ಬರಿ 1500 ಸಾವಿರಕ್ಕೆ ಗೀಸರ್ ಒಂದು ನಿಮಿಷದಲ್ಲಿ ಬಿಸಿನೀರು ಬರತ್ತೆ ಗ್ಯಾಸ್ ನ ಅಗತ್ಯವಿಲ್ಲ

0 343

ನಾವಿಂದು ನಿಮಗೆ ತುಮಕೂರಿನ ಸ್ಟಾರ್ ಲೆಟ್ ಕಾರ್ಪೊರೇಷನ್ ನವರು ತಯಾರಿಸುವ ಅತಿ ಕಡಿಮೆ ಬೆಲೆಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮಾಡಿರುವ ಗೀಸರ್ ನ ಬಗ್ಗೆ, ಅದರ ಉಪಯೋಗಗಳೇನು ಅದನ್ನು ಯಾವ ರೀತಿಯಾಗಿ ಫಿಟಿಂಗ್ ಮಾಡಿಕೊಳ್ಳಬೇಕು ಮತ್ತು ಎಲ್ಲಿ ಎಲ್ಲಿ ಬಳಸಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.ಸ್ಟಾರ್ ಲೆಟ್ ಕಾರ್ಪೊರೇಷನ್ ನವರು ಎರಡು ರೀತಿಯಾದ ಗೀಸರ್ ಗಳನ್ನು ಉತ್ಪಾದನೆ ಮಾಡುತ್ತಾರೆ.ಅದರಲ್ಲಿ ಒಂದು, ಒಂದು ಲೀಟರ್ ಕೆಪಾಸಿಟಿಯುಳ್ಳ ಗೀಸರ್ ಮತ್ತೊಂದು ಎರಡುವರೆ ಲೀಟರ್ ಕೆಪ್ಯಾಸಿಟಿ ಇರುವ ಗೀಸರ್. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ಒಂದು ಲೀಟರ್ ನ ಗೀಸರ್ ಗೆ ಮೂರು ಸಾವಿರ ರೂಪಾಯಿ ಬೆಲೆ ಇರುತ್ತದೆ. ಒಂದು ಲಿಟರ್ ಗೀಸರ್ ಜೊತೆ ನಿಮಗೆ ಏನೆಲ್ಲ ಸಿಗುತ್ತದೆ ಎಂಬುದನ್ನು ನೋಡುವುದಾದರೆ ವಾರಂಟಿ ಕಾರ್ಡ್ ಇರುತ್ತದೆ ಒಂದು ಗೀಸರ್ ಯೂನಿಟ್ ಇರುತ್ತದೆ ಒಂದು.ಐದು ಮೀಟರ್ ಪೈಪು ಇರುತ್ತದೆ. ಜೊತೆಗೆ ಒಂದು ಕನೆಕ್ಟರ್ ಇರುತ್ತದೆ. ಇವುಗಳು ಪಿಟಿಂಗ್ ಮಾಡಿಕೊಳ್ಳುವುದಕ್ಕೆ ತುಂಬಾ ಸುಲಭವಾಗಿರುತ್ತದೆ. ಇದನ್ನ ಪಿಟಿಂಗ್ ಆದನಂತರ ಅವರು ಪೈಪ್ ಮತ್ತು ಕೊಳವೆಗಳನ್ನು ಕೊಟ್ಟಿರುತ್ತಾರೆ ಅದನ್ನು ನಲ್ಲಿಗೆ ಜೋಡಿಸಬೇಕು ಇನ್ನೊಂದು ತುದಿಯನ್ನು ಗೀಸರ್ ಗೆ ಜೋಡಿಸಬೇಕು ನಂತರ ನಲ್ಲಿಯನ್ನು ಚಾಲು ಮಾಡಬೇಕು ಆಗ ನೀರು ಬರುತ್ತಿರುತ್ತದೆ ನೀರು ಬಂದ ನಂತರ ಪ್ಲಗ್ ಪಾಯಿಂಟ್ ಅನ್ನ ಹಾಕಿ ಸ್ವಿಚ್ ಹಾಕಬೇಕು.

ನೀರು ಬಿಟ್ಟು ಸ್ವೀಚ್ ಅನ್ನು ಹಾಕಿದ ತಕ್ಷಣ ಅಲ್ಲಿ ಹಸಿರು ಲೈಟ್ ಹತ್ತಿಕೊಳ್ಳುತ್ತದೆ. ನೀವು ನೀರು ಬಿಟ್ಟು ಸ್ವಿಚ್ ಹಾಕಿದ ಹತ್ತು ಸೆಕೆಂಡುಗಳಲ್ಲಿ ನೀರು ಬಿಸಿ ಆಗುವುದಕ್ಕೆ ಪ್ರಾರಂಭವಾಗುತ್ತದೆ ನೀವು ನಲ್ಲಿಯನ್ನು ಚಾಲುಮಾಡಿರಬೇಕು. ಇದಕ್ಕೆ ಇಂತಿಷ್ಟೇ ಪ್ರಮಾಣದ ನೀರನ್ನು ಹಾಕಬೇಕು ಎಂಬ ಯಾವುದೇ ನಿಯಮ ಇಲ್ಲ ನಿಮಗೆ ಎಷ್ಟು ನೀರು ಬೇಕೋ ಅಷ್ಟು ನೀರನ್ನು ಇದರಲ್ಲಿ ಕಾಯಿಸಿಕೊಳ್ಳಬಹುದು ನಿಮ್ಮ ಟ್ಯಾಂಕ್ ನಲ್ಲಿ ಎಷ್ಟು ನೀರಿದೆ ಅಷ್ಟನ್ನು ಕೂಡ ಕಾಯಿಸಿಕೊಳ್ಳಬಹುದು. ಇದು ಯಾವುದೇ ರೀತಿಯಾಗಿ ಶಾಕ್ ಹೊಡೆಯುವುದಿಲ್ಲ.

