ಸರ್ಕಾರಗಳು ರೈತರ ಪ್ರಗತಿಗಾಗಿ ಅನೇಕ ಕಾರ್ಯಚಟುವಟಿಕೆಗಳನ್ನು ಜಾರಿಗೆ ತರುತ್ತದೆ ಅವುಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು. ರೈತರ ಪ್ರಗತಿಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೈತರ ಜಮೀನಿನಲ್ಲಿ ಬದುಗಳ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರ ಅವಕಾಶವನ್ನು ನೀಡಿದೆ ಹಾಗಾದರೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅರ್ಜಿಯನ್ನು ಎಲ್ಲಿ ಮತ್ತು ಯಾರಿಗೆ ಸಲ್ಲಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಪ್ರತಿಯೊಬ್ಬ ರೈತರಿಗೂ ಈ ಮಾಹಿತಿ ತುಂಬಾ ಅವಶ್ಯಕವಾಗಿದೆ ಹಾಗಾದರೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಮತ್ತು ಈ ಒಂದು ಬದು ನಿರ್ಮಾಣ ಪ್ರಕ್ರಿಯೆ ಹೇಗಿರುತ್ತದೆ ಮತ್ತು ಈ ಕೆಲಸ ಹೊಲದಲ್ಲಿ ಎಷ್ಟು ದಿನಗಳ ಕಾಲ ನಡೆಯುತ್ತದೆ ಮತ್ತು ಇದಕ್ಕೆ ಸರಕಾರದಿಂದ ಸಹಾಯಧನ ಸಿಗುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ನೀವು ನಿಮ್ಮ ಹೊಲದಲ್ಲಿ ಬದುಗಳನ್ನು ನಿರ್ಮಾಣ ಮಾಡುವುದಕ್ಕೆ ಮೊದಲು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಯಾವ ದಾಖಲೆಗಳನ್ನು ಲಗತ್ತಿಸಬೇಕು ಎಂಬುದನ್ನ ನೋಡುವುದಾದರೆ ಮೊದಲನೆಯದಾಗಿ ಜಮೀನಿನ ಪಹಣಿ ಪತ್ರಿಕೆ ಇತ್ತೀಚಿನ ಪಾಣಿ ಪತ್ರಿಕೆ ಯಾದರೆ ತುಂಬಾ ಉತ್ತಮ. ಎರಡನೆಯದು ಆಧಾರ್ ಕಾರ್ಡ್ ಮೂರನೆಯದಾಗಿ ಕಾರ್ಮಿಕರ ಬ್ಯಾಂಕ್ ಅಕೌಂಟ್ ನಂಬರ್.
ನಂತರ ಫಾರಂ ನಂಬರ್ ಆರು ಇದನ್ನು ನೀವು ಸಂಪೂರ್ಣವಾಗಿ ತುಂಬಬೇಕು ಇದರಲ್ಲಿ ಕಾರ್ಮಿಕರ ಹೆಸರು ಕೆಲಸ ಮಾಡುವ ದಿನಗಳನ್ನು ಅರ್ಜಿ ಒಳಗೊಂಡಿರುತ್ತದೆ. ಇಷ್ಟೆಲ್ಲ ದಾಖಲೆಗಳನ್ನು ಬದು ನಿರ್ಮಾಣ ಮಾಡುವುದುಕೋಸ್ಕರ ಎಲ್ಲಿ ಸಲ್ಲಿಸಬೇಕು ಎಂಬುದನ್ನು ನೋಡುವುದಾದರೆ ರೈತರು ಉದ್ಯೋಗಖಾತ್ರಿ ಯೋಜನೆಯಡಿ ತಮ್ಮ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಈ ಕಾರ್ಯವು ಒಂದು ವಾರದಲ್ಲಿ ಆಗುತ್ತದೆ.
