ನಾವಿಂದು ನಿಮಗೆ ನಾಟಿ ಕೋಳಿ ಸಾಕಾಣಿಕೆಯ ಗುಟ್ಟುಗಳ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇತ್ತೀಚಿಗೆ ಕೋಳಿ ಸಾಗಾಣಿಕೆ ಬೃಹತ್ ಉದ್ಯಮವಾಗಿ ಬೆಳೆದಿದೆ. ದೇಶದಲ್ಲಿ ಲಕ್ಷಾಂತರ ಜನ ಕೋಳಿ ಸಾಕಾಣಿಕೆಯನ್ನು ಆರಂಭಿಸಿದ್ದಾರೆ. ಭಾರತವು ಮೊಟ್ಟೆ ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನ ಮತ್ತು ಕೋಳಿ ಮಾಂಸ ಉತ್ಪಾದನೆಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಪೈಕಿ ಕರ್ನಾಟಕದ ಕೋಳಿ ಉತ್ಪಾದನೆಯು ದೇಶದಲ್ಲಿಯೇ ಐದನೇ ಸ್ಥಾನದಲ್ಲಿದೆ. ಬೇರೆ ಯಾವುದೇ ಮಾಂಸಕ್ಕಿಂತ ಕೋಳಿಮಾಂಸ ಉತ್ತಮ ಅಲ್ಲದೇ ಇತ್ತೀಚಿಗೆ ಹುಂಜದ ಸಹಾಯವಿಲ್ಲದೆ ಮೊಟ್ಟೆ ಉತ್ಪಾದನೆ ಮಾಡುತ್ತಿರುವುದರಿಂದ ಅದನ್ನು ಸಸ್ಯಹಾರಿ ಆಹಾರ ಅಥವಾ ಎಗ್ಗೇರಿಯನ್ ಎಂದು ಭಾವಿಸಬಹುದು. ಕೋಳಿಗಳು ಕಡಿಮೆ ಪ್ರಮಾಣದ ಆಹಾರ ಮತ್ತು ವೆಸ್ಟ್ ಪದಾರ್ಥಗಳನ್ನು ತಿಂದು ಉತ್ತಮ ಪ್ರಾಣಿಜನ್ಯ ಪ್ರೋಟೀನ್ ಅನ್ನು ಒದಗಿಸುತ್ತವೆ.
ಇವು ತಿನ್ನುವ ಆಹಾರ ಕಡಿಮೆ ಹಾಗೂ ಬೇಕಾದ ಸ್ಥಳಾವಕಾಶವು ಕಡಿಮೆ ಹೀಗಾಗಿ ಕೋಳಿ ಸಾಕಾಣಿಕೆ ತುಂಬಾ ಸುಲಭ ಶ್ರಮ ಕಡಿಮೆ ಲಾಭ ಜಾಸ್ತಿ. ಕೇವಲ ಬೆರಳೆಣಿಕೆಯ ದಿನಗಳಲ್ಲಿ ಉತ್ತಮ ಲಾಭ ಪಡೆಯಬಹುದು. ರೈತರು ಸಣ್ಣ ಪ್ರಮಾಣದಲ್ಲಿ ನಾಟಿ ಅಥವಾ ಸುಧಾರಿತ ನಾಟಿ ಕೋಳಿ ಸಾಕಾಣಿಕೆ ಮಾಡಿ ಲಾಭ ಪಡೆಯಬಹುದು. ಆದರೆ ಕೋಳಿ ಸಾಕಾಣಿಕೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಬೆಳೆದಾಗ ಮಾತ್ರ ಲಾಭ ಸಾಧ್ಯ ಉತ್ತಮ ತಳಿಗಳ ಮರಿಗಳ ಆಯ್ಕೆ ಅವುಗಳ ಆಹಾರ ಸಾಕಾಣಿಕೆಯ ಕ್ರಮ ರೋಗ ನಿರ್ವಹಣೆ ಮೊಟ್ಟೆ ಮತ್ತು ಮಾಂಸ ಮಾರಾಟ ವ್ಯವಸ್ಥೆಯ ಬಗ್ಗೆ ವ್ಯವಸ್ಥಿತವಾದ ರೂಪುರೇಷೆ ಬೇಕು. ನಾಟಿ ಕೋಳಿ ಸಾಕಾಣಿಕೆ ಮಾಡಿಕೊಳ್ಳುವ ಮೊದಲು ಒಳ್ಳೆಯ ಶೆಡ್ ನಿರ್ಮಿಸಿಕೊಳ್ಳಬೇಕು. ಹತ್ತರಿಂದ ಹನ್ನೆರಡು ಅಡಿ ಎತ್ತರ ಇಪ್ಪತ್ತರಿಂದ ಇಪ್ಪತ್ತೈದು ಅಡಿ ಅಗಲವಾದ ಶೇಡ್ ಉತ್ತಮವಾದುದು.
