ಧೋನಿಯಿಂದ ರೈತರಿಗೆ ಉಚಿತವಾಗಿ ಹಸುಗಳನ್ನು ನೀಡುವ ಯೋಜನೆ.!

0 2

ಎಲ್ಲಾ ವಿಧದ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಧೋನಿಯವರು ಮುಂದಿನ ದಿನಗಳಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಕೈಯಾಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ರೈತರಿಗೆ ಉಚಿತ ಹಸುಗಳನ್ನು ಕೊಡಲಿದ್ದಾರೆ ಮಹೇಂದ್ರಸಿಂಗ್ ಧೋನಿ. ಹೇಗಿದೆ ಅವರ ಹೊಸ ಯೋಜನೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತಿಯಾದ ಬಳಿಕ ಬೇಸಾಯದ ಕಡೆಗೆ ಗಮನ ಕೊಡುತ್ತಿದ್ದಾರೆ. ಈಗಾಗಲೇ ತೋಟದಲ್ಲಿ, ಟ್ರ್ಯಾಕ್ಟರ್ ಮೇಲೆ ಖುದ್ದು ಅವರೇ ಕೆಲಸ ಮಾಡುತ್ತಿರುವ ಅನೇಕ ಫೋಟೋಗಳು ವೈರಲ್ ಆಗುತ್ತಿವೆ. ಧೋನಿಯವರ ಯಾವತ್ತೂ ಕೈ ಹಿಡಿದ ಕೆಲಸಕ್ಕೆ ಹೊಸರೂಪವನ್ನು ಕೊಡುವುದರಲ್ಲಿ ಮಗ್ನರಾಗಿರುತ್ತಾರೆ. ಕೆಲಸ ಯಾವುದೇ ಇರಲಿ ಅದನ್ನು ಪರಿಪೂರ್ಣ ಮಾಡುವುದಕ್ಕಾಗಿ ಪ್ರಯತ್ನಿಸುತ್ತಿರುತ್ತಾರೆ.

ಧೋನಿ ಮತ್ತು ಇತರ ಕ್ರಿಕೆಟರ್ ಗಳ ವ್ಯವಸ್ಥಾಪಕ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆರ್ಕ ಸ್ಪೋರ್ಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮಿಹಿರ್ ದಿವಾಕರ್, ನಿಯೊ ಗ್ಲೋಬಲ್ ನಲ್ಲಿ ಸಹಭಾಗಿಯಾಗಲಿದ್ದಾರೆ ಧೋನಿ. ಮಾರುಕಟ್ಟೆಯಲ್ಲಿ ಈ ಕಂಪೆನಿ ಈಗಾಗಲೇ ಎರಡು ಉತ್ಪನ್ನಗಳನ್ನು ಬಿಟ್ಟಿದ್ದು ಅದನ್ನು ಮುಂದಿನ ದಿನಗಳಲ್ಲಿ 15ಕ್ಕೆ ಹೆಚ್ಚಿಸುವ ಯೋಜನೆ ಹೊಂದಿದೆ. ಧೋನಿಯವರು ನಮ್ಮ ಜೊತೆ ದೊಡ್ಡ ಮಟ್ಟದಲ್ಲಿ ಕೈಜೋಡಿಸಲಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಮುಂದಿನ ಸೆಪ್ಟೆಂಬರ್ ನಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು. ಧೋನಿಯವರು ತಮ್ಮ ಫಾರ್ಮ್ ಹೌಸ್ ನಲ್ಲಿ ಸಾವಯವ ರಾಸಾಯನಿಕ ಬಗ್ಗೆ ಪರೀಕ್ಷೆ ಮಾಡಿದ್ದಾರೆ ಎಂದು ಹೇಳುತ್ತಾರೆ

ಈಗ ಜಾರ್ಖಂಡ್ ನಲ್ಲಿಯ ಕೆಲವು ರೈತರಿಗೆ ಉಚಿತವಾಗಿ ಹಸುಗಳನ್ನು ನೀಡುವ ಯೋಜನೆಯನ್ನು ರೂಪಿಸುತ್ತಿದ್ದಾರೆ. ರಾಂಚಿಯಲ್ಲಿ ಧೋನಿ ಅವರ ಫಾರ್ಮ್ ಹೌಸ್ ಇದ್ದು ಇಲ್ಲಿಯೇ ಬೇಸಾಯಕ್ಕೆ ಸಂಬಂಧಿಸಿದ ತಮ್ಮ ಕೆಲಸಗಳನ್ನು ಮತ್ತು ಕನಸುಗಳನ್ನು ಸಾಕಾರಗೊಳಿಸುತ್ತಿದ್ದಾರೆ. ರೈತರಿಗೆ ಉಚಿತವಾಗಿ ಹಸುಗಳನ್ನು ಕೊಡುವ ಸಲುವಾಗಿ ಧೋನಿ ಅವರು ವಿದೇಶಗಳಿಂದ ಹಸುಗಳನ್ನು ತರಿಸಿ ಕೊಳ್ಳುವವರಿದ್ದಾರೆ.

