘ್ನ ನಿವಾರಕ ಗಣಪತಿ ಪೂಜೆ ಮಾಡಬೇಕು. ಒಂದು ಹಿತ್ತಾಳೆ ಪ್ಲೇಟ್ ನಲ್ಲಿ ಶ್ರೀಗಂಧ, ಅರಿಶಿಣ, ಕುಂಕುಮ ಹಚ್ಚಿ ನಂತರ ಗಣೇಶ ಮತ್ತು ಲಕ್ಷ್ಮೀ ವಿಗ್ರಹಕ್ಕೆ ಶ್ರಿಂಗಂದ, ಕುಂಕುಮ, ಅರಿಶಿಣ ಹಚ್ಚಬೇಕು. ಒಂದು ಸಣ್ಣ ಪ್ಲೇಟಿನಲ್ಲಿ ಸ್ವಲ್ಪ ಅಕ್ಕಿ ಹಾಕಿ ಅದರ ಮೇಲೆ ಕುಂಕುಮ, ಅರಿಶಿಣ, ಅಕ್ಷತೆ ಹಾಕಿ ಅದರ ಮೇಲೆ ಗಣೇಶ ಮತ್ತು ಲಕ್ಷ್ಮೀ ವಿಗ್ರಹವನ್ನು ಇಡಬೇಕು.

ಗೆಜ್ಜೆ ವಸ್ತ್ರ ಹಾಕಬೇಕು ಮತ್ತು ಗಣೇಶನಿಗೆ ಗರಿಕೆ ಇಡಬೇಕು ನಂತರ ಹೂವುಗಳಿಂದ ಅಲಂಕಾರ ಮಾಡಬೇಕು. ಮಕ್ಕಳು ಪ್ರತಿ ಬುಧವಾರ ಗಣೇಶನ ವಿಗ್ರಹಕ್ಕೆ ಗರಿಕೆ ಇಟ್ಟು ನಮಸ್ಕಾರ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ಓದಿನಲ್ಲಿ ಆಸಕ್ತಿ ಬೆಳೆಯುತ್ತದೆ. ಸರಸ್ವತಿ ಫೋಟೊ ಇದ್ದರೆ ಒಳ್ಳೆಯದು ಒಂದು ವೇಳೆ ಸರಸ್ವತಿ ಫೋಟೊ ಇಲ್ಲ ಎಂದರೆ ಮನೆದೇವರ ಫೋಟೊ ಇಟ್ಟು ಪೂಜೆ ಮಾಡಬಹುದು.

ಫೋಟೊ ಮುಂದೆ ಮಕ್ಕಳ ಪುಸ್ತಕಗಳನ್ನು, ಪೆನ್ನು, ಪೆನ್ಸಿಲ್ ಇಡಬೇಕು ನಂತರ ಅದರ ಮೇಲೆ ಪೂಜೆ ಮಾಡಿದ ಗಣೇಶ, ಲಕ್ಷ್ಮೀ ವಿಗ್ರಹಗಳನ್ನು ಇಡಬೇಕು. ಪಕ್ಕದಲ್ಲಿ ಒಂದು ಮಣೆ ಹಾಕಿ ಪಟ್ಟದ ಗೊಂಬೆಗಳನ್ನು ಇಡಬೇಕು ಒಂದು ವೇಳೆ ಪಟ್ಟದ ಗೊಂಬೆ ಇಲ್ಲದೆ ಇದ್ದರೆ ಪಟ್ಟದ ಗೊಂಬೆಗಳನ್ನು ಇಡಲೇಬೇಕು ಎಂಬುದಿಲ್ಲ. ಗೊಂಬೆಗಳಿಗೆ ಹೂವುಗಳಿಂದ ಅಲಂಕಾರ ಮಾಡಬೇಕು. ಇಟ್ಟ ಪುಸ್ತಕಗಳಿಗೆ ಕುಂಕುಮ, ಅರಿಶಿಣ ಹಚ್ಚಿ ಅಕ್ಷತೆ ಹಾಕಿ ಹೂವಿನಿಂದ ಅಲಂಕಾರ ಮಾಡಬೇಕು.