ಈ ವಿನ್ಯಾಸದಲ್ಲಿ ಇದ್ದರೆ ಗಾಳಿಬೆಳಕು ಸಮೃದ್ಧವಾಗಿರುತ್ತದೆ ಸುತ್ತಲೂ ಕಬ್ಬಿಣದ ಮೆಸ್ ಹಾಕಿ ಪ್ರಾಣಿಗಳು ಒಳಬಾರದಂತೆ ಭದ್ರವಾಗಿ ಮುಚ್ಚಿರಬೇಕು ಕೋಳಿಮರಿಗಳು ಶೆಡ್ ಗೆ ಬಂದ ಕೂಡಲೇ ಆ ಮರಿಗಳಿಗೆ ಬೆಲ್ಲದ ನೀರನ್ನ ಕೊಡಬೇಕು. ಏಕೆಂದರೆ ಮರಿಗಳು ಮೊಟ್ಟೆಯಿಂದ ಹೊರಬಂದ ಕೂಡಲೇ ಅವುಗಳಿಗೆ ಯಾವುದೇ ರೀತಿಯ ಆಹಾರ ನೀರನ್ನು ಕೊಡುವುದಿಲ್ಲ ಹೀಗಾಗಿ ಶೆಡ್ ಗೆ ಬಂದಾಗ ತುಂಬಾ ಆಯಾಸ ಗೊಂಡಿರುತ್ತವೆ. ಅದನ್ನು ನಿವಾರಿಸುವುದಕ್ಕೆ ಅವುಗಳಿಗೆ ಬೆಲ್ಲದ ನೀರನ್ನು ಕೊಟ್ಟರೆ ಪೋಷಕಾಂಶವುಳ್ಳ ಸಿಹಿಯಾದ ಬೆಲ್ಲದ ನೀರನ್ನು ಹೆಚ್ಚಾಗಿ ಕುಡಿಯುತ್ತವೆ. ಆಗ ಅವುಗಳ ಆಯಾಸ ನಿವಾರಣೆಯಾಗುತ್ತದೆ ಕೋಳಿ ಮರಿಗೆ ಒಂದರಿಂದ ಎಂಟನೇ ದಿನದವರೆಗೂ ಬೆಚ್ಚನೆಯ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಕೋಳಿಗಳು ಸಾವನ್ನಪ್ಪುವುದು ಕಡಿಮೆಯಾಗುತ್ತದೆ.
