ಪ್ರಪಂಚದಲ್ಲಿ ಅತಿ ಎತ್ತರದ ಮತ್ತು ಅತಿ ಕುಳ್ಳ, ಅತೀ ದಪ್ಪ ಹೀಗೆ ಎಲ್ಲ ರೀತಿಯ ಮನುಷ್ಯರನ್ನು ನೋಡುತ್ತೇವೆ. ಅತಿ ಎತ್ತರವಾಗಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾದ ಎತ್ತರವಿರುವುದರಿಂದ ಆಗುವ ತೊಂದರೆಗಳು ಹಾಗೂ ಲಾಭಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕ್ಯಾಲಿಫೋರ್ನಿಯಾದ ಲಿಂಡ್ಸೆ ಹೇವರ್ಡ್ ಇವರು 6.9 ಅಡಿ ಎತ್ತರವಿದ್ದು ಇವರಿಗೆ ಬಾಸ್ಕೆಟ್ ಬಾಲ್ ಆಡಲು ಅವಕಾಶ ಸಿಗುತ್ತದೆ ನಂತರ ಅವರ ಎತ್ತರ ಮತ್ತು ತೂಕವನ್ನು ನೋಡಿ WWE ನಲ್ಲಿ ಅವಕಾಶ ಸಿಗುತ್ತದೆ. ಇದರಲ್ಲಿ ಗಾಯಗಳಾಗಿ ಅಲ್ಲಿಂದ ಹೊರಬಂದು ಟಿವಿ ಶೋ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸುತ್ತಾರೆ ಇದರಿಂದ ಇವರಿಗೆ ವರ್ಲ್ಡ್ ಟಾಲೆಸ್ಟ್ ಆಕ್ಟರ್ ಎಂದು ಗಿನ್ನಿಸ್ ರೆಕಾರ್ಡ್ ದೊರೆಯುತ್ತದೆ. ದಲಿಪ ಸಿಂಗ್ ರಾಣಾ ಇವರು ನಮ್ಮ ದೇಶದ ಬ್ರೆಸ್ಲಿಂಗ್ ಚಾಂಪಿಯನ್ ಇವರ ಎತ್ತರ 7.1 ಅಡಿ. ಇವರಿಗೆ ಆಕ್ರೋ ಮೆಗಾಲಿ ಎಂಬ ಖಾಯಿಲೆ ಇದೆ ಇದರಿಂದ ಅವರ ದೇಹ ಮತ್ತು ಮುಖ ದೈತ್ಯಾಕಾರವಾಗಿ, ವಿಚಿತ್ರವಾಗಿದೆ. ಇಷ್ಟು ಎತ್ತರವಿರಲು ಈ ಖಾಯಿಲೆಯೇ ಕಾರಣ. ಅವರ ಶರೀರದಿಂದ ಅವರಿಗೆ ಡಬ್ಲ್ಯೂಡಬ್ಲ್ಯೂಇನಲ್ಲಿ ಅವಕಾಶ ಸಿಗುತ್ತದೆ ಇದರಿಂದ ಅವರಿಗೆ ದ ಗ್ರೇಟ್ ಖಾಲಿ ಎಂಬ ಹೆಸರು ಬರುತ್ತದೆ. ಇವರು ಮಾಡೆಲ್, ಆಕ್ಟರ್ ಆಗಿದ್ದಾರೆ. ಇವರು ಅಮೆರಿಕಾದಲ್ಲಿ ನೆಲೆಸಿದ್ದಾರೆ. ಇಂಗ್ಲೆಂಡಿನ ನೀಲ್ ಫಿಂಗಲ್ಟನ್ ಇವರು 7.7 ಅಡಿ ಎತ್ತರ ಇದ್ದಾರೆ. ಇವರು ಬಾಸ್ಕೆಟ್ ಬಾಲ್ ಪ್ಲೇಯರ್ ಹಾಗೂ ಆಕ್ಟರ್. ಇವರು ಅನೇಕ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಇವರಿಗೆ ಟಾಲೆಸ್ಟ್ ಮೆನ್ ಆಕ್ಟರ್ ಎಂದು ಗಿನ್ನಿಸ್ ರೆಕಾರ್ಡ್ ಸಿಕ್ಕಿದೆ. ಇವರು 17 ಫೆಬ್ರುವರಿಯಲ್ಲಿ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ. ಇವರ ಕುಟುಂಬದವರೆಲ್ಲರೂ ಎತ್ತರವೇ ಇದ್ದಾರೆ. ಚೈನಾ ದೇಶದ ಬಡ ಕುಟುಂಬದ ಯೋವೊ ಡಿಫೆನ್ ಸಾಮಾನ್ಯ ಮಕ್ಕಳಂತೆ ಹುಟ್ಟುತ್ತಾರೆ ಆದರೆ ಆರು ವರ್ಷದ ನಂತರ ಅತಿಯಾಗಿ ಎತ್ತರವಾಗಿ ಬೆಳೆಯುತ್ತಾರೆ. 16 ನೇ ವಯಸ್ಸಿನಲ್ಲಿ ಎತ್ತರವನ್ನು ತಡೆಯಲು ಆಪರೇಷನ್ ಮಾಡುತ್ತಾರೆ. ಇವರಿಗೆ ಚೀನಾದ ಎತ್ತರದ ಮನುಷ್ಯ ಜಾಂಗ್ ಜುಂಕಾಯಿ ಸಹಾಯ ಮಾಡುತ್ತಾರೆ. ಯೋವೊ ಡಿಫೆನ್ 40 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

