ನಮ್ಮ ಮನೆಯ ಸುತ್ತಮುತ್ತ ಬೆಳೆಯುವ ಅನೇಕ ಗಿಡಗಳಲ್ಲಿ ಔಷಧೀಯ ಗುಣಗಳಿರುತ್ತವೆ ಆದರೆ ನಮಗೆ ತಿಳಿದಿರುವುದಿಲ್ಲ ಅಂತಹ ಗಿಡಗಳಲ್ಲಿ ಮುಟ್ಟಿದರೆ ಮುನಿ ಗಿಡವು ಒಂದು ನಾವಿಂದು ನಿಮಗೆ ಮುಟ್ಟಿದರೆ ಮುನಿ ಗಿಡದ ಕೆಲವು ಪ್ರಯೋಜನಗಳ ಬಗ್ಗೆ ತಿಳಿಸಿಕೊಡುತ್ತೇವೆ.
ಮುಟ್ಟಿದರೆ ಮುನಿ ಗಿಡ ಸಾಮಾನ್ಯವಾಗಿ ಎಲ್ಲರ ಮನೆಯ ಬಳಿ ಇರುತ್ತದೆ ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ ಇದರಿಂದ ಯಾವ ರೀತಿಯಾಗಿ ಉಪಯೋಗವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಮುಟ್ಟಿದರೆ ಮುನಿ ಎಂಬ ಗಿಡವನ್ನು ನಾಚಿಕೆ ಮುಳ್ಳು ಅಥವಾ ಕೆಲವು ಕಡೆ ಮುಚ್ಚುಗದ ಮುಳ್ಳು ಎಂದು ಕರೆಯುತ್ತಾರೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವಂತಹ ಮುಳ್ಳಿನ ಗಿಡ. ನೋಡುವುದಕ್ಕೆ ಮುಳ್ಳಿನ ಗಿಡವಾದರೂ ತುಂಬಾ ಉಪಯುಕ್ತಕಾರಿಯಾಗಿದೆ. ಔಷಧಿ ಗುಣವನ್ನು ಹೊಂದಿರುವ ಮುಟ್ಟಿದರೆ ಮುನಿ ಗಿಡವನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಎಂಬುದನ್ನು ನೋಡುವುದಾದರೆ ಈ ಮುಟ್ಟಿದರೆ ಮುನಿ ಗಿಡದ ಎಲೆಗಳನ್ನು ನೀವು ತರಬೇಕು ಎಲೆಗಳನ್ನು ತಂದು ಅವುಗಳನ್ನು ಜಜ್ಜಿ ಅದರಿಂದ ಕಷಾಯವನ್ನು ಮಾಡಿಕೊಳ್ಳಬೇಕು.
ಮುಟ್ಟಿದರೆ ಮುನಿ ಗಿಡದ ಎಲೆಗಳ ಜೊತೆಗೆ ಅವುಗಳ ಕಾಂಡವನ್ನು ಕೂಡ ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿಕೊಳ್ಳಬಹುದು. ಈ ಕಷಾಯವನ್ನು ತಯಾರಿಸುವಾಗ ನೀವು ಒಂದು ಲೋಟ ನೀರು ಹಾಕಿದರೆ ಅದು ಕುದ್ದು ಕುದ್ದು ಅರ್ಧಲೋಟ ಆಗುವ ತನಕ ಕುದಿಸಬೇಕು ಈ ರೀತಿಯಾಗಿ ತಯಾರಿಸಿದ ಕಷಾಯದಿಂದ ಎರಡು ರೀತಿಯ ಉಪಯೋಗಗಳಿವೆ.
ಮೊದಲನೆಯದಾಗಿ ಅಧಿಕ ರಕ್ತಸ್ರಾವ. ಅಧಿಕ ರಕ್ತಸ್ರಾವ ಯಾವ ಸಮಯದಲ್ಲಿ ಕಂಡುಬರುತ್ತದೆ ಎಂದರೆ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ ಕಂಡು ಬರುತ್ತದೆ ಅಂತಹ ಸಮಯದಲ್ಲಿ ಈ ಮುಟ್ಟಿದರೆ ಮುನಿ ಗಿಡದ ಕಷಾಯವನ್ನು ಸೇವಿಸಿದರೆ ಒಳ್ಳೆಯದು.
ಎರಡನೆಯದಾಗಿ ರಕ್ತಮೂಲವ್ಯಾಧಿ ಮಲವಿಸರ್ಜನೆಯ ಸಮಯದಲ್ಲಿ ರಕ್ತ ಹೋಗುತ್ತಿದ್ದರೆ ಆ ಸಮಯದಲ್ಲಿಯೂ ಕೂಡ ನೀವು ಈ ಮುಟ್ಟಿದರೆ ಮುನಿ ಗಿಡದ ಕಷಾಯವನ್ನು ಕುಡಿಯಬಹುದು ಈ ಒಂದು ಕಷಾಯವನ್ನು ನೀವು ಕುಡಿಯುತ್ತಾ ಬಂದಲ್ಲಿ ರಕ್ತಸ್ರಾವ ಮತ್ತು ರಕ್ತ ಮೂಲವ್ಯಾಧಿಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಕೆಲವೊಂದು ಸಾರಿ ನಿಮಗೆ ಬಾವುಗಳು ಕಾಣಿಸಿಕೊಂಡರೆ ಅಂತಹ ಜಾಗದಲ್ಲಿ ಮುಟ್ಟಿದರೆ ಮುನಿ ಗಿಡವನ್ನು ಜಜ್ಜಿ ಅದನ್ನು ಹತ್ತಿ ಬಟ್ಟೆಯಿಂದ ಸುತ್ತಿ ನೋವಿರುವ ಜಾಗದಲ್ಲಿ ಕಟ್ಟಿದರೆ ಬಾವು ಬೇಗನೆ ಕಡಿಮೆಯಾಗುತ್ತದೆ. ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರುಗಳನ್ನು ಅರೆದು ಅದರ ರಸವನ್ನು ಕುಡಿಯುವುದರಿಂದ ಮಲಬದ್ಧತೆ ಶಮನವಾಗುತ್ತದೆ. ಇನ್ನು ಮುಟ್ಟಿದರೆ ಮುನಿ ಗಿಡದ ರಸವನ್ನು ಮೊಡವೆ ಆಗಿರುವ ಜಾಗದಲ್ಲಿ ಹಚ್ಚಿದರೆ ಮೊಡವೆಗಳು ಕಡಿಮೆಯಾಗುತ್ತವೆ.
ತುರಿಕೆ ಮತ್ತು ಇತರ ಚರ್ಮ ಸಂಬಂಧಿ ಕಾಯಿಲೆಗಳಿಗೆ ಮುಟ್ಟಿದರೆ ಮುನಿ ಗಿಡದ ರಸವನ್ನು ಹಚ್ಚುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ. ಮುಟ್ಟಿದರೆ ಮುನಿ ಗಿಡವನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಒಂದು ಲೋಟ ನೀರಿಗೆ ಈ ಪುಡಿಯನ್ನು ಹಾಕಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.
ನೋಡಿದಿರಲ್ಲ ಸ್ನೇಹಿತರೆ ನಮ್ಮ ಸುತ್ತಮುತ್ತಲೂ ಇರುವ ಅನೇಕ ಗಿಡಗಳಲ್ಲಿರುವ ಔಷಧೀಯ ಗುಣಗಳು ನಮಗೆ ತಿಳಿದಿರುವುದಿಲ್ಲ ಮುಟ್ಟಿದರೆ ಮುನಿ ಗಿಡವು ಕೂಡ ತುಂಬಾ ಉಪಯುಕ್ತವಾಗಿದ್ದು ನಾವು ಇದರ ಔಷಧೀಯ ಗುಣಗಳನ್ನು ತಿಳಿದುಕೊಂಡು ಇದನ್ನು ಉಪಯೋಗಿಸುವುದರಿಂದ ನಮ್ಮಲ್ಲಿರುವ ಅನೇಕ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬಹುದು. ನೀವು ಕೂಡ ಈ ಮುಟ್ಟಿದರೆ ಮುನಿ ಗಿಡದ ಪ್ರಯೋಜನವನ್ನು ಪಡೆದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೂ ಇದರ ಉಪಯುಕ್ತತೆಯನ್ನು ತಿಳಿಸಿರಿ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430