ಒಂದುವೇಳೆ ನಿವು ನಲ್ಲಿಯನ್ನು ಬಂದು ಮಾಡಿ ಸ್ವಿಚ್ ಅನ್ನು ಆರಿಸುವುದಕ್ಕೆ ಮರೆತರೆ ಗೀಸರ್ ನಲ್ಲಿರುವ ನೀರು ತೊಂಬತ್ತು ಡಿಗ್ರೀವರೆಗೆ ಬಿಸಿಯಾಗಿ ತನ್ನಷ್ಟಕ್ಕೆ ತಾನೇ ಕಟ್ ಆಫ್ ಆಗುತ್ತದೆ ಇದರಲ್ಲಿ ಮ್ಯಾನುಯೆಲ್ ರಿಸೆಟ್ ಇರುತ್ತದೆ. ಇದರಿಂದ ವಿದ್ಯುತ್ ವ್ಯಯವಾಗುವುದಿಲ್ಲ. ಈ ಗೀಸರ್ ಒಂದು ಕೆಜಿ ಗಿಂತ ಕಡಿಮೆ ತೂಕವಿರುತ್ತದೆ ಹೊರಗಡೆ ಪ್ರವಾಸಕ್ಕೆ ಹೋದಾಗ ಅಲ್ಲಿ ನಿಮಗೆ ಬಿಸಿನೀರಿನ ವ್ಯವಸ್ಥೆ ಬೇಕು ಎಂದರೆ ಇದನ್ನು ಆರಾಮವಾಗಿ ತೆಗೆದುಕೊಂಡು ಹೋಗಬಹುದು.

ಇನ್ನು ಇದರಲ್ಲಿ ಎರಡು.ಐದು ಲೀಟರ್ ಗೀಸರ್ ಬರುತ್ತದೆ ಅದರಲ್ಲಿ ಅಂಗ್ಯುಲರ್ ಕಾಕ್ ಮಿಕ್ಸರ್ ಬರುತ್ತದೆ. ಇದನ್ನು ಕೂಡ ನೀವು ಎಷ್ಟು ಹೊತ್ತು ಬೇಕಾದರೂ ಇದನ್ನು ಬಳಸಬಹುದು ಇದರಲ್ಲಿಯೂ ಕೂಡ ಅಟೋ ಕಟ್ ಆಫ್ ಸೌಲಭ್ಯವಿರುತ್ತದೆ ಜೊತೆಗೆ ಇದರಲ್ಲಿ ಆಟೊ ರಿಸೆಟ್ ಇರುತ್ತದೆ. ಇವರು ತಮ್ಮ ಬಳಿ ಬೇರೆ ಬೇರೆ ಕಂಪನಿಯ ಗೀಸರ್ ಗಳನ್ನು ಇಟ್ಟುಕೊಂಡಿದ್ದಾರೆ ಗ್ರಾಹಕರು ಖರೀದಿಗೆ ಬಂದಾಗ ತಮ್ಮ ಗೀಸರ್ ಮತ್ತು ಬೇರೆ ಗೀಸರ್ ಗಳ ಡೆಮೋ ತೋರಿಸುತ್ತಾರೆ ಆಗ ನಿಮಗೆ ಯಾವ ಗೀಸರ್ ಉತ್ತಮವಾಗಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿಯುತ್ತದೆ.

ನೀವು ಗೀಸರ್ ತೆಗೆದುಕೊಳ್ಳುವುದಕ್ಕೆ ಬೇರೆ ಯಾವುದೇ ಅಂಗಡಿಗಳಿಗೆ ಹೋದಾಗ ಅವರು ನಿಮಗೆ ಗೀಸರ್ ಕೊಡುತ್ತಾರೆ ಆದರೆ ಡೆಮೋ ಮಾಡಿ ತೋರಿಸುವುದಿಲ್ಲ. ಆದರೆ ಸ್ಟಾರ್ ಲೆಟ್ ಕಾರ್ಪೊರೇಷನ್ ಅವರು ನಿಮಗೆ ನೇರವಾಗಿ ಡೆಮೋ ಮಾಡಿ ತೋರಿಸುತ್ತಾರೆ. ಇದರಿಂದಾಗಿ ನಿಮಗೆ ಗೀಸರ್ ಅನ್ನು ಯಾವ ರೀತಿಯಾಗಿ ಬಳಕೆ ಮಾಡಬಹುದು ಎಂಬುದರ ಪೂರ್ಣ ಜ್ಞಾನ ಸಿಗುತ್ತದೆ.