ಹಾಗಾದರೆ ನಿಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ಎಷ್ಟು ಸಹಾಯಧನ ದೊರೆಯುತ್ತದೆ ಎಂಬುದನ್ನು ನೋಡುವುದಾದರೆ ಒಂದು ಬದು ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ನಲವತ್ತು ಸಾವಿರ ರೂಪಾಯಿಯಿಂದ ಒಂದು ಲಕ್ಷದವರೆಗೆ ಸಹಾಯಧನ ದೊರೆಯುವ ಸಾಧ್ಯತೆ ಇದೆ. ಉದ್ಯೋಗಖಾತ್ರಿ ಯೋಜನೆಯಡಿ ಸರ್ಕಾರದಿಂದ ಸಿಗುವ ಸಹಾಯಧನ ಸರಕಾರದ ಹಣಕಾಸಿನ ವ್ಯವಹಾರದ ಆಧಾರದ ಮೇಲೆ ನಿರ್ಧರಿತವಾಗುತ್ತದೆ
ಇದರಲ್ಲಿ ಅನುದಾನ ಹೆಚ್ಚು ಕಡಿಮೆ ಆಗಬಹುದು. ಬದು ನಿರ್ಮಾಣ ಕಾರ್ಯ ಪೂರ್ತಿಗೊಂಡ ಮೇಲೆ ನಿಮ್ಮ ಹಣ ಬಿಡುಗಡೆಯಾಗುತ್ತದೆ. ಈ ಬಿಡುಗಡೆಯಾದ ಹಣದಲ್ಲಿ ಶೇಕಡಾ ಎಂಬತ್ತರಷ್ಟು ಹಣವು ಕಾರ್ಮಿಕರ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಮತ್ತು ಉಳಿದ ಇಪ್ಪತ್ತು ಶೇಕಡಾ ಹಣವು ಬದು ನಿರ್ಮಾಣಕ್ಕೆ ಬಳಸಿರುವ ವಸ್ತುಗಳ ಬಿಲ್ ಮೇಲೆ ಬಂದಿರುತ್ತದೆ.
ಬದು ನಿರ್ಮಾಣ ಪ್ರಕ್ರಿಯೆ ಯಾವ ರೀತಿಯಾಗಿ ಇರುತ್ತದೆ ಎಂಬುದನ್ನು ತಿಳಿಯುವುದಾದರೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಂಜೂರಾದ ಯಾವುದೇ ವೈಯಕ್ತಿಕ ಕೆಲಸಗಳನ್ನು ಮಂಜೂರಾದ ಮೂರು ತಿಂಗಳ ಒಳಗೆ ಕೆಲಸ ಮಾಡಿ ಮುಗಿಸಬೇಕಾಗುತ್ತದೆ. ಈ ಬದು ನಿರ್ಮಾಣ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ದೈನಂದಿನ ಹಾಜರಿಯನ್ನು ತೆಗೆದುಕೊಳ್ಳುವುದಕ್ಕೆ ಬರುತ್ತಾರೆ. ಬದು ನಿರ್ಮಾಣ ಕಾರ್ಯ ಸರಿಯಾಗಿದ್ದಲ್ಲಿ ಅದರ ಜಿಪಿಎಸ್ ಮಾಡುತ್ತಾರೆ ಜಿಪಿಎಸ್ ಮಾಡಿದ ನಂತರ ಅದಕ್ಕೆ ಸಂಬಂಧಪಟ್ಟ ಪಿಡಿಓ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ವರದಿಯನ್ನು ಸಲ್ಲಿಸುತ್ತಾರೆ.
ವರದಿ ಸರಿಯಾಗಿದ್ದು ಪಿಡಿಯೋ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ತಂಬ್ ನೀಡಿದ ನಂತರ ಬದು ನಿರ್ಮಾಣ ಮಾಡಿದ ಕಾರ್ಮಿಕರ ಖಾತೆಗೆ ಹಣ ಜಮಾ ಆಗುತ್ತದೆ. ಇಲ್ಲಿ ಬದು ನಿರ್ಮಾಣ ಕಾರ್ಯ ಪೂರ್ಣವಾಗಿ ಮುಗಿದಿರಬೇಕು. ಈ ಬದು ನಿರ್ಮಾಣ ಕಾರ್ಯದ ಕುರಿತು ನಿಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕೆನಿಸಿದರೆ ನಿವು ಸಂಬಂಧಪಟ್ಟ ನಿಮ್ಮ ಪಿಡಿಓ ಅಥವಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಕಾರ್ಯವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ನೀವು ಕೂಡ ನಿಮ್ಮ ಜಮೀನಿನಲ್ಲಿ ಸುಲಭವಾಗಿ ಬದು ನಿರ್ಮಾಣ ಮಾಡಿಕೊಳ್ಳಬಹುದು ಇದರಿಂದಾಗಿ ನಿಮ್ಮ ವ್ಯವಸಾಯಕ್ಕೂ ಕೂಡ ತುಂಬಾ ಅನುಕೂಲವಾಗುತ್ತದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ತಿಳಿಸಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430