ಈ ಹಸುಗಳ ಹಾಲಿನ ಮಾರಾಟದಿಂದ ರೈತರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಮಾಡುವ ಉದ್ದೇಶ ಧೋನಿಯವರದಾಗಿದೆ. ಈ ಬಗ್ಗೆ ಧೋನಿಯವರು ಅಧಿಕೃತವಾಗಿ ಎಲ್ಲಿಯೂ ಘೋಷಣೆ ಮಾಡಿಲ್ಲ. ಆದರೆ ಅವರು ಸಾವಯವ ಕೃಷಿ ಮಾಡುವ ಯೋಚನೆಯನ್ನು ಮಾಡಿದಾಗಲೇ ಈ ಕಲ್ಪನೆಯ ಬಗ್ಗೆ ಯೋಚಿಸಿದ್ದರು. ಸದ್ಯ ಈ ಕಲ್ಪನೆಗೆ ಪೂರ್ಣರೂಪ ಕೊಡುವ ಸಮಯ ಅಥವಾ ಮಾಡಿದ ಯೋಚನೆಯನ್ನು ಪ್ರತ್ಯಕ್ಷದಲ್ಲಿ ಇಳಿಸುವ ಬಗ್ಗೆ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಧೋನಿಯವರ ಹತ್ತಿರ 105 ವಿವಿಧ ತಳಿಯ ಹಸುಗಳಿವೆ. ಇದರಲ್ಲಿ ಸಹಿವಾಲ್, ಪಂಜಾಬ್ ಮತ್ತು ಕೆಲವು ಸ್ಥಾನಿಕ ಪ್ರಜಾತಿಗಳಿವೆ. ಯಾವ ರೈತರಿಗೆ ಧೋನಿಯವರು ಹಸುಗಳನ್ನು ಉಚಿತವಾಗಿ ನೀಡುತ್ತಿದ್ದಾರೆಯೋ ಅವರ ಸಂಪೂರ್ಣ ಮಾಹಿತಿಯನ್ನು ಪಡೆಯುವವರಿದ್ದಾರೆ. ಹಾಗೂ ಆ ಹಸುಗಳಿಗೆ ಮೇಲಿಂದ ಮೇಲೆ ಮಾಹಿಯವರು ಸ್ವತಃ ಭೇಟಿ ಕೊಡಲಿದ್ದಾರೆ. ಒಂದು ವೇಳೆ ಹಸುಗಳ ಸಂಗೋಪನೆ ಸರಿಯಾಗಿ ಮಾಡದಿದ್ದರೆ ಸಂಬಂಧಿತ ವ್ಯಕ್ತಿಯಿಂದ ಹಸುವನ್ನು ಮರಳಿ ತರಿಸಿಕೊಳ್ಳುವವರಿದ್ದಾರೆ.

ಸದ್ಯ ಧೋನಿಯವರ ತೋಟದಿಂದ ವಿವಿಧ ತರಕಾರಿಗಳ ಮಾರಾಟದ ಜೊತೆಗೆ ದಿನಂಪ್ರತಿ 300 ಲೀಟರ್ ಹಾಲು ಸಹ ಮಾರಾಟವಾಗುತ್ತಿದೆ. ಇದರ ಜೊತೆಗೆ ತೋಟದಲ್ಲಿ ಮತ್ಸ್ಯಪಾಲನೆ ಮತ್ತು ಕಡಕ್ ನಾಥ್ ಕುಕ್ಕುಟ ಪಾಲನೆಯೂ ಜೋರಾಗಿ ನಡೆದಿದೆ. ಕಳೆದ ಒಂದು ವರ್ಷದಿಂದ ಧೋನಿಯವರ ಫಾರ್ಮ್ ಹೌಸ್ ನಲ್ಲಿ ಹಸುಗಳ ಪಾಲನೆ, ಪೋಷಣೆ, ತರಕಾರಿಯನ್ನು ಬೆಳೆಯುವ ಸಲುವಾಗಿ ಪ್ರಯತ್ನ ನಡೆದೇ ಇದೆ. ಸದ್ಯ ರೈತ ಬಾಂಧವರಿಗೆ ಹಸುಗಳನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಧೋನಿಯವರ ಮಾಡುವ ಪ್ರತಿಯೊಂದು ಕೆಲಸ ನಿಯೋಜನೆಯಿಂದ ಮತ್ತು ದೂರಾಲೋಚನೆಯಿಂದ ಕೂಡಿರುತ್ತದೆ ಎಂದರೆ ತಪ್ಪಿಲ್ಲ. ಈ ಕೆಲಸದಿಂದಲೂ ರೈತರಿಗೆ ಏನಾದರೂ ಒಳ್ಳೆಯದಾದರೆ, ಹಾಗೂ ಲಾಭವಾದರೆ ಚೆನ್ನ.

Leave A Reply

Your email address will not be published.