ನಾಲ್ಕು ಅಥವಾ ಐದನೇ ದಿನಕ್ಕೆ ಎಫ್ ಒನ್ ಎನ್ನುವ ವ್ಯಾಕ್ಸಿನ್ ಅನ್ನು ಒಂದು ಕಣ್ಣಿಗೆ ಬಿಡಬೇಕು ಇದರಿಂದ ಕೋಳಿಗಳಿಗೆ ಕೊಕ್ಕರೆ ಜ್ವರ ಬರುವುದಿಲ್ಲ. ಅದೇರೀತಿ ಹದಿನಾಲ್ಕನೇ ದಿನ ಐಬಿಡಿ ಎಂಬ ವ್ಯಾಕ್ಸಿನ್ ಕೊಡಬೇಕು ಹಾಲು ಮತ್ತು ತಣ್ಣನೆಯ ನೀರಿಗೆ ಲಸಿಕೆಯನ್ನು ಹಾಕಿ ಮರಿಗಳಿಗೆ ಕುಡಿಸಬೇಕು ಹೀಗೆ ಮಾಡುವುದರಿಂದ ಕೋಳಿಗಳಿಗೆ ಸಾಂಕ್ರಾಮಿಕ ಬರ್ಸಲ್ ಕಾಯಿಲೆ ಬರುವುದಿಲ್ಲ. ಈ ಕಾಯಿಲೆ ಬಂದರೆ ಕೋಳಿಗಳು ಆಹಾರ ಸೇವನೆ ಮಾಡದೇ ಒಂದೇ ಕಡೆ ಕುಳಿತುಕೊಳ್ಳುತ್ತವೆ ಮತ್ತು ಬಿಳಿಯ ಮತ್ತು ತಿಳಿಯಾದ ಹಿಕ್ಕಿಯನ್ನು ಹಾಕುತ್ತವೆ. ಇದರಿಂದ ಕೋಳಿಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇಪ್ಪತ್ನಾಲ್ಕನೇ ದಿನ ಲಸೋಟ ಲಸಿಕೆಯನ್ನು ಯಥಾಪ್ರಕಾರ ತಂಪಾದ ಹಾಲಿಗೆ ಅಥವಾ ನೀರಿಗೆ ಮಿಶ್ರಣ ಮಾಡಿ ಹಾಕಬೇಕು
ಇನ್ನು ಆಹಾರಕ್ರಮದ ಬಗ್ಗೆ ನೋಡುವುದಾದರೆ ಪ್ರತಿದಿನ ಆರರಿಂದ ಎಂಟು ಗಂಟೆಯ ಒಳಗೆ ಕೋಳಿಗಳಿಗೆ ಆಹಾರವನ್ನು ಕೊಡಬೇಕು. ನಂತರ ಶೆಡ್ಡಿನಿಂದ ಹೊರಗಡೆ ಓಡಾಡುವುದಕ್ಕೆ ಅವುಗಳಿಗೆ ಜಾಗ ಮಾಡಿರಬೇಕು ಆ ಜಾಗದಲ್ಲಿ ರೋಡ್ಸ್ ಹುಲ್ಲು ಬೆಳೆದರೆ ಕೋಳಿಗಳು ಅವುಗಳನ್ನು ಚೆನ್ನಾಗಿ ತಿನ್ನುತ್ತವೆ. ಇದರಿಂದ ಬಹಳಷ್ಟು ಖರ್ಚು ಕಮ್ಮಿಯಾಗುತ್ತದೆ ಆ ಹುಲ್ಲು ಪೌಸ್ಟಿಕ್ ಅಂಶವನ್ನು ಹೊಂದಿರುತ್ತದೆ ಇದರ ಜೊತೆಗೆ ಅಕ್ಕಿನುಚ್ಚು ಅಕ್ಕಿ ತವುಡು ಜೋಳ ಇತರೆ ಧಾನ್ಯಗಳನ್ನು ಹಾಕಬಹುದು.
ಪ್ರತಿದಿನ ಒಂದು ಕೋಳಿಗೆ ತಲಾ ನೂರು ಗ್ರಾಮ ಆಹಾರ ಬೇಕು ಇವುಗಳ ಜೊತೆಗೆ ಕೋಳಿಗೆ ಆಹಾರವಾಗಿ ಅಜೋಲಾವನ್ನು ನೀಡಬಹುದು. ತಿಂಗಳಿಗೊಮ್ಮೆ ಬೆಲ್ಲದ ನೀರಿಗೆ ನಿಂಬೆರಸವನ್ನು ಸೇರಿಸಿ ಕೊಡುವುದರಿಂದ ನಾಟಿ ಕೋಳಿಗಳು ಆರೋಗ್ಯವಾಗಿರುತ್ತವೆ. ಈ ರೀತಿಯಾಗಿ ಮಾಡುವುದರಿಂದ ನೀವು ಉತ್ತಮವಾದ ಕೋಳಿ ಉದ್ಯಮವನ್ನು ನಡೆಸಬಹುದಾಗಿದೆ ಮತ್ತು ಅದರಿಂದ ಉತ್ತಮ ಲಾಭವನ್ನು ಕೂಡ ಪಡೆಯಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.