ಕೋಳಿ ಸಾಕಾಣಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು. ಎಂಜಿನಿಯರಿಂಗ್ ಓದಿದ ಯುವಕ ತನ್ನದೆ ಸ್ವಂತ ಕೋಳಿ ಫಾರ್ಮ್ ನಿರ್ಮಿಸಿ ಯಾರ ಕೈಕೆಳಗೆ ಕೆಲಸ ಮಾಡದೆ ಲಾಭ ಗಳಿಸುತ್ತಿದ್ದಾರೆ. ಅವರ ಕೋಳಿ ಫಾರ್ಮ್ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಎಂಬ ಗ್ರಾಮದ ಮನೋಹರ ಎಂಬುವವರು ಎಂಜಿನಿಯರಿಂಗ್ ಓದಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿ ನಂತರ 13 ವರ್ಷಗಳಿಂದ ನಾಟಿ ಕೋಳಿ ಫಾರ್ಮ್ ಅನ್ನು ಮಾಡುತ್ತಿದ್ದಾರೆ. ಅವರು ಅಗ್ರಿಕಲ್ಚರ್ ರಿಲೇಟೆಡ್ ಏನಾದರೂ ಮಾಡಬೇಕು ಎಂದು ಯೋಚಿಸಿದಾಗ ಅವರಿಗೆ ಹೊಳೆದಿದ್ದು ನಾಟಿ ಕೋಳಿ ಫಾರ್ಮ್. ಅವರ ಫಾರ್ಮ್ ನಲ್ಲಿ ನಾಟಿ ಕೋಳಿ ಮರಿಗಳು, ಕೋಳಿ ಮಾಂಸ, ಮೊಟ್ಟೆ ಸಿಗುತ್ತದೆ. ಮೂರರಿಂದ ಎಂಟು ಸಾವಿರ ಮರಿಗಳನ್ನು ಉತ್ಪತ್ತಿ ಮಾಡುತ್ತಾರೆ ಅವುಗಳಲ್ಲಿ ಕೆಲವು ಮರಿಗಳನ್ನು ತಾವೆ ಸಾಕುತ್ತಾರೆ ಇನ್ನು ಕೆಲವು ಮರಿಗಳನ್ನು ರೈತರಿಗೆ ಮಾರಾಟ ಮಾಡುತ್ತಾರೆ. ಮೊಟ್ಟೆಗೆ ಹತ್ತರಿಂದ ಹದಿನೈದು ರೂಪಾಯಿ, ಒಂದು ದಿನದ ಕೋಳಿಮರಿಗೆ 35ರಿಂದ 36 ರೂಪಾಯಿ, ಒಂದು ತಿಂಗಳ ಕೋಳಿ ಮರಿಗೆ 90-95 ರೂಪಾಯಿವರೆಗೆ ಮಾರಾಟ ಮಾಡುತ್ತಾರೆ. ಅವರು ಕೋಳಿಗಳಿಗೆ ಸೋಯಾ ಬೇಸ್ಡ್ ಫೀಡ್ಸ್ ಹಾಕುತ್ತಾರೆ.
