ಕೋಳಿ ಸಾಕಣೆಯಲ್ಲಿ ಎರಡು ವಿಧ ಫಾರಂ ಕೋಳಿಗಳು ಮತ್ತು ಹಿತ್ತಿಲಲ್ಲಿ ಸಾಕುವ ನಾಟಿ ಕೋಳಿಗಳು ಫಾರಂ ಕೋಳಿಗಳಲ್ಲಿ ಮಾಂಸ ಮತ್ತು ಮೊಟ್ಟೆಗಾಗಿ ಸಾಕುವ ಪ್ರತ್ಯೇಕ ತಳಿಗಳಿರುತ್ತದೆ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಸಾಕುತ್ತಾರೆ ಇದಕ್ಕೆ ಹೆಚ್ಚಿನ ಬಂಡವಾಳ ಬೇಕು ಲಾಭವೂ ಹೆಚ್ಚು ಆದರೆ ದೇಶೀ ಕೋಳಿ ಸಾಕುವುದಿದ್ದರೆ ಹೆಚ್ಚಿನ ಹಣ ಹೂಡುವ ಅಗತ್ಯವಿಲ್ಲ
ವಿಶೇಷ ಆರೈಕೆಯೂ ಬೇಕಾಗಿಲ್ಲ ಹಳ್ಳಿಗಳಾದರೆ, ಇವುಗಳನ್ನು ಮನೆಯ ಹಿತ್ತಿಲಲ್ಲಿ ಬಿಟ್ಟು ಸಾಕಿಕೊಂಡು ಸಣ್ಣ ಪ್ರಮಾಣದಲ್ಲಿ ನಿರಂತರ ಆದಾಯ ಪಡೆಯಬಹುದು. ಇವುಗಳನ್ನು ಮಾಂಸ ಮತ್ತು ಮೊಟ್ಟೆಗಾಗಿ ಎರಡೂ ಉದ್ದೇಶಕ್ಕೆ ಸಾಕಬಹುದು. ನಾವು ಈ ಲೇಖನದ ಮೂಲಕ ಕಡಿಮೆ ಖರ್ಚಿ ನಲ್ಲಿ ಹೇಗೆ ನಾಟಿಕೋಳಿಯನ್ನ ಸಾಗಾಣಿಕೆ ಮಾಡಬಹುದು ಎಂಬುದನ್ನು ತಿಳಿಯೋಣ.
ನಾಗೇಶರವರು ಒಂದು ವರ್ಷದಿಂದ ನಾಟಿಕೋಳಿ ವ್ಯಾಪಾರ ಮಾಡುತ್ತಿದ್ದು ಹಾಗೂ ನೂರಾ ಐವತ್ತು ನಾಟಿಕೊಳಿಯನ್ನು ಸಾಕುತ್ತಿದ್ದಾರೆ ಮತ್ತು ವ್ಯಾಪಾರದ ಪ್ರಾರಂಭದ ಹಂತದಲ್ಲಿ ಹತ್ತು ಕೋಳಿಯನ್ನು ತಂದು ಸಾಕಿದ್ದರು ಹಾಗೂ ಕೋಳಿಗಳಿಗೆ ಶೆಡ್ ಅನ್ನು ನಿರ್ಮಿಸಿದ್ದರು ಹಾಗೂ ಪ್ರಂಚಿಂಗ್ ಮಾಡಲು ಸುಮಾರು ನಾಲ್ಕೂವರೆ ಸಾವಿರದಷ್ಟು ಹಣ ಬೇಕಾಗುತ್ತದೆ ಕೋಳಿಗಳ ಶೆಡ್ ನಿರ್ಮಾಣ ಕಾರ್ಯಗಳಿಗೆ ಮೂವತ್ತು ಸಾವಿರದಷ್ಟು ಹಣ ಬೇಕಾಗುತ್ತದೆ ಹೀಗೆ ಕಡಿಮೆ ಬಂಡವಾಳದ ಮೂಲಕ ಹೆಚ್ಚು ಲಾಭವನ್ನು ಪಡೆಯಬಹುದು ಹಾಗೆಯೇ ಕೋಳಿಗಳಿಗೆ ಹೆಚ್ಚಿನ ಆರೈಕೆ ಬೇಕಾಗುವುದಿಲ್ಲ