ಈ ಗೀಸರ್ ಗಳ ಅಳತೆ ಚಿಕ್ಕದಾಗಿರುವುದರಿಂದ ಸಾಮಾನ್ಯವಾಗಿ ನೀವು ಸ್ನಾನದ ಕೋಣೆಗಳಲ್ಲಿ ಅಳವಡಿಸಿಕೊಳ್ಳಬಹುದು ಪಿಜಿ ಯಲ್ಲಿ ಇರುವವರು ಇದನ್ನು ಬಳಸಬಹುದು. ಅಡುಗೆಮನೆಯಲ್ಲಿ ನಲ್ಲಿಗೆ ಇದನ್ನು ಅಳವಡಿಸಿಕೊಂಡು ಪಾತ್ರೆ ತೊಳೆಯುವುದಕ್ಕೆ ಬಳಸಬಹುದು ಜೊತೆಗೆ ನೀವು ಇದನ್ನು ವಾಟರ್ ಪ್ಯೂರಿಫೈಯರ್ ಜೊತೆ ಜೋಡಿಸಬಹುದು. ಆದರೆ ನೀವು ಇದನ್ನು ಸ್ನಾನಕ್ಕೆ ಬಳಕೆ ಮಾಡಿದ ನಂತರ ಕುಡಿಯುವ ನೀರಿಗೆ ಬಳಸುವಂತಿಲ್ಲ.

ಇನ್ನು ನೀವು ಬೇರೆ ಗೀಸರ್ ಗಳನ್ನು ಬಳಸುವಾಗ ನೀವು ಅರ್ಧ ಗಂಟೆ ಇಪ್ಪತ್ತು ನಿಮಿಷ ಕಾಯಬೇಕಾಗುತ್ತದೆ ಆದರೆ ಇಲ್ಲಿ ನೀವು ಕಾಯುವ ಅವಶ್ಯಕತೆ ಇರುವುದಿಲ್ಲ. ನೀವು ಇವರ ಬಳಿ ಗೀಸರ್ ಗಳನ್ನೂ ಖರೀಧಿ ಮಾಡಿದರೆ ಅದಕ್ಕೆ ಅವರು ಹತ್ತುವರ್ಷಗಳ ಗ್ಯಾರೆಂಟಿ ಕೊಡುತ್ತಾರೆ ಜೊತೆಗೆ ಒಂದು ವರ್ಷದ ವರೆಗೆ ರಿಪ್ಲೇಸ್ಮೆಂಟ್ ಇರುತ್ತದೆ. ಕರ್ನಾಟಕದಲ್ಲಿ ಮೊಟ್ಟ ಮೊದಲಿಗೆ ತುಮಕೂರಿನ ಸ್ಟಾರ್ ಲೆಟ್ ಕಾರ್ಪೊರೇಷನ್ ನವರು ಈ ರೀತಿಯ ಗೀಸರ್ ಗಳನ್ನು ಮಾರುಕಟ್ಟೆಗೆ ತಂದವರು. ಗೀಸರ್ ಗಳನ್ನು ಸ್ವತಹ ಇವರೇ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿ ತಯಾರಿಸುತ್ತಾರೆ. ಖರೀದಿ ಮಾಡುವವರಿಗೆ ಸಹ ಇವರು ನೇರವಾಗಿ ಡೆಮೋ ಮಾಡಿ ತೋರಿಸುವುದರ ಜೊತೆಗೆ ಅದನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ತೋರಿಸುತ್ತಾರೆ.

ಇವರು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ಭಾರತದಾದ್ಯಂತ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ ನೀವು ಹೋಲ್ಸೇಲ್ ಖರೀದಿ ಮಾಡಿದರೆ ಕಡಿಮೆ ಬೆಲೆಗೆ ಗೀಸರ್ ಕೊಡುತ್ತಾರೆ ನೀವು ಆನ್ಲೈನ್ ಮೂಲಕ ಕೂಡ ಇವರಿಂದ ಗೀಸರ್ ಗಳನ್ನು ಖರೀದಿ ಮಾಡಬಹುದು. ನೀವು ಕೂಡ ಒಂದು ಬಾರಿ ಕಡಿಮೆ ಬೆಲೆಗೆ ಸಿಗುವ ಉತ್ತಮ ಗುಣಮಟ್ಟದ ಈ ಗೀಸರ್ ಗಳನ್ನು ಖರೀದಿ ಮಾಡಿ ಅದರ ಲಾಭವನ್ನು ಪಡೆದುಕೊಳ್ಳುವುದರ ಜೊತೆಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. video Credit For ಕನ್ನಡ ಕುವರ

Leave A Reply

Your email address will not be published.