ರೈತರಿಗೆ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ರೆ ಯಾವ ರೀತಿ ಲೋನ್ ಸೌಲಭ್ಯವಿದೆ ನೋಡಿ

0 2

ಎಲ್ಲ ರೈತರು ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮಾಡಿಸಲು ಹೇಗೆ ಅರ್ಜಿ ಸಲ್ಲಿಸಬೇಕು, ಈ ಕಾರ್ಡ್ ಮೂಲಕ ಎಷ್ಟು ಲೋನ್ ಪಡೆಯಬಹುದು, ಅದಕ್ಕೆ ಬಡ್ಡಿದರ ಎಷ್ಟಿರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಒಮ್ಮೆ ನೀವು ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿಕೊಂಡರೆ ಆ ಕಾರ್ಡ್ ನಲ್ಲಿ 3 ಲಕ್ಷ ರೂಪಾಯಿ ಹಣ ಇರುತ್ತದೆ. ಅದರಲ್ಲಿ ನೀವು ವಿತ್ ಡ್ರಾ ಮಾಡಿದ ಹಣಕ್ಕೆ ಮಾತ್ರ ಬಡ್ಡಿ ಇರುತ್ತದೆ, ವಿತ್ ಡ್ರಾ ಮಾಡದೆ ಇರುವ ಹಣಕ್ಕೆ ಬಡ್ಡಿ ಇರುವುದಿಲ್ಲ. 4 ರೂಪಾಯಿ ವಾರ್ಷಿಕ ಬಡ್ಡಿದರ ಇರುತ್ತದೆ. ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಫಾರ್ಮ್ ಅನ್ನು ನಿಮ್ಮ ಬಳಿ ಕಂಪ್ಯೂಟರ್ ಇದ್ದರೆ ಪ್ರಿಂಟ್ ತೆಗೆದುಕೊಳ್ಳಬಹುದು. ಮೊದಲು ನಿಮ್ಮ ಕಂಪ್ಯೂಟರ್ ನಲ್ಲಿ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ವೆಬ್ ಸೈಟ್ ಓಪನ್ ಮಾಡಿಕೊಂಡು ಅಲ್ಲಿ ಡೌನ್ಲೋಡ್ ಕೆಸಿಸಿ ಫಾರ್ಮ್ ಎಂದು ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು ಆಗ ಒಂದು ಪೇಜ್ ಓಪನ್ ಆಗುತ್ತದೆ ಅದನ್ನು ಪ್ರಿಂಟ್ ತೆಗೆದುಕೊಳ್ಳಬೇಕು.

ನಂತರ ಫಾರ್ಮ್ ನಲ್ಲಿ ಬ್ಯಾಂಕ್ ನ ಹೆಸರು, ಬ್ಯಾಂಕ್ ನ ಬ್ರ್ಯಾಂಚ್, ಲೋನ್ ಅಮೌಂಟ್, ನಿಮ್ಮ ಹೆಸರು, ಪಿಎಂ ಕಿಸಾನ್ ಅಕೌಂಟ್ ನಂಬರ್, ನೀವು ಈಗಾಗಲೆ ಯಾವುದಾದರೂ ಬ್ಯಾಂಕ್, ಸೊಸೈಟಿಯಲ್ಲಿ ಸಾಲ ಪಡೆದಿದ್ದರೆ ಬ್ಯಾಂಕ್ ಅಥವಾ ಸೊಸೈಟಿಯ ಹೆಸರನ್ನು, ಯಾವ ಗ್ರಾಮದಲ್ಲಿ ನಿಮ್ಮ ಜಮೀನಿದೆಯೊ ಆ ಗ್ರಾಮದ ಹೆಸರು, ಸರ್ವೆ ನಂಬರ್, ಜಮೀನಿನ ವಿಸ್ತಿರ್ಣ, ಬೆಳೆಯ ಹೆಸರು, ನೀವು ಒಂದು ವೇಳೆ ಪ್ರಾಣಿ ಸಾಕಾಣಿಕೆ ಮಾಡುತ್ತಿದ್ದರೆ ಅವುಗಳ ಬಗ್ಗೆ ಮಾಹಿತಿಯನ್ನು ಹಾಕಿ ಫಾರ್ಮ್ ಅನ್ನು ಭರ್ತಿ ಮಾಡಿ ನಿಮ್ಮ ಸೈನ್ ಮಾಡಿ ನಿಮ್ಮ ಹತ್ತಿರದ ಬ್ಯಾಂಕ್ ಗೆ ಭರ್ತಿಮಾಡಿದ ಫಾರ್ಮ್, ಪಾಸ್ ಬುಕ್ ನ ಪ್ರತಿ, ಆಧಾರ್ ಕಾರ್ಡ್ ತೆಗೆದುಕೊಂಡು ಹೋದರೆ ಅವರು ನಿಮ್ಮ ಹೆಸರು ಹಾಕಿ ಒಂದು ಅಕನಾಲೆಜ್ಮೆಂಟ್ ಕೊಡುತ್ತಾರೆ. ಸ್ವಲ್ಪ ದಿನಗಳ ನಂತರ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅಪ್ರೂವಲ್ ನೀಡಿ ಕಾರ್ಡ್ ಗೆ ಮೂರು ಲಕ್ಷ ರೂಪಾಯಿ ಹಣ ಡೆಪಾಸಿಟ್ ಇಟ್ಟು, ಕಾರ್ಡ್ ಅನ್ನು ನಿಮ್ಮ ಮನೆಗೆ ತಲುಪಿಸುತ್ತಾರೆ.

ಈ ರೀತಿ ಅರ್ಜಿಯನ್ನು ಸಲ್ಲಿಸಿ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮಾಡಿಸಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಜಾರಿಗೊಳಿಸಲಾಗಿದೆ. ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಹೊರತಾಗಿ ಬ್ಯಾಂಕ್ ಗಳಲ್ಲಿ ಲೋನ್ ತೆಗೆದುಕೊಂಡರೆ ಹೆಚ್ಚಿನ ಬಡ್ಡಿದರ ಕಟ್ಟಬೇಕಾಗುತ್ತದೆ

ಈ ಸಮಸ್ಯೆಯಿಂದ ರೈತರನ್ನು ಪಾರುಮಾಡಲು ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಸಹಕಾರಿಯಾಗಿದೆ. ಬಹಳಷ್ಟು ರೈತರಿಗೆ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಏನು ಎನ್ನುವುದರ ಬಗ್ಗೆ ಮಾಹಿತಿ ಇರುವುದಿಲ್ಲ ಆದ್ದರಿಂದ ಈ ಮಾಹಿತಿಯು ರೈತರಿಗೆ ಬಹಳ ಉಪಯುಕ್ತವಾಗಿದ್ದು, ಎಲ್ಲಾ ರೈತ ಬಾಂಧವರಿಗೂ ತಪ್ಪದೇ ತಿಳಿಸಿ.

Leave A Reply

Your email address will not be published.