ಎಷ್ಟೇ ಔಷಧಿಗಳನ್ನು ಮಾಡಿದರೂ ಸಹ ಕಡಿಮೆ ಆಗದೇ ಇರುವಂತಹ ಮೊಣಕೈ ನೋವು ಮೊಣಕಾಲು ನೋವು ಕೆಲವರಲ್ಲಿ ಇರುತ್ತದೆ. ವಯಸ್ಸಾಗಿರುವವರಿಗೆ ಡಯಾಬಿಟಿಸ್ ನಿಂದ ಬಳಲುತ್ತಿರುವವರಿಗೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತವರು ಮನೆಯಲ್ಲಿಯೇ ಸುಲಭವಾಗಿ ಯಾವ ರೀತಿಯಾಗಿ ಔಷಧವನ್ನು ತಯಾರಿಸಿಕೊಳ್ಳಬಹುದು. ಜೊತೆಗೆ ಈ ಔಷಧಿಯಿಂದ ಮೊಣಕೈ ಊತ ಮೊಣಕಾಲಿನಲ್ಲಿ ಕಾಣಿಸಿಕೊಂಡ ಊತ ಕೂಡ ಕಡಿಮೆಯಾಗುತ್ತದೆ. ನಾವು ನಿಮಗೆ ತಿಳಿಸುವ ಈ ಮನೆಮದ್ದನ್ನು ಮಾಡುವುದರಿಂದ ಎಂತಹದೆ ಹಳೆಯ ನೋವಾದರೂ ಅದು ನಿವಾರಣೆಯಾಗುತ್ತದೆ.

ನಾವು ನಿಮಗೆ ತಿಳಿಸುವ ಮನೆಮದ್ದನ್ನು ನೀವು ಇಪ್ಪತ್ತು ದಿನಗಳ ಕಾಲ ನಿರಂತರವಾಗಿ ತೆಗೆದುಕೊಂಡಲ್ಲಿ ಎಂಥದ್ದೇ ನೋವು ಊತ ಕಾಣಿಸಿಕೊಂಡರು ಅದು ಕಡಿಮೆಯಾಗುತ್ತದೆ. ಈ ಔಷಧಿಯನ್ನು ಮಾಡಿಕೊಳ್ಳುವುದಕ್ಕೆ ಬೇಕಾಗಿರುವಂತಹದ್ದು ಎರಡು ಪೌಡರ್ ಗಳು ಮೊದಲನೆಯದು ತ್ರಿಬಲ ಪೌಡರ್ ಇದನ್ನು ಸರ್ವರೋಗ ನಿವಾರಕ ಎಂದು ಹೇಳುತ್ತಾರೆ. ಎರಡನೆಯದು ಶುಂಠಿ ಪೌಡರ್. ಈ ಎರಡು ಪೌಡರನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಶುಂಠಿ ಆಂಟಿಬಯೋಟಿಕ್ ಆಗಿರುವುದರಿಂದ ನೋವನ್ನು ಎಳೆಯುವುದರಲ್ಲಿ ಇದು ಸಹಾಯ ಮಾಡುತ್ತದೆ.

ಒಂದು ಬೌಲನ್ನು ತೆಗೆದುಕೊಂಡು ಅದಕ್ಕೆ ತ್ರಿಬಲ್ ಪೌಡರ್ ಒಂದು ಚಮಚ ಮತ್ತು ಒಣ ಶುಂಠಿ ಪೌಡರ್ ಒಂದು ಚಮಚ ಹಾಕಿ ಅದಕ್ಕೆ ನಾಲ್ಕರಿಂದ ಐದು ಚಮಚ ನೀರನ್ನು ಹಾಕಿ ಕೈಯಿಂದ ಕಲಸಿ ನಿಮಗೆ ಎಲ್ಲೆಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಆ ಭಾಗದಲ್ಲಿ ಸ್ವಲ್ಪ ಮಸಾಜ್ ಮಾಡಿ ಇದನ್ನು ಒಂದು ಲೇಯರ್ ಹಾಕಬೇಕು ಲೇಯರ್ ತುಂಬಾ ದಪ್ಪಗೂ ಇರಬಾರದು ತೆಳ್ಳಗಾಗಿಯು ಇರಬಾರದು. ಅದನ್ನು ಒಂದು ರಾತ್ರಿ ಹಾಗೇ ಬಿಡಬೇಕು ಬೆಳಿಗ್ಗೆ ಅದನ್ನ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಹೀಗೆ ಮಾಡುವುದರಿಂದ ನಿಮಗೆ ಇರುವ ಎಂತಹದೇ ಹಳೆಯ ನೋವಾದರೂ ಕೂಡ ಅದು ನಿವಾರಣೆಯಾಗುತ್ತದೆ.

ನಿಮಗೆ ನಡೆಯುವುದಕ್ಕೆ ಆಗದೆ ಕಾಲು ಸಂದಿಗಳಲ್ಲಿ ನೋವಾಗುತ್ತಿದ್ದರೆ ನಡೆಯುವಾಗ ಶಬ್ದ ಬರುತ್ತದೆ ಎಂದರೆ ಮೊಣಕಾಲಿನ ಒಳಗಡೆಯ ಮೂಳೆಗಳು ಸವೆದಿರುತ್ತವೆ ಹಾಗಾಗಿ ನಾವು ಮೇಲೆ ತಿಳಿಸಿರುವ ಮನೆಮದ್ದನ್ನು ಮಾಡಿಕೊಳ್ಳುವುದರಿಂದ ತುಂಬಾ ಉತ್ತಮ ಪರಿಣಾಮವನ್ನು ಕಾಣಬಹುದು. ಈ ಲೇಪನವನ್ನು ಮೊಣಕೈ ಮತ್ತು ಮೊಣಕಾಲುಗಳ ಮೇಲೆ ಹಾಕುವುದರಿಂದ ಊತ ಕಡಿಮೆಯಾಗುತ್ತದೆ ನಡೆಯುವಾಗ ಕಾಣಿಸಿಕೊಳ್ಳುವ ನೋವು ಕೂಡ ಕಡಿಮೆಯಾಗುತ್ತದೆ.

ಈ ರೀತಿಯಾಗಿ ಮನೆಯಲ್ಲಿ ಸುಲಭವಾಗಿ ಔಷಧಿಯನ್ನು ತಯಾರಿಸಿಕೊಂಡು ನೀವು ಕೂಡ ಕೈಕಾಲುಗಳ ನೋವಿನಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!