ಹೆಚ್ಚಿನ ಸಂಖ್ಯೆಯ ಕೊಳಿಗಳಿದ್ದರೆ ಹೊರಗೆ ಮೇವನ್ನು ತಿನ್ನಲು ಬಿಡುತ್ತಾರೆ. ಒಂದು ತಿಂಗಳಲ್ಲಿ ಒಂದು ಕೋಳಿಗೆ 160 ರಿಂದ 170 ರೂಪಾಯಿ ಫೀಡ್ ಖರ್ಚು ಬರುತ್ತದೆ. ಫೀಡ್ ಖರ್ಚನ್ನು ಕಡಿಮೆ ಮಾಡಬಹುದು ಆದರೆ ಕೋಳಿಗೆ ಬೇಕಾದ ಪ್ರೋಟಿನ್ ಸಿಗುವುದಿಲ್ಲ. ಕೋಳಿ ಹುಟ್ಟಿದ ಒಂದು ದಿನಕ್ಕೆ, ಏಳು ದಿನಕ್ಕೆ, 14 ದಿನಗಳಿಗೆ, 21 ದಿನಕ್ಕೆ ನಂತರ ಒಂದರಿಂದ ಎರಡು ತಿಂಗಳಿಗೆ ವ್ಯಾಕ್ಸಿನೇಷನ್ ಹಾಕುತ್ತಾರೆ. ಮೆಂಟೇನೆನ್ಸ್ ಇಂದ ಖಾಯಿಲೆ ಬರುವ ಸಾಧ್ಯತೆ ಇದೆ. ಮನೋಹರ್ ಅವರು ಕೋಳಿ ಸಾಕುವ ಶೆಡ್ ಅನ್ನು ಪೂರ್ವಪಶ್ಚಿಮವಾಗಿ ಉದ್ದವಾಗಿ ಉತ್ತರ ದಕ್ಷಿಣವಾಗಿ ಅಗಲವಾಗಿ ನಿರ್ಮಿಸಿಕೊಂಡಿದ್ದಾರೆ. 50 ರಿಂದ 120 ಅಡಿ ಉದ್ದ, 20ರಿಂದ 25 ಅಡಿ ಅಗಲ ಇರಬೇಕು, ಗಾಳಿ-ಬೆಳಕು ಉತ್ತಮವಾಗಿರಬೇಕು. ಇಲಿಗಳು ಶೆಡ್ ಒಳಗೆ ಬರುತ್ತದೆ ಅದಕ್ಕೆ ಔಷಧಿ ಕೊಡುವ ಮೂಲಕ ಇಲಿಗಳು ಬರದಂತೆ ನೋಡಿಕೊಳ್ಳುತ್ತಾರೆ. ಅವರು ತಮ್ಮ ಶೆಡ್ ನಲ್ಲಿ 15 ದಿನಗಳ ಬ್ಯಾಚ್ ಮಾಡಿ ಸಾಕುತ್ತಿದ್ದಾರೆ ಇದರಿಂದ ಎಂಟರಿಂದ ಹತ್ತು ಸಾವಿರ ಕೋಳಿ ಮರಿಗಳನ್ನು ಸಾಕುತ್ತಿದ್ದಾರೆ.
ಕೋಳಿಗಳನ್ನು ಕಾವು ಕೂರಿಸುವುದು ಹಾಗೂ ಮಷೀನರಿ ಪ್ರೊಸೆಸ್ ಇಂದ ಮೊಟ್ಟೆಗಳು ಅಭಿವೃದ್ಧಿಯಾಗುತ್ತದೆ. ಕಾವು ಕೂರುವುದರಿಂದ ಒಂದು ಕೋಳಿ ಇಂದ 12 ರಿಂದ15 ಮೊಟ್ಟೆ ಸಿಗುತ್ತದೆ, ಮಷೀನ್ ನಲ್ಲಿ ನೂರರಿಂದ ಒಂದು ಲಕ್ಷದವರೆಗೆ ಮೊಟ್ಟೆಗಳನ್ನು ಕೂರಿಸಬಹುದು. ಅವರು ಮಾಸ್ ಪ್ರೊಡಕ್ಷನ್ ಮಾಡುತ್ತಾರೆ. ಮನೋಹರ್ ಅವರ ಫಾರ್ಮ್ ನಲ್ಲಿ ಮಷೀನ್ ಗಳಿದ್ದು ಮಷೀನ್ ಗಳನ್ನು ಸೆಟ್ ಮಾಡಲು 12 ಲಕ್ಷ ರೂಪಾಯಿ ಖರ್ಚಾಗಿದೆ. ಮರಿ ಹಾಕಿದ ಮೇಲೆ ಕೋಳಿಯು ತನ್ನ ಮರಿಗಳಿಗೆ ಶಾಖ ಕೊಡುತ್ತದೆ ಯಾಕೆಂದರೆ ಮರಿಗಳಲ್ಲಿ ಕೆಲವು ಅಂಗಗಳು ಅಭಿವೃದ್ಧಿಯಾಗಲು ಹೆಚ್ಚಿನ ಸಂಖ್ಯೆಯ ಮರಿಗಳನ್ನು ಅಭಿವೃದ್ಧಿ ಮಾಡಬೇಕಾಗಿರುವ ಕಾರಣ ಬ್ರೂಡಿಂಗ್ ಸಿಸ್ಟಮ್ ಮಾಡಿಕೊಳ್ಳಲಾಗಿದೆ. ಮನೋಹರ್ ಅವರು ಕೋಳಿಗಳನ್ನು ನೇರವಾಗಿ ರೈತರಿಗೆ ಮಾರಾಟ ಮಾಡುತ್ತಿದ್ದು ಕೆಜಿಗೆ 300 ರಿಂದ 320 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯ ಕೋಳಿ ಮರಿಗಳನ್ನು ಸಾಕುವುದರಿಂದ ಮೂತಿ ಸುಡುವ ಅವಶ್ಯಕತೆ ಇರುತ್ತದೆ ಕೋಳಿಗಳು ಒಂದಕ್ಕೊಂದು ಜಗಳ ಮಾಡಿಕೊಂಡು ಕಚ್ಚಿ ಸಾಯಿಸುವಂತಹ ಸಾಧ್ಯತೆಗಳು ಇರುತ್ತವೆ ಅದನ್ನು ತಪ್ಪಿಸಲು ಮೂತಿ ಸುಡುವ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗಿದೆ. ಮೊದಲಿಗೆ ಇವರು ಕೃಷಿ ಮೇಳ, ಕೃಷಿ ಎಕ್ಸಿಬಿಷನ್ ಗಳಲ್ಲಿ ಕೋಳಿಗಳನ್ನು ಮಾರಾಟ ಮಾಡುತ್ತಿದ್ದರು. ಮಾಂಸಕ್ಕೆ ಸಾಕಲಾದರೆ ನಾಲ್ಕರಿಂದ ನಾಲ್ಕೂವರೆ ತಿಂಗಳಿಗೆ ಬ್ಯಾಚ್ ಮಾಡಲಾಗುತ್ತದೆ. ಮೊಟ್ಟೆ ಉದ್ದೇಶದಿಂದ ಸಾಕುವುದಾದರೆ ಐದಾರು ತಿಂಗಳಿಗೆ ಬ್ಯಾಚ್ ಮಾಡಲಾಗುತ್ತದೆ.
ಒಂದು ಕೋಳಿಗೆ ಇನ್ನೂರು ರುಪಾಯಿ ಖರ್ಚು ಮಾಡಬೇಕಾಗುತ್ತದೆ ನಂತರ ಅದನ್ನು 320 ರೂಪಾಯಿಗೆ ಮಾರಾಟ ಮಾಡುವುದರಿಂದ ನೂರು ರೂಪಾಯಿ ಒಂದು ತಿಂಗಳ ಲಾಭ ಗಳಿಸಬಹುದು. ಹಳ್ಳಿಗಳಲ್ಲಿ ಸಾಕಾಣಿಕೆ ಮಾಡಿರುವವರ ಹತ್ತಿರ ಮೊಟ್ಟೆಗಳನ್ನು ತೆಗೆದುಕೊಳ್ಳುತ್ತಾರೆ. ನಾಟಿಕೋಳಿಯ ಕಾಲು ಸ್ಲಿಮ್ ಆಗಿರುತ್ತದೆ ಹುಂಜದ ಬಾಲ ಕಾಮನಬಿಲ್ಲಂತೆ ಬೆಂಡಾಗಿರುತ್ತದೆ. ಹೈಬ್ರಿಡ್ ಕೋಳಿಗಳಲ್ಲಿ ಬಾಲ ಸ್ಟ್ರೇಟ್ ಆಗಿರುತ್ತದೆ. ನಾಟಿ ಕೋಳಿ ನೋಡಲು ಹೈಪರ್ ಆಕ್ಟಿವ್ ಆಗಿರುತ್ತದೆ. ನಾಟಿ ಕೋಳಿಯ ಮೊಟ್ಟೆ ಒಡೆದಾಗ ಡಾರ್ಕ್ ಯೆಲ್ಲೊ ಅಥವಾ ಡಾರ್ಕ್ ಆರೆಂಜ್ ಇರುತ್ತದೆ. ಮನೋಹರ್ ಅವರ ಪ್ರಕಾರ ನಾಟಿ ಕೋಳಿ ಸಾಕಾಣಿಕೆ ಸುಲಭವಾಗಿದೆ. ನಾಟಿ ಕೋಳಿಗಳನ್ನು ಎರಡುವರೆ ವರ್ಷದವರೆಗೆ ಇಟ್ಟುಕೊಳ್ಳಬಹುದು.