ನವರಾತ್ರಿ ಪ್ರಾರಂಭವಾಗಿ ಏಳನೆ ದಿವಸ ಸರಸ್ವತಿ ಪೂಜೆ ಇರುತ್ತದೆ. ಸರಸ್ವತಿ ಪೂಜೆಯನ್ನು ಮೂಲ ನಕ್ಷತ್ರದ ಸಮಯದಲ್ಲಿ ಮಾಡಬೇಕು ಮಕ್ಕಳಿಂದ ಪೂಜೆ ಮಾಡಿಸಿದರೆ ಬಹಳ ಒಳ್ಳೆಯದು. ಮಕ್ಕಳಿಂದ ಸರಸ್ವತಿ ಶ್ಲೋಕ ಹೇಳಿಸಬೇಕು. ನಂತರ ತೀರ್ಥ ತಯಾರಿಸಬೇಕು. ತೀರ್ಥಕ್ಕೆ ತುಳಸಿ ಪತ್ರ ಹಾಕಬೇಕು, ದಕ್ಷಿಣೆ, ಬಾಳೇಹಣ್ಣು ಇಡಬೇಕು. ದೇವರ ಮುಂದೆ ನೈವೇದ್ಯಕ್ಕಾಗಿ ಕಡ್ಲೆಬೇಳೆ ಪಾಯಸ ಅಥವಾ ಹೂರ್ಣದಿಂದ ಮಾಡಿದ ಪ್ರಸಾದವನ್ನು ಇಡಬೇಕು.

ಪೂಜೆಯ ಸಿದ್ಧತೆ ಆದನಂತರ ದೀಪವನ್ನು ಹಚ್ಚಬೇಕು ಕಾಮಾಕ್ಷಿ ದೀಪವನ್ನು ಹಚ್ಚುವುದು ಒಳ್ಳೆಯದು. ದೀಪಕ್ಕೂ ಹೂವಿನಿಂದ ಅಲಂಕಾರ ಮಾಡಬೇಕು ಮಕ್ಕಳ ಕೈಯಲ್ಲಿ ದೀಪ ಹಚ್ಚಿಸುವುದು ಒಳ್ಳೆಯದು. ಬೆಳಗ್ಗೆ 7 ಗಂಟೆಯಿಂದ 10 ಗಂಟೆ ಒಳಗೆ ಸರಸ್ವತಿ ಪೂಜೆ ಮಾಡಿಸುವುದು ಒಳ್ಳೆಯದು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅಕ್ಷರಭ್ಯಾಸ ಮಾಡಿಸಬೇಕು, ಶೃಂಗೇರಿಯಲ್ಲಿ ಮಾಡಿಸಿದರೆ ಬಹಳ ಒಳ್ಳೆಯದು. ಮನೆಯಲ್ಲಿ ಪೂಜೆ ಮಾಡಿದ ನಂತರ ದೇವಸ್ಥಾನಗಳಿಗೆ ಹೋಗಬಹುದು. ವಯಸ್ಸಾದವರು, ಬಾಣಂತಿಯರು, ಗರ್ಭಿಣಿ ಸ್ತ್ರೀಯರು ಉಪವಾಸವಿದ್ದು ಪೂಜೆ ಮಾಡಲೇಬೇಕು ಎಂಬುದು ಎಲ್ಲೂ ಉಲ್ಲೇಖವಾಗಿಲ್ಲ, ಹಣ್ಣು ಹಾಲು ಸೇವಿಸಬಹುದು. ಒಟ್ಟಿನಲ್ಲಿ ನವರಾತ್ರಿ ಹಬ್ಬ ಎಲ್ಲರ ಮನೆ-ಮನ ಬೆಳಗಲಿ ಎಂದು ಆಶಿಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!