ಇಗ್ರೋ ಎಂಬ ಸೋವಿಯತ್ ಯೂನಿಯನ್ ಗೆ ಸೇರಿದವರು. ಇವರು 7 ವರ್ಷದವರಿದ್ದಾಗ ಅಮೆರಿಕಾಕ್ಕೆ ಬಂದು ನೆಲೆಸುತ್ತಾರೆ. ಇವರಿಗೆ ಹಾರ್ಮೋನ್ ಸಮಸ್ಯೆಯಿಂದ ಎತ್ತರವಾಗಿ ಬೆಳೆಯುತ್ತಾರೆ. ಅವರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿರುವುದರಿಂದ 11 ಬಾರಿ ಸರ್ಜರಿ ಮಾಡಿದ್ದಾರೆ ನಂತರ ಅವರು ಮನೆಯಲ್ಲಿ ಇರುತ್ತಾರೆ. ಚೀನಾ ದೇಶದ ಸನ್ ಮಿಂಗ್ ಮಿಂಗ್ ಮತ್ತು ಕ್ಸುಯ್ಯಾನ್ ಇವರು ಎತ್ತರವಾದ ಗಂಡ-ಹೆಂಡತಿಯಾಗಿದ್ದಾರೆ. ಇವರಿಗೆ ಪ್ರಪಂಚದ ಅತಿ ಎತ್ತರವಾದ ಗಂಡ ಹೆಂಡತಿ ಎಂಬ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ದೊರೆತಿದೆ. ಇವರು 7.9 ಅಡಿ ಎತ್ತರವಿದ್ದು ಇವರಿಗೆ ಯಾವುದೇ ಅನಾರೋಗ್ಯ ಸಮಸ್ಯೆ ಇಲ್ಲ. ಇವರಿಬ್ಬರೂ ಸ್ಪೋರ್ಟ್ಸ್ ನಲ್ಲಿ ಇದ್ದಾರೆ. ರಾಬರ್ಟ್ ವಾಲ್ಡು ಇವರು ಅಮೆರಿಕಾದವರು ಇವರು ಪ್ರಪಂಚದ ಇತಿಹಾಸದಲ್ಲಿ ಅತಿ ಎತ್ತರವಾದ ಮನುಷ್ಯ. ಇವರು 8.11ಅಡಿ ಎತ್ತರವಿದ್ದಾರೆ. ಇವರಿಗೆ ಹಾರ್ಮೋನ್ ಸಮಸ್ಯೆ ಇರುವುದರಿಂದ ಎತ್ತರವಾಗಿ ಬೆಳೆದಿದ್ದಾರೆ. ಇವರು ತಮ್ಮ 22ನೇ ವರ್ಷದಲ್ಲಿ ಸಾಯುತ್ತಾರೆ. ಸುಲ್ತಾನ್ ಕೋಶನ್ ಇವರು 8.2 ಅಡಿ ಎತ್ತರವಿದ್ದಾರೆ. ಇವರು ಟರ್ಕಿ ದೇಶದವರಾಗಿದ್ದು ಇವರಿಗೆ ವರ್ಲ್ಡ್ ಟಾಲೆಸ್ಟ ಲಿವಿಂಗ್ ಮ್ಯಾನ್ ಎಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದೊರೆತಿದೆ ಅಲ್ಲದೆ ಲಾರ್ಜೆಸ್ಟ್ ಹ್ಯಾಂಡ್ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ದೊರೆತಿದೆ. ಇವರಿಗೆ ಹಾರ್ಮೋನ್ ಸಮಸ್ಯೆ ಇರುವುದರಿಂದ ಎತ್ತರವಾಗಿ ಬೆಳೆದಿದ್ದಾರೆ. ಅಮೆರಿಕದ ಸ್ಯಾಂಡಿ ಅಲೆನ್ ಇವರು 7.7 ಅಡಿ ಎತ್ತರವಿದ್ದಾರೆ. ಇವರಿಗೆ ವರ್ಲ್ಡ್ ಟಾಲೆಸ್ಟ ವುಮೆನ್ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದೊರೆತಿದೆ.

Leave a Reply

Your email address will not be published. Required fields are marked *