ಕೆಲವರು ಬಹಳ ದಪ್ಪ ಇರುತ್ತಾರೆ, ಇನ್ನು ಕೆಲವರು ಹೆಚ್ಚು ವೀಕ್ ಇರುತ್ತಾರೆ. ಬಹಳ ದಪ್ಪ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗೆಯೆ ಬಹಳ ತೆಳ್ಳಗಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ದಪ್ಪ ಇರುವವರಿಗೆ ತೆಳ್ಳಗಾಗಬೇಕೆಂದು ಊಟವನ್ನು ಕಡಿಮೆ ಮಾಡುತ್ತಾರೆ. ತೆಳ್ಳಗಿರುವವರು ಸ್ವಲ್ಪ ದಪ್ಪ ಕಾಣಬೇಕು ಎಂದು ಚಿಂತಿಸುತ್ತಿರುತ್ತಾರೆ. ಬಹಳ ತೆಳ್ಳಗಿದ್ದರೆ ದಪ್ಪ ಆಗಲು ಸುಲಭವಾಗಿ ಮನೆಯಲ್ಲೆ ಅನುಸರಿಸಬಹುದಾದ ಕೆಲವು ಆಹಾರ ಕ್ರಮಗಳಿವೆ. ಹಾಗಾದರೆ ದಪ್ಪ ಆಗಲು ಅನುಸರಿಸುವ ಆಹಾರ ಕ್ರಮಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಬಹಳ ದಪ್ಪವು ಅಲ್ಲದೆ, ಬಹಳ ವೀಕ್ ಅಲ್ಲದೆ ಸ್ಲಿಮ್ ಎಂಡ್ ಫಿಟ್ ಆಗಿ ಇರಬೇಕು. ಕೆಲವರು ದಪ್ಪ ಆಗಬೇಕು ಅಂತ ಜಂಕ್ ಫುಡ್ ಮತ್ತು ಆಯಿಲ್ ಫುಡ್ ತಿನ್ನುತ್ತಾರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರತಿದಿನ ಒಂದು ಲೋಟ ಹಾಲು ಕುಡಿಯಬೇಕು, ಹಾಲಿನಲ್ಲಿ ಪ್ರೊಟೀನ್ ಕಂಟೆಂಟ್, ಫ್ಯಾಟ್ ಹಾಗೂ ಹೈ ಕ್ಯಾಲೊರೀಸ್ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹಾಲಿನ ಜೊತೆಗೆ ಒಂದು ಬಾಳೆಹಣ್ಣು ಮತ್ತು ಒಂದು ಬೌಲ್ ಶೇಂಗಾ, ಶೇಂಗಾವನ್ನು ನೆನೆಸಿ ತಿಂದರೆ ಒಳ್ಳೆಯದು, ಪ್ರತಿದಿನ ಬೆಳಗ್ಗೆ ಅಥವಾ ರಾತ್ರಿ ಮಲಗುವ ಮುನ್ನ ತಿನ್ನಬೇಕು. ಬಾಳೆಹಣ್ಣಿನಲ್ಲಿ ಕ್ಯಾಲೊರೀಸ್ ಮತ್ತು ಕಾರ್ಬೋಹೈಡ್ರೇಟ್ಸ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಶೇಂಗಾಬೀಜದಲ್ಲಿ ಗುಡ್ ಕೊಲೆಸ್ಟ್ರಾಲ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಸಣ್ಣ ಬಾಳೆಹಣ್ಣಾದರೆ ಎರಡು ಬಾಳೆಹಣ್ಣು ತಿನ್ನಬೇಕು, ದೊಡ್ಡದಾದರೆ ಒಂದು ಬಾಳೆಹಣ್ಣು ತಿಂದರೆ ಸಾಕಾಗುತ್ತದೆ. ಇವುಗಳ ಜೊತೆಗೆ ಡ್ರೈಫ್ರೂಟ್ಸ್ ಬಾದಾಮಿ, ದ್ರಾಕ್ಷಿ, ಪಿಸ್ತಾ ತಿನ್ನಬಹುದು. ಇವುಗಳೊಂದಿಗೆ ತೂಕ ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ತೂಕ ಹೆಚ್ಚಿಸುವ ಆಹಾರಗಳು ಎಂದರೆ ಬಟರ್, ಪನ್ನೀರ್, ತುಪ್ಪ, ಆಲೂಗಡ್ಡೆ, ಮಟನ್, ಫಿಶ್, ಮೊಸರು ಇವುಗಳನ್ನು ಹೆಚ್ಚು ಸೇವಿಸಿದರೆ ಬೇಗ ವೇಟ್ ಹೆಚ್ಚಾಗುತ್ತದೆ.
ಇವುಗಳನ್ನು ಸರಿಯಾಗಿ ಪ್ರತಿದಿನ ಅನುಸರಿಸುತ್ತಾ ಬಂದರೆ ಒಂದು ವಾರದಲ್ಲಿ ಮೂರು ಕೆಜಿ ವೇಟ್ ಹೆಚ್ಚಾಗುತ್ತದೆ. ಬಾಳೆಹಣ್ಣು, ಶೇಂಗಾ, ಹಾಲು ಸೇವಿಸುವುದರಿಂದ ಸುಸ್ತು ನಿವಾರಣೆಯಾಗುತ್ತದೆ, ಇದರಿಂದ ಇಡೀದಿನ ಲವಲವಿಕೆಯಿಂದ ಇರಬಹುದು. ಬಾಳೆಹಣ್ಣು, ಹಾಲು, ಶೇಂಗಾಬೀಜ ತಿನ್ನುವುದರಿಂದ ಯಾವುದೆ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಚಿಕ್ಕ ಮಕ್ಕಳು ಸಹ ಇವುಗಳನ್ನು ಸೇವಿಸಬಹುದು. ಬಹಳ ತೆಳ್ಳಗಿರುವವರಿಗೆ ದಿನವಿಡಿ ಆಯಾಸವಾಗುತ್ತದೆ, ಯಾವುದೆ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ. ಬಾಳೆಹಣ್ಣು, ಹಾಲು, ಶೇಂಗಾ ಸೇವಿಸುವುದರಿಂದ ನಿಶ್ಯಕ್ತಿ ಕಡಿಮೆಯಾಗಿ ಉತ್ಸಾಹ ಕಂಡುಬರುತ್ತದೆ. ತೆಳ್ಳಗಿರಲಿ, ದಪ್ಪಗಿರಲಿ ಪ್ರತಿದಿನ ಒಂದು ಲೋಟ ಹಾಲು ಕುಡಿಯಬೇಕು, ಅದರಲ್ಲೂ ಹಾಲಿಗೆ ಅರಿಶಿಣ ಸೇರಿಸಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮನೆಯಲ್ಲಿ ಸುಲಭವಾಗಿ ವೇಟ್ ಗೇನ್ ಮಾಡಿಕೊಳ್ಳಿ.