ಕೋಳಿ ಸಾಕಾಣಿಕೆಯಲ್ಲಿ ಕೊಳಿಗಳಿಗೆ ವಿಶೇಷ ಫುಡ್ ನೀಡುತ್ತಾರೆ ಹಾಗೂ ಅವುಗಳೆಂದರೆ ಅಕ್ಕಿ ಗೋದಿ ರಾಗಿಯನ್ನು ನೀಡುತ್ತಾರೆ ಹಾಗೂ ಕೊಳಿಗಳನ್ನು ಶೆಡ್ ಅಲ್ಲಿಯೇ ಇಟ್ಟರೆ ಅಷ್ಟೊಂದು ಕೋಳಿಗಳ ಬೆಳವಣಿಗೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಹಾಗೂ ನೂರಾ ಐವತ್ತು ಕೋಳಿಗಳಿಗೆ ಸುಮಾರು ಆರು ಕೆಜಿಯಷ್ಟು ದಿನನಿತ್ಯ ಆಹಾರವನ್ನು ನೀಡುತ್ತಾರೆ ಹಾಗೂ ಅಕ್ಕಿ ಗೋದಿ ಜೋಳ ಮತ್ತು ರಾಗಿಯನ್ನು ಮಿಕ್ಸ್ ಮಾಡಿ ಹಾಕುತ್ತಾರೆ ಮತ್ತು ದಿನಾಲೂ ಬುಸಾವನ್ನು ಎರಡು ಕೇಜಿ ಯಷ್ಟು ಹಾಕುತ್ತಾರೆ ಹಾಗೂ ನೂರಾ ಐವತ್ತು ಕೋಳಿಗಳಿಗೆ ಸುಮಾರು ನೂರು ರೂಪಾಯಿ ಯಷ್ಟು ಪ್ರತಿದಿನ ಖರ್ಚು ಬರುತ್ತದೆ
ಕೋಳಿಗಳಿಗೆ ರೋಗ ಬರುತ್ತದೆ ಅದೇನೆದರೆ ಕೋಳಿಗಳಿಗೆ ನೆಗಡಿ ಬರುತ್ತದೆ ಅದರ ಲಕ್ಷಣವೆಂದರೆ ಒಂದು ಥರ ಗೊರ ಗೋರ ಎಂಬ ಶಬ್ದ ಕೇಳಿಸುತ್ತದೆ ಆಗ ಒಂದು ಸೀರಪ್ಅನ್ನು ಹಾಕಬೇಕು ಹಾಗೂ ಮೊಟ್ಟೆಗಳನ್ನು ಸೆಲ್ ಮಾಡುವುದರಿಂದ ಹಾಗೂ ಕೋಳಿಗಳನ್ನು ಮಾರಾಟ ಮಾಡುವುದರಿಂದ ಲಾಭ ಗಳಿಸಬಹುದುಹಾಗೂ ಸಣ್ಣ ಮರಿಯಿದ್ದಾಗ ಅಕ್ಕಿ ನುಚ್ಚನ್ನು ಹಾಕಬೇಕು ನಾಟಿ ಕೋಳಿಯ ಮೊಟ್ಟೆಯನ್ನು ನಾಗೇಶ್ ರವರು ಹನ್ನೊಂದು ರೂಪಾಯಯಂತೆ ಮಾರಾಟ ಮಾಡುತ್ತಾರೆ ಒಂದು ಕೇಜಿ ನಾಟಿಕೊಳಿಯನ್ನು 550 ರೂಪಾಯಿಗೆ ಮಾರಾಟ ಮಾಡುತ್ತಾರೆ ಹಾಗೂ ಕೋಳಿ ಮೊಟ್ಟೆಯಿಟ್ಟು ಇಪ್ಪತ್ತ್ತೊಂದು ದಿನಕ್ಕೆ ಮರಿ ಹಾಕುತ್ತದೆಹೀಗೆ ನಾಟಿಕೋಳಿ ಸಾಕಾಣಿಕೆ ಯಲ್ಲಿ ಲಾಭವೇ ಹೊರತು ನಷ್ಟವಾ.ಗುವುದಿಲ್ಲ