ವ್ಯಾಕ್ಸಿನೇಷನ್ ಮಾಡಿಸದೆ ಇದ್ದರೆ ಒಂದು ಕೋಳಿ ಸತ್ತು ಹೋದರೆ ಉಳಿದ ಕೋಳಿಗಳು ಸಾಯುವ ಸಾಧ್ಯತೆಗಳಿರುತ್ತದೆ. ವಾತಾವರಣ ಬದಲಾವಣೆಯಿಂದ ಕೋಳಿಗಳಿಗೆ ರೋಗ ಬರುವ ಸಾಧ್ಯತೆಗಳಿದೆ. ಹೈಬ್ರಿಡ್ ಕೋಳಿಗಳಿಗೆ ಹೋಲಿಸಿದರೆ ನಾಟಿ ಕೋಳಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಮನೋಹರ್ ಅವರ ಕೋಳಿ ಶೆಡ್ ನಲ್ಲಿ ವೆಂಟಿಲೇಶನ್, ಆಟೋಮೆಟಿಕ್ ನೀರಿನ ವ್ಯವಸ್ಥೆ, ಫೀಡ್, ಹಸಿರು ಹುಲ್ಲು, ಲೈಟ್ಸ್ ಇದೆ. ಮನೋಹರ್ ಅವರು ಹೊಸದಾಗಿ ಕೋಳಿ ಸಾಕಾಣಿಕೆ ಮಾಡಬೇಕೆಂದು ಬಯಸುವವರು ಮೀಡಿಯಂ ಶೆಡ್ ಇರಲೇಬೇಕು, ತಮ್ಮ ಪ್ರೊಡಕ್ಟ್ ಗಳಿಗೆ ತಾವೆ ಮಾರ್ಕೆಟಿಂಗ್ ಮಾಡುವುದಾದರೆ ಲಾಭ ಗಳಿಸಬಹುದು ಎಂದು ಹೇಳುತ್ತಾರೆ.
ಮನೋಹರ್ ಅವರು ಕೋಳಿಗಳ ಪಿಕ್ಕೆಗಳನ್ನು ಸಂಗ್ರಹಿಸಿ ತಮ್ಮ ಜಮೀನಿಗೆ ಬಳಸುತ್ತಾರೆ. ಅವರಿಗೆ ಒಂದು ಶೆಡ್ ನಿಂದ 4-5 ಟ್ರಾಕ್ಟರ್ ಗೊಬ್ಬರ ಸಿಗುತ್ತದೆ. ಮಣ್ಣು ಮಿಕ್ಸ್ ಇಲ್ಲದೆ ಇದ್ದರೆ 4,000 ರೂಪಾಯಿ ಬೆಲೆ ಸಿಗುತ್ತದೆ. ಕೋಳಿಗಳು ಬರುವ ಮೊದಲು ಶೆಡ್ ನಲ್ಲಿ ಬ್ರೂಡಿಂಗ್ ಸೆಟಪ್ ಮಾಡಬೇಕು, ಫೀಡ್ ಗೆ ವ್ಯವಸ್ಥೆ ಮಾಡಬೇಕು. ಹೊಸದಾಗಿ ನಾಟಿಕೋಳಿ ಸಾಕಾಣಿಕೆ ಮಾಡುವವರು ಕೋಳಿಗಳನ್ನು ಸಾಕಿ ನಿಮಗೆ ನೀವೆ ಮಾರ್ಕೆಟಿಂಗ್ ಮಾಡುವ ಸಾಮರ್ಥ್ಯ ಹೊಂದಿರಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.