ನೋಡಲು ಸುಂದರವಾಗಿರುವ ಕಿರಿಕ್ ಪಾರ್ಟಿ, ಚಮಕ್, ಯಜಮಾನ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದ ಹಾಗೂ ಟೀಕೆ ಮಾಡುವವರು ಮಾಡುತ್ತಿರಲಿ ಎಂದು ಮುನ್ನುಗ್ಗಿದ ರಶ್ಮಿಕಾ ಮಂದಣ್ಣ ಅವರಿಗೆ ಗೂಗಲ್ ಕೂಡ ಮನಸೋತಿದೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕಿರಿಕ್ ಬೆಡಗಿ, ಸುಂದರಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲಿಂದಲೇ ಕರ್ನಾಟಕ ಕ್ರಷ್ ಅನ್ನುವ ಬಿರುದನ್ನ ತಮ್ಮದಾಗಿಸಿಕೊಂಡಿದ್ದಾರೆ. ನಂತರ ತೆಲುಗು ಚಿತ್ರರಂಗದಲ್ಲಿ ಆಫರ್ ಬಂತು, ಅಲ್ಲಿಯೇ ಹೆಚ್ಚಾಗಿ ನಟಿಸಿ ಫೇಮಸ್ ಆದರು. 2020ರ ಸಾಲಿನ ಫಿಮೇಲ್ ನ್ಯಾಷನಲ್ ಕ್ರಷ್ ಆಗಿ ಗೂಗಲ್ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದೆ.
ಸದ್ಯ ಸಾಲು ಸಾಲು ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿ ಇರುವ ಬ್ಯೂಟಿ ಕ್ವೀನ್ ರಶ್ಮಿಕಾಗೆ ಗೂಗಲ್ ಸರ್ಪ್ರೈಸ್ ನೀಡಿದೆ. ಕರ್ನಾಟಕ ಕ್ರಷ್ ನಿಂದ ನ್ಯಾಷನಲ್ ಕ್ರಷ್ಗೆ ಗೂಗಲ್ ರಶ್ಮಿಕಾ ಅವರಿಗೆ ಬಡ್ತಿ ನೀಡಿದೆ. ತಮ್ಮ ಮುದ್ದು ಮುಖ ಹಾಗೂ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ರಶ್ಮಿಕಾ ಮಂದಣ್ಣ ಅವರಿಗೆ ಸದ್ಯ ಗೂಗಲ್ ಕೂಡ ಮನಸೋತಿದೆ. ರಶ್ಮಿಕಾ ಅವರು ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದ್ದು, ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪದಲ್ಲಿ ರಶ್ಮಿಕಾ ಅವರು ಅಲ್ಲು ಅರ್ಜುನ್ಗೆ ನಾಯಕಿಯಾಗಿ ನಟಿಸಲಿದ್ದಾರೆ, ಇದರ ಜೊತೆಗೆ ಸೂರ್ಯ ಅವರ ಜೊತೆಗೆ ಹೊಸ ತಮಿಳು ಸಿನಿಮಾದಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ರಶ್ಮಿಕಾ ಅವರು ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸೋಣ.